"ತುಳಿದ ಜಾಗದಲ್ಲಿ ಬೆಳೆದು ತೋರಿಸು": ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಭವ್ಯಾ ಗೌಡ ತಿರುಗೇಟು ಕೊಟ್ಟರೇ?
ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಭವ್ಯಾ ಗೌಡ ಹೊಸ ಧಾರಾವಾಹಿ 'ಕರ್ಣ' ಮೂಲಕ ಕಾಣಿಸಿಕೊಳ್ಳಬೇಕಿತ್ತು. ಆದರೆ, ಈ ಸೀರಿಯಲ್ ಜೀ ಕನ್ನಡದಲ್ಲಿ ಇನ್ನೇನು ಪ್ರಸಾರ ಒಂದು ದಿನ ಇದೆ ಎನ್ನುವಾಗಲೇ ಕಾನೂನು ಸಮರ ಎದುರಿಸಬೇಕಾಯ್ತು. ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೂ ಮುನ್ನ ನಟಿ ಭವ್ಯಾ ಗೌಡ ಅಗ್ರಿಮೆಂಟ್‌ಗೆ ಸಹಿ ಹಾಕಿದ್ದರು. ಅದನ್ನು ಬ್ರೇಕ್ ಮಾಡಿದ್ದಾರೆಂಬ ಆರೋಪ ಭವ್ಯಾ ಗೌಡ ಮೇಲಿದೆ.
ಬಿಗ್ ಬಾಸ್ ಮುಗಿದ ಆರು ತಿಂಗಳವರೆಗೂ ಕಲರ್ಸ್ ಕನ್ನಡ ಬಿಟ್ಟು ಬೇರೊಂದು ಮನರಂಜನಾ ವಾಹಿನಿಯಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಬಿಗ್ ಬಾಸ್ ಸ್ಪರ್ಧಿ ಹಾಗೂ ಕಲರ್ಸ್ ಕನ್ನಡದ ಮಧ್ಯೆ ಇಂತಹದ್ದೊಂದು ಅಗ್ರಿಮೆಂಟ್ ಆಗಿರುತ್ತೆ. ಅದು ಮುಗಿಯುವ ಮುನ್ನವೇ ಭವ್ಯಾ ಗೌಡ ಜೀ ಕನ್ನಡದ 'ಕರ್ಣ' ಧಾರಾವಾಹಿಯಲ್ಲಿ ನಟಿಸಿದ್ದಾರೆಂಬ ಆರೋಪವಿದೆ. ಹೀಗಾಗಿ ಕೆಲವು ದಿನಗಳ ಹಿಂದೆ ಭವ್ಯಾ ಗೌಡ ವಿರುದ್ಧ ಕಲರ್ಸ್ ಕನ್ನಡ ಕೋರ್ಟ್ ಮೆಟ್ಟಿಲೇರಿತ್ತು.

ಈ ಕಾರಣಕ್ಕೆ ಜೀ ಕನ್ನಡದಲ್ಲಿ ಪ್ರಸಾರ ಆಗಬೇಕಿದ್ದ 'ಕರ್ಣ' ಧಾರಾವಾಹಿಯನ್ನು ಮುಂದೂಡಲಾಗಿದೆ. ಸದ್ಯ ಈ ವಿಷಯ ಕೋರ್ಟ್‌ನಲ್ಲಿದೆ. ಇದೇ ಬೆನ್ನಲ್ಲೇ ಭವ್ಯಾ ಗೌಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾರ್ಮಿಕವಾಗಿ ಸ್ಟೋರಿಯನ್ನು ಹಾಕಿದ್ದಾರೆ. ಇದು ಯಾರಿಗೋ ತಿರುಗೇಟು ಕೊಡುವುದಕ್ಕೆ ಅಂತಲೇ ಹಾಕಿದ್ದಾರೆ ಅಂತ ಕಿರುತೆರೆಯ ವಲಯದಲ್ಲಿ ಗುಸು ಗುಸು ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಭವ್ಯಾ ಗೌಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿದ ಪೋಸ್ಟ್ ಏನು? ಅದರಲ್ಲಿ ಏನಿದೆ? ತಿಳಿಯುವುದಕ್ಕೆ ಮುಂದೆ ಓದಿ.
ನಟಿ ಭವ್ಯಾ ಗೌಡ ವಿರುದ್ಧ ಕಲರ್ಸ್ ಕನ್ನಡ ಕಾನೂನು ಹೋರಾಟ ಮಾಡುತ್ತಿದೆ. ಮೂಲಗಳ ಪ್ರಕಾರ, ನಾಳೆ (ಜೂನ್ 27) ಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಬಿಗ್ ಬಾಸ್ ರಿಯಾಲಿಟಿ ಶೋ ಅಗ್ರಿಮೆಂಟ್ ಪ್ರಕಾರ ನಟಿ ಭವ್ಯಾ ಗೌಡ ಜುಲೈ ಅಂತ್ಯದವರೆಗೆ ಇನ್ನೊಂದು ಮನರಂಜನಾ ವಾಹಿನಿಗಳಲ್ಲಿ ಕೆಲಸ ಮಾಡುವಂತಿಲ್ಲ. ಹೀಗಾಗಿ 'ಕರ್ಣ' ಧಾರಾವಾಹಿಯನ್ನು ಅಲ್ಲಿವರೆಗೂ ಹೋಲ್ಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಭವ್ಯಾ ಗೌಡ 'ಕರ್ಣ' ಧಾರಾವಾಹಿಯಲ್ಲಿ ಇರುತ್ತಾರಾ? ಇಲ್ವಾ? ಎನ್ನುವ ಪ್ರಶ್ನೆ ಕೂಡ ಎದ್ದಿತ್ತು. ಈ ಧಾರಾವಾಹಿಯಿಂದ ಭವ್ಯಾ ಗೌಡ ಅವರನ್ನು ಕೈ ಬಿಡಲಾಗಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ, ಕಿರುತೆರೆ ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ, ಭವ್ಯಾ ಗೌಡ ಅಗ್ರಿಮೆಂಟ್ ಮುಗಿಯುವವರೆಗೂ 'ಕರ್ಣ' ಧಾರಾವಾಹಿಯನ್ನು ಪ್ರಸಾರ ಮಾಡದೇ ಇರಲು ತಂಡ ನಿರ್ಧರಿಸಿದೆ ಎನ್ನಲಾಗಿದೆ. ಮತ್ತೊಂದು ಕಾನೂನು ಸಮರದಲ್ಲಿ 'ಕರ್ಣ' ಧಾರಾವಾಹಿ ಪ್ರಸಾರಕ್ಕೆ ಅವಕಾಶ ಸಿಕ್ಕರೆ, ಕೂಡಲೇ ಪ್ರಸಾರ ಮಾಡಲಾಗುತ್ತೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಸದ್ಯ ವಿವಾದಲ್ಲಿ ಸಿಕ್ಕಿಕೊಂಡಿರುವ ಭವ್ಯಾ ಗೌಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ "ತುಳಿದ ಜಾಗದಲ್ಲಿ ಬೆಳೆದು ತೋರಿಸು" ಎಂದು ಬರೆದುಕೊಂಡಿದ್ದಾರೆ. ಹಾಗೇ ಮಣ್ಣಿನ ಮೇಲೆ ಇಟ್ಟ ಹೆಜ್ಜೆಯ ಗುರುತು. ಅದರ ಮೇಲೆ ಹುಟ್ಟಿದ ಸಸಿಯ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಭವ್ಯಾ ಗೌಡ ಪರೋಕ್ಷವಾಗಿ ಟಾಂಗ್ ಕೊಟ್ಟಿರಬಹುದೇ? ಎಂದು ಕಿರುತೆರೆ ವಲಯದಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.
ಏನೇ ಇದ್ದರೂ ಭವ್ಯಾ ಗೌಡ ಅತಂತ್ರಕ್ಕೆ ಸಿಕ್ಕಿಕೊಂಡಿದ್ದಾರೆ. ಇಲ್ಲಿ ತಪ್ಪು ಯಾರದ್ದು ಅನ್ನೋದನ್ನು ನ್ಯಾಯಾಲಯ ವಿಚಾರಣೆಯ ಬಳಿಕ ತೀರ್ಮಾನ ಮಾಡಲಿದೆ. ಕಲರ್ಸ್ ಕನ್ನಡದ ಅಗ್ರಿಮೆಂಟ್ ಅನ್ನು ಭವ್ಯಾ ಗೌಡ ಮುರಿದರೇ? ಕಲರ್ಸ್ ಕನ್ನಡದವರೇ ಆಫರ್ ಕೊಟ್ಟರೂ ಒಪ್ಪಿಕೊಳ್ಳಲಿಲ್ಲವೇ? ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಸುಳ್ಳು ಹೇಳಿದರೆ? ಕಾನೂನಿನ ಮೂಲಕ ಮಾತನಾಡಿ ಎಂದು ಹೇಳಿದರೆ? ಈ ಎಲ್ಲಾ ಪ್ರಶ್ನೆಗೂ ಉತ್ತರ ಸಿಗಬೇಕಿದೆ.


Click it and Unblock the Notifications











