ಹಿಟ್ಲರ್ ಕಲ್ಯಾಣ-ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅನಿರೀಕ್ಷಿತ ಟ್ವಿಸ್ಟ್!
ಈಗ ಕಿರುತೆರೆ ಲೋಕವು ಸಹ ದೊಡ್ಡದಾಗಿ ಬೆಳೆದಿದೆ. ಬಹುತೇಕ ಎಲ್ಲ ಸಿರಿಯಲ್‌ಗಳನ್ನು ಸಿನೆಮಾದ ರೇಂಜಿಗೆ ಚಿತ್ರಿಕರಿಸಲಾಗುತ್ತಿದೆ. ಇದನ್ನು ಪ್ರೇಕ್ಷಕ ಸಹ ಇಷ್ಟಪಡುತ್ತಿದ್ದಾನೆ. ಹಾಗಾಗಿ ಸಿರಿಯಲ್ ಮೇಕರ್‍ಸ್‌ಗಳಿಗೆ, ವಾಹಿನಿಗಳಿಗೆ ಧಾರಾವಾಹಿಗಳ ಮೇಲೆ ದೊಡ್ಡ ಮೊತ್ತದ ಬಂಡವಾಳ ಹೂಡುವುದು ಸಹ ಅನಿವಾರ್ಯವಾಗಿದೆ. ಕನ್ನಡದ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಹಾಗೂ ಜೊತೆ ಜೊತೆಯಲಿ ಸಹ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ದಿನದಿಂದ ದಿನಕ್ಕೆ ಯಶಸ್ವಿ ಯಾಗುತ್ತಿದೆ.
ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಹಾಗೂ ಜೊತೆ ಜೊತೆಯಲಿ ಧಾರಾವಾಹಿಗಳು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇವು ವಾಹಿನಿಯನ್ನು ನಂಬರ್ 1 ಸ್ಥಾನಕ್ಕೆ ತಂದಿದೆ ಎಂದರೆ ತಪ್ಪಾಗಲ್ಲ. ವಿಶೇಷ ಏನಪ್ಪಾ ಅಮದರೇ ಈ ಎರಡು ಧಾರಾವಾಹಿಗಳು ಕುತೂಹಲಕಾರಿ ಘಟ್ಟ ತಲುಪಿವೆ. ಈ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡಿ ದಿನ ರಾತ್ರಿಯಾದರೆ ಇನ್ನೇನು ಆಗಲಿದೆಯೋ ಎಂದು ಟಿವಿ ಮುಂದೆ ಕಾಯುವಂತೆ ಮಾಡಿದೆ.
ಈ ವಾರವೂ ನಂಬರ್ 1 ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ!
ಹಿಟ್ಲರ್ ಕಲ್ಯಾಣದಲ್ಲಿ ಅಂತರ ಪಾತ್ರ ಬಹಳ ಮಹತ್ವದ್ದು. ಈ ಅಂತರ ಫೋಟೊದಲ್ಲಿ ಮಾತ್ರ ಇತ್ತು. ಆ ಪಾತ್ರದ ತೀವ್ರತೆ ಹೆಚ್ಚಿರುವುದರಿಂದ ಜನ ಸಹ ಕುತೂಹಲದಿಂದ ಕಾಯುತ್ತಿದ್ದರು. ಆಂತರ ಯಾವಾಗ ಬರ್ತಾಳೆ? ಏಜೆಗೆ ಅಂತರಾ ಮೇಲೆ ಅಷ್ಟೊಂದು ಪ್ರೀತಿ? ಅಂತರ ಇದ್ದಾಳೋ ಇಲ್ಲವೋ? ಹೀಗೆ ಹಲವಾರು ಪ್ರಶ್ನೆಗಳು ಪ್ರೇಕ್ಷಕರ ಮನದಲ್ಲಿ ಇದ್ದವು. ಇದೆಲ್ಲದಕ್ಕಿಂತ ಮುಖ್ಯವಾಗಿ ಅಂತರಾ ದೃಶ್ಯರೂಪದಲ್ಲಿ ಬರೋದು ಯಾವಾಗ ಅಂತ ವೀಕ್ಷಕರು ಕಾಯುತ್ತಿದ್ದರು. ಈಗ ಅಂತರಾಳನ್ನು ನೋಡುವ ಸಮಯ ಬಂದಿದೆ.




Click it and Unblock the Notifications











