'ದೃಷ್ಟಿ ಬೊಟ್ಟು' ಮಹಾ ಸಂಚಿಕೆ: ದತ್ತ-ದೃಷ್ಟಿ ಹನಿಮೂನ್‌ಗೆ ಹೊರಟಾಗಲೇ ಶರಾವತಿ ಹಾಕಿದ ಸ್ಕೆಚ್ ಏನು?
ಕಿರುತೆರೆಯ ಸ್ಟಾರ್ ನಟ ವಿಜಯ್ ಸೂರ್ಯ ನಟಿಸುತ್ತಿರುವ ಧಾರಾವಾಹಿ 'ದೃಷ್ಟಿ ಬೊಟ್ಟು'. ಈ ಸೀರಿಯಲ್ ಇಂದು ಮಹಾ ಸಂಚಿಕೆ ಪ್ರಸಾರ ಆಗುತ್ತಿದೆ. ದತ್ತನ ಪಾತ್ರದಲ್ಲಿ ಖಡಕ್ ಲುಕ್ ಕೊಟ್ಟಿರುವ ವಿಜಯ್ ಸೂರ್ಯ, ಬಣ್ಣ ಬದಲಿಸಿಕೊಂಡ ದೃಷ್ಟಿ ಪಾತ್ರದಲ್ಲಿ ನಟಿಸುತ್ತಿರುವ ಅರ್ಪಿತಾ ಮೋಹಿತೆ. ಇಬ್ಬರ ಕಾಂಬಿನೇಷನ್‌ಗೆ ವೀಕ್ಷಕರಿಗೆ ಇಷ್ಟ ಆಗಿದೆ. ಇವರಿಬ್ಬರ ಮಧ್ಯೆ ನಡೆಯುವ ಮುನಿಸು, ಪ್ರೀತಿ, ಕಿತ್ತಾಟ, ಎಲ್ಲವೂ ಇಷ್ಟ ಆಗಿದೆ.
ಈಗ 'ದೃಷ್ಟಿ ಬೊಟ್ಟು' ಇನ್ನೂ ಇಂಟ್ರೆಸ್ಟಿಂಗ್ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ ಮೆಗಾ ಸಂಚಿಕೆಯನ್ನು ಕಲರ್ಸ್ ಕನ್ನಡ ಪ್ರಸಾರ ಮಾಡಿದೆ. ಈ ಮೆಗಾ ಸಂಚಿಕೆಯಲ್ಲಿ ಒಂದು ಹೈಲೈಟ್‌ಗಳಿವೆ. ದತ್ತ ಹಾಗೂ ದೃಷ್ಟಿಯ ಮದುವೆ ಆಗಿದೆ. ಮದುವೆಯ ಬಳಿಕ ಇವರಿಬ್ಬರೂ ಹನಿಮೂನ್‌ಗೆಂದು ಸಕಲೇಶಪುರಕ್ಕೆ ಹೊರಟಿದ್ದಾರೆ. ಆದರೆ, ಇವರು ಹನಿಮೂನ್‌ಗೆ ಹೊರಡುವುದಕ್ಕೆ ರೆಡಿಯಾಗುತ್ತಿದ್ದಂತೆ ಅವರ ಜೀವಕ್ಕೆ ಅಪಾಯವಿದೆ ಎನ್ನುವುದು ಗೊತ್ತಾಗುತ್ತೆ.

ದೃಷ್ಟಿ ಮತ್ತು ದತ್ತಾ ಹನಿಮೂನ್‌ಗೆಂದು ಹೊರಟಾಗ ಸುತ್ತಮುತ್ತ ಇರುವವರು ಸಂಚುಗಳನ್ನು ರೂಪಿಸಿದ್ದಾರೆ. ಇವರಿಬ್ಬರ ಜೀವಕ್ಕೆ ಅಪಾಯವಿದೆ ಎಂದು 'ಸೈಲೆಂಟ್' ಈಗಾಗಲೇ ಎಚ್ಚರಿಸಿದ್ದಾನೆ. ಈ ವೇಳೆ ಶರಾವತಿ ಕೂಡ ವ್ಯಂಗ್ಯವಾಗಿ ದೃಷ್ಟಿಯ ಬಳಿ ಮಾತಾಡುತ್ತಾಳೆ. ಕುಟುಂಬದ ಎಲ್ಲರನ್ನೂ ಸೇರಿಸುವ ದತ್ತಾ ತನ್ನ ಕುಟುಂಬ ತನಗೆ ಅತಿ ಮುಖ್ಯ ಎಂದು ಅವರೆಲ್ಲರನ್ನೂ ಹನಿಮೂನ್‌ಗೆ ಕರೆದುಕೊಂಡು ಹೋಗುತ್ತಾನೆ.
ದತ್ತ ತನ್ನ ಕುಟುಂಬವನ್ನು ಹನಿಮೂನ್‌ಗೆ ಕರೆದೊಯ್ಯುತ್ತಿರೋದು ಶರಾವತಿಯ ಅಸಹನೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ದೃಷ್ಟಿಗೆ ನೇತ್ರಾ ಮತ್ತು ಶರಾವತಿಯ ಬಗ್ಗೆ ಅನುಮಾನ ಮೂಡಿದೆ. ಸಕಲೇಶಪುರದಲ್ಲಿ ದೃಷ್ಟಿ ಮತ್ತು ದತ್ತಾ ಇಬ್ಬರನ್ನು ಲಚ್ಚಿ ಸ್ವಾಗತಿಸಿದ್ದಾಳೆ. ತನ್ನನ್ನು ಕ್ಷಮಿಸಿ ಹೆಂಡತಿಯಾಗಿ ಸ್ವೀಕರಿಸು ಎಂದು ದೃಷ್ಟಿ ದತ್ತಾನನ್ನು ಬೇಡಿಕೊಳ್ಳುತ್ತಾಳೆ. ಆದರೆ, ದತ್ತಾ ಅವಳಿಗೆ ಉತ್ತರಿಸದೆ ಕೊಠಡಿಯಿಂದ ಹೊರ ಹೋಗುತ್ತಾನೆ. ಇಲ್ಲಿಂದ ಏನಾಗುತ್ತೆ ಅನ್ನೋದು ಈ ಮೆಗಾ ಎಪಿಸೋಡ್‌ನಲ್ಲಿ ನೋಡಬಹುದು.
ಈ ಮೆಗಾ ಎಪಿಸೋಡ್ ಆರಂಭ ಆಗುವುದಕ್ಕೂ ಮುನ್ನ ದೃಷ್ಟಿ ಪಾತ್ರದ ಅರ್ಪಿತಾ ಹಾಗೂ ನಟಿ ಸಮೀಕ್ಷಾ ಲೈಫ್‌ಗೆ ಬಂದು ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದಕ್ಕೂ ಮುನ್ನ ಸಕಲೇಶಪುರದ ಸನ್ನಿವೇಶವನ್ನು ಈ ಲೈವ್‌ನಲ್ಲಿ ವಿವರಿಸಿದ್ದಾರೆ.
"ತುಂಬಾ ದಿನಗಳಾದ್ಮೇಲೆ ಮೂರು ಗಂಟು ಶ್ರಾವಣಿಯಾಗಿ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಿದ್ದೇನೆ. ದೃಷ್ಟಿಯವರು ಇವತ್ತು ನನ್ನೊಂದಿಗೆ ಏನಕ್ಕೆ ಇದ್ದಾರೆ ಅಂದರೆ, ದತ್ತ ಹಾಗೂ ದೃಷ್ಟಿಯವರು ಹೊಸದಾಗಿ ಮದುವೆ ಆಗಿದ್ದಾರೆ. ಅವರ ಲೈಫ್‌ನಲ್ಲಿ ಸ್ವಲ್ಪ ರೊಮ್ಯಾನ್ಸ್ ಕಮ್ಮಿಯಾಗಿದೆ ಅಂತ ಅನಿಸಿತು. ಅವರು ಸಕಲೇಶಪುರಕ್ಕೆ ಹನಿಮೂನ್‌ಗೋಸ್ಕರ ನಮ್ಮ ಎಸ್ಟೇಟ್‌ಗೆ ಬಂದಿದ್ದಾರೆ. ಮಳೆ ಬರುತ್ತಿದೆ. ವಾತಾವರಣ ತುಂಬಾನೇ ಚೆನ್ನಾಗಿದೆ. ಅದಕ್ಕೆ ನಾವು ಇವತ್ತು ಲೈವ್ ಬಂದಿದ್ದೇವೆ." ಎಂದು ನಟಿ ಸಮೀಕ್ಷಾ ಹೇಳಿದ್ದಾರೆ.
ಇತ್ತ ದೃಷ್ಟಿ ಪಾತ್ರದಲ್ಲಿ ನಟಿಸುತ್ತಿರುವ ಅರ್ಪಿತಾ ಕೂಡ ಲೈವ್‌ನಲ್ಲಿ ಧಾರಾವಾಹಿಯ ಸದ್ಯದ ಸನ್ನಿವೇಶವನ್ನು ವಿವರಿಸಿದ್ದಾರೆ. "ಇವತ್ತಿಂದು ನಮ್ಮ ಫ್ಯಾಮಿಲಿ ಟ್ರಿಪ್ ಇದು. ದತ್ತ, ಭಜರಂಗಿ, ನೇತ್ರಾ ಎಲ್ಲರೂ ನಮ್ಮ ಜೊತೆ ಬಂದಿದ್ದಾರೆ. ಇವರು ನನ್ನ ಹಾಗೂ ಭಜರಂಗಿ ಫ್ರೆಂಡ್ ಶ್ರಾವಣಿ. ನನಗೆ ಹಾಗೂ ದತ್ತಗೆ ಫ್ಯಾಮಿಲಿ ತುಂಬಾನೇ ಮುಖ್ಯ." ಎಂದು ದೃಷ್ಟಿ ಉರ್ಫ್ ಅರ್ಪಿತಾ ಹೇಳಿದ್ದಾರೆ.
"ದೃಷ್ಟಿ ನನಗೆ ತುಂಬಾನೇ ಇಷ್ಟ ಆದರು. ಯಾಕಂದ್ರೆ, ದೃಷ್ಟಿಯಲ್ಲಿ ಶ್ರಾವಣಿಯನ್ನು ನೋಡಬಹುದು ಎಂದಿದ್ದಾರೆ. ಆನ್ ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ದೃಷ್ಟಿ ತುಂಬಾನೇ ಇಷ್ಟ ಆದರು. ಇವರಿಬ್ಬರ ಮಧ್ಯೆ ಒಂದು ಸಾರಿ ತುಂಬಾನೇ ರೊಮ್ಯಾನ್ಸ್ ಇರುತ್ತೆ. ಇನ್ನೊಂದು ಸಾರಿ ಜಗಳ ಮಾಡುತ್ತಿರುತ್ತಾರೆ. ಏನೋ ಒಂಥರಾ ಇರಿಸು ಮುರಿಸು ಇರುತ್ತೆ. ನಮ್ಮ ಎಸ್ಟೇಟ್‌ನಿಂದ ಹೊರಗಡೆ ಹೋಗುವವರೆಗೂ ಅದನ್ನೆಲ್ಲ ಸರಿ ಮಾಡಿ, ಜಗತ್ತಿನ ಮೊಟ್ಟ ಮೊದಲ ರೊಮ್ಯಾಂಟಿಕ್ ಜೋಡಿಯಾಗಿ ಹೊರಗಡೆ ಹೋಗುವಂತೆ ಮಾಡುವ ಡ್ಯೂಟಿ ನನಗೆ ಇದೆ. " ಎಂದು ನಟಿ ಸಮೀಕ್ಷಾ ಲೈವ್‌ನಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.


Click it and Unblock the Notifications











