ಮೂರು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿದ್ದೇನೆ: ಬಹಿರಂಗಪಡಿಸಿದ 'ನಿನ್ನಿಂದಲೇ' ನಟಿ

ಪುನೀತ್ ರಾಜ್ ಕುಮಾರ್ ಜತೆ 'ನಿನ್ನಿಂದಲೇ' ಮತ್ತು ಗಣೇಶ್ ಜತೆ 'ಬುಗುರಿ' ಚಿತ್ರಗಳಲ್ಲಿ ನಟಿಸಿದ್ದ ನಟಿ ಎರಿಕಾ ಫರ್ನಾಂಡಿಸ್, ಚಿತ್ರರಂಗದಲ್ಲಿ ಅದೃಷ್ಟ ಸಿಗದೆ, ಕಿರುತೆರೆಗೆ ಪ್ರವೇಶಿಸಿದ್ದರು. ಹಿಂದಿಯ 'ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ' ಧಾರಾವಾಹಿಯಲ್ಲಿ ನಟಿಸಿದ್ದ ಅವರು ಈಗ, 'ಕಸೌತಿ ಜಿಂದಗಿ ಕೆ' ಧಾರಾವಾಹಿಯಲ್ಲಿ ಪ್ರೇರಣಾ ಶರ್ಮಾ ಬಸು ಎಂಬ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.

Recommended Video

Ambi-Vishnu|ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ ಎಂದ ಸುಮಲತಾ ಅಂಬರೀಶ್ | Filmibeat Kannada

ಮಂಗಳೂರು ಮೂಲದ ಈ ಮುಗ್ಧ ಮುಖದ ಚೆಲುವೆಯ ಮದುವೆ ಯಾವಾಗ? ಬಾಯ್ ಫ್ರೆಂಡ್ ಇದ್ದಾರಾ? ಮುಂತಾದ ಪ್ರಶ್ನೆಗಳನ್ನು ಅಭಿಮಾನಿಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿರುತ್ತಾರೆ. ಧಾರಾವಾಹಿಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಎರಿಕಾ ಅವರ ಕುತೂಹಲಗಳಿಗೆ ಈಗ ಉತ್ತರ ನೀಡಿದ್ದಾರೆ. ನಾನು ಒಂಟಿಯಲ್ಲ. ಮೂರು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿದ್ದೇನೆ. ಬಾಯ್ ಫ್ರೆಂಡ್ ಬಗ್ಗೆ ಯಾರಿಗೂ ತಿಳಿದಿಲ್ಲ ಎನಿಸುತ್ತದೆ. ಏಕೆಂದರೆ ಆತ ಚಿತ್ರರಂಗ ಅಥವಾ ಕಿರುತೆರೆ ಉದ್ಯಮಕ್ಕೆ ಸೇರಿದವನಲ್ಲ ಎಂದಿದ್ದಾರೆ ಎರಿಕಾ. ಮುಂದೆ ಓದಿ..

ತಮ್ಮ ನಡುವೆ ಹೊಂದಾಣಿಕೆ ಇದೆ...

ತಮ್ಮ ನಡುವೆ ಹೊಂದಾಣಿಕೆ ಇದೆ...

ತನ್ನ ಬಾಯ್ ಫ್ರೆಂಡ್ ತನ್ನಂತೆಯೇ ಇರುವ ವ್ಯಕ್ತಿ. ಇಬ್ಬರೂ ಬಹಳ ಉತ್ತಮ ಸ್ನೇಹಿತರು. ಎಲ್ಲ ಬಗೆಯ ನಾನ್‌ಸೆನ್ಸ್ ಸಂಗತಿಗಳನ್ನೂ ಮಾತನಾಡುತ್ತೇವೆ ಎಂದು ಬಣ್ಣಿಸಿದ್ದಾರೆ. ನಮ್ಮ ಸಂಬಂಧಗಳಲ್ಲಿ ಏರಿಳಿತಗಳಿವೆ. ಆದರೆ ಒಬ್ಬರು ಸಿಟ್ಟುಮಾಡಿಕೊಂಡರೆ ಇನ್ನೊಬ್ಬರು ಸುಮ್ಮನಿರಬೇಕು ಎಂಬ ಹೊಂದಾಣಿಕೆ ಇದೆ. ಎಲ್ಲವೂ ತಣ್ಣಗಾದ ಬಳಿಕವೇ ಅದರ ಬಗ್ಗೆ ಚರ್ಚಿಸುತ್ತೇವೆ. ಹೀಗೆಯೇ ನಾವು ಹೊಂದಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ರೊಮ್ಯಾನ್ಸ್ ಮಾಡುವುದನ್ನು ನೋಡಲಾರ

ರೊಮ್ಯಾನ್ಸ್ ಮಾಡುವುದನ್ನು ನೋಡಲಾರ

ನಾನು ನಟಿಸುವ ಧಾರಾವಾಹಿಗಳನ್ನು ಆತ ಇಷ್ಟಪಡುತ್ತಾನೆ. ಆದರೆ ನೋಡುವುದಿಲ್ಲ. ನನ್ನ ಕೆಲಸಗಳನ್ನು ನೋಡಲು ಬಯಸಿದರೂ ನಾನು ಬೇರೊಬ್ಬ ವ್ಯಕ್ತಿ ಜತೆ ರೊಮ್ಯಾನ್ಸ್ ಮಾಡುವುದನ್ನು ನೋಡಲು ಇಷ್ಟಡುವುದಿಲ್ಲ. ಟಿವಿಯಲ್ಲಿ ನನ್ನ ಯಾವುದಾದರೂ ರೊಮ್ಯಾಂಟಿಕ್ ದೃಶ್ಯ ಕಂಡರೆ ಎದ್ದು ಅಲ್ಲಿಂದ ಹೋಗಿಬಿಡುತ್ತಾನೆ ಎಂದು ತಮ್ಮ ಹುಡುಗನ ಪೊಸೆಸಿವ್‌ನೆಸ್‌ಅನ್ನು ಹೇಳಿಕೊಂಡಿದ್ದಾರೆ.

ಸಹ ನಟರ ಜತೆ ಲಿಂಕಪ್ ರೂಮರ್

ಸಹ ನಟರ ಜತೆ ಲಿಂಕಪ್ ರೂಮರ್

ಇಷ್ಟು ಕಾಲ ಜತೆಗಿದ್ದರೂ ತಮ್ಮ ಸಂಬಂಧದ ಬಗ್ಗೆ ಈಗ ಬಹಿರಂಗವಾಗಿ ಹೇಳಿಕೊಳ್ಳುತ್ತಿರುವುದೇಕೆ? ಅದಕ್ಕೂ ಅವರು ಉತ್ತರ ನೀಡಿದ್ದಾರೆ. ಸಹ ನಟರಾದ ಶಹೀನ್ ಶೇಕ್ ಅಥವಾ ಪಾರ್ಥ್ ಸಂತಾನ್ ಜತೆಗೆ ಲಿಂಕ್ ಅಪ್ ಇದೆ ಎಂಬ ರೂಮರ್‌ಗಳು ಹರಿದಾಡಿದ್ದವು. ಅದರಿಂದ ಸಂಗಾತಿಯೊಂದಿಗಿನ ತನ್ನ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂಬ ಮುನ್ನೆಚ್ಚರಿಕೆ ಇದಕ್ಕೆ ಕಾರಣ.

ಪಾವತಿಸಲು ಹಣವೇ ಇರಲಿಲ್ಲ...

ಪಾವತಿಸಲು ಹಣವೇ ಇರಲಿಲ್ಲ...

ಲಾಕ್ ಡೌನ್ ಅವಧಿಯ ಬದುಕಿನ ಬಗ್ಗೆ ಮಾತನಾಡಿರುವ ಎರಿಕಾ, ಆರಂಭದ ಕೆಲವು ದಿನಗಳಲ್ಲಿ ಪ್ರತಿಯೊಬ್ಬರೂ ಒಂದೊಂದು ರೀತಿ ಸಿಕ್ಕಿಕೊಂಡಿದ್ದರು. ನನಗೆ ಪೇಮೆಂಟ್‌ಗಳು ಬರಲಿಲ್ಲ. ಹೀಗಾಗಿ ನಾನೂ ಪೇಮೆಂಟ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗೆ ಬೇರೆಯವರಿಗೆ ಹಣ ನೀಡಲು ಯಾರಿಗೂ ಹಣ ಸಿಗುತ್ತಿರಲಿಲ್ಲ. ದುಡ್ಡಿಲ್ಲದ ಕಾರಣ ನಾನು ಕೂಡ ಅನೇಕರಿಗೆ ಹಣ ಪಾವತಿಸಲು ಸಾಧ್ಯವಾಗಿಲ್ಲ. ನಿರ್ಮಾಪಕರ ಬಳಿಯೂ ಹಣವಿರಲಿಲ್ಲ. ಅವರಿಗೆ ಸಿಕ್ಕ ಕೂಡಲೇ ನಮಗೆ ನೀಡಿದ್ದರು ಎಂದು ಹೇಳಿದ್ದಾರೆ.

More from Filmibeat

English summary
Actress Erica Fernandes admits dating a guy for 3 years. He doesn't like watching me romance any other guy, she said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X