'ದೃಷ್ಟಿಬೊಟ್ಟು' ಬದಲಾಯ್ತು; ಹಿರಿಯ ನಟಿ ಅಂಬಿಕಾ ಪಾತ್ರಕ್ಕೆ ವಿಜಯಲಕ್ಷ್ಮೀ ಸಿಂಗ್ ಎಂಟ್ರಿ.. ಏನಿದು ಟ್ವಿಸ್ಟ್?
ಕಿರುತೆರೆಯ ಸ್ಟಾರ್ ನಟ ವಿಜಯ್ ಸೂರ್ಯ ಮಾಸ್ ಅವತಾರದಲ್ಲಿ ನಟಿಸುತ್ತಿರುವ ಧಾರಾವಾಹಿ 'ದೃಷ್ಟಿ ಬೊಟ್ಟು'. ಇದೂವರೆಗೂ ಕಿರುತೆರೆಯಲ್ಲಿ ಕ್ಲಾಸ್ ಲುಕ್ ಕೊಟ್ಟಿದ್ದ ವಿಜಯ್ ಮಾಸ್ ಅವತಾರದಲ್ಲಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ವಿಜಯ್ ಸೂರ್ಯ ಹಾಗೂ ಅರ್ಪಿತಾ ಮೋಹಿತ್ ಇಬ್ಬರ ಜೋಡಿ ಸ್ಮಾಲ್ ಸ್ಕ್ರೀನ್‌ನಲ್ಲಿ ಮೋಡಿ ಮಾಡುತ್ತಿದೆ. ಆದರೆ, ಇವರ ಜೊತೆ ಮತ್ತೊಂದು ಪಾತ್ರ ಇಷ್ಟು ದಿನ ಗಮನ ಸೆಳೆಯುತ್ತಿತ್ತು. ಅವರೇ ಬಹುಭಾಷಾ ಹಿರಿಯ ನಟಿ ಅಂಬಿಕಾ.
ಹೀಗಾಗಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ 'ದೃಷ್ಟಿಬೊಟ್ಟು' ಕೂಡ ಒಂದು. ಬಹು ದೊಡ್ಡ ತಾರಾಬಳಗವಿರುವ ಈ ಧಾರಾವಾಹಿ ಕಥೆಯಲ್ಲಿ ಆಗಾಗ ಟ್ವಿಸ್ಟ್ ಅಂಡ್ ಟರ್ನ್ ಆಗಾಗ ಕಿರುತೆರೆ ವೀಕ್ಷಕರಿಗೆ ಸಿಗುತ್ತಲೇ ಇರುತ್ತೆ. ಈ ಸೀರಿಯಲ್‌ಗೆ ಅಂಬಿಕಾ ಎಂಟ್ರಿ ಕೊಡುತ್ತಿದ್ದಂತೆ ಕನ್ನಡಿಗರ ಮನೆಯ ಹೆಣ್ಮಕ್ಕಳ ಮುಖಗಳು ಅರಳಿದ್ದವು. ಕಿರುತೆರೆ ಸ್ಟಾರ್‌ಗಳಿಗೆ ಅಂಬಿಕಾ ಅಂತಹ ಜನಪ್ರಿಯ ಸಾಥ್ ಕೊಟ್ಟಿದ್ದು ವೀಕ್ಷಕರಿಗೂ ಇಷ್ಟ ಆಗಿತ್ತು.

ಆದರೆ, ಇತ್ತೀಚೆಗೆ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ಅಂಬಿಕಾ ಕಾಣಿಸಿಕೊಳ್ಳುತ್ತಿಲ್ಲ. ಅವರ ಪಾತ್ರವನ್ನು ಮತ್ತೊಬ್ಬ ಕನ್ನಡದ ಜನಪ್ರಿಯ ನಟಿ ನಿಭಾಯಿಸುತ್ತಿದ್ದಾರೆ. ಅವರೇ ವಿಜಯಲಕ್ಷ್ಮಿ ಸಿಂಗ್. ಇಷ್ಟು ದಿನ ಈ ಸೀರಿಯಲ್‌ನಲ್ಲಿ ಅಬ್ಬಕ್ಕನಾಗಿ ನಟಿಸುತ್ತಿದ್ದ ಅಂಬಿಕಾ ಅವರು ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ. ಇಂದಿನ ಎಪಿಸೋಡ್ ನೋಡಿದಾಗ ಅಬ್ಬಕ್ಕನ ಪಾತ್ರದಲ್ಲಿ ವಿಜಯಲಕ್ಷ್ಮೀ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಆಗಾಗ ವಿಶ್ರಾಂತಿಗೆ ತೆರಳುವ ಅಬ್ಬಕ್ಕ ಪಾತ್ರ ಈಗ ಬದಲಾವಣೆಯಾಗಿರುವುದು ವೀಕ್ಷಕರಲ್ಲಿ ಅಚ್ಚರಿಯನ್ನು ಮೂಡಿಸಿದೆ.
ಇಂದಿನ ಎಪಿಸೋಡ್‌ನಲ್ಲಿ ಶರಾವತಿಯ ಪ್ಲ್ಯಾನ್‌ಗಳು ಉಲ್ಟಾ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಾ ಇದ್ದಾವೆ. ಶರಾವತಿಯ ಟಾರ್ಗೆಟ್ ದತ್ತ ಅನ್ನೋದು ಎಲ್ಲರಿಗೂ ಗೊತ್ತು. ಹೀಗಾಗಿಯೇ ಅವನ ನೆಮ್ಮದಿ ಕಸಿಯೋದಕ್ಕೆ, ಅವನ ಕೊಲ್ಲೋದಕ್ಕೆ ಸಾಕಷ್ಟು ಪ್ರಯತ್ನ ಪಟ್ಟು ಸೋತಿದ್ದಾಳೆ. ಆ ಪ್ರಯತ್ನದ ಫಲವೇ ದೃಷ್ಟಿ ಹಾಗೂ ದತ್ತನ ಮದುವೆ. ಸದ್ಯ ಈಗ ಇಬ್ಬರೂ ಅಂದ್ರೆ, ದತ್ತ ಹಾಗೂ ದೃಷ್ಟಿ ಪ್ರೀತಿಯಲ್ಲಿ ಬೀಳುತ್ತಾ ಇದ್ದಾರೆ. ಅದನ್ನೂ ಹಾಳು ಮಾಡುವುದಕ್ಕೆ ಶರಾವತಿ ಪ್ಲ್ಯಾನ್ ಮಾಡದೆ ಸುಮ್ಮನೆ ಕೂರುವುದಿಲ್ಲ. ಆದರೆ, ಈ ಮಾಸ್ಟರ್ ಪ್ಲ್ಯಾನ್ ನಡುವೆ ಶರಾವತಿಗೇನೆ ಅಬ್ಬಕ್ಕ ಗುನ್ನ ಇಟ್ಟಿದ್ದಾರೆ. ಇದು ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ.
ಇಂಪನಾಳನ್ನ ನೋಡಿದ್ದೆ ಅಬ್ಬಕ್ಕ. ದತ್ತ ಕೂಡ ಅಬ್ಬಕ್ಕನ ಮಾತಿಗೆ ಬೆಲೆ ಕೊಟ್ಟು ಇಂಪಾನಳನ್ನು ಮದುವೆಯಾಗುವುದಕ್ಕೆ ಒಪ್ಪಿದ್ದ. ಆದರೆ, ಇಂಪನಾ, ತಿಲಕ್‌ನ ಲವ್ ಮಾಡ್ತಾ ಇದ್ದಳು. ಮದುವೆಗೂ ಮುನ್ನ ಶರಾವತಿಯ ಬಲೆಗೆ ಬಿದ್ದ ಇಂಪನಾ, ದೃಷ್ಟಿ ಹೆಸರನ್ನು ಬರೆದಿಟ್ಟು ಓಡಿ ಹೋದಳು. ಅಲ್ಲಿಂದ ದೃಷ್ಟಿಯನ್ನ ದ್ವೇಷಿಸೋಕೆ ಶುರು ಮಾಡಿದ್ದ ದತ್ತ. ಅಬ್ಬಕ್ಕನ ಎಂಟ್ರಿಯಿಂದ ಈಗ ಶರಾವತಿ ಲಾಕ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಅಬ್ಬಕ್ಕನ ಪಾತ್ರದಲ್ಲಿ ವಿಜಯಲಕ್ಷ್ಮಿ ಸಿಂಗ್ ಬಂದಿದ್ದು, ಕಥೆ ಯಾವ ರೀತಿ ತೆರೆದುಕೊಳ್ಳುತ್ತದೆ ಎಂಬುದನ್ನ ವೀಕ್ಷಕರು ಕುತೂಹಲದಿಂದ ನೋಡುವುದಕ್ಕೆ ಶುರು ಮಾಡಿದ್ದಾರೆ.
'ದೃಷ್ಟಿಬೊಟ್ಟು' ಕನ್ನಡ ಕಿರುತೆರೆಯ ಮಟ್ಟಿಗೆ ವಿಶಿಷ್ಠ ಧಾರಾವಾಹಿ. ನಾಯಕಿಯ ಬಣ್ಣವನ್ನೇ ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿತ್ತು. ಈ ಕಾರಣಕ್ಕೆ ಮಹಿಳೆಯರ ಜನಮೆಚ್ಚುಗೆಗೂ ಕಾರಣವಾಗಿತ್ತು. ಈಗ ಹಲವು ತಿರುವುಗಳನ್ನು ಪಡೆದುಕೊಂಡಿದ್ದು, ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ದೃಷ್ಟಿ ಹಾಗೂ ದತ್ತನ ಕಥೆಯನ್ನು ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಈಗ ವಿಜಯಲಕ್ಷ್ಮಿಯವರ ಸೇರ್ಪಡೆ ಮತ್ತಷ್ಟು ಬಲ ಬಂದಂತೆ ಆಗಿದೆ.
'ಗಟ್ಟಿಮೇಳ' ಧಾರಾವಾಹಿಯ ಹೀರೋ ರಕ್ಷ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಕ್ಷ್ ಹಾಗೂ ವಿಜಯ್ ಸೂರ್ಯ ಇಬ್ಬರೂ ಕಿರುತೆರೆಯಲ್ಲಿ ಜನಪ್ರಿಯರ ತಾರೆಯರು ಹಾಗೂ ಒಳ್ಳೆಯ ಸ್ನೇಹಿತರು ಹೌದು. ಹೀಗಾಗಿ ಇಬ್ಬರ ಹೊಂದಾಣಿಕೆ ಅದ್ಭುತವಾಗಿದ್ದು, ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಸದ್ಯ ಈ ಧಾರಾವಾಹಿ ಹೊಸ ಟ್ವಿಸ್ಟ್‌ನೊಂದಿ ವೀಕ್ಷಕರನ್ನು ಎಷ್ಟರ ಮಟ್ಟಿಗೆ ಹಿಡಿದಿಡುತ್ತೆ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











