BBK 11:₹3 ಕೋಟಿ ಚಿನ್ನ ಧರಿಸುವ ಗೋಲ್ಡ್ ಸುರೇಶ್‌ ಬಿಗ್‌ಬಾಸ್‌ನಲ್ಲಿ ಪಡೆಯುವ ಸಂಭಾವನೆ ಎಷ್ಟು?

ಬಿಗ್‌ ಬಾಸ್ ಕನ್ನಡ ಸೀಸನ್ 11 ಕಿರುತೆರೆಯಲ್ಲಿ ಮತ್ತೆ ಹವಾ ಎಬ್ಬಿಸಿದೆ. ಜನಪ್ರಿಯ ಧಾರಾವಾಹಿಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಇತ್ತೀಚೆಗಂತೂ ಬಿಗ್‌ ಬಾಸ್ ಮನೆಯಲ್ಲಿ ಸೈಲೆಂಟ್‌ ಆಗಿದ್ದವರು ವೈಲೆಂಟ್ ಆಗುತ್ತಿದ್ದಾರೆ. ವೈಲೆಂಟ್ ಆಗಿ ಇದ್ದವರು ಇನ್ನೂ ವೈಲೆಂಟ್ ಆಗುತ್ತಿದ್ದಾರೆ. ಒಂದು ಪುರುಷರು ಪೈಪೋಟಿಗೆ ಬಿದ್ದಿದ್ದರೆ, ಇನ್ನೊಂದು ಮಹಿಳೆಯರು ಕೆಸರು ಎರಚಿಕೊಳ್ಳುತ್ತಿದ್ದಾರೆ.

ರಿಯಾಲಿಟಿ ಶೋನಲ್ಲಿ ಬಹುತೇಕ ಕಿರುತೆರೆಗೆ ಸಂಬಂಧ ಪಟ್ಟ ಸ್ಪರ್ಧಿಗಳೇ ಹೆಚ್ಚಿದ್ದಾರೆ. ಇವರ ಮಧ್ಯೆ ಬಣ್ಣದ ಲೋಕಕ್ಕೆ ಸಂಬಂಧ ಪಡದೇ ಇರುವವರು ಅಂದರೆ, ಅದು ಗೋಲ್ಡ್ ಸುರೇಶ್ ಹಾಗೂ ಚೈತ್ರಾ ಕುಂದಾಪುರ. ಇಬ್ಬರೂ ಕಿರುತೆರೆಯ ಸ್ಪರ್ಧಿಗಳಿಗೆ ಭಯಂಕರ ಪೈಪೋಟಿ ನೀಡುತ್ತಿದ್ದಾರೆ. ಈ ಸೀಸನ್‌ನ ಇಂಟ್ರೆಸ್ಟಿಂಗ್ ಸ್ಪರ್ಧಿಗಳ ಪಟ್ಟಿಯಲ್ಲಿ ಗೋಲ್ಡ್ ಸುರೇಶ್ ಕೂಡ ಒಬ್ಬರು.

Do you know about Bigg Boss Kannada 11 contestant Gold Suresh salary per week

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಸುರೇಶ್ ಕೋಟಿ ಲೆಕ್ಕದಲ್ಲಿ ಬೆಲೆ ಬಾಳುವ ಚಿನ್ನವನ್ನು ಧರಿಸುತ್ತಾರೆ. ಇವರಿಗೆ ಬಿಗ್‌ ಬಾಸ್ ಯಾಕೆ ಬೇಕಿತ್ತು? ಅನ್ನೋ ಪ್ರಶ್ನೆಗೆ ಎಂಟ್ರಿ ಕೊಡುವಾಗಲೇ ಉತ್ತರ ಕೊಟ್ಟಿದ್ದಾರೆ. ಕೋಟಿಗೆ ಬೆಲೆಬಾಳುವ ಗೋಲ್ಡ್ ಸುರೇಶ್‌ಗೆ ಬಿಗ್‌ ಬಾಸ್ ಮನೆಯಲ್ಲಿ ಎಷ್ಟು ಸಂಭಾವನೆ ಸಿಗುತ್ತಿದೆ? ಒಂದು ವಾರಕ್ಕೆ ಸಾವಿರ ಲಕ್ಕದಲ್ಲಿ ಸಿಗುತ್ತಿದೆಯೇ ಸಂಭಾವನೆ? ತಿಳಿಯಲು ಮುಂದೆ ಓದಿ.

ಕೋಟಿ ಬೆಲೆಗೆ ಬಾಳುವ ಸುರೇಶ್ ತಮ್ಮ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಬಿಟ್ಟು ಬಿಗ್‌ಬಾಸ್‌ಗೆ ಯಾಕೆ ಬಂದರು? ಅವರು ಎಷ್ಟು ಸಂಭಾವನೆಗೆ ಒಪ್ಪಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ? ಈ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಗೋಲ್ಡ್ ಸುರೇಶ್‌ಗೆ ಬಿಗ್‌ಬಾಸ್ ಹೋಗಬೇಕು ಅನ್ನೋ ಕನಸು ಇತ್ತು. ಕೊನೆಗೂ ಆ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಮಧ್ಯಮ ವರ್ಗದಿಂದ ಬಂದ ಗೋಲ್ಡ್ ಸುರೇಶ್ ವೃತ್ತಿಯಲ್ಲಷ್ಟೇ ಅಲ್ಲ. ಬಿಗ್‌ಬಾಸ್ ಮೂಲಕ ಕರುನಾಡಿಗೂ ಪರಿಚಯ ಆಗಿದ್ದಾರೆ.

Do you know about Bigg Boss Kannada 11 contestant Gold Suresh salary per week

ಹಾಗಿದ್ದರೆ, ಬಿಗ್‌ಬಾಸ್‌ ಮನೆಯಲ್ಲಿರುವ ಗೋಲ್ಡ್ ಸುರೇಶ್ ಒಂದು ವಾರಕ್ಕೆ ಪಡೆಯುವ ಸಂಭಾವನೆ ಕೇಳಿದರೆ ಆಶ್ಚರ್ಯ ಆಗುತ್ತೆ. ಕಿರುತೆರೆ ಲೋಕದಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ, ಗೋಲ್ಡ್ ಸುರೇಶ್ ವಾರಕ್ಕೆ ಕೇವಲ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮೈಮೇಲೆ ಮೂರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಧರಿಸುವ ಸುರೇಶ್ ಇಷ್ಟೊಂದು ಕಡಿಮೆ ಸಂಭಾವನೆಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರಾ ಅನ್ನುವ ಕುತೂಹಲ ಮೂಡಿದೆ.

ತೀವ್ರ ಪೈಪೋಟಿ ನೀಡುತ್ತಿರುವ ಗೋಲ್ಡ್ ಸುರೇಶ್ ಬಿಗ್‌ ಬಾಸ್ ಮನೆಯಲ್ಲಿ 60 ಕ್ಕೂ ಹೆಚ್ಚು ದಿನಗಳನ್ನು ಯಶಸ್ವಿಯಾಗಿ ಕಳೆದಿದ್ದಾರೆ. ಪ್ರಬಲ ಸ್ಪರ್ಧಿಗಳನ್ನು ಸಿಕ್ಕಾಪಟ್ಟೆ ಪೈಪೋಟಿ ನೀಡುತ್ತಿದ್ದಾರೆ. ಪ್ರತಿ ವಾರ ಪ್ರತಿ ಸ್ಪರ್ಧಿಗಳು ನಾಮಿನೇಟ್ ಮಾಡುತ್ತಿದ್ದರೂ, ಗೋಲ್ಡ್ ಸುರೇಶ್ ಬಚಾವ್ ಆಗುತ್ತಿದ್ದಾರೆ. ತನಗೆ ಎದುರಾದ ಎಲ್ಲಾ ಸವಾಲುಗಳನ್ನು ಎದುರಿಸಿ ಮುನ್ನುಗ್ಗುತ್ತಿದ್ದಾರೆ.

ಪದೇ ಪದೆ ತನ್ನನ್ನೇ ನಾಮಿನೇಟ್ ಮಾಡುತ್ತಿರುವುದರಿಂದ ಅಸಮಧಾನಗೊಂಡಿದ್ದೂ ಇದೆ. ಬಣ್ಣದ ಲೋಕಕ್ಕೆ ಸಂಬಂಧ ಪಡದವನಾಗಿದ್ದರಿಂದ ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಹೇಳಿಕೊಂಡಿದ್ದೂ ಇದೆ. ಆದರೂ ಬಿಗ್‌ ಬಾಸ್ ಮನೆಯಲ್ಲಿ ಅಗ್ರೆಸಿವ್ ಆಗಿ ಆಟ ಆಡುತ್ತಿದ್ದಾರೆ. ಅಲ್ಲದೆ ಮನೆಯೊಳಗೆ ಆಕ್ಟಿವ್ ಆಗಿದ್ದಾರೆ. ಹೀಗಾಗಿ ನಾಮಿನೇಷನ್‌ನಿಂದ ಪ್ರತಿ ವಾರ ಪಾರಾಗಿ ಮುಂದಕ್ಕೆ ಸಾಗುತ್ತಿದ್ದಾರೆ.

ಸದ್ಯ ಬಿಗ್‌ಬಾಸ್ ಮನೆಯಲ್ಲಿ ಕೋಟಿಗೆ ಬೆಲೆ ಬಾಳುವ ಸ್ಪರ್ಧಿ ಅತೀ ಕಡಿಮೆ ಸಂಭಾವನೆ ಪಡೆಯುತ್ತಿರೋ ವಿಷಯ ಹಲ್‌ಚಲ್ ಎಬ್ಬಿಸಿದೆ. ಅಸಲಿಗೆ ಇದು ಕಿರಿತೆರೆಯಲ್ಲಿ ಹರಿದಾಡುತ್ತಿರುವ ಸುದ್ದಿ. ಗೋಲ್ಡ್ ಸುರೇಶ್ ಸಂಭಾವನೆ ಬಗ್ಗೆ ಅವರ ಕುಟುಂಬ ಎಲ್ಲೂ ಹೇಳಿಕೊಂಡಿಲ್ಲ. ಹಾಗೇ ಕಲರ್ಸ್ ಕನ್ನಡ ಕೂಡ ಅಧಿಕೃತವಾಗಿ ಸ್ಪರ್ಧಿಗಳ ಸಂಭಾವನೆಯನ್ನು ರಿವೀಲ್ ಮಾಡಿಲ್ಲ.

More from Filmibeat

English summary
Do you know about Bigg Boss Kannada 11 contestant Gold Suresh salary per week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X