ಮತ್ತೆ ಕಿರುತೆರೆಯಲ್ಲಿ ಭಾರತದ ಮಹಾಕಾವ್ಯ 'ಮಹಾಭಾರತ'; ಯಾವಾಗ? ಎಲ್ಲಿ ನೋಡಬಹುದು?
ಚಿತ್ರರಂಗ ಸೈಲೆಂಟ್ ಆಗಿರುವಾಗ ಜನರನ್ನು ರಂಜಿಸುವುದಕ್ಕೆ ಕಿರುತೆರೆ ಶತಪ್ರಯತ್ನಗಳನ್ನು ಮಾಡುತ್ತಿದೆ. ಒಂದು ಕಡೆ ಹೊಸ ಹೊಸ ಶೋಗಳನ್ನು ಪ್ರಸಾರ ಮಾಡುತ್ತಿದೆ. ಹಾಗೇ ಇನ್ನೊಂದು ಕಡೆ ಪೌರಾಣಿಕ ಶೋಗಳನ್ನು ಮರು ಪ್ರಸಾರ ಮಾಡುವುದಕ್ಕೆ ಮುಂದಾಗಿದೆ. ಈ ಮೂಲಕ ಇಡೀ ದಿನ ವೀಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದೆ. ಈಗ ಕನ್ನಡ ಕಿರುತೆರೆಯಲ್ಲಿ ಮತ್ತೆ 'ಮಹಾಭಾರತ' ಪ್ರಸಾರ ಆಗುತ್ತಿದೆ.
ಇದೇ ಐದು ವರ್ಷಗಳ ಹಿಂದೆ ಕೋವಿಡ್ ಕಾರಣ ಲಾಕ್‌ಡೌನ್ ಆಗಿದ್ದ ಸಮಯದಲ್ಲಿ ಪೌರಾಣಿಕ ಸೀರಿಯಲ್‌ಗಳನ್ನು ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಭಾರತದ ಮಹಾಕಾವ್ಯ 'ಮಹಾಭಾರತ' ಕೂಡ ಒಂದು. ಲಾಕ್‌ಡೌನ್ ಸಮಯದಲ್ಲಿ ಈ ಪೌರಾಣಿಕ ಧಾರಾವಾಹಿಗಳಿಗೆ ಹೆಚ್ಚು ಬೇಡಿಕೆ ಬಂದಿತ್ತು. ಇದನ್ನು ಮನದಲ್ಲಿಟ್ಟುಕೊಂಡು ಮತ್ತೆ ಸ್ಟಾರ್ ಸುವರ್ಣ 'ಮಹಾಭಾರತ'ವನ್ನು ಪ್ರಸಾರ ಮಾಡುವುದಕ್ಕೆ ಮುಂದಾಗಿದೆ.

ಇದು ಹಿಂದಿ ಸೀರಿಯಲ್‌ನ ಡಬ್ಬಿಂಗ್ ವರ್ಷನ್. 2013ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಈ 'ಮಹಾಭಾರತ' ಸೀರಿಯಲ್ ಪ್ರಸಾರ ಕಂಡಿತ್ತು. ಆ ವೇಳೆ ಕನ್ನಡದಲ್ಲಿ ಡಬ್ಬಿಂಗ್‌ಗೆ ಅವಕಾಶವಿರಲಿಲ್ಲ. ಹಾಗಾಗಿ ಈ ಮಹಾಭಾರತ ಕನ್ನಡಕ್ಕೆ ಡಬ್ ಆಗಿರಲಿಲ್ಲ. ಆದರೆ, ಉಳಿದ ಎಲ್ಲಾ ಭಾಷೆಗಳಿಗೂ ಡಬ್ ಆಗಿತ್ತು. 2020ರಲ್ಲಿ ಕೋವಿಡ್ ಕರ್ನಾಟಕಕ್ಕೆ ಎಂಟ್ರಿ ಆದಾಗ ಶೂಟಿಂಗ್‌ಗಳೆಲ್ಲ ನಿಂತು ಹೋಯ್ತು. ಲಾಕ್‌ಡೌನ್ ಮಾಡಲಾಗಿತ್ತು. ಶೋಗಳು ಪ್ರಸಾರ ಆಗಲೇ ಬೇಕಿತ್ತು. ಒಂದಷ್ಟು ಶೋಗಳನ್ನು ಮರು ಪ್ರಸಾರ ಮಾಡಲಾಗುತ್ತಿತ್ತು. ಅದರಲ್ಲಿ ಈ 'ಮಹಾಭಾರತ' ಕೂಡ ಒಂದು.
ಕೋವಿಡ್‌ನಿಂದ ಕಂಗಾಲಾಗಿದ್ದ ಜನರಿಗೆ ಮನರಂಜನೆಗೆ ಇನ್ನೂ ಏನಾದರೂ ಕೊಡಬೇಕು ಅನ್ನುವ ದೃಷ್ಟಿಯಿಂದ ಕನ್ನಡಕ್ಕೆ ಪೌರಾಣಿಕ ಶೋ ಅನ್ನು ಡಬ್ ಮಾಡಲಾಗಿತ್ತು. ಲಾಕ್‌ಡೌನ್‌ನಲ್ಲಿ ಬಹಳಷ್ಟು ಮಂದಿಯಯಿಂದ ಮನ್ನಣೆ ಗಳಿಸಿತ್ತು. ಆ ವೇಳೆ ಸ್ಟಾರ್ ಸುವರ್ಣಗೆ ರೇಟಿಂಗ್ ವಿಷಯದಲ್ಲೂ ತುಂಬಾನೇ ಯಶಸ್ಸು ತಂದುಕೊಟ್ಟಿತ್ತು. ಲಾಕ್‌ಡೌನ್‌ನಲ್ಲಿ 'ಮಹಾಭಾರತ' ಸ್ಟಾರ್ ಸುವರ್ಣದಲ್ಲಿ ಅತೀ ಹೆಚ್ಚು ಟಿಆರ್‌ಪಿ ಪಡೆದುಕೊಂಡು ಸೀರಿಯಲ್ ಆಗಿತ್ತು.

ಲಾಕ್‌ಡೌನ್‌ನಲ್ಲಿ ಕಂಟೆಂಟ್ ಇಲ್ಲ ಎಂದಾಗ ಮಹಾಭಾರತ, ರಾಧಾ ಕೃಷ್ಣ, ಸೀತೆಯ ರಾಮ, ಇಂತಹ ಪೌರಾಣಿಕ ಶೋಗಳನ್ನು ಪ್ರಸಾರ ಮಾಡಿತ್ತು. ಈ ಎಲ್ಲಾ ಶೋಗಳು ಆಗಿನ ಪರಿಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬುವ, ಉತ್ಸಾಹ ಕೊಡುವ ಶೋಗಳು ಆಗಿತ್ತು. ಅಂದು ಸಿಕ್ಕಿದ ಯಶಸ್ಸನ್ನು, ಜನರ ಅಭಿರುಚಿಯನ್ನು ಮನಗಂಡ ಮತ್ತೆ 'ಮಹಾಭಾರತ'ದ ಕನ್ನಡ ವರ್ಷನ್ ಅನ್ನು ಕಿರುತೆರೆಯಲ್ಲಿ ಮತ್ತೆ ಪ್ರಸಾರ ಮಾಡುವುದಕ್ಕೆ ಸ್ಟಾರ್ ಸುವರ್ಣ ಮುಂದಾಗಿದ್ದಾರೆ.
ಮಹಿಳೆಯರನ್ನು ಗಮನದಲ್ಲಿಟ್ಟಿಕೊಂಡು ಬೆಳಗಿನ ವೇಳೆ ವೀಕ್ಷಕರನ್ನು ಸೆಳೆಯುವುದಕ್ಕೆ ಸ್ಟಾರ್ ಸುವರ್ಣ ಮುಂದಾಗಿದೆ. ಹೀಗಾಗಿ ಈ ಶೋ ಮತ್ತೆ ಸೋಮವಾರದಿಂದ ಬೆಳಗ್ಗೆ 10 ಗಂಟೆಗೆ 11.30ರವರೆಗೆ ಪ್ರಸಾರ ಆಗುತ್ತಿದೆ. ಒಂದೂವರೆ ಗಂಟೆಗಳ ಕಾಲ ಜನಪ್ರಿಯತೆ ಗಳಿಸಿದ್ದ ಈ ಶೋ ಮತ್ತೆ ಸ್ಟಾರ್ ಸುವರ್ಣದಲ್ಲಿ ಜನರ ಬಹುಬೇಡಿಕೆಯ ಮೇರೆಗೆ ಪ್ರಸಾರ ಆಗುತ್ತಿದೆ. ಪೌರಾಣಿಕ ಧಾರಾವಾಹಿಗಳನ್ನು ಯಾರೆಲ್ಲ ಮಿಸ್ ಮಾಡಿಕೊಂಡಿದ್ದರೋ ಅವರಿಗೆಲ್ಲ ಈ ಶೋ ಇಷ್ಟ ಆಗುವುದಂತೂ ಖಂಡಿತಾ. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡೇ ಈ ಶೋ ಅನ್ನು ಪ್ರಸಾರ ಮಾಡಲಾಗುತ್ತಿದೆ.
ಹಾಗಂತ ಮರು ಪ್ರಸಾರ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಲಾಕ್‌ಡೌನ್ ಸಮಯದಲ್ಲಿ ಸ್ಟಾರ್ ಸುವರ್ಣ ಕೈ ಹಿಡಿದಿದ್ದ ಈ ಧಾರಾವಾಹಿ 2021ರಲ್ಲಿ ವೀಕ್ಷಕರ ಒತ್ತಾಯದ ಮೇರೆಗೆ ಮರುಪ್ರಸಾರ ಆಗಿತ್ತು. ಆಗ ಕೇವಲ ವೀಕೆಂಡ್‌ಗಳಲ್ಲಿ ಮಾತ್ರ ಪ್ರಸಾರ ಆಗುತ್ತಿತ್ತು. ಆಗಲೂ ಸ್ಟಾರ್ ಸುವರ್ಣಗೆ 'ಮಹಾಭಾರತ' ಪ್ರಸಾರದಿಂದ ಒಳ್ಳೆಯ ಹೆಸರು ಕೊಟ್ಟಿತ್ತು. ಈಗ ವೀಕ್ಷಕರ ಒತ್ತಾಯದ ಮೇರೆಗೆ ಮರು ಪ್ರಸಾರಕ್ಕೆ ಮುಂದಾಗಿದೆ. ಈ ಸಮಯದಲ್ಲಿ ವೀಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ? ಅನ್ನೋದು ನೋಡಬೇಕಿದೆ.


Click it and Unblock the Notifications











