'ಭಾರ್ಗವಿ LL. B.' ಧಾರಾವಾಹಿಯಲ್ಲಿ ಬಿಗ್ ಬಾಸ್ ಮಂಜು ಉಗ್ರಾವತಾರ
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಹೈವೋಲ್ಟೇಜ್ ಎಪಿಸೋಡ್ ನಡೆಯುತ್ತಿದೆ. ಭಾರ್ಗವಿ ಮ್ಯಾರೇಜ್ ಡ್ರಾಮಾ ಶುರುವಾಗಿದೆ. ಈ ವಾರ ಪ್ರಸಾರ ಆಗುತ್ತಿರುವ ಎಪಿಸೋಡ್‌ಗಳು ವೀಕ್ಷಕರನ್ನು ಮತ್ತಷ್ಟು ಹತ್ತಿರಕ್ಕೆ ಕರೆದುಕೊಂಡು ಬರುತ್ತಿದೆ. ನ್ಯಾಯ ಮತ್ತು ಅಧಿಕಾರದ ಮುಖಾಮುಖಿಯಾಗುವ ಹೃದಯಸ್ಪರ್ಶಿ ಕಥೆ 'ಭಾರ್ಗವಿ LL. B.' ಈಗಾಗಲೇ ವೀಕ್ಷಕರ ಮನ ಗೆದ್ದಿದೆ.
ವಾರದಲ್ಲಿ ಐದು ದಿನ ಅಂದರೆ, ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಪ್ರಸಾರ ಆಗುತ್ತಿರುವ 'ಭಾರ್ಗವಿ LL. B.' ಧಾರಾವಾಹಿಯ ಬುಧವಾರ ಹಾಗೂ ಗುರುವಾರದ (ಆಗಸ್ಟ್ 13,14) ಎಪಿಸೋಡ್‌ಗಳಲ್ಲಿ ಸರ್ಪ್ರೈಸ್ ಇಡಲಾಗಿತ್ತು. ಬಿಗ್ ಬಾಸ್ ಕನ್ನಡ ಹಾಗೂ 'ಉಗ್ರಂ' ಮಂಜು ಗೌರವ ನಟನಾಗಿ ಕಾಣಿಸಿಕೊಂಡಿದ್ದರು. ಇದು ಕಿರುತೆರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಕಿಕ್ ಕೊಟ್ಟಿತ್ತು.

ಉಗ್ರಂ ಮಂಜು ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಧಾರಾವಾಹಿಗಳಲ್ಲಿ ಹಲವು ವರ್ಷಗಳ ಬಳಿಕ ಮತ್ತೆ ಮರಳಿದ್ದಾರೆ. ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಉಗ್ರಂ ಮಂಜು ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದು ವೀಕ್ಷಕರಿಗೆ ಖುಷಿಕೊಟ್ಟಿದೆ.
ಈ ಸೀರಿಯಲ್‌ನ ನಾಯಕ ಅರ್ಜುನ್ ಕಥಾನಾಯಕಿ ಭಾರ್ಗವಿಗೆ ತಾಳಿ ಕಟ್ಟುವ ಸನ್ನಿವೇಶ ನಡೆಯುತ್ತಿತ್ತು. ಎರಡು ದಿನ ಪ್ರಸಾರ ಆಗಿದ್ದ ಸಂಚಿಕೆಯಲ್ಲಿ ಉಗ್ರಂ ಮಂಜು ಅವರೇ ಹೈಲೈಟ್ ಆಗಿದ್ದರು. 'ಭಾರ್ಗವಿ LL.B.' ಧಾರಾವಾಹಿ ತನ್ನ ತಂದೆಯ ಘನತೆಯನ್ನು ಮರಳಿ ಪಡೆಯುವುದಕ್ಕೆ ಕಾನೂನಿನ ಪ್ರಪಂಚದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳನ್ನು ಮೀರಿ ಬಲಿಷ್ಠ ನಿಲ್ಲುವ ಹಾಗೂ ಪ್ರಭಾವಶಾಲಿಗಳ ವಿರುದ್ಧ ಹೋರಾಡುವ ಧೀರ ಯುವತಿಯ ಸ್ಪೂರ್ತಿದಾಯಕ ಕಥೆಯಾಗಿದೆ.
ಭಾರ್ಗವಿ ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ. ಅತ್ಯಂತ ಪ್ರಭಾವಶಾಲಿ, ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವೆ ಭಾರ್ಗವಿ ಭಿನ್ನಾಭಿಪ್ರಾಯ, ಜೊತೆಗೆ ಭಾರ್ಗವಿಯ ಸ್ವಾಭಿಮಾನದ ಮಹಾ ಸಂಘರ್ಷದ ಕಥೆಯೇ ಈ ಧಾರಾವಾಹಿ. ಈ ಧಾರಾವಾಹಿಯ ಒಂದು ಪ್ರಮುಖ ತಿರುವಿನಲ್ಲಿ ಕಥಾ ನಾಯಕ ಅರ್ಜುನ್ ಹಾಗೂ ಕಥಾ ನಾಯಕಿ ಭಾರ್ಗವಿ ಅನಿರೀಕ್ಷಿತವಾಗಿ ಮದುವೆಯಾಗುವ ಸಂದರ್ಭ ಎದುರಾಗಿದೆ.
ಭಾರ್ಗವಿಯನ್ನು ಉರಿದು ಬೀಳುವ ಜಯಪ್ರಕಾಶ್ ಪಾಟೀಲ್ ಈ ಮದುವೆಯ ವಿಷಯ ತಿಳಿದ ನಂತರ ಪ್ರತಿಕ್ರಿಯೆ ಹೇಗಿರುತ್ತೆ? ಬೃಂದಾ ಕೂಡಾ ಅದೇ ಮನೆ ಸೇರುವುದು ಫಿಕ್ಸ್ ಆಗಿರುವ ಹಿನ್ನೆಲೆಯಲ್ಲೇ ಭಾರ್ಗವಿ ಕುಟುಂಬ ಈ ಅನಿರೀಕ್ಷಿತ ಬೆಳವಣಿಗೆಯನ್ನು ಹೇಗೆ ಸ್ವೀಕರಿಸುತ್ತೆ? ಅನ್ನೋದ ಕುತೂಹಲ ಹಂತ ಹಂತವಾಗಿ ರಿವೀಲ್ ಆಗುತ್ತಿದೆ. ಇನ್ನೊಂದು ಕಡೆ ಭಾರ್ಗವಿಯ ಮೊದಲ ಕೋರ್ಟ್ ಪ್ರಕರಣ ಅಂತಿಮ ಹಂತದಲ್ಲಿದೆ. ಜೆಪಿಯನ್ನು ಸೋಲಿಸಲು ಭಾರ್ಗವಿ ಯಶಸ್ವಿಯಾಗುವಳೇ ? ಅನ್ನೋದು ವೀಕ್ಷಕರ ಮುಂದಿದೆ.
ತನ್ನ ವೃತ್ತಿ ಜೀವನದ ಏಳಿಗೆಗಾಗಿ ಭಾರ್ಗವಿ ಕೋರ್ಟ್‌ನಲ್ಲಿ ಕಠಿಣ ಹೋರಾಟ ನಡೆಸಿದ್ದಾಳೆ. ಇದು ಜಯಪ್ರಕಾಶ್ ಪಾಟೀಲ್ ಶ್ರೇಯಸ್ಸಿಗೆ ಹಾನಿಯಾಗಿದೆ. ಇದೇ ವೇಳೆ ಪುತ್ರ ಅರ್ಜುನ್ ಭಾರ್ಗವಿಯನ್ನು ಮದುವೆಯಾಗಿದ್ದಾನೆ. ಜೆಪಿ ಇಷ್ಟಗಳಿಗೆ ವಿರುದ್ಧವಾಗಿ ಅರ್ಜುನ್ ಹೋಗುವ ಕಾರಣ ವೈಯಕ್ತಿಕ ಜೀವನದಲ್ಲೂ ದೊಡ್ಡ ಪೆಟ್ಟು ಕೊಟ್ಟಿದೆ. ಹೀಗಿರುವಾಗ ಜೆಪಿ ವೃತ್ತಿ ಬದುಕಿನಲ್ಲಿ ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಸೊಸೆ ಭಾರ್ಗವಿಯ ವಿರುದ್ಧ ಹೂಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅದಕ್ಕೆ ರೂಪಿಸುವ ರಣತಂತ್ರಗಳೇನು? ಅನ್ನೋದು ಮುಂದಿನ ದಿನಗಳಲ್ಲಿ ಧಾರಾವಾಹಿಗಳಲ್ಲಿ ರಿವೀಲ್ ಆಗುತ್ತಾ ಹೋಗುತ್ತೆ.


Click it and Unblock the Notifications











