"ನಾನು ಫುಲ್ ಟೈಮ್ ಪೊಲಿಟಿಷಿಯನ್.. ಪಾರ್ಟ್ ಟೈಮ್ ಆಕ್ಟರ್"; ಕಿರುತೆರೆಗೆ ಎಂಟ್ರಿ ಕೊಟ್ಟ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ಅವರೇ ನಟಿಸುತ್ತಿದ್ದ ಧಾರಾವಾಹಿಯ ಹೊಸ ವರ್ಷನ್‌ನಲ್ಲಿ ಸ್ಮೃತಿ ಇರಾನಿ ನಟಿಸುತ್ತಿದ್ದಾರೆ. ಸ್ಟಾರ್ ಪ್ಲಸ್ ಇವರ ಪ್ರೋಮೋವನ್ನು ರಿಲೀಸ್ ಮಾಡುತ್ತಿದ್ದಂತೆ ವೀಕ್ಷಕರು ಥ್ರಿಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪ್ರೋಮೋ ವೈರಲ್ ಆಗುತ್ತಿದೆ. ಅಂದ್ಹಾಗೆ ಆ ಧಾರಾವಾಹಿಯ ಹೆಸರು 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ'. ಈ ಧಾರಾವಾಹಿಯ ಎರಡನೇ ಸೀಸನ್‌ನಲ್ಲಿ ಸ್ಮೃತಿ ಇರಾನಿ ನಟಿಸುತ್ತಿದ್ದಾರೆ.
'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಮೊದಲ ಸೀಸನ್ 2000ದಲ್ಲಿ ಆರಂಭ ಆಗಿತ್ತು. 2008ರಲ್ಲಿ ಮುಕ್ತಾಯಗೊಂಡಿತ್ತು. ಈ ಧಾರಾವಾಹಿಯಲ್ಲಿ ಸ್ಮೃತಿ ಇರಾನಿಯವರು ತುಳಸಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದರು. ನೋಡ ನೋಡುತ್ತಿದ್ದಂತೆ ಸ್ಮೃತಿ ಇರಾನಿಯ ಪಾತ್ರ ಜನಪ್ರಿಯವಾಗಿ ಬಿಟ್ಟಿತ್ತು. ಹಿಂದಿ ಮಾತಾನಾಡುವ ಪ್ರತಿಯೊಂದು ಮನೆಯಲ್ಲಿಯೂ ಸ್ಮೃತಿ ಇರಾನಿ ಜನಪ್ರಿಯ ನಟಿಯಾಗಿ ಬಿಟ್ಟರು.

25 ವರ್ಷಗಳ ಹಿಂದೆ ಕಿರುತೆರೆಯಲ್ಲಿ ಆರಂಭವಾಗಿದ್ದ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಸ್ಮೃತಿ ಇರಾನಿ ಹೊಸ ಇಮೇಜ್ ಕೊಟ್ಟಿತ್ತು. ನಟಿಯಿಂದ ರಾಜಕಾರಣದವರೆಗೂ ಕರೆದುಕೊಂಡು ಬಂದು ನಿಲ್ಲಿಸಿತ್ತು. ಈಗ ಮತ್ತೆ ಅದೇ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ'ಯ ಸೀಸನ್ 2ನಲ್ಲಿ ನಟಿಸುತ್ತಿದ್ದಾರೆ. ಈ ನಿರ್ಧಾರದ ಬಗ್ಗೆ ಸ್ಮೃತಿ ಇರಾನಿ ಎನ್‌ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತನ್ನ ನಡೆಯ ಬಗ್ಗೆ ಕ್ಲಾರಿಟಿಯನ್ನು ಕೊಟ್ಟಿದ್ದಾರೆ. ಮಾಜಿ ಕೇಂದ್ರ ಸಚಿವೆಯ ಈ ನಿರ್ಧಾರದ ಹಿಂದಿನ ಗುಟ್ಟೇನು ತಿಳಿಯುವುದಕ್ಕೆ ಮುಂದೆ ಓದಿ.
ಹಿಂದಿ ಕಿರುತೆರೆಯ ಲೆಜೆಂಡ್ ಏಕ್ತಾ ಕಪೂರ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಈ ಮೂಲಕ ಮತ್ತೆ ಏಕ್ತಾ ಕಪೂರ್ ಹಾಗೂ ಸ್ಮೃತಿ ಇರಾನಿ ಇಬ್ಬರೂ ಒಂದಾಗಿದ್ದಾರೆ. ಈ ಜೋಡಿ ಮತ್ತೆ ಕಿರುತೆರೆಯಲ್ಲಿ ಅದ್ಯಾವ ಮಟ್ಟಿಗೆ ಮೋಡಿ ಮಾಡುತ್ತೆ ಎನ್ನುವುದನ್ನು ಸಿನಿಮಾ ಮಂದಿ ಹಾಗೂ ರಾಜಕೀಯರ ಮುಖಂಡರು ಎದುರು ನೋಡುತ್ತಿದ್ದಾರೆ. ಅಸಲಿಗೆ ದಿಢೀರನೇ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇ ಹಲವರಲ್ಲಿ ಆಶ್ಚರ್ಯ ಮೂಡಿಸಿದೆ.
ಈ ವೇಳೆ ಎನ್‌ಡಿಟಿವಿಗೆ ಪ್ರತಿಕ್ರಿಯೆ ನೀಡಿರುವ ಸ್ಮೃತಿ ಇರಾನಿಗೆ ಮತ್ತೆ ನಟನೆಯ ಮರಳುತ್ತಿರುವಾಗ ಭಯ ಆಗುತ್ತಿದೆಯೇ? ಎಂದು ಪ್ರಶ್ನೆ ಮಾಡಲಾಗಿತ್ತು. " ನಾನೊಬ್ಬರು ರಾಜಕಾರಣಿ. ನೀವು ಕೇಳುವ ಪ್ರಶ್ನೆ ನನ್ನನ್ನು ಎಂದಿಗೂ ಭಯ ಬೀಳಿಸುವುದಿಲ್ಲ. ನಾನೊಬ್ಬರು ಫುಲ್ ಟೈಮ್ ಪೊಲಿಟಿಷಿಯನ್.. ಪಾರ್ಟ್ ಟೈಮ್ ಆಕ್ಟರ್" ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಹಾಗೇ ನಟನೆ ಹಾಗೂ ರಾಜಕಾರಣ ಎರಡನ್ನೂ ಜೊತೆ ಜೊತೆಯಾಗಿಯೇ ನಿಭಾಯಿಸುವುದಾಗಿಯೂ ಹೇಳಿಕೊಂಡಿದ್ದಾರೆ.
"ಬೇರೆ ರಾಜಕೀಯ ಮುಖಂಡರು ಪಾರ್ಟ್ ಟೈಮ್ ಲಾಯರ್‌ಗಳಾಗಿದ್ದಾರೆ, ಪಾರ್ಟ್ ಟೈಮ್ ಟೀಚರ್‌ಗಳಾಗಿದ್ದಾರೆ, ಪಾರ್ಟ್ ಟೈಮ್ ಪತ್ರಕರ್ತರಾಗಿದ್ದಾರೆ. ಅವರಂತೆ ನಾನು ಪಾರ್ಟ್ ಟೈಮ್ ನಟಿಯಾಗಿದ್ದೇನೆ. ನಾನು ಇದನ್ನು ಹಲವು ಬಾರಿ ಮಾಡಿದ್ದಾನೆ. ಹಾಗಾಗಿ ಇದನ್ನು ಒಪ್ಪಿಕೊಳ್ಳುವುದು ಕಷ್ಟವೆಂದು ನಾನು ಭಾವಿಸುತ್ತೇನೆ. ನಾನು ಹೇಳಿದಂತೆ ನನಗೂ ಅವರಿಗೂ ಇರುವ ವ್ಯತ್ಯಾಸವೆಂದರೆ, ಅವರ ಮಾಡುವ ಕೆಲಸದಲ್ಲಿ ಕ್ಯಾಮರಾಮ್ಯಾನ್, ಮೇಕಪ್ ಆರ್ಟಿಸ್ಟ್, ಸ್ಕ್ರಿಪ್ಟ್ ರೈಟರ್ಸ್ ಇರುವುದಿಲ್ಲ." ಎಂದು ಸ್ಕೃತಿ ಇರಾನಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











