"ಓಡ್ರೋ.. ಓಡ್ರೋ.. ಇದು ಸರ್ಜಾ ಅಡ್ಡ"; ಡಿಕೆಡಿ ಸ್ಟೇಜ್ ಮೇಲೆ ಧ್ರುವ ವಿಐಪಿ.. ಶಿವಣ್ಣನ ಸ್ಮೈಲ್ ನೋಡಿ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾವನ್ನು ಬಿಡುವಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ. ಹೈದರಾಬಾದ್, ಹುಬ್ಬಳ್ಳಿ, ದಾವಣಗೆರೆ, ಮುಂಬೈ ಅಂತ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಗ್ಯಾಪ್‌ನಲ್ಲಿ ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್'ನಲ್ಲೂ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.
ಡಿಕೆಡಿ ವೇದಿಕೆಯಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದು, ಜೀ ಕನ್ನಡದ ಒಂದರ ಹಿಂದೊಂದು ಇಂಟ್ರೆಸ್ಟಿಂಗ್ ಪ್ರೋಮೊವನ್ನು ರಿಲೀಸ್ ಮಾಡುತ್ತಿದೆ. ಇಂದು (ಅಕ್ಟೋಬರ್ 5) ಮತ್ತು ನಾಳೆ (ಅಕ್ಟೋಬರ್ 6) ಎರಡು ದಿನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಂಪ್ಲೀಟ್ ಆಗಿ ಧ್ರುವ ಸರ್ಜಾ ಮಯವಾಗಿರುತ್ತೆ. ಆಕ್ಷನ್ ಪ್ರಿನ್ಸ್ ಸಿನಿಮಾ ಹಾಡುಗಳಿಗೆ ಮಸ್ತ್ ಡ್ಯಾನ್ಸ್ ಅನ್ನು ನೋಡಬಹುದು.

ವೀಕೆಂಡ್‌ನಲ್ಲಿ ಜೀ ಕನ್ನಡ ಬ್ಯಾಕ್ ಟು ಬ್ಯಾಕ್ ಎಂಟರ್‌ಟೈನ್ಮೆಂಟ್ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಕಿರುತೆರೆ ವೀಕ್ಷಕರಿಗೆ ಭರಪೂರ ಮನರಂಜನೆ ನೀಡಲು ಸಜ್ಜಾಗಿದೆ. ಅದರಲ್ಲಿ ಶಿವಣ್ಣ, ರಕ್ಷಿತಾ, ಚಿನ್ನಿ ಮಾಸ್ಟರ್ ಮುಖ್ಯ ತೀರ್ಪುಗಾರರಾಗಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಧ್ರುವ ಸರ್ಜಾ ವಿಶೇಷ ಅತಿಥಿ. ಹೀಗಾಗಿ ಈ ಸಂಚಿಕೆಯನ್ನು ಅದ್ಧೂರಿಯಾಗಿ ಪ್ಲಾನ್ ಮಾಡಲಾಗಿದೆ.
ಈಗಾಗಲೇ ರಿಲೀಸ್ ಆಗಿರುವ ಪ್ರೋಮೊದಲ್ಲಿ ಸ್ವತ: ಧ್ರುವ ಸರ್ಜಾ ವೇದಿಕೆ ಮೇಲೆ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಧ್ರುವ ಸ್ಟೆಪ್ಸ್‌ಗೆ ಡ್ಯಾನ್ಸ್ ಕಿಂಗ್ ಶಿವಣ್ಣ, ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ ಶಾಕ್ ಆಗಿದ್ದಾರೆ. ಇದರೊಂದಿಗೆ ಮಾರ್ಟಿನ್ ಸಿನಿಮಾದ ಡೈಲಾಗ್ ಅನ್ನೂ ಕೂಡ ಧ್ರುವ ಸರ್ಜಾ ಹೊಡೆದು ರಂಜಿಸಿದ್ದಾರೆ. ಹೀಗಾಗಿ ಧ್ರುವ ಕಡೆಯಿಂದ ಭರ್ಜರಿ ಮನರಂಜನೆ ಇರುತ್ತೆ.
ಹಾಗಂತ ಧ್ರುವ ಸರ್ಜಾ ಅಷ್ಟೇ ಅಲ್ಲ. ಅವರೊಂದಿಗೆ ಧ್ರುವ ಸರ್ಜಾ ಅಭಿಮಾನಿಗಳು ಕೂಡ ವೇದಿಕೆ ಮೇಲೆ ಏರಿದ್ದಾರೆ. ಅದರಲ್ಲೂ ಇತ್ತೀಚೆಗೆ ಧ್ರುವ ಸರ್ಜಾ ಮನೆ ಮುಂದೆ "ಓಡ್ರೋ ಓಡ್ರೋ ಇದು ಧ್ರುವ ಸರ್ಜ ಅಡ್ಡ" ಅಂತ ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಅಭಿಮಾನಿಯನ್ನು ವೇದಿಕೆ ಮೇಲೆ ಕರೆಸಲಾಗಿದೆ. ಅಲ್ಲೂ ಆ ಅಭಿಮಾನಿ ಟ್ರೆಂಡಿಂಗ್ ಸಾಂಗ್ ಹಾಡಿರೋದು ವಿಶೇಷ. ಹಾಗೇ ಧ್ರುವ ಅಭಿಮಾನಿಗಳು ಡೈಲಾಗ್ ಕೂಡ ಬಿಟ್ಟಿದ್ದಾರೆ.
ಇದರೊಂದಿಗೆ ಜೀ ಕನ್ನಡದ ಈ ವೀಕೆಂಡ್‌ನಲ್ಲಿ ವೀಕ್ಷಕರಿಗೆ ಡಬಲ್ ಧಮಾಕ ಇದೆ. ಇಂದು ಸಂಜೆ 7.30ರಿಂದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ಆರಂಭ ಆಗುತ್ತಿದೆ. ಇದರಲ್ಲಿ ಶಿವಣ್ಣ ಹಾಗೂ ಧ್ರುವ ಸರ್ಜಾ ಪ್ರಮುಖ ಆಕರ್ಷಣೆಯಾಗಿದ್ದಾರೆ. ಹಾಗೇ ರಾತ್ರಿ 9.30ರಿಂದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ 50ರ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಈ ಶೋಗೆ ಕಾಮಿಡಿ ಕಿಂಗ್ ಶರಣ್ ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ.
ಒಂದ್ಕಡೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್' ಆಗಿದ್ದರೆ, ಇನ್ನೊಂದು ಕಡೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್. ಎರಡು ಶೋಗಳಲ್ಲೂ ತಾರೆಯರ ಅಟ್ರ್ಯಾಕ್ಷನ್. ಹೀಗಾಗಿ ಕಿರುತೆರೆ ವೀಕ್ಷಕರಿಗೆ ಈ ಎರಡೂ ಶೋಗಳು ಭರ್ಜರಿ ಮನರಂಜನೆ ನೀಡಲಿದೆ. ಒಟ್ನಲ್ಲಿ ಈ ವೀಕೆಂಡ್‌ನಲ್ಲಿ ಜೀ ಕನ್ನಡದಲ್ಲಿ ಮನರಂಜನೆ ವಿಷಯದಲ್ಲಿ ಡಬಲ್ ಧಮಾಕ ಸಿಗಲಿದೆ.


Click it and Unblock the Notifications











