ನಟಿ ಅಮೃತಾ ಅಯ್ಯಂಗಾರ್‌ಗೆ ಪ್ರೀತಿ ಭಿಕ್ಷೆ ಬೇಡಿದ ಡಾಲಿ ಧನಂಜಯ್: ‘ಕಂಗ್ರಾಜುಲೇಷನ್ಸ್​ ಡಾಲಿ ಭಾಯ್​’

ಚಿತ್ರರಂಗದಲ್ಲಿ ಪ್ರೀತಿ, ಪ್ರೇಮ ಎಲ್ಲವೂ ಕಾಮನ್. ಒಂದೇ ಇಂಡಸ್ಟ್ರಿಯಲ್ಲಿ ಇರುವವರು, ಅವರದ್ದೇ ಫಿಲ್ಡ್‌ನಲ್ಲಿ ಇರುವವರನ್ನು ಆಯ್ಕೆ ಮಾಡಿಕೊಳ್ಳುವುದು ಕಾಮನ್. ಈಗ ಈ ವಿಷಯ ಯಾಕೆ ಅಂದರೆ, ಡಾಲಿ ಧನಂಜಯ್ ನಟಿ ಅಮೃತಾ ಅಯ್ಯಂಗಾರ್ ಅವರಿಗೆ ಪ್ರಪೋಸ್ ಮಾಡಿದ್ದಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಚರ್ಚೆ ಆಗುತ್ತಿದೆ. ಇಬ್ಬರದ್ದೂ ಒಳ್ಳೆ ಜೋಡಿ ಅಂತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಹಿಟ್ ಜೋಡಿಗಳಿವೆ. ದರ್ಶನ್-ರಚಿತಾ ರಾಮ್, ಯಶ್-ರಾಧಿಕಾ ಪಂಡಿತ್ ಇವರಂತೆ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಜೋಡಿಯನ್ನು ಜನರು ತೆರೆಮೇಲೆ ನೋಡಿ ಮೆಚ್ಚಿಕೊಂಡಿದ್ದಾರೆ. ಈಗ ಧನಂಜಯ್ ನಟಿ ಅಮೃತಾ ಅಯ್ಯಂಗಾರ್ ಅವರಿಗೆ ಪ್ರಪೋಸ್ ಮಾಡಿದ್ದಲ್ಲಿಂದ ಈ ಜೋಡಿ ಬಗ್ಗೆ ಅಭಿಮಾನಿಗಳು ಬೇಜಾನ್ ಚರ್ಚೆ ಮಾಡುತ್ತಿದ್ದಾರೆ. ಕೆಲವರಂತೂ 'ಕಂಗ್ರಾಜುಲೇಷನ್ಸ್​ ಡಾಲಿ ಭಾಯ್​' ಅಂತ ಕಮೆಂಟ್ ಮಾಡುತ್ತಿದ್ದಾರೆ.

ಅಮೃತಾಗೆ ಡಾಲಿ ಧನಂಜಯ್ ಪ್ರಪೋಸ್

ಸೋಶಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಜೋಡಿ ಬಗ್ಗೆನೇ ಚರ್ಚೆ. ಅದರಲ್ಲೂ ಡಾಲಿ, ಅಮೃತಾ ಪ್ರಪೋಸ್ ಮಾಡಿದ ಮೇಲೆ ಇಬ್ಬರ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ. ಗಂಭೀರ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ನಟರಾಕ್ಷಸ ಗುಲಾಬಿ ಹೂವು ಹಿಡಿದು ಮಾರುದ್ದ ಡೈಲಾಗ್ ಬಿಟ್ಟು ಅಮೃತಾ ಅಯ್ಯಂಗಾರ್ ಪ್ರಪೋಸ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.

 ಈ ಜೋಡಿ ಒಂದಾಗಲಿ ಎಂದು ಹರಸಿದ ಫ್ಯಾನ್ಸ್

ಈ ಜೋಡಿ ಒಂದಾಗಲಿ ಎಂದು ಹರಸಿದ ಫ್ಯಾನ್ಸ್

ಅಂದ ಹಾಗೆ, ಜೀ ಕನ್ನಡದ ಹೊಸ ಶೋ 'ಗೋಲ್ಡನ್ ಗ್ಯಾಂಗ್' ವೇದಿಕೆ ಮೇಲೆ ಧನಂಜಯ್ ನಟಿ ಅಮೃತಾ ಅಯ್ಯಂಗಾರ್‌ಗೆ ಗುಲಾಬಿ ಕೊಟ್ಟು ಪ್ರಪೋಸ್ ಮಾಡಿದ್ದರು. ಹಾಗಾಗಿ ಈ ರಿಯಲ್ ಲೈಫ್‌ನಲ್ಲಿ ಧನಂಜಯ್ ಪ್ರಪೋಸ್ ಮಾಡಿಲ್ಲ. ಜೀ ಕನ್ನಡ ಈ ಪ್ರಪೋಸ್ ವಿಡಿಯೋ ಬಿಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಜೋಡಿ ತುಂಬಾ ಚೆನ್ನಾಗಿದೆ. ರಿಯಲ್ ಲೈಫ್‌ನಲ್ಲೂ ಒಂದಾಗಲಿ ಎಂದು ಹರಸುತ್ತಿದ್ದಾರೆ.

 ‘ಕಂಗ್ರಾಜುಲೇಷನ್ಸ್​ ಡಾಲಿ ಭಾಯ್​’ ಎಂದ ಫ್ಯಾನ್ಸ್

‘ಕಂಗ್ರಾಜುಲೇಷನ್ಸ್​ ಡಾಲಿ ಭಾಯ್​’ ಎಂದ ಫ್ಯಾನ್ಸ್

ನಟ ಡಾಲಿ ಧನಂಜಯ ಮತ್ತು ನಟಿ ಅಮೃತಾ ಅಯ್ಯಂಗಾರ್​ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. 'ಪಾಪ್​ ಕಾರ್ನ್​ ಮಂಕಿ ಟೈಗರ್​' ಮತ್ತು 'ಬಡವ ರಾಸ್ಕಲ್​' ಇಬ್ಬರೂ ಜೋಡಿಯಾಗಿ ನಟಿಸಿದ ಸಿನಿಮಾಗಳು. 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ವೇಳೆಯಿಂದನೇ ಇಬ್ಬರೂ ಉತ್ತಮ ಸ್ನೇಹಿತರು. ಎರಡೂ ಸಿನಿಮಾಗಳಲ್ಲೂ ಈ ಜೋಡಿಯನ್ನು ಜನರು ಇಷ್ಟ ಪಟ್ಟಿದ್ದಾರೆ. ಈಗ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ 'ಗೋಲ್ಡನ್ ಗ್ಯಾಂಗ್' ಶೋನಲ್ಲಿ ನಿರೂಪಕ ಗಣೇಶ್ ಪ್ರಪೋಸ್ ಮಾಡುವ ಸನ್ನಿವೇಶವೊಂದನ್ನು ಸೃಷ್ಟಿಸಿದ್ದರು. ಆಗ ಧನಂಜಯ್ ಮಂಡಿಯೂರಿ, "ಮಂಡಿಯೂರಿ ಬೇಡುವೆನು. ಹೃದಯ ಕಾಲಡಿ ಇಡುವೆನು. ತೆಗೆದು ಬಚ್ಚಿಟ್ಟುಕೋ. ಇಲ್ಲಾ.. ತುಳಿದು ಕಾಲ್​ ತೊಳೆದುಕೋ. ಬೇಡ ಈ ಮೌನ, ಮಾಡು ತೀರ್ಮಾನ" ಎಂದು ಗುಲಾಬಿ ಹೂಗುಚ್ಚ ನೀಡಿದ್ದರು. ಈ ವಿಡಿಯೋಗೆ ಅಭಿಮಾನಿಗಳು 'ಕಂಗ್ರಾಜುಲೇಷನ್ಸ್​ ಡಾಲಿ ಭಾಯ್​' ಅಂತಿದ್ದಾರೆ.

 ಡಾಲಿ, ಅಮೃತ ಎಪಿಸೋಡ್ ಪ್ರಸಾರ ಯಾವಾಗ?

ಡಾಲಿ, ಅಮೃತ ಎಪಿಸೋಡ್ ಪ್ರಸಾರ ಯಾವಾಗ?

'ಗೋಲ್ಡನ್ ಗ್ಯಾಂಗ್' ವೇದಿಕೆಯಲ್ಲಿ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಇವರೊಂದಿಗೆ ನಟ ವಸಿಷ್ಠ ಸಿಂಹ ಸೇರಿದಂತೆ ಧನಂಜಯ್ ಗೆಳೆಯರ ಗ್ಯಾಂಗ್ ಬಂದಿದೆ. ಈ ಕಾರ್ಯಕ್ರಮ ಜೀ ಕನ್ನಡದಲ್ಲಿ ಈ ವಾರಾಂತ್ಯದಲ್ಲಿ ಪ್ರಸಾರ ಆಗಲಿದೆ. ಈಗಾಗಲೇ ಪ್ರೋಮೊಗಳು ವೈರಲ್ ಆಗಿದ್ದು, ವೀಕ್ಷಕರು ಈ ಶೋ ನೋಡಲು ಕಾತುರದಿಂದ ಕಾದು ಕೂತಿದ್ದಾರೆ.

More from Filmibeat

English summary
Finally Dhananjaya proposed actress Amrutha Iyengar in Golden Gang Show in Zee Kannada. Real life also people liking Dhananjay and Amrutha Iyengar pair.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X