"ಪ್ರತಾಪ್ ಆಕ್ಟ್ ಮಾಡ್ತಿದ್ದಾನೆ, ಅಲ್ಲೂ ಆಕ್ಟ್ ಮಾಡ್ತಿದ್ದಾನೆ, ಆಕ್ಟಿಂಗ್‌ನಲ್ಲೂ ಆಕ್ಟ್ ಮಾಡ್ತಿದ್ದಾನೆ": ಬ್ರಹ್ಮಾಂಡ ಗುರೂಜಿ

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಬಿಗ್ ಬಾಸ್ 10ನೇ ಸೀಸನ್‌ ಇನ್ನೇನು ಕೆಲವೇ ವಾರಗಳಲ್ಲಿ ಮುಕ್ತಾಯ ಆಗುತ್ತೆ. ಕೆಲವು ದಿನಗಳ ಹಿಂದಷ್ಟೇ ಬ್ರಹ್ಮಾಂಡ ಗುರೂಜಿ ಕೂಡ ಬಿಗ್ ಬಾಸ್ ಮನೆಯೊಳಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟು ಬಂದಿದ್ದರು.

ಬಿಗ್ ಬಾಸ್ ಮನೆಯ ಸದಸ್ಯರೊಂದಿಗೆ ಕೆಲವು ಗಂಟೆಗಳ ಕಾಲ ಇದ್ದು ಬಂದಿದ್ದರು. ಹೀಗಾಗಿ ಫಿಲ್ಮಿಬೀಟ್ ಜೊತೆಗಿನ ಸಂದರ್ಶನದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಅದರಲ್ಲೂ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಡ್ರೋನ್ ಪ್ರತಾಪ್ ಬದಲಾಗಬಹುದು ಎಂದು ಹೇಳಿದ್ದಾರೆ.

Drone Prathap will change after Bigg Boss Kannada Season 10 said Brahmanda Guruji

ಈ ಬಾರಿ ಬಿಗ್ ಬಾಸ್ ಸೀಸನ್ 10 ಗೆಲ್ಲುವವರ ಲಿಸ್ಟ್‌ನಲ್ಲಿ ಡ್ರೋನ್ ಪ್ರತಾಪ್, ವಿನಯ್, ಸಂಗೀತಾ, ವರ್ತೂರು ಸಂತೋಷ್ ಹೆಸರು ಮುಂಚೂಣಿಯಲ್ಲಿವೆ. ಹೀಗಾಗಿ ಬ್ರಹ್ಮಾಂಡ ಗೂರುಜಿ ಬಿಗ್ ಬಾಸ್‌ನಲ್ಲಿರುವ ಡ್ರೋನ್ ಪ್ರತಾಪ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ..

ಬ್ರಹ್ಮಾಂಡ ಗುರೂಜಿ ಇದ್ದಿದ್ದನ್ನು ಇದ್ದಂಗೆ ಹೇಳುವ ವ್ಯಕ್ತಿ. ಫಿಲ್ಟರ್ ಇಲ್ಲದೆ ನೇರವಾಗಿ ತಮ್ಮ ಅಭಿಪ್ರಾಯವನ್ನು ಹೊರ ಹಾಕಿತ್ತಾರೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಡ್ರೋನ್ ಪ್ರತಾಪ್ ಚೇಂಜ್ ಆಗಬಹುದು. ಮನೆಯಲ್ಲಿ ಪ್ರತಾಪ್ ಆಕ್ಟ್ ಮಾಡುತ್ತಿದ್ದಾರೆ ಅಂತೆಲ್ಲ ಹೇಳಿದ್ದಾರೆ. "ಪ್ರತಾಪ್‌ಗೆ ಬಿಗ್ ಬಾಸ್ ಅನ್ನೋದು ಹೊಸತು. ಅವರನು ಸ್ವಲ್ಪ ಮನೆಯಲ್ಲಿ ಚೇಂಜ್ ಆಗಬಹುದು. ಅವರು ಪ್ರತಾಪ್ ಸಿಕ್ಕಾಪಟ್ಟೆ ಆಕ್ಟಿವ್. ಹೇಗೆ ಮಾಡ್ಬೇಕು. ಕಂಟೆಂಟ್ ಹೇಗಿರಬೇಕು. ಏನು ಮಾಡ್ಬೇಕು ಅಂತ ಇದ್ದವನು. ಮಾಧ್ಯಮದೊಳಗೆ ಮಾಡದೇ ಇರುತ್ತಾನೆಯೇ." ಎಂದು ಡ್ರೋನ್ ಪ್ರತಾಪ್ ಮೈಂಡ್ ಸೆಟ್ ಬಗ್ಗೆ ಹೇಳಿದ್ದಾರೆ.

Drone Prathap will change after Bigg Boss Kannada Season 10 said Brahmanda Guruji

ಇಷ್ಟೇ ಅಲ್ಲ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯೊಳಗೆ ಆಕ್ಟ್ ಮಾಡುತ್ತಿದ್ದಾರೆ. ಆಕ್ಟಿಂಗ್‌ನಲ್ಲೂ ಆಕ್ಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. "ಪ್ರತಾಪ್ ಆಕ್ಟ್ ಮಾಡುತ್ತಿದ್ದಾನೆ. ಅಲ್ಲೂ ಆಕ್ಟ್ ಮಾಡುತ್ತಿದ್ದಾನೆ. ಆಕ್ಟಿಂಗ್‌ನಲ್ಲೂ ಆಕ್ಟ್ ಮಾಡುತ್ತಿದ್ದಾನೆ. ಪಾತ್ರದಲ್ಲೂ ಆಕ್ಟ್ ಮಾಡುತ್ತಿದ್ದಾನೆ. ನ್ಯಾಚುರಲ್ ಆಗಿ ಇರೋರು ಅಂದರೆ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಇವರೆಲ್ಲ ಸಿಂಪಲ್." ಎಂದು ಬ್ರಹ್ಮಾಂಡ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.

ಎಲ್ಲರೂ ಡ್ರೋನ್ ಪ್ರತಾಪ್ ಕೆಟ್ಟವರು ಅಂತ ಹೇಳುತ್ತಿದ್ದಾರೆ. ಅವರ ಕಷ್ಟ ಯಾರಿಗೆ ಗೊತ್ತು. ಅವರು ಗೆಲ್ಲಬೇಕು ಅನ್ನೋ ಹುಚ್ಚು ಹೆಚ್ಚಿದೆ ಎಂಬುದು ಬ್ರಹ್ಮಾಂಡ ಗುರೂಜಿ ಅಭಿಪ್ರಾಯ. "ಡ್ರೋನ್ ಪ್ರತಾಪ್ ಹೊರಗಡೆ ಹೇಗಿದ್ದ ಅಂತ ಯಾರಿಗೆ ಗೊತ್ತು? ಅವನ ಜೀವನ ಇಲ್ಲಿ ಬದಲಾಗಿದೆ ಅನ್ನೋದು ಎಷ್ಟೋ ಜನಕ್ಕೆ ಗೊತ್ತಿರಲ್ಲ. ಅವನು ಚೇಂಜ್ ಆಗಿದ್ದಾನೆ ಅಂದರೆ, ಅವನ ಕಷ್ಟನೂ ಗೊತ್ತಿರೋದಿಲ್ಲ. ಬರೀ ಅವನೇ ಕೆಟ್ಟವನ್ನು ಅಂದುಕೊಳ್ಳುತ್ತಾರೆ. ಡ್ರೋನ್ ಪ್ರತಾಪ್ ಗೆಲ್ಲಬೇಕು ಅನ್ನುವ ಹುಚ್ಚು ಜಾಸ್ತಿಯಿದೆ." ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಟಾಸ್ಕ್ ಮೇಲೆ ಟಾಸ್ಕ್ ನೀಡಲಾಗುತ್ತಿದೆ. ಡ್ರೋನ್ ಪ್ರತಾಪ್, ಸಂಗೀತಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಸೇರಿದಂತೆ ಹಲವು ಸ್ಪರ್ಧಿಗಳ ಬಗ್ಗೆನೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಫಿಲ್ಮಿಬೀಟ್‌ಗೆ ನೀಡಿರುವ ಸಂದರ್ಶನ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

More from Filmibeat

English summary
Brahmanda Guruji about Bigg Boss Drone Prathap.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X