ಪ್ರತಿ ವಾರ ಮನರಂಜನಾ ವಾಹಿನಿ, ನ್ಯೂಸ್ ಚಾನೆಲ್‌ಗಳು ಕಾಯುವ ಟಿಆರ್‌ಪಿ ಅಂದರೇನು ಏನು?

By ಅನಿತಾ ಬನಾರಿ

ಕಿರುತೆರೆ ಪ್ರೇಕ್ಷಕರು ಟಿಆರ್‌ಪಿ ಎಂಬ ಮಾತನ್ನು ಬಹಳಷ್ಟು ಬಾರಿ ಕೇಳಿರುತ್ತಾರೆ. ತಾವು ವೀಕ್ಷಿಸುವ ಕಾರ್ಯಕ್ರಮಗಳಲ್ಲಾಗಲಿ ರಿಯಾಲಿಟಿ ಶೋ ಅಥವಾ ಧಾರಾವಾಹಿಗಳಲ್ಲಿ ಯಾವುದೇ ರೀತಿಯ ಜನಪ್ರಿಯವಾದರೂ ಟಿಆರ್‌ಪಿಗೋಸ್ಕರ ಎಂಬ ಮಾತು ಬಹಳ ಸುಲಭವಾಗಿ ಕೇಳಿ ಬರುತ್ತದೆ.

ಹಾಗಾದರೆ ಈ ಟಿಆರ್‌ಪಿ ಅಂದರೇನು? ಕಿರುತೆರೆ ವಾಹಿನಿಗಳು ಟಿಆರ್‌ಪಿಗಾಗಿ ಸ್ಪರ್ಧಿಸುವುದಾದರೂ ಯಾಕೆ? ಟಿಆರ್‌ಪಿ ಎಂದರೆ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಎಂದರ್ಥ. ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಎಷ್ಟು ವೀಕ್ಷಣೆಯನ್ನು ಪಡೆಯುತ್ತಿದೆ, ಎಂಬುದನ್ನು ಮಾಪನ ಮಾಡುವ ಅಂಶವೇ ಟಿಆರ್‌ಪಿ. ಹೆಚ್ಚಿನ ವೀಕ್ಷಣೆಯನ್ನು ಪಡೆಯುತ್ತಿರುವ ಕಾರ್ಯಕ್ರಮ ಹೆಚ್ಚು ಟಿಆರ್‌ಪಿಯನ್ನು ಗಳಿಸುತ್ತದೆ.

Do you know what is TRP

ಹಾಗಾಗಿ ಇಂದಿನ ಹಲವಾರು ರಿಯಾಲಿಟಿ ಶೋಗಳು, ಕಾರ್ಯಕ್ರಮಗಳು ಹಾಗೂ ಧಾರಾವಾಹಿಗಳು ಟಿಆರ್‌ಪಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತವೆ. ಕಾರ್ಯಕ್ರಮಗಳು ಬರುವುದೇ ವೀಕ್ಷಕರಿಗೆ ಇಷ್ಟವಾಗಬೇಕೆಂಬ ಕಾರಣಕ್ಕೆ. ಹೀಗಿರುವಾಗ ವೀಕ್ಷಕರಿಗೆ ಎಂತಹ ಕಾರ್ಯಕ್ರಮಗಳು ಇಷ್ಟವಾಗುತ್ತದೆ ಎಂಬುದನ್ನು ತಿಳಿಸಿ ಅಂತಹ ಕಾರ್ಯಕ್ರಮಗಳ ಪಟ್ಟಿಯನ್ನು ಉದ್ದ ಮಾಡಲು ಟಿಆರ್‌ಪಿ ಸಹಾಯ ಮಾಡುತ್ತದೆ. ಒಂದು ರೀತಿಯಲ್ಲಿ ಇದು ಪ್ರೇಕ್ಷಕರ ನಾಡಿಮಿಡಿತವನ್ನು ಹೇಳುವ ಒಂದು ಮಾಪನ ಅಂದರೆ ತಪ್ಪಾಗಲ್ಲ.

ನ್ಯೂ ಇಯರ್ ಮೂಡ್‌ನಲ್ಲಿ ನಿವೇದಿತಾ ಗೌಡ; ಥೈಲ್ಯಾಂಡ್‌ನಲ್ಲಿ ಜಾಲಿ ಜಾಲಿ
ಎಷ್ಟೋ ಬಾರಿ ಧಾರಾವಾಹಿಗಳಲ್ಲಿ ಟಿಆರ್‌ಪಿ ಕಮ್ಮಿ ಆಗುವುದು ಕಂಡಾಗ ಧಾರಾವಾಹಿ ಕತೆಯಲ್ಲಿ ರೋಚಕ ತಿರುವೊಂದನ್ನು ತಂದು ಮತ್ತೆ ಜನ ಗಮನ ಸೆಳೆಯುವ ಪ್ರಯತ್ನವಾಗುತ್ತದೆ. ಇನ್ನೆಷ್ಟು ಬಾರಿ ಆರಂಭದಲ್ಲಿ ಒಳ್ಳೆಯ ವೀಕ್ಷಣೆ ಇದ್ದರೂ ಸಹ ಕ್ರಮೇಣ ಧಾರವಾಹಿಗಳು ಟಿಆರ್‌ಪಿಯನ್ನು ಕಳೆದುಕೊಂಡು ಅರ್ಧಕ್ಕೆ ನಿಂತ ಉದಾಹರಣೆಗಳು ಇವೆ. ಸರಿಗಮಪ ಆದಂತಹ ರಿಯಾಲಿಟಿ ಶೋ ಗಳಂತೂ ಬಹಳ ಹೆಚ್ಚಿನ ಟಿಆರ್‌ಪಿಯನ್ನು ಪಡೆಯುತ್ತವೆ. ಸದ್ಯಕ್ಕೆ ರಿಯಾಲಿಟಿ ಶೋ ಆದ ಬಿಗ್ ಬಾಸ್ ಬಹಳ ಹೆಚ್ಚಿನ ಟಿಆರ್‌ಪಿಯನ್ನು ಪಡೆಯುತ್ತಿದೆ.

ಹೆಚ್ಚಿನ ಟಿಆರ್‌ಪಿಯನ್ನು ತಂದು ಕೊಡುವ ಕಾರ್ಯಕ್ರಮಗಳನ್ನು ರಾತ್ರಿ ಎಂಟರಿಂದ 10 ಗಂಟೆಗೆವರೆಗಿನ ಸಮಯದಲ್ಲಿ ಇಡುತ್ತಾರೆ. ಕಾರಣ ಈ ಸಮಯದಲ್ಲಿ ಮನೆ ಮಂದಿ ಎಲ್ಲಾ ಒಟ್ಟಿಗೆ ಕುಳಿತು ಟಿವಿ ನೋಡುತ್ತಿರುತ್ತಾರೆ ಎಂಬುದು.

ಕನ್ನಡ ಕಿರುತೆರೆಯ ಜೀ ಕನ್ನಡ ವಾಹಿನಿಯಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಒಳ್ಳೆಯ ಟಿಆರ್‌ಪಿ ಯೊಂದಿಗೆ ಮುನ್ನಡೆಯುತ್ತಿತ್ತು. ಪ್ರಸ್ತುತ 'ಲಕ್ಷ್ಮೀ ನಿವಾಸ' ಧಾರಾವಾಹಿ ಹೆಚ್ಚಿನ ಟಿಆರ್‌ಪಿಯನ್ನು ಪಡೆಯುತ್ತಿದ್ದರೆ 'ಅಮೃತಧಾರೆ' ಎರಡನೇ ಸ್ಥಾನದಲ್ಲಿದೆ. ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಮೂರನೇ ಸ್ಥಾನದಲ್ಲಿದ್ದರೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಸಮಯ ಬದಲಾವಣೆಯಾಗಿರುವುದರಿಂದ ಟಿಆರ್‌ಪಿ ರೇಟಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂಬ ಮಾಹಿತಿ ಇದೆ. ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಬಹಳ ಹೆಚ್ಚಿನ ಟಿಆರ್‌ಪಿಯನ್ನು ಪಡೆಯುತ್ತಿರುವುದು ವರದಿಯಾಗಿದೆ.

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ, ಕಲರ್ಸ್ ಕನ್ನಡ ಉದಯ ಟಿವಿ, ಜೀ ಕನ್ನಡ, ಹೀಗೆ ಪ್ರಮುಖ ವಾಹಿನಿಗಳು ಟಿಆರ್‌ಪಿ ರೇಸ್‌ನಲ್ಲಿ ಸದಾ ನಾ ಮುಂದು ತಾ ಮುಂದು ಎಂದು ಬದಲಾಗುತ್ತಿರುತ್ತದೆ. ಇದರೊಂದಿಗೆ ಕೆಲವು ಪ್ರಮುಖ ನ್ಯೂಸ್ ಚಾನೆಲ್ ಗಳು ಕೂಡ ಪೈಪೋಟಿಯಲ್ಲಿರುತ್ತದೆ. ಬಹಳ ಸಾಮಾನ್ಯ ಭಾಷೆಯಲ್ಲಿ ಟಿಆರ್‌ಪಿಯನ್ನು ವಿವರಿಸುವುದಾದರೆ, ಜನರ ಇಷ್ಟ ಹಾಗೂ ಆಸಕ್ತಿಗನುಸಾರವಾಗಿ ಕಾರ್ಯಕ್ರಮಗಳು ಅಥವಾ ಧಾರಾವಾಹಿಗಳು ಯೋಜನೆಗೊಂಡಾಗ ಅದಕ್ಕೆ ಹೆಚ್ಚಿನ ವೀಕ್ಷಣ ಸಿಗುತ್ತದೆ. ಅದನ್ನೇ ಟಿಆರ್‌ಪಿ ರೇಟಿಂಗ್ ಎನ್ನುತ್ತಾರೆ.

More from Filmibeat

English summary
Do you know what is TRP?;
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X