ನಟಿ ರಮೋಲಾ, ಅಮೃತಾ ಇವರಿಬ್ಬರ ಒಂದು ತಿಂಗಳ ಖರ್ಚು ಒಂದು ಲಕ್ಷ: ಈ ನಟಿಯರು ಯಾಕಿಷ್ಟು ದುಬಾರಿ?

ಜೀ ಕನ್ನಡ ವಾಹಿನಿಯ 'ಭರ್ಜರಿ ಬ್ಯಾಚುಲರ್ಸ್' ಸೀಸನ್ 2 ರಿಯಾಲಿಟಿ ಶೋ ಈಗ ಫಿನಾಲೆ ಹಂತ ತಲುಪಿದೆ. ಈ ರಿಯಾಲಿಟಿ ಶೋನಲ್ಲಿ ವೀಕ್ಷಕರನ್ನು ರಂಜಿಸುವುದರಲ್ಲಿ ಯಶಸ್ವಿಯಾಗಿದೆ. ಈ ಶೋಗಳಲ್ಲಿ ಹಲವು ಉದಯೋನ್ಮುಖ ನಟ ನಟಿಯರು ಭಾಗವಹಿಸಿದ್ದರು. ಅದರಲ್ಲಿ ಕಿರುತೆರೆ ನಟಿಯರಾದ ರಮೋಲಾ ಹಾಗೂ ಅಮೃತಾ ಕೂಡ ಇದ್ದಾರೆ. ರಕ್ಷಕ್ ಬುಲೆಟ್‌ಗೆ ನಟಿ ರಮೋಲಾ ಜೋಡಿದ್ದರೆ, ಗಾಯಕ ಸುನೀಲ್‌ಗೆ ಅಮೃತಾ ಜೋಡಿ.

'ಭರ್ಜರಿ ಬ್ಯಾಚುಲರ್ಸ್' ಸೀಸನ್ 2 ಆರಂಭ ಆದಲ್ಲಿಂದ ಈ ಎರಡೂ ಜೋಡಿಗಳು ಕೂಡ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಈಗ ಫಿನಾಲೆ ಹಂತಕ್ಕೆ ಬಂದಿರುವುದರಿಂದ 'ಭರ್ಜರಿ ಬ್ಯಾಚುಲರ್ಸ್' ಸೀಸನ್ 2ನ ಈ ಎರಡು ಜೋಡಿಗಳು ಮತ್ತೆ ಚರ್ಚೆಯಲ್ಲಿವೆ. ಅದರಲ್ಲೂ ನಟಿ ರಮೋಲಾ ಹಾಗೂ ಅಮೃತಾ ಒಂದು ತಿಂಗಳಿಗೆ ಬಳಸುವ ಖರ್ಚು ಪಾರ್ಟ್ನರ್‌ಗಳನ್ನಷ್ಟೇ ಅಲ್ಲ. ವೀಕ್ಷಕರನ್ನು ಬೆಚ್ಚಿಬೀಳಿಸಿದೆ.

Discover the Monthly Expenses of Bharjari Bachelors Show Contestants Ramola and Amrita

ಈ ರಿಯಾಲಿಟಿ ಶೋನಲ್ಲಿ ನಟಿ ರಮೋಲಾ ಹಾಗೂ ಅಮೃತಾ ಇಬ್ಬರೂ ಒಂದು ತಿಂಗಳಿಗೆ ತಗುಲುವ ಖರ್ಚನ್ನು ಬಹಿರಂಗ ಪಡಿಸಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಅವರ ಪಾರ್ಟ್ನರ್‌ಗಳಿಗೆ ಶಾಕ್ ಆಗಿದೆ. ಅಷ್ಟೇ ಅಲ್ಲದೆ ವೀಕ್ಷಕರಿ ಬೆಚ್ಚಿ ಬೀಳುವುದಕ್ಕೂ ಇದೇ ಕಾರಣ. ಯಾಕಂದ್ರೆ, ಈ ಖರ್ಚಿನಲ್ಲಿ ನಾಲ್ಕೈದು ಕುಟುಂಬಗಳು ಒಂದು ತಿಂಗಳು ನೆಮ್ಮದಿಯಾಗಿ ಜೀವನ ನಡೆಸುತ್ತವೆ.

ನಟಿ ರಮೋಲಾ ಬಹಿರಂಗ ಪಡಿಸಿದಂತೆ, ಅವರಿಗೆ ಒಂದು ತಿಂಗಳಿಗೆ ಕಮ್ಮಿ ಅಂದರೂ 55 ಸಾವಿರ ರೂಪಾಯಿ ಖರ್ಚು ಆಗುತ್ತೆ. ಅದೇ ಅಮೃತಾ ಅವರ ಖರ್ಚು 1 ಲಕ್ಷ ರೂಪಾಯಿ ದಾಟುತ್ತೆ. ಇವರಿಬ್ಬರೂ 'ಭರ್ಜರಿ ಬ್ಯಾಚುಲರ್ಸ್' ಸೀಸನ್ 2 ಫಿನಾಲೆ ವೇದಿಕೆ ಮೇಲೆ ಖರ್ಚನ್ನು ಒಂದೊಂದೇ ಪಟ್ಟಿ ಮಾಡುತ್ತಿದ್ದರೆ, ನಿರೂಪಕ ನಿರಂಜನ್ ದೇಶಪಾಂಡೆ ಹೌಹಾರಿದ್ದಾರೆ. ಇಬ್ಬರೂ ನಟಿಯರನ್ನು ತಮಾಷೆಯಾಗಿ ಕಾಲೆಳೆದಿದ್ದಾರೆ.

ಇನ್ನು ರಮೋಲಾ ಪಾರ್ಟನರ್ ಹಾಗೂ ಅಮೃತಾ ಪಾರ್ಟನರ್ ಇಬ್ಬರೂ ವಿಭಿನ್ನವಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಮೋಲಾ ತಿಂಗಳ ಖರ್ಚು ನೋಡಿ ಪಾರ್ಟನರ್ ರಕ್ಷಕ್ ಬುಲೆಟ್ "ಪ್ರೀತಿ ಮುಂದೆ ಈ ಹಣ ಅನ್ನೋದು ಲೆಕ್ಕಕ್ಕೆ ಇಲ್ಲ" ಎಂದು ಹೇಳಿದರೆ, ಅಮೃತಾ ಪಾರ್ಟನರ್ ಹಾಗೂ ಗಾಯಕ ಸುನೀಲ್ ಹೌಹಾರಿದ್ದಾರೆ. ಅಮೃತಾ ಒಂದು ತಿಂಗಳಿಗೆ ಮಾಡುವ ಖರ್ಚನ್ನು ನೋಡಿ ದಂಗಾಗಿದ್ದಾರೆ.

ರಮೋಲಾ ಏನಕ್ಕೆಲ್ಲ ಇಷ್ಟೊಂದು ಖರ್ಚು ಮಾಡುತ್ತಾರೆಂದು ನೋಡುವುದಾದರೇ, ಈ ನಟಿಯ ಶಾಪಿಂಗ್ ಹಾಗೂ ಸ್ಕಿನ್ ಕೇರ್‌ಗೆ ತಲಾ 10 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ರಮೋಲಾ ಟ್ರಾವೆಲ್ ಮಾಡುವುದಿಲ್ಲ. ಆದರೂ, 8 ಸಾವಿರ ರೂಪಾಯಿಯನ್ನು ಮೀಸಲಿದ್ದಾರೆ. ಫುಡ್‌ಗಾಗಿ 10 ಸಾವಿರವನ್ನು ಖರ್ಚು ಮಾಡುತ್ತಾರಂತೆ. ಇನ್ನು ಮನೆಗೆ ಖರ್ಚು ಅಂತ 15 ಸಾವಿರ ರೂಪಾಯಿ ಬೇಕಂತೆ.

Discover the Monthly Expenses of Bharjari Bachelors Show Contestants Ramola and Amrita

ಹಾಗೇ ನಟಿ ಅಮೃತಾ ತಮ್ಮ ಖರ್ಚಿನ ಬಗ್ಗೆ ವಿವರ ನೀಡಿದ್ದಾರೆ. ಅವರಿಗೆ ಕಾರ್ ಅನ್ನು ಸ್ವಲ್ಪ ಗಲೀಜಾದರೂ ವಾಶ್ ಮಾಡಿಸಲೇ ಬೇಕಂತೆ. ಹೀಗಾಗಿ ಹಲವು ಸಲ ವಾಶ್ ಮಾಡಿಸುತ್ತಲೇ ಇರುತ್ತಾರೆ. ಒಮ್ಮೆ 800 ರೂಪಾಯಿ ಅಂದರೂ, ತಿಂಗಳಿಗೆ 15 ಸಲ ಕಾರ್ ವಾಶ್ ಆಗುತ್ತಂತೆ. ಹೀಗಾಗಿ ₹12 ಸಾವಿರ ಎತ್ತಿಚ್ಚಿದ್ದಾರೆ.

ಇನ್ನೂ ಕಾರಿನ ಡೀಸಲ್‌ಗೆ ₹7 ಸಾವಿರ, ಫುಡ್‌ಗೆ ಅಂತ ₹30 ಸಾವಿರ, ಬ್ಯೂಟಿ ಸಲೂನ್‌ಗೆ ₹25 ಸಾವಿರ, ಶಾಪಿಂಗ್‌ಗೆ ₹40 ಸಾವಿರ, ಮನೆಯ ಖರ್ಚಿಗೆ ₹25 ಸಾವಿರ ರೂಪಾಯಿ ಎಂದು ಹೇಳಿಕೊಂಡಿದ್ದಾರೆ. ಈ ಲೆಕ್ಕಾಚಾರಗಳನ್ನು ನೋಡಿ ವೀಕ್ಷಕರು ಬೆಚ್ಚಿ ಬಿದ್ದಿದ್ದಾರೆ.

More from Filmibeat

English summary
Explore the monthly expenses of Ramola and Amrita from the Bharjari Bachelors Show, revealing their financial habits and lifestyle.
Read more about: tv show actress reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X