ಈ ಬಾರಿ ಜೀ ಕನ್ನಡದ 'ಗೋಲ್ಡನ್ ಗ್ಯಾಂಗ್'ನಲ್ಲಿ ಶೆಟ್ರು ಗ್ಯಾಂಗ್: ರಕ್ಷಿತ್, ರಿಷಬ್, ರಾಜ್ ಬಿ ಶೆಟ್ಟಿ ಕಹಾನಿ

ಕಿರುತೆರೆಯ ಇತಿಹಾಸದಲ್ಲಿ ಸ್ನೇಹಿತರಿಗಾಗಿಯೇ ಆರಂಭ ಆಗಿರುವ ವಿಶೇಷ ಕಾರ್ಯಕ್ರಮ 'ಗೋಲ್ಡನ್ ಗ್ಯಾಂಗ್'. ಜೀ ಕನ್ನಡ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಕನ್ನಡ ಚಿತ್ರರಂಗ ಹಾಗೂ ಕಿರುತೆರೆಗೆ ಸಂಬಂಧಿಸಿದ ತಾರೆಯರ ಸ್ನೇಹವನ್ನು ಕಿರುತೆರೆಗೆ ಪರಿಚಯಿಸುವುದೇ ವಿನೂತನ ಕಾರ್ಯಕ್ರಮ 'ಗೋಲ್ಡನ್ ಗ್ಯಾಂಗ್'. ತಾರೆಯರ ಸ್ನೇಹ ಅವರ ನಲಿವು, ನೋವುಗಳು, ತುಂಟಾಟ, ಸವಿ ನೆನೆಪುಗಳನ್ನು ಈ ವಿಭಿನ್ನ ಕಾರ್ಯಕ್ರಮದಲ್ಲಿ ಪರಿಚಯಿಸಲಿದೆ. ಈ ಬಾರಿ ಈ ಕಾರ್ಯಕ್ರಮದ ಅತಿಥಿಗಳು ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದೆ.

'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮದಲ್ಲಿ ಈಗಾಗಲೇ ಕನ್ನಡ ಚಿತ್ರರಂಗ ತಾರೆಯರು ಆಗಮಿಸಿ ಮನರಂಜನೆ ನೀಡಿದ್ದಾರೆ. ತಮ್ಮ ಸ್ನೇಹದ ಬಗ್ಗೆ ವೀಕ್ಷಕರಿಗೆ ತಿಳಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆ, ತಾರೆಯರ ಸ್ನೇಹಲೋಕ ಪ್ರೇಕ್ಷಕರ ಮನಗೆಲ್ಲುತ್ತಿದೆ. ಈ ಬಾರಿ ಈ ಗೋಲ್ಡನ್ ಅಡ್ಡಾದಲ್ಲಿ ಅತಿಥಿಗಳಾಗಿ ಶೆಟ್ರು ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಈಗಾಗಲೇ ಶೂಟಿಂಗ್ ಆರಂಭ ಆಗಿದ್ದು, ಈ ವೀಕೆಂಡ್‌ನಲ್ಲಿ ಪ್ರಸಾರ ಆಗಲಿದೆ ಎನ್ನಲಾಗಿದೆ.

 'ಗೋಲ್ಡನ್ ಗ್ಯಾಂಗ್‌'ನಲ್ಲಿ ಶೆಟ್ರು ಗ್ಯಾಂಗ್

'ಗೋಲ್ಡನ್ ಗ್ಯಾಂಗ್‌'ನಲ್ಲಿ ಶೆಟ್ರು ಗ್ಯಾಂಗ್

ಜೀ ಕನ್ನಡದ ಗೋಲ್ಡನ್ ಗ್ಯಾಂಗ್‌ನಲ್ಲಿ ಈ ವಾರಾಂತ್ಯಕ್ಕೆ ಶೆಟ್ರು ಗ್ಯಾಂಗ್ ಕಾಣಿಸಿಕೊಳ್ಳಲಿದೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಈ ಮೂವರೂ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಮೂವರ ಫೋಟೊವೊಂದು ಶೇರ್ ಆಗಿದ್ದು, ಗೋಲ್ಡನ್ ಗ್ಯಾಂಗ್ ಅಡ್ಡಾದಲ್ಲಿ ಈ ವೀಕೆಂಡ್‌ನಲ್ಲಿ ಹಾವಳಿ ಇಡುವುದು ಪಕ್ಕಾ. ಮೂವರು ಶೆಟ್ರು ವೀಕ್ಷಕರಿಗೆ ಯಾವ ರೀತಿ ಮಜಾ ನೀಡುತ್ತಾರೆ ಎನ್ನುವ ಕುತೂಹಲವಿದೆ.

ರಕ್ಷಿತ್, ರಿಷಬ್ ಹಾಗೂ ರಾಜ್ ಸ್ನೇಹಲೋಕ

ಗೋಲ್ಡನ್ ಅಡ್ಡಾದಲ್ಲಿ ರಕ್ಷಿತ್ ಶೆಟ್ಟಿ, ರಾಜ್‌ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟು ಎಂಟ್ರಿಕೊಟ್ಟಿದ್ದಾರೆ. ಈ ಕಾರ್ಯಕ್ರಮದ ಶೂಟಿಂಗ್ ಮುಗಿದಿದ್ದು, ಈ ವೀಕೆಂಡ್‌ನಲ್ಲಿ ಪ್ರಸಾರ ಆಗಲಿದೆ. ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಈ ಮೂವರು ಸ್ಟಾರ್‌ಗಳು ತಮ್ಮದೇ ಚಾಪು ಮೂಡಿಸಿದ್ದಾರೆ. ಹೀಗಾಗಿ ರಕ್ಷಿತ್, ರಿಷಬ್ ಹಾಗೂ ರಾಜ್ ಬಿ ಶೆಟ್ಟಿ ಸ್ನೇಹಲೋಕದ ಅನಾವರಣ ಆಗಲಿದೆ. ಒಂದಿಷ್ಟು ತುಂಟಾಟ, ಬಾಲ್ಯದ ನೆನೆಪು, ಮೂವರ ಸ್ನೇಹ, ಆಟ, ಮೋಜು-ಮಸ್ತಿಯನ್ನು ನಿರೀಕ್ಷೆ ಮಾಡಬಹುದು.

 ಮೂವರು ಶೆಟ್ರು ಫುಲ್ ಬ್ಯುಸಿ

ಮೂವರು ಶೆಟ್ರು ಫುಲ್ ಬ್ಯುಸಿ

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಈ ಮೂವರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಇಬ್ಬರ ಸಿನಿಮಾ 'ಗರುಡ ಗಮನ ವೃಷಭ ವಾಹನ' ಈ ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಥಿಯೇಟರ್, ಒಟಿಟಿ ಎರಡಲ್ಲೂ ಧೂಳೆಬ್ಬಿಸಿದೆ. ಈ ಮಧ್ಯೆ ರಕ್ಷಿತ್ ಶೆಟ್ಟಿ 'ಚಾರ್ಲಿ 777' ಸೆನ್ಸಾರ್ ಆಗಿದ್ದು ಬಿಡುಗಡೆ ಸಿದ್ಧವಾಗಿದೆ. ಇನ್ನೊಂದು ಕಡೆ ಸಪ್ತಸಾಗರದಾಚೆ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಹೀಗಾಗಿ ಈ ಶೆಟ್ರು ಗ್ಯಾಂಗ್ ಸಿಕ್ಕಾಪಟ್ಟೆ ಖುಷಿಯಾಗಿದೆ.

 'ಗೋಲ್ಡನ್ ಗ್ಯಾಂಗ್‌'ನಲ್ಲಿ ಮಹಾ ಸಂಗಮ

'ಗೋಲ್ಡನ್ ಗ್ಯಾಂಗ್‌'ನಲ್ಲಿ ಮಹಾ ಸಂಗಮ

ಈಗಾಗಲೇ 'ಗೋಲ್ಡನ್ ಗ್ಯಾಂಗ್'ನಲ್ಲಿ ಶರಣ್, ತರುಣ್ಮ ನೆನಪಿರಲಿ ಪ್ರೇಮ್ ಅತಿಥಿಗಳಾಗಿ ಮೊದಲ ಎಪಿಸೋಡ್‌ನಲ್ಲಿ ಬಂದು ಹೋಗಿದ್ದಾರೆ. ಇವರ ಹಿಂದೆನೇ 'ಮುಂಗಾರು ಮಳೆ' ತಂಡ ಎಂಟ್ರಿ ಕೊಟ್ಟಿತ್ತು. ಬಳಿಕ ಡಾಲಿ ಧನಂಜಯ್, ವಸಿಷ್ಠ ಸಿಂಹ, ಅಮೃತಾ ಅಯ್ಯಂಗಾರ್ ಸೇರಿದಂತೆ 'ಬಡವ ರಾಸ್ಕಲ್' ತಂಡ ಎಂಟ್ರಿಯಾಗಿತ್ತು. ಈ ಬಾರಿ ಶೆಟ್ರು ಗ್ಯಾಂಗ್ ಎಂಟ್ರಿ ಕೊಡಲಿದೆ. ಹೀಗಾಗಿ ಈ ವೀಕೆಂಡ್‌ನಲ್ಲಿ ಭರ್ಜರಿ ಮನರಂಜನೆ ಸಿಗುವುದು ಫಿಕ್ಸ್.

More from Filmibeat

English summary
Ganesh hosted zee kannada new show Golden Gang this weekend guest Rakshit Rishab Raj B Shetty. This program is all about celebrities friends and friendship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X