Weekend With Ramesh: ಧನಂಜಯ್ PUCಯಲ್ಲಿ ಗಳಿಸಿದ್ದು 520/600 ಅಂಕ.. SSLCಯಲ್ಲಿ ಗಳಿಸಿದ್ದೆಷ್ಟು ಗೊತ್ತೇ?

ಡಾಲಿ ಧನಂಜಯ್ ಕೇವಲ ನಟನೆಯಲ್ಲಷ್ಟೇ ಬ್ರಿಲಿಯಂಟ್ ಅಲ್ಲ. ಓದಿನಲ್ಲೂ ಸಖತ್ ಬ್ರಿಲಿಯಂಟೇ. ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಇಂಜಿನಿಯರಿಂಗ್ ಮುಗಿಸಿದ ಬಳಿಕವೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಓದಿನ ಜೊತೆ ಜೊತೆಗೆ ಡಾಲಿ ನಟನೆಯಲ್ಲೂ ತರಬೇತಿ ಪಡೆಯುತ್ತಿದ್ದರಿಂದ ಚಿತ್ರರಂಗದ ಕಡೆಗೆ ಹೆಚ್ಚು ಗಮನ ಸೆಳೆದಿತ್ತು.

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಸೀಸನ್ 5 ಆರಂಭ ಆಗಿದೆ. ಈಗಾಗಲೇ ನಾಲ್ಕು ವೀಕೆಂಡ್‌ನಲ್ಲಿ ಐದು ಮಂದಿ ಅತಿಥಿಗಳನ್ನು ವೀಕೆಂಡ್ ಟೆಂಟ್‌ಗೆ ಬಂದು ಹೋಗಿದ್ದಾರೆ. ಇವರಲ್ಲಿ ನಟರಾಕ್ಷಸ ಡಾಲಿ ಧನಂಜಯ್ ಕೂಡ ಒಬ್ಬರು.

Dhananjay PUC Marks Revealed In Weekend With Ramesh Season 5 what about SSLC Marks

ಈ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಅವರ ಕಷ್ಟದ ದಿನಗಳನ್ನು ರಿವೀಲ್ ಮಾಡಲಾಗಿದೆ. ಚಿತ್ರರಂಗದ ಜರ್ನಿ, ಅವಮಾನಗಳು, ಯಶಸ್ಸು ಎಲ್ಲವೂ ವೀಕ್ಷಕರ ಮುಂದಿಡಲಾಗಿದೆ. ಇದೇ ವೇಳೆ ಧನಂಜಯ್ PUCಯಲ್ಲಿ ಪಡೆದ ಅಂಕಗಳನ್ನು ಜನರ ಮುಂದಿಡಲಾಗಿತ್ತು. ಹಾಗಿದ್ಮೇಲೆ SSLCಯಲ್ಲಿ ಎಷ್ಟು ಅಂಕ ಗಳಿಸಿದ್ದರು ಅನ್ನೋ ಕುತೂಹಲ ಇರದೇ ಇರುತ್ತಾ? ಅದನ್ನ ತಿಳಿಯೋಕೆ PUCಯಲ್ಲಿ ಗಳಿಸಿದ ಅಂಕವೆಷ್ಟು ಅನ್ನೋದನ್ನು ನೋಡೋಣ.

ಧನಂಜಯ್ PUCಯಲ್ಲಿ ಪಡೆದ ಅಂಕ ಎಷ್ಟು?

ಡಾಲಿ ಧನಂಜಯ್ PUC ಓದಿದ್ದು ಮೈಸೂರಿನಲ್ಲಿ. ಇಲ್ಲಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಆ ಬಳಿಕ ಇಂಜಿನಿಯರಿಂಗ್‌ಗೆ ದಾಖಲಾಗಿದ್ದರು. ಅಂದ್ಹಾಗೆ ಡಾಲಿ ತಂದೆಯೇ ಮಗ ಪಿಯುಸಿಯನ್ನು ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲೇ ಮಾಡಬೇಕು ಎಂದು ಬಯಸಿದ್ದರು. ಹೀಗಾಗಿ ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಧನಂಜಯ್ ಪಿಯುಸಿ ಮುಗಿಸಿ ಉತ್ತಮ ಅಂಕ ಪಡೆದರು.

ವೀಕೆಂಡ್ ವಿತ್ ರಮೇಶ್ ಸೀಸನ್ 5ನಲ್ಲಿ ನಟರಾಕ್ಷಸ ಧನಂಜಯ್ ಪಿಯುಸಿ ದಿನಗಳನ್ನು ಅನಾವರಣ ಮಾಡಿದ್ದಾರೆ. ಇದೇ ವೇಳೆ ಪಿಯುಸಿಯಲ್ಲಿ ಪಡೆದ ಅಂಕಗಳೂ ರಿವೀಲ್ ಆಗಿದೆ. ಅಂದ್ಹಾಗೆ, ಪಿಯುಸಿಯಲ್ಲಿ ಡಾಲಿಗೆ 600ಕ್ಕೆ 520 ಅಂಕ ಬಂದಿತ್ತು. ಫಿಸಿಕ್ಸ್‌ನಲ್ಲಿ 99 ಅಂಕ ಗಳಿಸಿದ್ದರು. ಶೇ.86.66 ಅಂಕ ಗಳಿಸಿದ್ದರು. ಹಾಗಿದ್ದರೆ. ಎಸ್‌ಎಸ್‌ಎಲ್‌ಸಿಯಲ್ಲಿ ಗಳಿಸಿದ ಅಂಕವೆಷ್ಟು?

Dhananjay PUC Marks Revealed In Weekend With Ramesh Season 5 what about SSLC Marks

ನಟರಾಕ್ಷಸ SSLCಯಲ್ಲಿ ಗಳಿಸಿದ್ದೆಷ್ಟು?

ಡಾಲಿ ಧನಂಜಯ್ ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದಿದ್ದರು. ಬಾಲ್ಯದಿಂದಲೇ ಓದಿನಲ್ಲಿ ಚುರುಕಾಗಿದ್ದರು. ಅರಸಿಕೆರೆ ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದ ನಟ, SSLCಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದರು. ಇದು ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಇದನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಡಾಲಿ ಧನಂಜಯ್ SSLCಯಲ್ಲಿ ಶೇ.95.52 ಅಂಕ ಗಳಿದ್ದರು. ಪತ್ರಿಕೆಯಲ್ಲಿ ಇವರ ಫೋಟೊ ಜೊತೆಗೆ ಅವರು ಗಳಿಸಿದ ಅಂಕವನ್ನು ಪ್ರಕಟಿಸಲಾಗಿದೆ. ಹೀಗಾಗಿ ಪಿಯುಸಿಯಷ್ಟೇ ಅಲ್ಲ. SSLCಯಲ್ಲೂ ನಟರಾಕ್ಷಸ ಹೆಚ್ಚು ಅಂಕ ಗಳಿಸಿ ತಂದೆ-ತಾಯಿಗೆ ಗೌರವ ತಂದಿದ್ದರು. ಹೀಗಾಗಿ ಈ ಎರಡು ಅಂಕ ಪಟ್ಟಿಗಳು ನೋಡಿದ್ರೆ, ಡಾಲಿ ಓದಿಯಲ್ಲಿ ಬ್ರಿಲಿಯಂಟ್ ಸ್ಟುಡೆಂಟ್ ಅಂತ ಯಾವುದೇ ಅನುಮಾನವಿಲ್ಲದೆ ಹೇಳಬಹುದು.

ನಟನೆಯಲ್ಲೂ ಧನಂಜಯ್ ಬ್ರಿಲಿಯಂಟ್

ನಟರಾಕ್ಷಸ ಧನಂಜಯ್ ಕೇವಲ ಓದಿನಲ್ಲಿ ಅಷ್ಟೇ ಅಲ್ಲ, ನಟನೆಯಲ್ಲೂ ಮುಂದಿದ್ದಾರೆ. ಡಾಲಿ ಕನ್ನಡ, ತೆಲುಗು ಭಾಷೆಯ ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸುಮಾರು 25 ಸಿನಿಮಾಗಳನ್ನು ಪೂರೈಸಿರೋ ನಟನ ಕೈಯಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿವೆ.

Dhananjay PUC Marks Revealed In Weekend With Ramesh Season 5 what about SSLC Marks

ನಟ ಧನಂಜಯ್ 25ನೇ ಸಿನಿಮಾ 'ಹೊಯ್ಸಳ' ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಈಗ ಮೋಹಕತಾರೆ ರಮ್ಯಾ ಜೊತೆ 'ಉತ್ತರಕಾಂಡ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಇನ್ನೇನು ಆರಂಭ ಆಗಬೇಕಿದೆ.

More from Filmibeat

English summary
Dhananjay PUC Marks Revealed In Weekend With Ramesh Season 5 what about SSLC Marks? He studied PUC in Mari Mallappa college Mysore and scored 520 out of 600, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X