'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಮುಗಿದೇ ಹೋಯ್ತು: ಯಾರ ಕೈ ಸೇರುತ್ತೆ ಪವರ್ ಟ್ರೋಫಿ?
ಡ್ಯಾನ್ಸ್ ಕರ್ನಾಟಕ ಡ್ಯಾನ್ ಕಿರುತೆರೆ ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಲೇ ಬಂದಿದೆ. ಒಬ್ಬೊಬ್ಬ ಸ್ಪರ್ಧಿಯದ್ದೂ ಒಂದೊಂದು ಸ್ಟೆಪ್. ಇಂತಹ ವಿಶಿಷ್ಟ ಡ್ಯಾನ್ಸ್ ನೋಡುವುದಕ್ಕೆ ಒಂದು ಖುಷಿ. ಹಾಗಂತ ಇಲ್ಲಿ ಬರೀ ಡ್ಯಾನ್ಸ್ ಅಷ್ಟೇ ಇರುತ್ತೆ ಅನ್ನೋ ಹಾಗಿಲ್ಲ. ಈ ಎಲ್ಲಾ ಪ್ರತಿಭೆಗಳ ಹಿಂದೊಂದು ಭಾವುಕ ಕಥೆ ಇರುತ್ತೆ.
ಬಿದ್ದು ಎದ್ದು, ಮೈಜುಂ ಎನ್ನುವಂತಹ ಪರ್ಫಾಮೆನ್ಸ್ ನೀಡುತ್ತಾರೆ. ಇದು ನೋಡುಗರ ಕಣ್ಣಿಗೆ ಕಿಕ್ ಕೊಡುತ್ತೆ. ಇಷ್ಟು ದಿನ ಕರ್ನಾಟಕದ ಮೂಲೆ ಮೂಲೆಯಿಂದ ಬಂದಿದ್ದ ಪ್ರತಿಭೆಗಳು ಕಿರುತೆರೆ ವೀಕ್ಷಕರನ್ನು ರಂಜಿಸಿದ್ದಾರೆ.
ಪ್ರತಿ ವಾರ ಮಕ್ಕಳು ಸ್ಟೇಜ್ ಮೇಲೆ ಭರ್ಜರಿ ಹೆಜ್ಜೆ ಹಾಕಿದರೆ, ತೀರ್ಪುಗಾರರೇ ಥ್ರಿಲ್ ಆಗುತ್ತಿದ್ದರು. ಶಿವರಾಜ್‌ಕುಮಾರ್, ರಕ್ಷಿತಾ ಪ್ರೇಮ್, ಚಿನ್ನಿ ಪ್ರಕಾಶ್ ಅಂತಹ ದಿಗ್ಗಜರುಗಳ ಮನಗೆದ್ದ ಪ್ರತಿಭೆಗಳು ಕೊನೆಯ ಹಂತಕ್ಕೆ ಬಂದು ನಿಂತಿದ್ದಾರೆ. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗ್ರ್ಯಾಂಡ್ ಫಿನಾಲೆ ಬಂದು ತಲುಪಿದೆ.

ಫೈನಲ್ ತಲುಪಿದ ರಿಯಾಲಿಟಿ ಶೋ
ಕರ್ನಾಟಕದ ಪ್ರತಿಭೆಗಳಿಗೆಂದೇ ನಡೆಸಲಾದ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'. ಇಲ್ಲಿವರೆಗೂ ಯಶಸ್ವಿಯಾಗಿ 5 ಸೀಸನ್‌ಗಳನ್ನು ಪೂರೈಸಿದೆ. ಇದೀಗ 6 ನೇ ಸೀಸನ್ ಕೂಡ ಅಷ್ಟೇ ಯಶಸ್ಸಿಯಾಗಿದ್ದು ಕೊನೆಯ ಹಂತಕ್ಕೆ ಬಂದು ತಲುಪಿದೆ.
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ದಕ್ಷಿಣ ಭಾರತದ ಅತಿ ದೊಡ್ಡ ಡಾನ್ಸ್ ರಿಯಾಲಿಟಿ ಶೋ. ಈ ಶೋ ಗ್ರ್ಯಾಂಡ್ ಫಿನಾಲೆಯನ್ನು ಸೆಪ್ಟೆಂಬರ್ 21ರಂದು ನಡೆಯಲಿದೆ. ಇದನ್ನು ಶನಿವಾರ ಸಂಜೆ 6.00 ಗಂಟೆಯಿಂದ ಪ್ರಸಾರವಾಗಲಿದೆ.

ಯಾರ ಕೈ ಸೇರುತ್ತೆ 'ಪವರ್ ಟ್ರೋಫಿ'?
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಭಿನ್ನ- ವಿಭಿನ್ನ ರೀತಿಯ ನೃತ್ಯ ಪ್ರಯೋಗಗಳಿಗೆ ಸಾಕ್ಷಿಯಾಗಿದೆ. ಈ ಬಾರಿಯ ವಿಶೇಷ ಏನೆಂದರೆ, ಕರ್ನಾಟಕ ರತ್ನ, ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪವರ್ ಸ್ಟಾರ್ ಟ್ರೋಫಿ' ಯನ್ನು ಅನಾವರಣಗೊಳಿಸಲಾಗಿತ್ತು. ಆ ವಿಶಿಷ್ಟ ಟ್ರೋಫಿ ಈ ಬಾರಿ ವಿಜೇತರ ಪಾಲಾಗಲಿದೆ.
ಸತತ ಐದು ತಿಂಗಳುಗಳ ಕಾಲ ವೀಕ್ಷಕರನ್ನು ಕುಣಿಸಿ ರಂಜಿಸಿದ ಕಾರ್ಯಕ್ರಮವಿದು. ಹೀಗಾಗಿ ಈ ಬಾರಿ 'ಪವರ್ ಟ್ರೋಫಿ' ಯಾರ ಕೈಸೇರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಕಳೆದ ಐದು ಸೀಸನ್‌ಗಳಿಗಿಂತ ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿಶಿಷ್ಟವಾಗಿದ್ದು, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಡ್ಯಾನ್ಸಿಂಗ್ ಮಹಾಗುರುವಾಗಿ ಆಗಮಿಸಿದ್ದು ವೇದಿಕೆಗೆ ಮತ್ತಷ್ಟು ಕಳೆ ಬಂದಿತ್ತು.
ಫಿನಾಲೆಗೆ 7 ಜೋಡಿಗಳು
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಭರ್ಜರಿ ರೇಟಿಂಗ್ ಗಳಿಸಿ ದಾಖಲೆ ಮೂಡಿಸಿದೆ. ಅಲ್ಲದೆ ಭಾಗವಹಿಸಿದ ಪ್ರತಿಭೆಗಳೂ ಕೂಡ ಸಖತ್ ಮನರಂಜನೆ ನೀಡಿವೆ. ಸದ್ಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗ್ರ್ಯಾಂಡ್ ಫಿನಾಲೆ 7 ಜೋಡಿಗಳು ಬಂದು ತಲುಪಿವೆ. ಇವರಲ್ಲಿ ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎನ್ನುವುದು ಸದ್ಯಕ್ಕೆ ಕುತೂಹಲ.
ಇನ್ನು ಈ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಹೆಮ್ಮೆಯ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್, ಸ್ಯಾಂಡಲ್‌ವುಡ್‌ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮತ್ತು ಡ್ಯಾನ್ಸಿಂಗ್ ಮಹಾಗುರುವಾಗಿದ್ದ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಇರುತ್ತಾರೆ. ಅನುಶ್ರೀ ನಿರೂಪಣೆ ಇರಲಿದೆ. ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ -6 ನ ಗ್ರ್ಯಾಂಡ್ ಫಿನಾಲೆಯ ಚಿತ್ರೀಕರಣ ಇದೇ ಸೆಪ್ಟೆಂಬರ್ 21 ಬುಧವಾರ ಸಂಜೆ 5.30 ಕ್ಕೆ ಕನಕಪುರದ ರೂರಲ್ ಡಿಗ್ರಿ ಕಾಲೇಜ್ ಮೈದಾನದಲ್ಲಿ ನಡೆಯಲಿದೆ.


Click it and Unblock the Notifications











