Love Mocktail 3: ಕಿರುತೆರೆಗೆ ಎಂಟ್ರಿ ಕೊಡುತ್ತಿದೆ 'ಲವ್ ಮಾಕ್‌ಟೇಲ್ 3'; ಯಾವಾಗ? ಎಲ್ಲಿ?

ಕಳೆದ ವರ್ಷದಂತೆ ಈ ವರ್ಷ ಕೂಡ ಕನ್ನಡ ಚಿತ್ರರಂಗ ಸೋಲಿನ ಸುಳಿಗೆ ಸಿಲುಕಿ ಒದ್ದಾಡುತ್ತಿದೆ. ಈ ಗ್ಯಾಪ್‌ನಲ್ಲಿ ಕನ್ನಡದಲ್ಲಿ ಒಂದೆರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿವೆ. ಅದರಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ 'ಲವ್ ಮಾಕ್ಟೇಲ್ 3' ಸಿನಿಮಾ ಕೂಡ ಒಂದು. ಈ ಹಿಂದೆ ಅವರೇ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದ 'ಲವ್ ಮಾಕ್ಟೇಲ್'ನ 3ನೇ ಸೀಕ್ವೆಲ್ ಆಗಿತ್ತು. ಹೀಗಾಗಿ ಪ್ರೇಕ್ಷಕರಲ್ಲೂ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿತ್ತು.

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್‌ನಲ್ಲಿ 'ಲವ್ ಮಾಕ್ಟೇಲ್' ಸೀಕ್ವೆಲ್‌ಗಳು ಯಶಸ್ಸು ಕಂಡಿವೆ. ಮೊದಲನೇ ಪಾರ್ಟ್‌ನಿಂದ ಹಿಡಿದು ಮೂರನೇ ಪಾರ್ಟ್‌ವರೆಗೂ ಪ್ರೇಕ್ಷಕರಿಗೆ ಒಂದೊಂದು ರೀತಿ ಫೀಲಿಂಗ್ ಕೊಟ್ಟಿದೆ. ಹೀಗಾಗಿ ಈ ಸಿನಿಮಾದ ಮೂರು ಸೀಕ್ವೆಲ್‌ಗಳು ಬರುವ ಹಾಗೆ ಆಯ್ತು. ಥಿಯೇಟರ್‌ನಲ್ಲಿ ಮಸ್ತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡ ಬಳಿಕ ಓಟಿಟಿಗೆ ಲಗ್ಗೆ ಇಟ್ಟಿತ್ತು. ಈಗ ಟಿವಿಯಲ್ಲಿ ಅಬ್ಬರಿಸೋಕೆ ಸಜ್ಜಾಗಿದೆ.

Darling Krishna and Milana Nagaraj Movie Love Mocktail 3 WTP on Zee Kannada this week

ಈ ವೀಕೆಂಡ್‌ನಲ್ಲಿ ಕಿರುತೆರೆ ವೀಕ್ಷಕರನ್ನು ಭಾವನಾತ್ಮಕ ಅಲೆಯಲ್ಲಿ ತೇಲಿಸುವುದಕ್ಕೆ ಮುಂದಾಗಿದೆ. ಈ ವಾರಾಂತ್ಯದಲ್ಲಿ ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್ 3' ಸಿನಿಮಾವನ್ನು ಪ್ರಸಾರ ಮಾಡುತ್ತಿದೆ. ಹೀಗಾಗಿ ಮನೆಯಲ್ಲಿ ಫ್ಯಾಮಿಲಿ ಜೊತೆ ಕೂತು ಕಾಮಿಡಿ ಕಮ್ ಎಮೋಷನಲ್ ಸಿನಿಮಾವನ್ನು ವೀಕ್ಷಣೆ ಮಾಡಬಹುದು.

ಕಿರುತೆರೆಯಲ್ಲಿ 'ಲವ್ ಮಾಕ್ಟೇಲ್ 3'

'ಲವ್ ಮಾಕ್ಟೇಲ್ 3' ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾ. ಈಗಾಗಲೇ ಥಿಯೇಟರ್‌ಗೆ ಬಂದು ನೋಡಿದ ಪ್ರೇಕ್ಷಕರ ಮನಸ್ಸಿಗೆ ಈ ಸಿನಿಮಾ ಹತ್ತಿರವಾಗಿದೆ. ಹೀಗಾಗಿ ಜೀ ಕನ್ನಡ ಈ ವೀಕೆಂಡ್‌ನಲ್ಲಿ ಈ ಸಿನಿಮಾ ಪ್ರಸಾರ ಮಾಡುವ ಮೂಲಕ ವೀಕ್ಷಕರ ಮನರಂಜನೆಯನ್ನು ಮತ್ತಷ್ಟು ರಂಗೇರಿಸುತ್ತಿದೆ. ಕನ್ನಡದ ಈ ಸೂಪರ್‌ಹಿಟ್ 'ಲವ್ ಮಾಕ್‌ಟೇಲ್ ಸೀರಿಸ್‌ನ ಕೊನೆಯ ಭಾಗವಾದ 'ಲವ್ ಮಾಕ್‌ಟೇಲ್ 3'ಇದೇ ಜೂನ್ 21 ರಂದು, ಸಂಜೆ 4:30 ಕ್ಕೆ ಪ್ರಸಾರ ಆಗುತ್ತಿದೆ.

'ಲವ್ ಮಾಕ್‌ಟೇಲ್ 2' ಸಿನಿಮಾ ತೆರೆಕಂಡ ಹಲವು ವರ್ಷಗಳ ಬಳಿಕ 'ಲವ್ ಮಾಕ್‌ಟೇಲ್ 3' ರಿಲೀಸ್ ಆಗಿದೆ. ಈ ಬಾರಿ ತಂದೆಯ ಪ್ರೀತಿ, ಕುಟುಂಬದ ಒಡನಾಟ, ಜವಾಬ್ದಾರಿ ಮತ್ತು ಎಂತಹ ಪರಿಸ್ಥಿತಿಯಲ್ಲೂ ಕೌಟುಂಬಿಕ ಮೌಲ್ಯಗಳನ್ನು ಹೇಗೆ ಗಟ್ಟಿಯಾಗಿ ನಿಲ್ಲುತ್ತವೆ ಅನ್ನೋದನ್ನು ತುಂಬಾ ಸುಂದರವಾಗಿ ತೋರಿಸಲಾಗಿದೆ. ಅಲ್ಲದೆ ಸಂಬಂಧಕ್ಕಿಂತ ಮಿಗಿಲಾದುದು ಏನೂ ಇಲ್ಲ ಎಂಬುದೇ ಈ ಸಿನಿಮಾದ ಮತ್ತೊಂದು ಹೈಲೈಟ್. ಭಾವನೆಗಳ ಹಲವು ಪದರಗಳನ್ನು ಒಳಗೊಂಡಿರುವ ಈ ಕಥೆ, ಪ್ರೀತಿ, ನೋವು ಮತ್ತು ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಸಂಬಂಧಗಳನ್ನು ಹೇಗೆ ಕಾಪಾಡಿಕೊಳ್ಳುತ್ತವೆ ಎಂಬುದನ್ನು ಮನಮುಟ್ಟುವಂತೆ ಹೇಳಲಾಗಿದೆ.

ಇದರ ಜೊತೆಗೆ ಕಾಳಜಿ, ನಂಬಿಕೆ ಮತ್ತು ಬದ್ಧತೆಯಿಂದ ಹುಟ್ಟಿಕೊಳ್ಳುವ ಸಂಬಂಧಗಳು ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ಮನ ಕಲುಕುವಂತೆ ಹೇಳಾಗಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ ಸುನಿಲ್, ರೇಚಲ್ ಡೇವಿಡ್, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್ ಹಾಗೂ ಶ್ವೇತಾ ಆರ್.ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

'ಲವ್ ಮಾಕ್ಟೇಲ್ 3' ಕಥೆಯೇನು?

ಇನ್ನು ಕಥೆಯ ಕಡೆಗೆ ಬರೋದಾರೆ, ಹೀರೋ ಆದಿ (ಡಾರ್ಲಿಂಗ್ ಕೃಷ್ಣ) ನಿಧಿಯನ್ನು ದತ್ತು ಪಡೆದಿರುತ್ತಾನೆ. ಆ ಮಗುವನ್ನು ತನ್ನ ಸ್ವಂತ ಮಗಳಂತೆ ಜವಾಬ್ದಾರಿಯಿಂದ ಸಾಕುತ್ತಿರುತ್ತಾನೆ. ಆದಿ ಮತ್ತು ನಿಧಿಯ ಇಬ್ಬರೂ ಅವರದ್ದೇ ಲೋಕದಲ್ಲಿ ಸುಂದರ ನೆನಪುಗಳನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾರೆ. ಅಪ್ಪ-ಮಗಳ ಈ ಅಚ್ಚುಮೆಚ್ಚಿನ ಬಾಂಧವ್ಯದ ಸುತ್ತ ಸಿನಿಮಾ ಸಾಗುತ್ತದೆ. ಹಾಗೇ ಜಗ್ಗಾ ಮಮ್ಮಿ ಮತ್ತು ಗೆಳೆಯ ವಿಜಯ್‌ ಪಾತ್ರ ಸಿನಿಮಾದ ಹೈಲೈಟ್. ಆದರೆ, ಡಾ.ಶಾಂತಾ ಅವರು ನಿಧಿ ತನ್ನ ಸ್ವಂತ ಮೊಮ್ಮಗಳು ಎಂದು ಕೋರ್ಟ್ ಮೊರೆ ಹೋಗುತ್ತಾರೆ. ಅಲ್ಲಿಂದ ಆದಿ ಮತ್ತು ನಿಧಿಯ ಜೀವನದಲ್ಲಿ ದೊಡ್ಡ ತಿರುವು ಸಿಗುತ್ತೆ. ಅಲ್ಲಿಂದ ಆರಂಭವಾಗುವ ಕಾನೂನು ಹೋರಾಟ ಹಾಗೂ ಭಾವನಾತ್ಮಕ ಸಂಘರ್ಷ ಅವರ ಬದುಕನ್ನು ಬೇರೆಯದ್ದೇ ದಿಕ್ಕಿಗೆ ತೆಗೆದುಕೊಂಡು ಹೋಗುತ್ತೆ. ಈ ಸಂದರ್ಭದಲ್ಲಿ ತಾನು ಪ್ರೀತಿಯಿಂದ ಕಟ್ಟಿಕೊಂಡಿರುವ ಸುಂದರವಾದ ಕುಟುಂಬವನ್ನು ಉಳಿಸಿಕೊಳ್ಳಲು ಆದಿ ಮಾಡುವ ಹೋರಾಟವೇ ವೀಕ್ಷಕರು ಹೃದಯವನ್ನು ಬಾರವಾಗಿಸುತ್ತೆ.

English summary
Darling Krishna and Milana Nagaraj Movie Love Mocktail 3 WTP on Zee Kannada this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X