'ಯಜಮಾನ' ಧಾರಾವಾಹಿಗೆ ಹೊಸ ಪಾತ್ರ: ಮಾಜಿ ಬಿಗ್ ಬಾಸ್ ಯಮುನಾ ಶ್ರೀನಿಧಿ ಎಂಟ್ರಿ
ಕಿರುತೆರೆಯಲ್ಲಿ ಪ್ರಸಾರ ಆಗುವ ಧಾರಾವಾಹಿಗಳಲ್ಲಿ ಹೊಸ ಹೊಸ ಪಾತ್ರಗಳು ಸೇರ್ಪಡೆಯಾಗುತ್ತಲೇ ಇರುತ್ತವೆ. ಕೆಲವು ಪಾತ್ರಗಳನ್ನು ಅಂತ್ಯ ಮಾಡಲಾಗುತ್ತೆ. ಇನ್ನು ಕೆಲವು ಪಾತ್ರಗಳು ಸರ್ಪ್ರೈಸ್ ಎಂಟ್ರಿ ಕೊಡುತ್ತವೆ. ಹೀಗೇ ಎಂಟ್ರಿ ಕೊಟ್ಟ ಪಾತ್ರಗಳ ಪೈಕಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಯಮುನಾ ಶ್ರೀಧರ್ ಕೂಡ ಒಬ್ಬರು. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಯಜಮಾನ' ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡದಲ್ಲಿ 'ಯಜಮಾನ' ಹಾಗೂ 'ರಾಮಾಚಾರಿ' ಎರಡೂ ಸೀರಿಯಲ್‌ಗಳನ್ನೂ ಸೇರಿಸಿ ಮಹಾ ಮಿಲನ ನಡೆಯುತ್ತಿದೆ. ಎರಡು ಕಥೆಗಳು ಒಟ್ಟೊಟ್ಟಿಗೆ ನಡೆಯುತ್ತಿದೆ. ಇದು ಕಿರುತೆರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಮಜಾ ನೀಡುತ್ತಿದೆ. ಎರಡು ಧಾರಾವಾಹಿಯ ಪಾತ್ರಧಾರಿಗಳು ವೀಕ್ಷಕರಿಗೆ ನಾನಾ ರೀತಿಯಲ್ಲಿ ಕಿಕ್ ಕೊಡುತ್ತಿದ್ದಾರೆ. ಈಗ 'ಯಜಮಾನ' ಸೀರಿಯಲ್‌ನಲ್ಲಿ ಯಮುನಾ ಶ್ರೀಧರ್ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಸೀಸನ್ 11 ಸ್ಪರ್ಧಿಯಾಗಿ ಜನಪ್ರಿಯತೆ ಗಳಿಸಿದ್ದ ನಟಿ ಯಮುನಾ ಶ್ರೀನಿಧಿ ಅವರನ್ನು ಈಗ 'ಯಜಮಾನ' ಕನ್ನಡ ಧಾರಾವಾಹಿಯಲ್ಲಿ ನೋಡಬಹುದು. ಯಮುನಾ ಶ್ರೀಧರ್ ಕೇವಲ ಚಿಕ್ಕ ಪುಟ್ಟ ಪಾತ್ರದಲ್ಲಿ ನಟಿಸುತ್ತಿಲ್ಲ. ಬದಲಾಗಿ, ಈ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಧ್ವನಿ ಹಾಗೂ ಅಭಿನಯದಿಂದ ವೀಕ್ಷಕರನ್ನು ರಂಜಿಸಲಿದ್ದಾರೆ.
ಯಮುನಾ ಶ್ರೀಧರ್ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿರುವುದು 'ಯಜಮಾನ' ಧಾರಾವಾಹಿಗೆ ಹೊಸ ಆಯಾಮ ನೀಡಲಿದೆ. ಅಂದ್ಹಾಗೆ, ಈ ಧಾರಾವಾಹಿಯಲ್ಲಿ ಯಮುನಾ ಅವರು ಸುಮಿತ್ರಾ ಎಂಬ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮಿಂಚುವ ಅಭಿನಯ ಮತ್ತು ಪ್ರತಿಭೆಯಿಂದ ಪ್ರಸಿದ್ಧರಾದ ಯಮುನಾ, ಸುಮಿತ್ರಾ ಪಾತ್ರದ ಮೂಲಕ ಧಾರಾವಾಹಿಗೆ ಹೊಸ ತಿರುವು ನೀಡಲಿದ್ದಾರೆ. ಇನ್ಮುಂದೆ ಈ ಸೀರಿಯಲ್ ಕಥೆ ಕುತೂಹಲ ಮತ್ತು ರೋಮಾಂಚನವನ್ನು ವೀಕ್ಷಕರಿಗೆ ನೀಡಲಿದೆ.
'ಯಜಮಾನ' ಧಾರಾವಾಹಿಯಲ್ಲಿ ಸುಮಿತ್ರಾ ಪಾತ್ರದಲ್ಲಿ ಅಭಿನಯಿಸುತ್ತಿರುವ ಯಮುನಾ -ಕುಟುಂಬದ ಶಾಂತಿ ಮತ್ತು ಏಕತೆಯನ್ನು ಬಲಪಡಿಸುವ ಅವಳ ಸೂಕ್ಷ್ಮ ಸಂವೇದನೆ ಕಥೆಗೆ ಹೊಸ ತಿರುವುಗಳನ್ನು ನೀಡುತ್ತವೆ. ಧಾರಾವಾಹಿಯ ಖಳನಾಯಕಿಯಾದ ತುಳಸಿ, ತನ್ನ ಮಗ ಪ್ರಣವ್ ಜಾನ್ಸಿಯನ್ನು ಮದುವೆಯಾಗಬೇಕೆಂದು ಒತ್ತಾಯಿಸುವ ತುಳಸಿಯ ಯೋಜನೆಗಳು ಪ್ರೇಕ್ಷಕರನ್ನು ಕುತೂಹಲದ ಅಂಚಿನಲ್ಲಿ ಇಡುತ್ತವೆ. ಜೊತೆಗೆ ಜಾನ್ಸಿಯ ತಾಯಿ ಸುಮಿತ್ರಾಳನ್ನು ತುಳಸಿ ಗುಪ್ತವಾಗಿ ಬಂಧಿಸಿರುವುದು ಕಥೆಯ ರೋಚಕತೆ ಮತ್ತು ಭಾವನಾತ್ಮಕ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ತಾಯಿ ಸುಮಿತ್ರಾ ಮಗಳು ಝಾನ್ಸಿಯನ್ನು ಹೇಗೆ ಸೇರುತ್ತಾಳೆ? ಎಂಬುದು ಕಥೆಯ ಸ್ವಾರಸ್ಯ.

ಯಮುನಾ ಶ್ರೀನಿಧಿಯ ಗ್ರ್ಯಾಂಡ್ ಎಂಟ್ರಿಯಿಂದ 'ಯಜಮಾನ' ಧಾರಾವಾಹಿ ಮತ್ತಷ್ಟು ವೀಕ್ಷಕರನ್ನು ಸೆಳೆಯುವುದಕ್ಕೆ ಕಲರ್ಸ್ ಕನ್ನಡ ಸಜ್ಜಾಗಿದೆ. ಯಮುನಾ ಅವರ ಶಕ್ತಿಯುತ ನಟನೆಯೊಂದಿಗೆ, ಹೆಚ್ಚುತ್ತಿರುವ ಕುಟುಂಬ ಸಂಘರ್ಷಗಳು, ಭಾವನಾತ್ಮಕ ಕಥೆ ಹಾಗೂ ತಿರುವು-ಮರುವುಗಳಿಂದ ಕಥೆ ಮುಂದಕ್ಕ ಸಾಗಲಿವೆ. ಹೊಸ ಕಂತುಗಳು ಪ್ರೇಕ್ಷಕರನ್ನು ಕುತೂಹಲದಿಂದ ಕಟ್ಟಿ ಹಾಕಲಿವೆ.
ಸೂಪರ್ ಹಿಟ್ಟಾಗಿದೆ-ರಾಘುವಿನ ಕ್ರೇಜಿ ಲುಕ್
ಸದ್ಯ 'ಯಜಮಾನ'ದಲ್ಲಿ ಜಾನ್ಸಿಗೆ ಅಪಘಾತ ಆದ್ಮೇಲೆ ಅವಳ ನೆನಪಿನ ಶಕ್ತಿಯೇ ಕಳೆದು ಹೋಗಿದೆ. ಅವಳು ರಾಘುವನ್ನೀಗ ಮರೆತಿದ್ದಾಳೆ. ತುಳಸಿ ಸಂಚು ಮಾಡಿರುವುದನ್ನು ತಪ್ಪಿಸಬೇಕಾದ ರಾಘು ಹೊಸ ಲುಕ್‌ನೊಂದಿಗೆ ಬಂದಿರೋದು ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ರಾಘುವಿನ ಈ ಲುಕ್ ಅಪಾರ ಜನಪ್ರಿಯತೆ ಗಳಿಸಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಲರ್ಸ್ ಕನ್ನಡದಲ್ಲಿ 'ಯಜಮಾನ' ಧಾರಾವಾಹಿ ಪ್ರತಿ ಸಂಜೆ 6 ಕ್ಕೆ ಪ್ರಸಾರವಾಗುತ್ತಿದೆ.


Click it and Unblock the Notifications











