ಕಾರ್ತಿಕ್ ಬಿಗ್‌ಬಾಸ್ ಗೆದ್ಮೇಲೆ ಸಂಗೀತಾ ವಿಶ್ ಮಾಡಿದ್ರಾ? ಫಿನಾಲೆ ಕೊನೆಯಲ್ಲಿ ಏನಾಯ್ತು?

ಬಿಗ್‌ಬಾಸ್ ಕನ್ನಡ ಸೀಸನ್ 10ಗೆ ತೆರೆ ಬಿದ್ದಿದೆ. ಕಿಚ್ಚ ಸುದೀಪ್ ಅಕ್ಕ ಪಕ್ಕ ಯಾರು ನಿಲ್ಲಬಹುದು ಅನ್ನೋ ಕುತೂಹಲಕ್ಕೂ ತೆರೆ ಎಳೆಯಲಾಗಿದೆ. ಈ ಸೀಸನ್‌ನ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಬಿದ್ದಿದ್ದಾರೆ. ಡ್ರೋನ್ ಪ್ರತಾಪ್‌ಗೆ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ಕೆಲವರ ನಿರೀಕ್ಷೆಯಂತೆ ಕಾರ್ತಿಕ್ ಜೊತೆ ಫೈನಲ್‌ನಲ್ಲಿ ಸಂಗೀತಾ ಟಕ್ಕರ್ ಕೊಡುತ್ತಾರೆ ಅನ್ನೋ ನಿರೀಕ್ಷೆಯಿತ್ತು. ಅದು ಮಾತ್ರ ಹುಸಿಯಾಗಿದೆ.

ಬಿಗ್ ಬಾಸ್ ಕನ್ನಡ 10ರ ಫಿನಾಲೆಯಲ್ಲಿ ಸಂಗೀತಾ ಶೃಂಗೇರಿ ಟಾಪ್ 3 ಸ್ಪರ್ಧಿಯಾಗಿದ್ದರು. ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಶೃಂಗೇರಿ ನಡುವೆ ದೊಡ್ಡ ಮಟ್ಟದಲ್ಲಿ ಕಾಂಪಿಟೇಷನ್ ಏರ್ಪಟ್ಟಿತ್ತು. ಕೆಲವರಿಗೆ ಸಂಗೀತಾ ಬಾಗ್‌ಬಾಸ್ ಗೆಲ್ಲದೇ ಇರೋದು ಬೇಸರ ಮೂಡಿಸಿದ್ದಂತೂ ನಿಜ.

Did Sangeetha Sringeri make a wish after Karthik won Bigg Boss Kannada 10

ಅದೇ ಇನ್ನೊಂದು ಕಡೆ ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಶೃಂಗೇರಿ ನಡುವೆ ಪೈಪೋಟಿ ಇತ್ತು. ಆರಂಭದಲ್ಲಿ ತುಂಬಾನೇ ಕ್ಲೋಸ್ ಆಗಿದ್ದ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಮುಂದಿನ ದಿನಗಳಲ್ಲಿ ಬಿರುಕು ಬಿಟ್ಟಿತ್ತು. ಅಲ್ಲಿಂದ ಕೊನೆಯ ಕ್ಷಣದವರೆಗೂ ಕಾರ್ತಿಕ್ ಅನ್ನು ಸಂಗೀತಾ ವಿರೋಧಿಸುತ್ತಲೇ ಇದ್ದರು. ಹೀಗಾಗಿ ಕಾರ್ತಿಕ್ ಬಿಗ್‌ಬಾಸ್ ಟೈಟಲ್ ಗೆದ್ದಮೇಲೆ ಸಂಗೀತಾ ವಿಶ್ ಮಾಡಿದ್ರಾ? ಫಿನಾಲೆ ಕೊನೆಯಲ್ಲಿ ಏನಾಯ್ತು? ಅನ್ನೋದನ್ನು ಕಾರ್ತಿಕ್ ರಿವೀಲ್ ಮಾಡಿದ್ದಾರೆ.

ಕಾರ್ತಿಕ್-ಸಂಗೀತಾ ಸರಿ ಹೋಗಲೇ ಇಲ್ಲ

ಬಿಗ್‌ಬಾಸ್ ಕನ್ನಡ ಸೀಸನ್ 10 ವೀಕ್ಷಕರು ಕೆಲವು ವಿಷಯಗಳಿಗೆ ಗೊಂದಲಕ್ಕೆ ಬಿದ್ದಿದ್ದು ಇದೆ. ಅದರಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಕ್ಲೋಸ್ ಆಗಿದ್ದೇಕೆ? ಕ್ಲೋಸ್ ಆದ್ಮೇಲೆ ಮುನಿಸಿಕೊಂಡಿದ್ದೇಕೆ? ಒಂದೇ ಒಂದು ಘಟನೆ ಇವರಿಬ್ಬರನ್ನೂ ಬೇರೆ ಮಾಡಲು ಸಾಧ್ಯವೇ? ಇಂತಹದ್ದೊಂದು ಗೊಂದಲವಂತೂ ಇದೆ. ಒಂದು ಕಡೆ ಡ್ರೋನ್ ಪ್ರತಾಪ್, ಇನ್ನೊಂದು ಕಡೆ ಕಾರ್ತಿಕ್ ನಿಂತಿದ್ದಾಗ, ಕಿಚ್ಚ ಸುದೀಪ್ ಇಬ್ಬರಲ್ಲಿ ಯಾರು ಗೆಲ್ಲಬೇಕು ಎಂದು ಪ್ರಶ್ನೆ ಮಾಡಿದ್ದರು. ಆಗ ಸಂಗೀತಾ ಕೊಟ್ಟ ಉತ್ತರ ಡ್ರೋನ್ ಪ್ರತಾಪ್. ಈ ವೇಳೆನೂ ಕಾರ್ತಿಕ್ ಹೆಸರು ತೆಗೆಯಲೇ ಇಲ್ಲ.

Did Sangeetha Sringeri make a wish after Karthik won Bigg Boss Kannada 10

ಕಾರ್ತಿಕ್‌ಗೆ ವಿಶ್ ಮಾಡಿದ್ರಾ ಸಂಗೀತಾ?

ಕಾರ್ತಿಕ್ ಬಿಗ್‌ಬಾಸ್ ಸೀಸನ್ 10 ಗೆದ್ದಮೇಲೆ ಸಂಗೀತಾ ವಿಶ್ ಮಾಡಿದ್ರಾ? ಇಲ್ವಾ? ಈ ಪ್ರಶ್ನೆಗೆ ಸ್ಪೀಡ್ ಪ್ಲಸ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಕಾರ್ತಿಕ್ ರಿವೀಲ್ ಮಾಡಿದ್ದಾರೆ. "ವಿಶ್ ಮಾಡಿದ್ರು.. ಮಾಡಲೇಬೇಕಲ್ಲ. ಕಂಗ್ರಾಟ್ಸ್ ಅಂತ ಅಂದರು." ಎಂದು ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಹೇಳಿದ್ದಾರೆ. ಈ ಮೂಲಕ ಇನ್ನೂ ತಮ್ಮಿಬ್ಬರ ನಡುವಿನ ಸ್ನೇಹ ಅಷ್ಟಕ್ಕಷ್ಟೇ ಇದೆ ಎಂದು ಹೇಳಿದಂತಿತ್ತು.

ಕಾರ್ತಿಕ್ ಪಕ್ಕದಲ್ಲಿ ಯಾರು ನಿಲ್ಬೇಕಿತ್ತು?

ಕಾರ್ತಿಕ್ ಪಕ್ಕದಲ್ಲಿ ಡ್ರೋನ್ ಪ್ರತಾಪ್ ನಿಂತಿದ್ದರು. ಆದರೆ, ಕಾರ್ತಿಕ್‌ಗೆ ಮಾತ್ರ ತನ್ನ ಪಕ್ಕದಲ್ಲಿ ಸಂಗೀತಾ ಇರುತ್ತಾರೆ ಎಂದು ಅಂದ್ಕೊಂಡಿದ್ದರು. "ಫಿನಾಲೆ ಕೊನೆಯಲ್ಲಿ ಸಂಗೀತಾ ಇರುತ್ತಾರೆ ಅಂತಾನೇ ಅನಿಸಿತ್ತು. ಗೇಮ್‌ನಲ್ಲಿ ಅವರು ಸ್ಟ್ರಾಂಗ್ ಆಗಿಯೇ ಇದ್ದರು. ಅವರ ಕಣ್ಣಿಗೆ ಫಿಸಿಕಲ್ ಅಟ್ಯಾಕ್ ಆದಾಗ, ಅದರಿಂದ ಕಮ್‌ಬ್ಯಾಕ್ ಮಾಡೋದು ಇದೆಯಲ್ಲ, ಅದು ಒಬ್ಬ ಹುಡುಗಿಯಾಗಿ ಅದು ತುಂಬಾ ವಿಷಯ. ಅದನ್ನು ನಾನು ಗೌರವಿಸುತ್ತೇನೆ. ತುಂಬಾ ಕಷ್ಟ ಪಟ್ಟಿದ್ದಾರೆ. ಒಬ್ಬಂಟಿಯಾಗಿದ್ರು. ಕೊನೆಯ ವಾರ ಕೂಡ ಇಬ್ಬರೇ ಇದ್ದರು. ಇಡೀ ವಾರ ಕಳೆದರು.

ನಮ್ರತಾನಾ? ಸಂಗೀತಾನಾ?

ಬಿಗ್‌ಬಾಸ್ ಮುಗಿಯುವ ಕೊನೆಯ ದಿನಗಳಲ್ಲಿ ನಮ್ರತಾ ಜೊತೆ ಕಾರ್ತಿಕ್ ಕ್ಲೋಸ್ ಆಗಿದ್ದರು. ಸಂಗೀತಾ ಉರಿಸೋಕೆ ಕ್ಲೋಸ್ ಆಗಿದ್ರಾ? ಅನ್ನೋ ಪ್ರಶ್ನೆಗೆ ಕಾರ್ತಿಕ್ ಕೊಟ್ಟ ಉತ್ತರ ಹೀಗಿದೆ. "ನಾನು ಉರಿಸುವುದಕ್ಕೆ ಅಂತ ನಮ್ರತಾ ಜೊತೆ ಕ್ಲೋಸ್ ಆಗಿಲ್ಲ. ಮಾತಾಡಿಸಬೇಕು ಅಂದಾಗ, ನಾನು ಆರೋಗ್ಯಕರವಾಗಿ ಫ್ಲರ್ಟ್ ಮಾಡಿದ್ದು ನಿಜ. ನಾನು ಹಾಗೇ ಇರೋದು. ನಾನು ಹೀಗೆ ಫ್ಲರ್ಟ್ ಮಾಡುತ್ತೇನೆ. ಹಾಗೇ ಮಾತಾಡುತ್ತಾ ಹೆಚ್ಚು ಸಮಯ ಕಳೆಯುವುದಕ್ಕೆ ಶುರು ಮಾಡಿದ್ದೆವು" ಎಂದು ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಹೇಳಿದ್ದಾರೆ.

More from Filmibeat

English summary
Did Sangeetha Sringeri wish Karthik?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X