ಈ ವಾರವೂ ನಂಬರ್ 1 ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ!
ಜೀ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು, ರಿಯಾಲಿಟಿ ಶೋಗಳು ನೋಡುಗರನ್ನು ರಂಜಿಸುತ್ತಿದೆ. ಅದರಲ್ಲೂ ವಿಭಿನ್ನ ಬಗೆಯ ಧಾರಾವಾಹಿಗಳಂತೂ ವೀಕ್ಷಕರನ್ನು ಬೇರೆಡೆಗೆ ಸೆಳೆಯದಂತೆ ಹಿಡಿದಿತ್ತು ಕೊಂಡಿದೆ. ಹೀಗಾಗಿ ಜೀ ಕನ್ನಡದ ಧಾರಾವಾಹಿಗಳು ಟಾಪ್ 5ರಲ್ಲಿ ಸದಾ ಸ್ಥಾನವನ್ನು ಕಾಪಾಡಿಕೊಂಡಿರುತ್ತೆ.
ಹಾಗಿದ್ದರೇ ಕಿರುತೆರೆಯ ಧಾರಾವಾಹಿಗಳಲ್ಲಿ ಈ ವಾರ ಯಾವ ಸೀರಿಯಲ್‌ಗಳು ಟಾಪ್ 5 ಸ್ಥಾನವನ್ನು ಪಡೆದುಕೊಂಡಿದೆ ಅನ್ನೋದನ್ನು ನೋಡೊಣ.ಕನ್ನಡ ಕಿರುತೆರೆ ಎಂದ ಕೂಡಲೇ ಪ್ರೇಕ್ಷಕರಿಗೆ ನೆನಪಾಗುವ ಮೊದಲ ವಿಷಯ ಧಾರಾವಾಹಿಗಳು. ಏಕೆಂದರೆ ಕಿರುತೆರೆಯ ಲೋಕದಲ್ಲಿ ಈ ಧಾರಾವಾಹಿಗಳದ್ದೇ ಸಿಂಹ ಪಾಲು ಹಾಗೂ ಅವುಗಳನ್ನು ಮೆಚ್ಚಿ ನೋಡುವ ಪ್ರೇಕ್ಷಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲೇ ಇದೆ ಎನ್ನುವುದು ನಿಜ.
ಪಾರು ಅಖಾಡಕ್ಕೆ ಮತ್ತೆ ಎಸ್.ನಾರಾಯಣ್ ಎಂಟ್ರಿ: ಅಖಿಲಾಂಡೇಶ್ವರಿಗೆ ನಡುಕ!
ಆದ್ದರಿಂದಲೇ ಸೀರಿಯಲ್‌ಗಳು ಮೆಗಾ ಸೀರಿಯಲ್‌ಗಳ ರೂಪದಲ್ಲಿ ವರ್ಷಗಳ ಕಾಲ ಕಿರುತೆರೆಯಲ್ಲಿ ಮಿಂಚುತ್ತವೆ, ಕೆಲವು ಸೀರಿಯಲ್‌ಗಳು ಜನರ ಅಪಾರ ಆದರ, ಅಭಿಮಾನ ಪಡೆದು ಟಾಪ್ ಸೀರಿಯಲ್‌ಗಳಲ್ಲಿ ಸ್ಥಾನ ಪಡೆದು ಮಿಂಚುತ್ತವೆ.

ಈ ವಾರ ಟಾಪ್ 5ನೇ ಸ್ಥಾನದಲ್ಲಿ ಯಾವ ಧಾರವಾಹಿಗಳು?
ಸಾಮಾನ್ಯವಾಗಿ ಕಳೆದ ಕೆಲವು ವರ್ಷಗಳಿಂದಲೂ ಟಾಪ್ ಸೀರಿಯಲ್‌ಗಳ ರೇಸ್ ನಲ್ಲಿ ಜೀ ಕನ್ನಡ ವಾಹಿನಿಯ ಸೀರಿಯಲ್‌ಗಳೇ ಟಾಪ್ ಐದರಲ್ಲಿ ಸ್ಥಾನ ವನ್ನು ಪಡೆಯುತ್ತಿವೆ. ಅಲ್ಲದೇ ಈ ವಾಹಿನಿಯ ಸೀರಿಯಲ್‌ಗಳು ಬಿಟ್ಟರೆ ಬೇರೆ ವಾಹಿನಿಯ ಸೀರಿಯಲ್‌ಗಳು ಟಾಪ್ ಐದರಲ್ಲಿ ಸ್ಥಾನ ಪಡೆಯುವುದು ಅಪರೂಪಕ್ಕೊಮ್ಮೆ ಎನ್ನುವ ಹಾಗೆ ನಡೆಯುತ್ತಿತ್ತು, ಆದರೆ ಅದು ಕೂಡಾ ಬೆರಳೆಣಿಕೆಯಷ್ಟು ಸಂದರ್ಭಗಳಲ್ಲಿ ಮಾತ್ರವೇ ಎನ್ನುವುದು ಈಗ ಸಾಭೀತಾಗಿದೆ.

ಹೊದ ಸೀರಿಯಲ್ ಟಾಪ್ 5ಗೆ ಎಂಟ್ರಿ
ಕಳೆದ ವಾರವೂ ಸಹಾ ಟಾಪ್ ಐದರ ವಿಚಾರಕ್ಕೆ ಬಂದರೆ ಟಿ ಆರ್ ಪಿ ಆಧಾರವಾಗಿ ಟಾಪ್ ಐದರಲ್ಲಿ ಜೀ ವಾಹಿನಿಯ ಸೀರಿಯಲ್‌ಗಳೇ ಇದ್ದವು. ಆದರೆ ಈಗ ಈ ವಾರದ ಟಿ ಆರ್ ಪಿ ಹೊರ ಬಂದ ಮೇಲೆ ಟಾಪ್ ಐದು ಧಾರಾವಾಹಿಗಳಲ್ಲಿ ಒಂದು ದೊಡ್ಡ ಬದಲಾವಣೆಯೇ ಆಗಿದೆ. ಹೌದು, ಈ ವಾರ ಟಾಪ್ ಐದರಲ್ಲಿ ಹೊಸ ಸೀರಿಯಲ್ ಒಂದು ಎಂಟ್ರಿ ನೀಡಿದ್ದು, ಈ ಮೂಲಕ ಜೀ ವಾಹಿನಿಯ ಒಂದು ಜನಪ್ರಿಯ ಸೀರಿಯಲ್ ಟಾಪ್ ಐದರಿಂದ ಹೊರ ಬಿದ್ದಿದೆ.

ಟಾಪ್ 5ನೇ ಸ್ಥಾನ ಪಡೆಯಲು ಕಾರಣ ಏನಾಗಿತ್ತು?
ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಭಾರೀ ವೈಭವದಿಂದ, ಅದ್ದೂರಿಯಾಗಿ ಭಾರೀ ತಾರಾಗಣದೊಂದಿಗೆ ಆರಂಭವಾಗಿರುವ ಹೊಸ ಸೀರಿಯಲ್ ರಾಮಾಚಾರಿ ಆರಂಭವಾದ ಮೊದಲ ವಾರದಲ್ಲೇ ದೊಡ್ಡ ಮಟ್ಟದ ಯಶಸ್ಸನ್ನು ತನ್ನದಾಗಿಸಿಕೊಂಡಿದ್ದು, ಟಾಪ್ ಸೀರಿಯಲ್‌ಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ. ಅದರ ಮೊದಲ ಭಾಗ ಎನ್ನುವಂತೆ ಈಗ ರಾಮಾಚಾರಿ ಇಷ್ಟು ದಿನ ಜನಪ್ರಿಯತೆ ಪಡೆದಿದ್ದ ಟಾಪ್ ಸೀರಿಯಲ್ ಒಂದನ್ನು ಹಿಂದಕ್ಕೆ ಹಾಕಿ ಆ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ಸತ್ಯ ಜಾಗವನ್ನು ಆವರಿಸಿಕೊಂಡ ಹೊಸ ಸೀರಿಯಲ್
ಕಿರುತೆರೆಯಲ್ಲಿ ಬೋಲ್ಡ್, ಬಿಂದಾಸ್ ಆಗಿ ಮನೆಯ ಜವಾಬ್ದಾರಿ ಹೊತ್ತ ಕೆಚ್ಚೆದೆಯ ಹೆಣ್ಣಾದ ಸತ್ಯಳ ಕಥೆ ಹೊತ್ತು ಜನರ ಅಪಾರ ಮೆಚ್ಚುಗೆ ಪಡೆದು ಆರಂಭದಲ್ಲಿ ಟಾಪ್ ಒಂದು ಸ್ಥಾನ ತನ್ನದಾಗಿಸಿಕೊಂಡು ಅನಂತರ ಒಂದೊಂದೇ ಸ್ಥಾನ ಕಳೆದುಕೊಂಡು, ಕಳೆದ ಕೆಲವು ಸಮಯದಿಂದ ಟಾಪ್ ಐದನೇ ಸ್ಥಾನದಲ್ಲಿ ತೃಪ್ತಿ ಪಟ್ಟುಕೊಂಡಿದ್ದ ಸತ್ಯ ಸೀರಿಯಲ್ ಈ ವಾರ ಟಾಪ್ ಐದರ ರೇಸ್‌ನಿಂದ ಹೊರ ಬಿದ್ದಿದೆ, ಸತ್ಯ ಜಾಗಕ್ಕೆ ರಾಮಾಚಾರಿ ಆಗಮನವಾಗಿದೆ. ಇದು ನಿಜಕ್ಕೂ ಯಾರೂ ನಿರೀಕ್ಷೆ ಮಾಡಿರದ ಬೆಳೆವಣಿಗೆ ಆಗಿದೆ.

ಎರಡನೇ ಸ್ಥಾನದಲ್ಲಿದೆ ಗಟ್ಟಿಮೇಳ ಸೀರಿಯಲ್
ಈ ವಾರ ಪುಟ್ಟಕ್ಕನ ಮಕ್ಕಳು ಎಂದಿನಂತೆ ಮೊದಲ ಸ್ಥಾನದಲ್ಲಿ ಇದ್ದು, ಎರಡನೇ ಸ್ಥಾನದಲ್ಲಿ ಗಟ್ಟಿಮೇಳ, ಮೂರರಲ್ಲಿ ಹಿಟ್ಲರ್ ಕಲ್ಯಾಣ, ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲಿ ಇದ್ದರೆ ಐದನೇ ಸ್ಥಾನ ಹೊಸ ಧಾರಾವಾಹಿ ರಾಮಾಚಾರಿಯ ಪಾಲಾಗಿದ್ದು, ಸತ್ಯ ಸೀರಿಯಲ್ ಬಹಳ ದಿನಗಳ ನಂತರ ಟಾಪ್ ರೇಸ್ ನಿಂದ ಹೊರ ಬಿದ್ದಿದೆ.


Click it and Unblock the Notifications











