ಕಿರುತೆರೆಯಲ್ಲಿ 'ಮಾರ್ಟಿನ್' ಜಾತ್ರೆ; ಎಲ್ಲಿ? ಯಾವಾಗ ನೋಡ್ಬಹುದು?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಥಿಯೇಟರ್‌ನಿಂದ ಓಟಿಟಿಗೆ ಲಗ್ಗೆ ಇಟ್ಟಿತ್ತು. ಮಾಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾವೀಗ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಧ್ರುವ ಸರ್ಜಾ ಹಾಗೂ ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾಗೆ ಕಿರುತೆರೆ ವೀಕ್ಷಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋ ಕುತೂಹಲವಿದೆ.
ಬಹುಕೋಟಿ ವೆಚ್ಚದ 'ಮಾರ್ಟಿನ್' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಹುಟ್ಟಿಸಿದ ಸಿನಿಮಾ. ದುಬಾರಿ ಹಣ ಖರ್ಚು ಮಾಡಿ ಆಕ್ಷನ್ ಸೀನ್‌ಗಳನ್ನು ಚಿತ್ರೀಕರಿಸಲಾಗಿದೆ. ಈ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಮತ್ತೊಂದು ಅವಕಾಶ ಸಿಕ್ಕಿದೆ. ಈ ಸಿನಿಮಾ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಡಿಸೆಂಬರ್ 29ರಂದು ಜೀ ಕನ್ನಡದಲ್ಲಿ ಸಂಜೆ 4 ಗಂಟೆಗೆ ಸಿನಿಮಾದ ಪ್ರಸಾರ ಆರಂಭ ಆಗುತ್ತಿದೆ.

2024ರ ಕೊನೆಯಲ್ಲಿ ಕಿರುತೆರೆ ವೀಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ. 'ಅಂಬಾರಿ' ಸಿನಿಮಾ ಬಳಿಕ ಎ.ಪಿ. ಅರ್ಜುನ್ ಧ್ರುವ ಸರ್ಜಾಗಾಗಿ 'ಮಾರ್ಟಿನ್' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಅರ್ಜುನ್ ಸರ್ಜಾ ಕಥೆಯನ್ನು ನೀಡಿದ್ದರು. ಹಾಗೇ ಆಕ್ಷನ್ ಪ್ರಿನ್ಸ್‌ಗೆ ವೈಭವಿ ಶಾಂಡಿಲ್ಯಾ ಅವರು ಜೋಡಿಯಾಗಿದ್ದು ಇವರಿಬ್ಬರ ಕೆಮಿಸ್ಟ್ರಿ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಕಾಣ ಸಿಗತ್ತೆ.
ಇನ್ನು 'ಮಾರ್ಟಿನ್' ಕಥೆ ಕಡೆಗೆ ಬರೋದಾರೆ, ನಾಯಕ ಧ್ರುವ ಸರ್ಜಾ ಪಾಕಿಸ್ತಾನದಲ್ಲಿ ಸೆರೆಸಿಕ್ಕ ಭಾರತೀಯ ಪ್ರಜೆಯಾಗಿ ಕಾಣಿಸಿಕೊಂಡಿದ್ದಾರೆ. ತಾನು ಯಾರು ಅನ್ನೋದೇ ನೆನಪಿಗೆ ಇರದ ನಾಯಕ ತನ್ನ ಗುರುತನ್ನು ಹುಡುಕಿಕೊಂಡು ಹೊರಡುತ್ತಾನೆ. ಹೀಗೆ ಹೊರಟ ನಾಯಕನಿಗೆ ಒಂದೊಂದೇ ಅಚ್ಚರಿಯ ಸಂಗತಿಗಳು ಮತ್ತು ಸವಾಲುಗಳು ಎದುರಾಗುತ್ತವೆ. ತನ್ನ ಎದುರಿಗೆ ಬಂದ ಸವಾಲುಗಳನ್ನು ದಾಟಿ 'ಮಾರ್ಟಿನ್' ಹೇಗೆ ಮುಂದಕ್ಕೆ ಸಾಗುತ್ತಾನೆ. ಆ ವೇಳೆ ಆತನಿಗೆ ಗೊತ್ತಾಗುವುದು ಏನು? ಅನ್ನೋದನ್ನು ತಿಳಿಯಲು ಸಿನಿಮಾ ನೋಡಬೇಕು.
'ಮಾರ್ಟಿನ್' ಸಿನಿಮಾದಲ್ಲಿ ಧ್ರುವ ಸರ್ಜಾ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿರುವುದು ಈಗಾಗಲೇ ಗೊತ್ತಾಗಿದೆ. ಈ ಸಿನಿಮಾದಲ್ಲಿ ಕೇವಲ ಆಕ್ಷನ್ ಸೀನ್‌ಗಳಷ್ಟೇ ದುಬಾರಿಯಾಗಿಲ್ಲ. ಇಡೀ ಸಿನಿಮಾವನ್ನೇ ನಿರ್ಮಾಪಕ ಉದಯ್ ಕೆ ಮೆಹ್ತಾ ಅದ್ಧೂರಿಯಾಗಿ ಶೂಟ್ ಮಾಡಿದ್ದಾರೆ. ಆಕ್ಷನ್ ಜೊತೆಗೆ ಸೆಂಟಿಮೆಂಟ್, ಲವ್, ದೇಶ ಪ್ರೇಮ ಎಲ್ಲವನ್ನೂ ನೋಡಬಹುದು. ಧ್ರುವ ಸರ್ಜಾ, ವೈಭವಿ ಶಾಂಡಿಲ್ಯಾ ಜೊತೆಗೆ ಅಚ್ಯುತ್ ಕುಮಾರ್, ಸುಕೃತ ವಾಗ್ಲೆ ಮತ್ತು ನಿಕಿತಿನ್ ಧೀರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸಾಮಾನ್ಯವಾಗಿ ಸ್ಟಾರ್‌ಗಳ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರ ಆದರೆ, ಅದಕ್ಕೆ ರೇಟಿಂಗ್ ಅನ್ನು ಅಭಿಮಾನಿಗಳು ಎದುರು ನೋಡುತ್ತಿರುತ್ತಾರೆ. 'ಮಾರ್ಟಿನ್'ಗೆ ಕಿರುತೆರೆಯಲ್ಲಿ ಎಷ್ಟು ಟಿಆರ್‌ಪಿ ಬರುತ್ತೆ ಅನ್ನೋದರ ಮೇಲೆ ಸಿನಿಮಾ ಮಂದಿ ಕಣ್ಭಿಟ್ಟಿದ್ದಾರೆ. ವರ್ಷದ ಕೊನೆಯಲ್ಲಿ ಸಿನಿಮಾ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವುದರಿಂದ ಈ ಸಿನಿಮಾಗೆ ಒಳ್ಳೆ ಯ ರೇಟಿಂಗ್ ಬರುತ್ತೆ ಅನ್ನೋ ಲೆಕ್ಕಾಚಾರವನ್ನು ಸಿನಿಮಾ ಮಂದಿ ಹಾಕಿದ್ದಾರೆ.
ಇನ್ನು ಧ್ರುವ ಸರ್ಜಾ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಬೇರೆ ಭಾಷೆಗಳಲ್ಲಿ 'ಮಾರ್ಟಿನ್' ಹೆಚ್ಚು ಸದ್ದು ಮಾಡಲಿಲ್ಲ. ಆದರೆ, ಧ್ರುವ ಸರ್ಜಾ ಆಕ್ಷನ್‌ಗೆ ಫ್ಯಾನ್ಸ್ ಶಿಳ್ಳೆ ಹಾಕಿದ್ದರು. ಈಗ ಕಿರುತೆರೆಯಲ್ಲೂ ಪ್ರಸಾರ ಆಗುತ್ತಿರುವುದರಿಂದ ವೀಕೆಂಡ್‌ನಲ್ಲಿ ವೀಕ್ಷಕರು ಈ ಸಿನಿಮಾವನ್ನು ಮಸ್ತ್ ಆಗಿ ಎಂಜಾಯ್ ಮಾಡುತ್ತಾರೆ ಅನ್ನೋ ನಿರೀಕ್ಷೆಯಿದೆ. ಹಾಗಾದ್ರೆ ಆ 'ಮಾರ್ಟಿನ್' ಯಾರು? ಆತ ಎಲ್ಲಿದ್ದಾನೆ? ಇವೆಲ್ಲದಕ್ಕೂ ಉತ್ತರ ಸಿಗಲಿದೆ ಡಿಸೆಂಬರ್ 29 ರಂದು ಸಂಜೆ 4 ಗಂಟೆಗೆ ಜೀ ಕನ್ನಡದಲ್ಲಿ ಸಿಗಲಿದೆ.


Click it and Unblock the Notifications











