»   » ದರ್ಶನ್, ಪುನೀತ್, ಸುದೀಪ್: 'ವೀಕೆಂಡ್'ನಲ್ಲಿ ಅತಿ ಹೆಚ್ಚು TRP ಸಿಕ್ಕಿದ್ದು ಯಾರಿಗೆ.?

ದರ್ಶನ್, ಪುನೀತ್, ಸುದೀಪ್: 'ವೀಕೆಂಡ್'ನಲ್ಲಿ ಅತಿ ಹೆಚ್ಚು TRP ಸಿಕ್ಕಿದ್ದು ಯಾರಿಗೆ.?

Posted By:
Subscribe to Filmibeat Kannada

ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಕಾರ್ಯಕ್ರಮಗಳ ಪೈಕಿ 'ವೀಕೆಂಡ್ ವಿತ್ ರಮೇಶ್' ಕೂಡ ಒಂದು. ಸಾಧಕರ ಸಾಧನೆಯ ಹಾದಿಯನ್ನು ಅನಾವರಣ ಮಾಡುವ ಈ ಶೋ ಇಲ್ಲಿಯವರೆಗೂ ಮೂರು ಆವೃತ್ತಿಗಳಲ್ಲಿ ಪ್ರಸಾರ ಆಗಿದೆ.

ಮೊದಲ ಸೀಸನ್ ನಲ್ಲಿ 20 ಸಾಧಕರ 26 ಸಂಚಿಕೆ, ಎರಡನೇ ಸೀಸನ್ ನಲ್ಲಿ 24 ಸಾಧಕರ 34 ಸಂಚಿಕೆ, ಮೂರನೇ ಸೀಸನ್ ನಲ್ಲಿ ಇಲ್ಲಿಯವರೆಗೂ 16 ಸಾಧಕರ 21 ಸಂಚಿಕೆ ಪ್ರಸಾರ ಆಗಿದೆ. ಇವೆಲ್ಲದರ ಪೈಕಿ ಅತಿ ಹೆಚ್ಚು ಟಿ.ಅರ್.ಪಿ ಸಿಕ್ಕಿರುವುದು ಯಾವ ಸಂಚಿಕೆಗೆ ಹಾಗೂ ಯಾರಿಗೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ಯಾ.? ಹಾಗಾದ್ರೆ, 'ಫೋಟೋ ಸ್ಲೈಡ್' ಪ್ಲೀಸ್....

'ಟಿ.ಆರ್.ಪಿ' ಕಿಂಗ್ ಚಾಲೆಂಜಿಂಗ್ ಸ್ಟಾರ್ ದರ್ಶನ್.!

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂರು ಸೀಸನ್ ಗಳಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಪಡೆದಿರುವುದು ಬೇರೆ ಯಾರೂ ಅಲ್ಲ. ಒನ್ ಅಂಡ್ ಒನ್ಲಿ ಚಾಲೆಂಜಿಂಗ್ ಸ್ಟಾರ್... ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್.!

ಸುಳ್ಳು ಅಲ್ಲವೇ ಅಲ್ಲ.!

''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ ಅತಿಹೆಚ್ಚು ಟಿ.ಆರ್.ಪಿ ಗಳಿಸಿರುವುದು ದರ್ಶನ್ ರವರ ಎಪಿಸೋಡ್'' ಅಂತ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ರವರೇ ಹೇಳಿದ್ದಾರೆ.

ಅಂಕಿ-ಅಂಶ ಎಷ್ಟು.?

ಇಲ್ಲಿಯವರೆಗೂ ಹೆಚ್ಚು ಟಿ.ಆರ್.ಪಿ ಸಿಕ್ಕಿರುವುದು ದರ್ಶನ್ ರವರ ಸಂಚಿಕೆಗೆ ಅಂತ ರಾಘವೇಂದ್ರ ಹುಣಸೂರು ಹೇಳಿದ್ದಾರೆ ಹೊರತು, ಅಂಕಿ-ಅಂಶವನ್ನ ಅವರು ಬಹಿರಂಗ ಪಡಿಸಿಲ್ಲ.!

ಎಲ್ಲರಿಗಿಂತ ದರ್ಶನ್ ಗೆ ಹೆಚ್ಚು.!

ಇಲ್ಲಿಯವರೆಗೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ರೆಬೆಲ್ ಸ್ಟಾರ್ ಅಂಬರೀಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಯೋಗರಾಜ್ ಭಟ್ ಸೇರಿದಂತೆ ಚಿತ್ರರಂಗದ ತಾರೆಯರು, ವಿವಿಧ ಕ್ಷೇತ್ರಗಳ ಗಣ್ಯರು ಸಾಧಕರ ಸೀಟ್ ಮೇಲೆ ಕುಳಿತು ತಮ್ಮ ಜೀವನವನ್ನ ರಿವೈಂಡ್ ಮಾಡಿ ನೋಡಿದ್ದಾರೆ. ಇವರೆಲ್ಲರ ಪೈಕಿ ಅತಿ ಹೆಚ್ಚು ಟಿ.ಆರ್.ಪಿ ಗಿಟ್ಟಿಸಿರುವುದು 'ದಾಸ' ದರ್ಶನ್.

ಮೊದಲು ಬರಲ್ಲ ಎಂದಿದ್ದರು.!

ಅಷ್ಟಕ್ಕೂ, 'ವೀಕೆಂಡ್ ವಿತ್ ರಮೇಶ್' ಸೇರಿದಂತೆ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಮೊದಮೊದಲು ದರ್ಶನ್ ನಿರಾಕರಿಸಿದ್ದರು. ರೈತರ ಸರಣಿ ಆತ್ಮಹತ್ಯೆಯಿಂದ ನೊಂದಿದ್ದ ದರ್ಶನ್, ''ಯಾವುದೇ ರಿಯಾಲಿಟಿ ಶೋ ಇರಲಿ, ಅದರಿಂದ ಒಂದು ಲಕ್ಷ ರೂಪಾಯಿಯನ್ನು ರೈತರ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ನೀಡುವುದಾದರೆ, ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಸಿದ್ದ' ಎಂದು ದರ್ಶನ್ ಕಂಡೀಷನ್ ಹಾಕಿದ್ದರು. ಆ ಷರತ್ತಿಗೆ ಒಪ್ಪಿಕೊಂಡ ಜೀ ಕನ್ನಡ ವಾಹಿನಿ, ದರ್ಶನ್ ರವರನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಆಹ್ವಾನಿಸಿತು.

ರಿಯಾಲಿಟಿ ಶೋಗೆ ಬರಲ್ಲ ಅಂದಿದ್ದ ದರ್ಶನ್ ವೀಕೆಂಡ್ ಗೆ ಬಂದ್ರು

ಆಡಿದ ಮಾತಿನಂತೆ ನಡೆದುಕೊಂಡ ದರ್ಶನ್

ಆಡಿದ ಮಾತಿನಂತೆ ನಟ ದರ್ಶನ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ದರ್ಶನ್, ಅದರಿಂದ ಬಂದ ಗೌರವಧನವನ್ನ ಮೃತ ರೈತರ ಕುಟುಂಬಕ್ಕೆ ನೀಡಿದ್ದಾರೆ.

ರಾಘವೇಂದ್ರ ಹುಣಸೂರು ಏನಂದರು.?

''ನಟ ದರ್ಶನ್ ಹಾಗೂ ಪುನೀತ್ ರಾಜ್ ಕಮಾರ್ ಅವರು ತಮ್ಮ ಗೌರವಧನದ ಹಣವನ್ನು ಮೃತ ರೈತ ಕುಟುಂಬಗಳಿಗೆ ಹಾಗೂ ಮೈಸೂರಿನ ಶಕ್ತಿಧಾಮಕ್ಕೆ ನೀಡಿದ್ದಾರೆ'' ಎಂದು ಜೀ ಕನ್ನಡ ವಾಹಿನಿಯ ಬಿಸಿನೆಸ್ ಹಡೆ ರಾಘವೇಂದ್ರ ಹುಣಸೂರು ಬಹಿರಂಗ ಪಡಿಸಿದರು.

ದರ್ಶನ್ ಬದುಕಿನ ನೋವಿನ ಕಥೆ

ದರ್ಶನ್ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣವಾಗಿತ್ತು.

ನೀವು ಕೇಳರಿಯದ ಸತ್ಯ ಸಂಗತಿಗಳ 'ದರ್ಶನ' ವೀಕೆಂಡ್ ನಲ್ಲಾಯ್ತು!

ದರ್ಶನ್ ಕಣ್ಣೀರಿಟ್ಟಿದ್ದರು

ತಂದೆ ತೂಗುದೀಪ ಶ್ರೀನಿವಾಸ್ ತೀರಿಕೊಂಡ ಬಳಿಕ ದರ್ಶನ್ ಕುಟುಂಬ ಅನುಭವಿಸಿದ ಯಾತನೆ ಕುರಿತು ದರ್ಶನ್ ಮನಬಿಚ್ಚಿ ಹೇಳಿಕೊಂಡು ಕಣ್ಣೀರಿಟ್ಟಿದ್ದರು.

ಪೈಸೆ-ಪೈಸೆಗೂ ಕಷ್ಟ ಪಟ್ಟ ದರ್ಶನ್ ಬದುಕಿನ ನೋವಿನ ಕಥೆ

ವೀಕ್ಷಕರಿಗೆ ಇಷ್ಟವಾಗಿರಬಹುದು.!

ದರ್ಶನ್ ಬದುಕಿನ ನಿಜವಾದ ದರ್ಶನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಆದ ಕಾರಣ ಪ್ರೇಕ್ಷಕರು ಇಷ್ಟ ಪಟ್ಟಿರಬಹುದು.

ಈ ಸೀಸನ್ ನಲ್ಲಿ ಮಾತ್ರ...

'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯಲ್ಲಿ ಮಾತ್ರ ಬಹಳ ವಿರೋಧದ ನಡುವೆಯೂ ನಟ ರಕ್ಷಿತ್ ಶೆಟ್ಟಿ ಸಂಚಿಕೆಗೆ ಹೆಚ್ಚು ಟಿ.ಆರ್.ಪಿ ಸಿಕ್ಕಿದೆ ಎಂದು ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

ಯಾರು ಎಷ್ಟೇ ಛೀಮಾರಿ ಹಾಕಿದ್ರೂ, ಟಿ.ಆರ್.ಪಿ ಬಂದಿದ್ದು ರಕ್ಷಿತ್ ಶೆಟ್ಟಿ ಸಂಚಿಕೆಗೆ.!

English summary
Zee Kannada Channel's Business Head Raghavendra Hunsur revealed that Challenging Star Darshan's episode of 'Weekend With Ramesh' got highest TRP among all celebrities.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada