Bigg Boss Kannada 12: ಕನ್ನಡದಲ್ಲೂ ಬಿಗ್ ಬಾಸ್ ಆರಂಭ.. ಸೀಸನ್ 12ರ ಲೋಗೋ ರಿವೀಲ್!
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದಲ್ಲೂ ಆರಂಭ ಆಗುತ್ತಿದೆ. ಈಗಾಗಲೇ ದೇಶಾದ್ಯಂತ ಬಿಗ್ ಬಾಸ್ ಜ್ವರ ಶುರುವಾಗಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಹೊಸ ಸೀಸನ್‌ಗೆ ವೇದಿಕೆ ರೆಡಿಯಾಗುತ್ತಿದೆ. ಇತ್ತ ಕನ್ನಡದಲ್ಲಿಯೂ ಬಿಗ್ ಬಾಸ್ 12ನೇ ಸೀಸನ್‌ಗೆ ತೆರೆಮೇರೆಯಲ್ಲಿ ಕೆಲಸಗಳು ಆರಂಭ ಆಗಿದ್ದವು. ಅದರ ಮೊದಲ ಹಂತವಾಗಿ ಕಲರ್ಸ್ ಕನ್ನಡ ಲೋಗೊ ರಿವೀಲ್ ಮಾಡಿದೆ.
ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನೋಡುವುದಕ್ಕೆ ಅಂತಾನೇ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ. ಈ ಕಾರಣಕ್ಕೆ ಕಳೆದ 11 ಸೀಸನ್‌ಗಳು ಕನ್ನಡದಲ್ಲಿ ಯಶಸ್ಸು ಕಂಡಿದೆ. ಅದರಲ್ಲೂ ಸೀಸನ್ 10 ಹಾಗೂ 11 ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡ ರಿಯಾಲಿಟಿ ಶೋ ಅಂತ ಅನಿಸಿಕೊಂಡಿತ್ತು. ಈ ಕಾರಣಕ್ಕೆ 12ನೇ ಸೀಸನ್‌ಗೆ ಅದೇ ಜೋಷ್‌ನಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯ ಈ ವಿಶೇಷ ದಿನದಂದು ಕಲರ್ಸ್ ಕನ್ನಡ ಕಿರುತೆರೆ ವೀಕ್ಷಕರಿಗೆ ಸಪ್ರೈಸ್ ಕೊಟ್ಟಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಲೋಗೋವನ್ನು ಅನಾವರಣ ಮಾಡಿದೆ. ಬಿಗ್ ಬಾಸ್ ಕನ್ನಡ 12ರ ಲೋಗೋ ಗ್ಲಿಂಪ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುತ್ತಿದ್ದಂತೆ ಬಿಗ್ ಬಾಸ್ ಅಭಿಮಾನಿಗಳು ಅಲರ್ಟ್ ಆಗಿದ್ದಾರೆ. ಹಾಗಿದ್ದರೆ, ಬಿಗ್ ಬಾಸ್ ಕನ್ನಡ ಸೀಸನ್ 12ರ ಲೋಗೋ ಹೇಗಿದೆ? ಲೋಗೋ ಹೈಲೈಟ್ ಏನು? ಅಂತ ತಿಳಿಯೋದಕ್ಕೆ ಮುಂದೆ ಓದಿ.
ಬಿಗ್ ಬಾಸ್ 12ರ ಲೋಗೋ ರಿವೀಲ್
ಕಿರುತೆರೆ ವೀಕ್ಷಕರು ಬಿಗ್ ಬಾಸ್ ರಿಯಾಲಿಟಿ ಶೋಗಾಗಿ ಕಾದು ಕೂತಿರುವುದು ಸಹಜ. ಪ್ರತಿವರ್ಷದಂತೆ ಈ ರಿಯಾಲಿಟಿ ಶೋ ಆರಂಭ ಆಗುವುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಆದರೂ, ಇಂದು (ಆಗಸ್ಟ್ 15) ಕಲರ್ಸ್ ಕನ್ನಡ ಬಿಗ್‌ಬಾಸ್ ಲೋಗೊವನ್ನು ರಿವೀಲ್ ಮಾಡಿದೆ. ಸ್ವಾತಂತ್ರ್ಯ ದಿನಾಚರಣೆಯ ಈ ವಿಶೇಷ ದಿನದಂದು ಅನಾವರಣ ಮಾಡಿದ್ದು, "ಕಾದಿದ್ದು ಸಾಕು! ಬಿಗ್ ಬಾಸ್ ಈಸ್ ಬ್ಯಾಕ್! ಆದ್ರೆ.. ಈ ಸಲ ಕಿಚ್ಚು ಮಾತ್ರ ಹೆಚ್ಚು!" ಎಂದು 12ನೇ ಸೀಸನ್ ಹೇಗಿರುತ್ತೆ? ಅನ್ನೋದರ ಸುಳಿವು ನೀಡಿದ್ದಾರೆ.
ಎಲ್ಲಾ ಜಿಲ್ಲೆಯಲ್ಲೂ ಬಿಗ್‌ಬಾಸ್ ಲೋಗೋ
ಹಾಗಂತ ಕೇವಲ ಇನ್‌ಸ್ಟಾಗ್ರಾಂ ಖಾತೆಯಲ್ಲಷ್ಟೇ ಬಿಗ್ ಬಾಸ್ ಲೋಗೋ ಅನಾವರಣ ಆಗಿಲ್ಲ. ದೊಡ್ಡ ಮಟ್ಟದಲ್ಲಿ ಲೋಗೋ ಅನಾವಣ ಮಾಡುವುದಕ್ಕೆ ಕಲರ್ಸ್ ಕನ್ನಡ ಸ್ಕೆಚ್ ಹಾಕಿದೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ಟೌನ್‌ಗಳಲ್ಲಿ ಈ ಲೋಗೋ ಅನಾವರಣ ಆಗುತ್ತಿದೆ. ಇಂದು (ಆಗಸ್ಟ್ 15) ಸಂಜೆ 4 ಗಂಟೆಗೆ ಜಿಲ್ಲೆಯ ಪ್ರಮುಖ ಟೌನ್‌ಗಳಲ್ಲಿ ಬಿಗ್ ಬಾಸ್ ಲೋಗೋ ಕಂಗೊಳಿಸಲಿದೆ. ಅದ್ಯಾವ ಮಟ್ಟಕ್ಕೆ ಆಗುತ್ತೆ ಅನ್ನೋದು ನೋಡಬೇಕಿದೆ.
ಕಿಚ್ಚ ಈಸ್ ಬ್ಯಾಕ್
ಬಿಗ್ ಬಾಸ್ ಕನ್ನಡದ 11 ಸೀಸನ್‌ಗಳನ್ನು ನಿರೂಪಣೆ ಮಾಡಿದ್ದ ಕಿಚ್ಚ ಸುದೀಪ್ 12ನೇ ಸೀಸನ್ ಮಾಡುವುದಿಲ್ಲ ಎಂದು ಹೇಳಿದ್ದರು. ಕಲರ್ಸ್ ಕನ್ನಡದ ಬಿಗ್ ಬಾಸ್ ತಂಡದೊಂದಿಗೆ ಚಿಕ್ಕದೊಂದು ಮನಸ್ತಾಪವಿದ್ದಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದರು. ಆದರೆ, ಕಲರ್ಸ್ ಟೀಮ್ ಕಿಚ್ಚನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, 12ನೇ ಸೀಸನ್ ಸೇರಿ ಇನ್ನೂ ನಾಲ್ಕು ಸೀಸನ್‌ಗಳನ್ನು ಇವರೇ ನಿರೂಪಣೆ ಮಾಡುತ್ತಿದ್ದಾರೆ.
ಏನಂತಾರೆ ಬಿಗ್ ಬಾಸ್ ಫ್ಯಾನ್ಸ್?
ಬಿಗ್ ಬಾಸ್ ಕನ್ನಡ 12ನೇ ಸೀಸನ್ ಅನಾವರಣ ಆಗುತ್ತಿದ್ದಂತೆ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಕಲರ್ಸ್ ಕನ್ನಡದ ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಲೋಗೋ ಹೊರಬೀಳುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳನ್ನು ಹಾಕುವುದಕ್ಕೆ ಶುರು ಮಾಡಿದ್ದಾರೆ. ನೆಟ್ಟಿಗರೊಬ್ಬರು "ಇಷ್ಟು ಬೇಗ ಒಂದು ವರ್ಷವಾಯಿತು ಅಂತ ಯಾರಿಗೆಲ್ಲ ಅನಿಸ್ತಾ ಇದೆ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಕಿಚ್ಚ ಈಸ್ ಬ್ಯಾಕ್" ಎಂದು ಕಮೆಂಟ್ ಹಾಕಿದ್ದಾರೆ. ಮತ್ತೊಬ್ಬರು "ಮೈ ಫೇವರಿಟ್ ರಿಯಾಲಿಟಿ ಶೋ" ಅಂತ ಕಮೆಂಟ್ ಮಾಡಿದ್ದಾರೆ.


Click it and Unblock the Notifications









