»   » ಕನ್ನಡ ಕಿರುತೆರೆಯ TRP ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ ಪುನೀತ್.!

ಕನ್ನಡ ಕಿರುತೆರೆಯ TRP ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ ಪುನೀತ್.!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಕನ್ನಡ ಕಿರುತೆರೆಯ TRP ಇತಿಹಾಸದಲ್ಲಿಯೇ ನೂತನ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ.

ಅರೇ...ಯಾವ ಕಾರ್ಯಕ್ರಮದ ಮೂಲಕ ಎಂಬ ಕುತೂಹಲ ನಿಮಗೆ ಕಾಡುತ್ತಿದ್ಯಾ.? ಇತ್ತೀಚೆಗಷ್ಟೇ, ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಅಣ್ಣಾವ್ರ ಪುತ್ರ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡ್ಗ' ಚಿತ್ರ ಪ್ರಸಾರ ಆಗಿದ್ದು ನಿಮಗೆ ನೆನಪಿದೆ ಅಲ್ವಾ.?

ಇದೀಗ ಇದೇ 'ದೊಡ್ಮನೆ ಹುಡ್ಗ' ಕನ್ನಡ ಕಿರುತೆರೆಯಲ್ಲಿರುವ ಹಳೆ ದಾಖಲೆಗಳನ್ನೆಲ್ಲ ಪುಡಿ ಪುಡಿ ಮಾಡಿದೆ. ಸಂಪೂರ್ಣ ವರದಿ ಇಲ್ಲಿದೆ, ಓದಿರಿ....

ಜೀ ಕನ್ನಡ ವಾಹಿನಿಯಲ್ಲಿ ಹೊಸ ಇತಿಹಾಸ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡ್ಗ' ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

[ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಬ್ಲಾಕ್ ಬಸ್ಟರ್ ಸಿನಿಮಾ 'ದೊಡ್ಮನೆ ಹುಡ್ಗ']

ಟಿ.ಆರ್.ಪಿ ಯಲ್ಲಿ ನಂಬರ್ 1

ಮೇ 28 ರಂದು ಜೀ ಕನ್ನಡ ವಾಹಿನಿಯಲ್ಲಿ 'ದೊಡ್ಮನೆ ಹುಡ್ಗ' ಸಿನಿಮಾ ಪ್ರಸಾರ ಆಗಿತ್ತು. 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕಿರುತೆರೆಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಟಿ.ಆರ್.ಪಿ ಸಿಕ್ಕಿದೆ ಅಂದ್ರೆ ನೀವು ನಂಬಲೇಬೇಕು.

[ದರ್ಶನ್, ಪುನೀತ್, ಸುದೀಪ್: 'ವೀಕೆಂಡ್'ನಲ್ಲಿ ಅತಿ ಹೆಚ್ಚು TRP ಸಿಕ್ಕಿದ್ದು ಯಾರಿಗೆ.?]

ಸಿಕ್ಕಿರುವ ಟಿ.ಆರ್.ಪಿ ಎಷ್ಟು.?

ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಆದ 'ದೊಡ್ಮನೆ ಹುಡ್ಗ' ಚಿತ್ರಕ್ಕೆ 20.7 ಟಿ.ವಿ.ಆರ್ (ಟಿ.ಆರ್.ಪಿ) ಲಭಿಸಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಇದು ಇಲ್ಲಿಯವರೆಗೂ ಅತಿ ಹೆಚ್ಚು.!

ಮೂವಿ ಪ್ರೀಮಿಯರ್ ನಲ್ಲಿ ಮೊಟ್ಟ ಮೊದಲ ಸ್ಥಾನ

ಇಲ್ಲಿಯವರೆಗೂ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ (ಪ್ರೀಮಿಯರ್) ಪ್ರಸಾರ ಅದ ಕನ್ನಡ ಚಿತ್ರಗಳ ಪೈಕಿ ಟಿ.ಆರ್.ಪಿ ಲಿಸ್ಟ್ ನಲ್ಲಿ 'ದೊಡ್ಮನೆ ಹುಡ್ಗ' ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.

ಇಲ್ಲಿಯವರೆಗೂ ಟಾಪ್ ನಲ್ಲಿದ್ದ 'ಮಾಸ್ಟರ್ ಪೀಸ್'

ಉದಯ ಟಿವಿಯಲ್ಲಿ ಪ್ರೀಮಿಯರ್ ಆದ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಾಸ್ಟರ್ ಪೀಸ್' ಸಿನಿಮಾ 13.8 ಟಿ.ವಿ.ಆರ್ (ಟಿ.ಆರ್.ಪಿ) ಗಳಿಸಿ ಇಲ್ಲಿಯವರೆಗೂ ನಂಬರ್ ಒನ್ ಸ್ಥಾನದಲ್ಲಿ ಇತ್ತು. ಈಗ 'ಮಾಸ್ಟರ್ ಪೀಸ್' ಚಿತ್ರವನ್ನ ಹಿಂದಕ್ಕೆ ತಳ್ಳಿ 'ದೊಡ್ಮನೆ ಹುಡ್ಗ' ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ.

ಮೂರನೇ ಸ್ಥಾನದಲ್ಲಿ ದರ್ಶನ್

ಉದಯ ಟಿವಿಯಲ್ಲಿ ದರ್ಶನ್ ಅಭಿನಯದ 'ಮಿ.ಐರಾವತ' ಚಿತ್ರ ಮೊಟ್ಟ ಮೊದಲ ಬಾರಿಗೆ ಪ್ರಸಾರ ಆದಾಗ 12.7 ಟಿ.ವಿ.ಆರ್ (ಟಿ.ಆರ್.ಪಿ) ಗಳಿಸಿತ್ತು. ಇದೀಗ ಈ ಚಿತ್ರ ಮೂರನೇ ಸ್ಥಾನದಲ್ಲಿದೆ.

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು.?

ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಉದಯ ಟಿವಿಯಲ್ಲಿ ಪ್ರೀಮಿಯರ್ ಆದಾಗ 11.5 ಟಿ.ವಿ.ಆರ್ (ಟಿ.ಆರ್.ಪಿ) ಪಡೆದಿತ್ತು, ಈಗ ಈ ಸಿನಿಮಾ ನಾಲ್ಕನೇ ಸ್ಥಾನದಲ್ಲಿ ಇದೆ.

ಉದಯ ಟಿವಿಯನ್ನ ಹಿಂದಕ್ಕೆ ತಳ್ಳಿದ ಜೀ ಕನ್ನಡ ವಾಹಿನಿ

'ಟೆಲಿವಿಷನ್ ಮೂವಿ ಪ್ರೀಮಿಯರ್ ರೇಟಿಂಗ್'ನಲ್ಲಿ ಉದಯ ಟಿವಿ ಸತತವಾಗಿ ದಾಖಲೆ ಬರೆದಿತ್ತು. ಇದೀಗ ಪುನೀತ್ ರವರ 'ದೊಡ್ಮನೆ ಹುಡ್ಗ' ಚಿತ್ರದ ಮೂಲಕ ಉದಯ ಟಿವಿಯನ್ನ ಜೀ ಕನ್ನಡ ವಾಹಿನಿ ಹಿಂದಕ್ಕೆ ತಳ್ಳಿದೆ.

English summary
Power Star Puneeth Rajkumar starrer 'Dodmane Huduga' creates history in TV Premier rating in Karnataka. Read the article for more details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada