'ಶ್ರೀ ಗಂಧದ ಗುಡಿ'ಗೆ ಖಾಕಿ ತೊಟ್ಟು ಬಂದ ದಂಡುಪಾಳ್ಯದ ನಟ; ರವಿ ಕಾಳೆ ಟರ್ನಿಂಗ್ ಪಾಯಿಂಟ್

ಕನ್ನಡ ಚಿತ್ರರಂಗದಲ್ಲಿ ಪರಭಾಷೆಯಿಂದ ಬಂದು ಖಡಕ್ ಖಳನಾಯಕನಾಗಿ ಗುರುತಿಸಿಕೊಂಡಿರೋ ನಟ ರವಿ ಕಾಳೆ. ಈಗಾಗಲೇ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದ ಈ ಜನಪ್ರಿಯ ನಟ ಈಗ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಪೊಲೀಸ್ ಅಧಿಕಾರಿಯಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ 'ಶ್ರೀಗಂಧದ ಗುಡಿ'ಯಲ್ಲಿ ಗೌರವ ನಟರಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಈ ಸೀರಿಯಲ್‌ನ ಪ್ರಮುಖ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಶಿಶಿರ್, ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ ಬುರ್ಲಿ, ನೀನಾಸಂ ಅಶ್ವಥ್ ಸೇರಿದಂತೆ ಹಲವು ಮಂದಿ ನಟಿಸುತ್ತಿದ್ದಾರೆ.

Dandupalya actor Ravi Kale special entry in Colors Kannada Serial Sri Gandada Gudi

ಸದ್ಯ 'ಶ್ರೀಗಂಧದ ಗುಡಿ' ಸೀರಿಯಲ್‌ನ ಕಥೆಯಲ್ಲಿ ವೀಕ್ಷಕರು ಸಾಕಷ್ಟು ಟ್ವಿಸ್ಟ್‌ಗಳನ್ನು ನೋಡುತ್ತಿದ್ದಾರೆ. ಧಾರಾವಾಹಿಯ ಕತೆಯು ಅತ್ಯಂತ ಕುತೂಹಲದ ಘಟ್ಟ ತಲುಪಿದೆ. ಈ ಸಂದರ್ಭದಲ್ಲಿ ಬಹುಭಾಷಾ ನಟ ರವಿಕಾಳೆ ಎಂಟ್ರಿ ಆಗಿದೆ. ಹೀಗಾಗಿ ಧಾರಾವಾಹಿಯಲ್ಲಿ ಇನ್ಮುಂದೆ ಮೇಜರ್ ಟರ್ನಿಂಗ್ ಪಾಯಿಂಟ್ ಆಗುತ್ತೆ. ಅದರ ಸುಳಿವಂತೂ ಸಿಕ್ಕಿದೆ. ಈಗಾಗಲೇ 'ಶ್ರೀಗಂಧದ ಗುಡಿ'ಯ ಪ್ರೋಮೋಗಳು ಸದ್ದು ಮಾಡುವುದಕ್ಕೆ ಶುರು ಮಾಡಿವೆ. ಅಷ್ಟಕ್ಕೂ ಈ ಸೀರಿಯಲ್‌ನಲ್ಲಿ ದಂಡುಪಾಳ್ಯ ನಟ ಕೊಡುವ ಟರ್ನಿಂಗ್ ಪಾಯಿಂಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಧಾರಾವಾಹಿಯಲ್ಲಿ ಏನಾಗ್ತಿದೆ?

'ಶ್ರೀಗಂಧದ ಗುಡಿ' ಧಾರಾವಾಹಿಯಲ್ಲಿ ಹರಿಗೆ ಚಂದನಾ ಈ ಮನೆಯಲ್ಲಿ ತನಗೆ ಇರುವುದಕ್ಕೆ ಆಗುತ್ತಿಲ್ಲ. ತನ್ನ ಗುರಿಗಳನ್ನು ಸಾಧಿಸುವುದಕ್ಕೆ ಬೆಂಗಳೂರಿಗೆ ಹೋಗಲೇಬೇಕೆಂದು ಹೇಳುತ್ತಾಳೆ. ಈ ಕಾರಣಕ್ಕೆ ಚಂದನಾ ನೇರವಾಗಿ ಹರಿಯ ಸಹಾಯ ಕೇಳುತ್ತಾಳೆ. ತಡರಾತ್ರಿ ಮನೆಯಿಂದ ಎಸ್ಕೇಪ್ ಆಗುವಂತೆ ಸಲಹೆ ಕೊಡುತ್ತಾನೆ. ಇಷ್ಟೇ ಅಲ್ಲದೆ ತಾನೇ ಆಕೆಯನ್ನು ಮನೆಯಿಂದು ಕರೆದುಕೊಂಡು ಹೋಗುವುದಾಗಿ ಹೇಳುತ್ತಾನೆ. ಇನ್ನೇನು ಬೆಂಗಳೂರಿಗೆ ಹೊರಡುವ ಮಾರ್ಗದಲ್ಲಿ ಚಂದನಾ ಮಾಡಿದ ಒಂದು ಎಡವಟ್ಟು ಆಕೆಯ ಕುಟುಂಬಕ್ಕೆ ಮನೆ ಬಿಟ್ಟು ಹೋಗಿದ್ದು ಗೊತ್ತಾಗುತ್ತೆ. ಇಲ್ಲಿಂದ ಚೇಸಿಂಗ್ ಶುರುವಾಗಿದೆ.

ಪೊಲೀಸರಿಗೆ ಶರಣಾದ ಹರಿ

ಚಂದನಾ ಮನೆ ಬಿಟ್ಟು ಹೋಗಿದ್ದು ಆಕೆಯ ತಂದೆ ಮಹಾಬಲಗೆ ಗೊತ್ತಾಗುತ್ತೆ. ಆತ ತನ್ನೆಲ್ಲ ಸಂಪರ್ಕವನ್ನೂ ಬಳಸಿ ದಾಳಿ ಮಾಡುವುದಕ್ಕೆ ಹೊರಟಿದ್ದಾನೆ. ಹೀಗಾಗಿ ತನ್ನನ್ನು ಅವರಿಂದ ರಕ್ಷಿಸಿಕೊಳ್ಳುವುದಕ್ಕೆ ಹರಿ ನೇರವಾಗಿ ಪೊಲೀಸ್ ಠಾಣೆ ಹೋಗಿ ಶರಣಾಗುತ್ತಾನೆ. ಅದೇ ವೇಳೆ ಚಂದನಾ ಹಾಗೂ ಹರಿಯ ಬಾಳಿಗೆ ಮೇಜರ್ ಟ್ವಿಸ್ಟ್ ಕೊಡುವುದಕ್ಕೆ ಖಡಕ್ ಪೊಲೀಸ್ ಅಧಿಕಾರಿಯ ಎಂಟ್ರಿ ಆಗುತ್ತೆ.

Dandupalya actor Ravi Kale special entry in Colors Kannada Serial Sri Gandada Gudi

ಕಥೆಗೆ ಕಾಳೆ ಟರ್ನಿಂಗ್ ಪಾಯಿಂಟ್

ಪೊಲೀಸರಿಗೆ ಹರಿ ಶರಣಾಗುತ್ತಿದ್ದಂತೆ 'ಶ್ರೀಗಂಧದ ಗುಡಿ' ಧಾರಾವಾಹಿಯ ಕಥೆಯಲ್ಲಿ ಮೇಜರ್ ಟರ್ನಿಂಗ್ ಪಾಯಿಂಟ್ ಆಗಿದೆ. ಅಲ್ಲಿ ಇನ್‌ಸ್ಪೆಕ್ಟರ್ ಕಾಳೆ ಪ್ರತ್ಯಕ್ಷ ಆಗಿದ್ದಾರೆ. ಕಾಳೆ ಈ ಧಾರಾವಾಹಿಯ ಕತೆಗೆ ಟರ್ನಿಂಗ್ ಪಾಯಿಂಟ್ ಆಗುತ್ತಾರೆ. ಹರಿ ಹಾಗೂ ಚಂದನಾಗೆ ಇನ್‌ಸ್ಟೆಕ್ಟರ್ ಕಾಳೆ ಒಂದು ಸಲಹೆ ಕೊಡುತ್ತಾರೆ. ಹರಿಯನ್ನೂ ಚಂದನಾಳನ್ನೂ ಬಚಾವ್ ಮಾಡುವ ಏಕೈಕ ಮಾರ್ಗವೆಂದರೆ ಇಬ್ಬರ ಮದುವೆ. ಈ ಮದುವೆ ಪೊಲೀಸ್ ಠಾಣೆಯಲ್ಲಿಯೇ ಆದರೆ, ಹರಿ ಜೀವ ಉಳಿಯುತ್ತೆ ಎಂದು ಸಲಹೆ ನೀಡುತ್ತಾರೆ.

ಮದುವೆ ಹೇಗೆ ನಡೆಯುತ್ತೆ?

ಇನ್‌ಸ್ಟೆಕ್ಟರ್ ಕಾಳೆ ಕೊಟ್ಟ ಸಲಹೆಯನ್ನು ಹರಿ ತನ್ನ ಪ್ರಯೋಜನಕ್ಕೆ ಬಳಸಿಕೊಳ್ಳುತ್ತಾನೆ. ಹೀಗಾಗಿ ಹರಿ ಹಾಗೂ ಚಂದನಾ ಮದುವೆ ನಡೆದು ಹೋಗುತ್ತೆ. ಈ ಕುತೂಹಲಕರ ರೋಮಾಂಚಕ ಎಪಿಸೋಡ್‌ಗಳಲ್ಲಿ ವಾರದ ಏಳೂ ದಿನವೂ ಪ್ರತಿ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತೆ. ಅದರಲ್ಲೂ ಬಹುಭಾಷಾ ನಟ ರವಿ ಕಾಳೆ ಕನ್ನಡದ ಧಾರಾವಾಹಿಯಲ್ಲಿ ಗೌರವ ನಟರಾಗಿ ಎಂಟ್ರಿ ಕೊಟ್ಟಿದ್ದು ಕಿರುತೆರೆ ವೀಕ್ಷಕರಿಗೆ ಕಿಕ್ ಕೊಟ್ಟಿದೆ.

More from Filmibeat

English summary
Dandupalya actor Ravi Kale special entry in Colors Kannada Serial Sri Gandada Gudi.
Read more about: ravi kale serial colors kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X