"ನಾವು ನಾವೇ ಮದುವೆ ಆಗೋಣ ಅಂತೆಲ್ಲ ಯೋಚನೆ ಮಾಡಿದ್ವಿ"; 'ಗಟ್ಟಿಮೇಳ' ನಟಿಯರು ಯಾಕೀ ನಿರ್ಧಾರ ಮಾಡಿದ್ರು?

'ಗಟ್ಟಿಮೇಳ' ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಈ ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿತ್ತು. ಈ ಧಾರಾವಾಹಿಯಲ್ಲಿ ಅಮೂಲ್ಯ ಪಾತ್ರದಲ್ಲಿ ನಿಶಾ ರವಿಕೃಷ್ಣನ್ ನಟಿದ್ದರು. ಹಾಗೇ ಆದ್ಯ ಪಾತ್ರದಲ್ಲಿ ಅನ್ವಿತಾ ಸಾಗರ್ ಕಾಣಿಸಿಕೊಂಡಿದ್ದರು.

'ಗಟ್ಟಿಮೇಳ' ಧಾರಾವಾಹಿಯಲ್ಲಿ ಇವರಿಬ್ಬರ ಪಾತ್ರಗಳು ಆತ್ಮೀಯತೆಯಿಂದ ಇದ್ದವು. ಹಾಗಂತ ಇವರಿಬ್ಬರು ಕೇವಲ ಕಿರುತೆರೆಯಲ್ಲಷ್ಟೇ ಅಲ್ಲ. ತೆರೆ ಹಿಂದೆ ಕೂಡ ಅಷ್ಟೇ ಆತ್ಮೀಯರಾಗಿದ್ದಾರೆ. ಅನ್ವಿತಾ ಸಾಗರ್ ಹಾಗೂ ನಿಶಾ ರವಿಕೃಷ್ಣನ್ ಇಬ್ಬರೂ ಕಿರುತೆರೆಯ ಉತ್ತಮ ಗೆಳತಿಯರು ಅನ್ನೋದು ಅವರ ಅಭಿಮಾನಿಗಳಿಗೆ ಗೊತ್ತು.

Gattimela actress Anivitha Sagar and Nisha Ravikrishnan s statement about marrying together goes viral

ಅನ್ವಿತಾ ಸಾಗರ್ ಅವರದ್ದು ಯೂಟ್ಯೂಬ್ ಚಾನೆಲ್‌ ಇದೆ. ಇದರಲ್ಲಿ ಆಗಾಗ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ಅನ್ವಿತಾ ಸಾಗರ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಗೆಳತಿಯರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರಿಬ್ಬರೂ ಮದುವೆ ಆಗಿ ಬಿಡೋಣ ಅಂತ ನಿರ್ಧರಿಸಿದ್ದನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈ ನಿರ್ಧಾರ ಯಾಕೆ? ಇಬ್ಬರೂ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಅನ್ವಿತಾ ಸಾಗರ್ ಹಾಗೂ ನಿಶಾ ರವಿಕೃಷ್ಣನ್ ಇಬ್ಬರೂ ಕಿರುತೆರೆ ಮೂಲಕ ಆತ್ಮೀಯರಾದರು. ಅಂದಿನಿಂದ ಇಂದಿನವರೆಗೂ ಗೆಳತಿಯರಾಗಿದ್ದಾರೆ. ಆ ವೇಳೆ ಇಬ್ಬರೂ ಮದುವೆ ಆಗಿಬಿಡೋಣ ಅಂತ ನಿರ್ಧರಿಸಿದ್ದರಂತೆ. "ಆರಂಭದಲ್ಲೇ ಹೇಳಿದ ಹಾಗೆ ಅಕ್ಕ ಅಕ್ಕ ಅನ್ನುವುದರಿಂದ ಶುರುವಾಗಿದ್ದು, ಇವತ್ತು ಬೀಪ್ ಬೀಪ್‌ವರೆಗೂ ಬಂದಿದೆ. ನಾವು ಏನೇನೋ ಯೋಚನೆ ಮಾಡಿದ್ವಿ. ನಾವು ನಾವೇ ಮದುವೆ ಆಗೋಣ ಅಂತೆಲ್ಲ ಯೋಚನೆ ಮಾಡಿದ್ವಿ." ಎಂದು ನಿಶಾ ರವಿಕೃಷ್ಣ ಹೇಳಿಕೊಂಡಿದ್ದರು.

ಹಾಗಂತ ನಾವಿಬ್ಬರೂ ಆ ತರ ಅಲ್ಲ ಅಂತನೂ ಹೇಳಿಕೊಂಡಿದ್ದು, ಯಾಕೆ ಮದುವೆ ಆಗುವುದಕ್ಕೆ ನಿರ್ಧಾರ ಮಾಡಿದ್ವಿ ಅನ್ನೋದನ್ನು ನಟಿ ಅನ್ವಿತಾ ಸಾಗರ್ ರಿವೀಲ್ ಮಾಡಿದ್ದಾರೆ. "ಆ ಯೋಚನೆ ಇನ್ನೂ ಇದೆ. ಇಲ್ಲಾ ಅಂತಲ್ಲ. ಲುಕ್.. ನಾವು ಆ ತರ ಅಲ್ಲ. ಸತ್ಯ ಹೇಳುತ್ತಿದ್ದೇವೆ. ನಾವಿಬ್ಬರೂ ನಿಜವಾಗೂ ಆ ತರ ಅಲ್ಲ. ನಾನು ಅವಳನ್ನು ಹೀಗೆ ಹಿಡ್ಕೊಂಡು ಕೂಡ ಮಲಗಲ್ಲ. ಈ ಮದುವೆಗೆ ನಿನ್ನ ಫ್ಯಾಮಿಲಿನೂ ಒಪ್ಪಿಕೊಳ್ಳುತ್ತಾರೆ. ನನ್ನ ಫ್ಯಾಮಿಲಿನೂ ಒಪ್ಪಿಕೊಳ್ಳುತ್ತಾರೆ. ಯಾಕಂದ್ರೆ, ನಮ್ಮನ್ನು ಮಕ್ಕಳು ಅಂತ ಒಪ್ಪಿಕೊಂಡು ಆಗಿ ಹೋಗಿದೆ." ಎಂದು ಅನ್ವಿತಾ ಸಾಗರ್ ಹೇಳಿದ್ದಾರೆ.

Gattimela actress Anivitha Sagar and Nisha Ravikrishnan s statement about marrying together goes viral

ಮದುವೆ ಆದ್ಮೇಲೆ ಇಬ್ಬರೂ ಖುಷಿಯಾಗಿ ಆರಾಮಾಗಿ ಇರುಬಹುದು ಎಂಬುದು ಇವರ ಆಲೋಚನೆಯಾಗಿತ್ತು. ಇಬ್ಬರ ಫ್ರೀಡಂಗೆ ತೊಂದರೆ ಆಗುವುದಿಲ್ಲ ಎಂದಿದ್ದಾರೆ. "ಸೋ ಮದುವೆ ಆಗೋಣ ಖುಷಿಯಾಗಿ ಇರುತ್ತೇವೆ. ನಿನ್ನನ್ನು ನಾನು ಫ್ರೀಯಾಗಿ ಬಿಡುತ್ತೇನೆ. ನನ್ನನ್ನೂ ನೀನು ಫ್ರೀಯಾಗಿ ಬಿಡು. ಆರಾಮಾಗಿ ಜಾಲಿ ಮಾಡಿಕೊಂಡು ಇರೋಣ ಅಂತ ಅಂದ್ಕೊಂಡಿದ್ವಿ" ಅನ್ವಿತಾ ಸಾಗರ್ ಯೂಟ್ಯೂನ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಅನ್ವಿತಾ ಸಾಗರ್ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮಿಬ್ಬರ ಬಾಂಡಿಂಗ್‌ ಬಗ್ಗೆನೂ ಮಾತಾಡಿಕೊಂಡಿದ್ದಾರೆ. "ಇಷ್ಟೊಂದು ಬಾಂಡಿಂಗ್ ಇರುತ್ತೆ ಅಂದ್ಕೊಂಡಿರಲಿಲ್ಲ. ನಾವು ಪ್ರತಿದಿನನೂ ಮಾತಾಡಲ್ಲ. ಪ್ರತಿದಿನ ಮಾತಾಡಬೇಕು ಅಂತ ನಮಗೇನು ಅನಿಸಲ್ಲ. ಯಾವಾಗ ಮಾತಾಡಿದರೂ ಆ ಬಾಂಡಿಂಗ್ ಇದ್ದೇ ಇರುತ್ತೆ. ಅದೇ ನನಗೊಂತರ ಇಷ್ಟ. ಇವಳು ಯಾರ ಜೊತೆನೋ ಹೋದ ತಕ್ಷಣ ಅಸೂಯೆ ಮೂಡಲ್ಲ. ನನಗೂ ಏನೂ ಅನಿಸಲ್ಲ. ಅವಳಿಗೂ ಏನೂ ಅನಿಸಲ್ಲ. ಫ್ರೆಂಡ್‌ಶಿಪ್‌ನಲ್ಲಿ ನೋಡಿದ್ದೇನೆ. ಹಂಗೆ ಹಿಂಗೆ ಅಂತೆಲ್ಲ ಬರುತ್ತೆ. ಆದರೆ, ನಮಗೆ ಯಾವಾಗಲೂ ಹಾಗೆ ಆಗಿಲ್ಲ." ನಟಿ ನಿಶಾ ರವಿಕೃಷ್ಣನ್ ತಮ್ಮಿಬ್ಬರ ಬಾಂಡಿಂಗ್ ಬಗ್ಗೆ ರಿವೀಲ್ ಮಾಡಿದ್ದಾರೆ.

More from Filmibeat

English summary
Gattimela actress Anivitha Sagar and Nisha Ravikrishnan about marriage goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X