ಕಿರುತೆರೆಯ ಜನಪ್ರಿಯ ನಟಿ ಆತ್ಮಹತ್ಯೆ: ಕಾರಣ ನಿಗೂಢ

'ಕ್ರೈಮ್ ಪ್ಯಾಟ್ರೋಲ್' ಟಿವಿ ಸರಣಿ ಮೂಲಕ ಹೆಸರು ಗಳಿಸಿದ್ದ ನಟಿ ಪ್ರೇಕ್ಷಾ ಮೆಹ್ತಾ ಮಂಗಳವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನ ಬಜರಂಗ್ ನಗರದಲ್ಲಿನ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.

Recommended Video

ದುನಿಯಾ ಸೂರಿ ಮುಂದಿನ ಸಿನಿಮಾ ಅಂಬಿ ಪುತ್ರನ ಜೊತೆ..? | Abhishek Ambaresh Next with Duniya Suri?

'ಎಲ್ಲಕ್ಕಿಂತಲೂ ಕೆಟ್ಟ ಸಂಗತಿಯೇನೆಂದರೆ ಕನಸುಗಳು ಸಾಯುವುದು' ಎಂದು ಅವರು ಆತ್ಮಹತ್ಯೆಗೂ ಮುನ್ನ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಇದರಿಂದ ಅವರ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಇರಬಹುದು ಎಂಬ ಅನುಮಾನ ಮೂಡಿದೆ.

ಲಾಕ್ ಡೌನ್ ಶುರುವಾದ ಸಂದರ್ಭದಿಂದಲೂ ಪ್ರೇಕ್ಷಾ ಮೆಹ್ತಾ ಇಂದೋರ್‌ನ ತಮ್ಮ ನಿವಾಸದಲ್ಲಿ ನೆಲೆಸಿದ್ದರು. ಕಿರುತೆರೆಯಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದ ಅವರು ಮುಂಬೈನಲ್ಲಿ ಕಳೆದ ಮೂರು ವರ್ಷಗಳಿಂದ ನೆಲೆಸಿದ್ದರು. ಕೊರೊನಾ ವೈರಸ್ ಹಾವಳಿ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಇಂದೋರ್‌ನ ತವರೂರಿಗೆ ಮರಳಿದ್ದರು. ಮುಂದೆ ಓದಿ...

ಸೀಲಿಂಗ್ ಫ್ಯಾನ್‌ಗೆ ನೇಣು

ಸೀಲಿಂಗ್ ಫ್ಯಾನ್‌ಗೆ ನೇಣು

25 ವರ್ಷದ ನಟಿ ಆತ್ಮಹತ್ಯಾ ಪತ್ರವನ್ನು ಕೂಡ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಅದರಲ್ಲಿ ಅವರು ಈ ದುಡಕಿನ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನೆಂಬುದನ್ನು ತಿಳಿಸಿಲ್ಲ. ಮಂಗಳವಾರ ಬೆಳಿಗ್ಗೆ 6.30ರ ವೇಳೆಗೆ ಪ್ರೇಕ್ಷಾ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದನ್ನು ಮನೆಯವರು ನೋಡಿದ್ದರು.

ಕಾರಣ ತಿಳಿಯಲು ತನಿಖೆ

ಕಾರಣ ತಿಳಿಯಲು ತನಿಖೆ

ನಟಿಯ ತಂದೆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಕೆ ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಲಾಕ್ ಡೌನ್ ಸಮಯದಿಂದಲೂ ಪ್ರೇಕ್ಷಾ ನಗರದಲ್ಲಿಯೇ ಇದ್ದರು. ಅವರ ಆತ್ಮಹತ್ಯೆಯ ಕಾರಣ ತಿಳಿಯಲು ತನಿಖೆ ನಡೆಸಲಾಗಿದೆ ಎಂದು ಹೀರಾ ನಗರ್ ಪೊಲೀಸ್ ಅಧಿಕಾರಿ ರಾಜೀವ್ ಭಡೋರಿಯಾ ತಿಳಿಸಿದ್ದಾರೆ.

ನೋವುಗಳೆಲ್ಲ ಜಾರಿ ಹೋಗಲಿ...

ನೋವುಗಳೆಲ್ಲ ಜಾರಿ ಹೋಗಲಿ...

ನಾಲ್ಕು ದಿನಗಳ ಹಿಂದೆ ಪ್ರೇಕ್ಷಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫೋಟೊವೊಂದನ್ನು ಹಂಚಿಕೊಂಡಿದ್ದರು. 'ನನ್ನತ್ತ ಬರುವ ಎಲ್ಲ ದುಃಖಗಳು ಹಾಗೇ ಜಾರಿಹೋಗಲಿ, ನನ್ನ ಕಂಗಳಲ್ಲಿ ನಿನ್ನನ್ನು ತುಂಬಿಕೊಂಡಿರುವೆ, ಮಾತನಾಡದೆಯೇ ನಿನ್ನೊಂದಿಗೆ ಮಾತನಾಡುತ್ತಲಿರುವೆ' ಎಂದು ಕವಿತೆಯ ಸಾಲೊಂದನ್ನು ಬರೆದುಕೊಂಡಿದ್ದರು.

ರಂಗಭೂಮಿ, ಧಾರಾವಾಹಿ

ರಂಗಭೂಮಿ, ಧಾರಾವಾಹಿ

ಕ್ರೈಮ್ ಪ್ಯಾಟ್ರೋಲ್ ಧಾರಾವಾಹಿಯ ಜತೆ ಅವರು, ಮೇರಿ ದುರ್ಗಾ, ಲಾಲ್ ಇಷ್ಕ್ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದರು. ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿದ್ದು, ಡಾಟರ್ ಇನ್ ಲಾ, ಡ್ರಾಪ್ಸ್, ರಾಕ್ಷಸನ್, ಇನ್ ಕಂಪ್ಲೀಟ್ ವುಮನ್ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು.

More from Filmibeat

English summary
Hindi television Crime Patrol actress Preksha Mehta has found dead at her Indore residence on Tuesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X