For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ಚೆಲ್ಲಾಟದ ಚೆಲುವನ 'ಗೋಲ್ಡನ್ ಗ್ಯಾಂಗ್': ಈ ಶೋ ರಿಯಾಲಿಟಿ ಏನು?

  |

  ಗೋಲ್ಡನ್ ಸ್ಟಾರ್ ಗಣೇಶ್ ಕಾಮಿಡಿ ಮಾಡುವುದರಲ್ಲಿ ಎತ್ತಿದ ಕೈ. ಇವರ ಕಾಮಿಡಿ ಟೈಮಿಂಗ್‌ಗೆ ಸಖತ್ತಾಗಿದೆ. ಇತ್ತೀಚೆಗೆ ರಿಲೀಸ್ ಆಗಿರುವ 'ಸಖತ್' ಸಿನಿಮಾ ನೋಡಿದವರೂ ಕೂಡ ಗಣೇಶ್ ಕಾಮಿಡಿ ಟೈಮಿಂಗ್‌ಗೆ ಫುಲ್ ಫಿದಾ ಆಗಿದ್ದಾರೆ. ಈ ಮಧ್ಯೆ ಗೋಲ್ಡನ್ ಸ್ಟಾರ್ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿಯೊಂದಿದೆ. ಸಿನಿಮಾ ಜೊತೆ ಜೊತೆಗೆ ರಿಯಾಲಿಟಿ ಶೋಗೆ ಮತ್ತೆ ಮರಳಿರುವ ಗಣೇಶ್ ಒಂದೇ ಪ್ರೋಮೊದಿಂದ ಕಿಕ್ ಕೊಡುತ್ತಿದ್ದಾರೆ.

  ಗೋಲ್ಡನ್ ಸ್ಟಾರ್‌ ಗಣೇಶ್‌ಗೆ ಕಿರುತೆರೆ ಹೊಸದೇನಲ್ಲಾ. ಇಲ್ಲಿಂದಲೇ ಗಣೇಶ್ ವೃತ್ತಿ ಜೀವನ ಆರಂಭ ಆಗಿತ್ತು. ಸಿನಿಮಾದಲ್ಲಿ ಬ್ಯುಸಿಯಾಗಿದ್ದಾಗಲೂ ಆಗಾಗ ಕಿರು ತೆರೆಯಲ್ಲಿ ರಿಯಾಲಿಟಿ ಶೋ ಮೂಲಕ ಜನರ ರಂಜಿಸಿದ್ದಾರೆ. ಈಗ ಸಮಯ ಉರುಳಿದೆ. ಕಾಲ ಬದಲಾಗಿದೆ. ಬ್ಯುಸಿ ಲೈಫ್‌ನಲ್ಲಿ ಸ್ನೇಹಿತರು ದೂರ ಆಗಿದ್ದಾರೆ. ಈ ಸ್ನೇಹಿತರನ್ನು ಒಗ್ಗೂಡಿಸುವ ವಿನೂತನ ಶೋನಲ್ಲಿ ಗೋಲ್ಡನ್ ಸ್ಟಾರ್ ಗೋಲ್ಡನ್ ಡೇಸ್‌ಗಳನ್ನು ಮೆಲುಕು ಹಾಕಲಿದ್ದಾರೆ.

  ಜೀ ಕನ್ನಡದಲ್ಲಿ ಚೆಲ್ಲಾಟದ ಚೆಲುವನ 'ಗೋಲ್ಡನ್ ಗ್ಯಾಂಗ್' ಕಥೆಯೇನು?

  ಮುಗುಳುನಗೆ ಹುಡುಗನ 'ಗೋಲ್ಡನ್ ಗ್ಯಾಂಗ್'

  ಮುಗುಳುನಗೆ ಹುಡುಗನ 'ಗೋಲ್ಡನ್ ಗ್ಯಾಂಗ್'

  ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಶೋ ನಿರೂಪಣೆ ಮಾಡಲಿದ್ದು, ಸಖತ್ ಥ್ರಿಲ್ಲಿಂಗ್ ಆಗಿರುತ್ತೆ. ಯಾಕಂದ್ರೆ, ಹಳೆ ನೆನಪುಗಳನ್ನು ಮೆಲುಕು ಹಾಕುವ ಶೋ.. ಹಾಗಂತ ಟಾಕ್ ಶೋ ಅಲ್ಲ, ಇದೊಂದು ಪಕ್ಕಾ ಗೇಮ್ ಶೋ. ಜೀ ಕನ್ನಡ ಜೊತೆ ಹೊಸ ಸಂಬಂಧವನ್ನು ಸಂಭ್ರಮಿಸಲು ಸಜ್ಜಾಗಿರುವ ಗೋಲ್ಡನ್ ಸ್ಟಾರ್ 'ಗೋಲ್ಡನ್ ಗ್ಯಾಂಗ್ ' ಎಂಬ ಅಪರೂಪದ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನತೆಯನ್ನು ಹೊಸ ಲೋಕಕ್ಕೆ ಕರೆದೊಯ್ಯಲು ವೇದಿಕೆ ಸಜ್ಜಾಗಿದೆ.

  ಚಡ್ಡಿ ದೋಸ್ತ್‌ಗಳನ್ನು ಸೇರಿಸುವ ಶೋ

  ಚಡ್ಡಿ ದೋಸ್ತ್‌ಗಳನ್ನು ಸೇರಿಸುವ ಶೋ

  'ಗೋಲ್ಡನ್ ಗ್ಯಾಂಗ್' ರಿಯಾಲಿಟಿ ಶೋನಲ್ಲಿ ಬಾಲ್ಯದಲ್ಲಿದ್ದ ಚಡ್ಡಿ ಗ್ಯಾಂಗ್ , ತರ್ಲೆ ಗ್ಯಾಂಗ್ , ಪೋಲಿ ಗ್ಯಾಂಗ್ ಪರಿಚಯಿಸುವ ವಿನೂತನ ಶೋ. ಬಳಿಕ ಕಾಲೇಜಿಗೆ ಹೋದಾಗ ಬಂಕ್ ಗ್ಯಾಂಗ್ , ಲಾಸ್ಟ್ ಬೆಂಚ್ ಗ್ಯಾಂಗ್ ಒಂದೆರಡು ಗ್ಯಾಂಗ್‌ಗಳಲ್ಲ. ಈ ಎಲ್ಲಾ ಗ್ಯಾಂಗ್‌ಗಳನ್ನು ಒಂದೇ ವೇದಿಕೆ ಮೇಲೆ ಸೇರಿಸಿ, ಮಸ್ತ್ ಆಗಿರುವ ಆಟಗಳನ್ನು ಆಡಿಸುತ್ತಾ, ಅವರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ವಿನೂತನ ಶೋ ಗೋಲ್ಡನ್ ಗ್ಯಾಂಗ್.

  ಯಾರಿಗಾಗಿ ಈ 'ಗೋಲ್ಡನ್ ಗ್ಯಾಂಗ್‌'?

  ಯಾರಿಗಾಗಿ ಈ 'ಗೋಲ್ಡನ್ ಗ್ಯಾಂಗ್‌'?

  ಕನ್ನಡದ ಹಿರಿತೆರೆ ಹಾಗೂ ಕಿರುತೆರೆಯ ಕಲಾವಿದರ ಗ್ಯಾಂಗ್‌ಗಳು ಗಣೇಶ್ ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಶೋನಲ್ಲಿ ಭಾಗವಹಿಸಲಿದ್ದಾರೆ. ಈಗ ನಿಮ್ಮ ನೆಚ್ಚಿನ ಕಲಾವಿದರ ಗ್ಯಾಂಗ್ ಹೇಗಿದೆ? ಅವರ ತರಲೆ ದಿನಗಳು ಹೇಗಿತ್ತು? ಎಂದು ನೋಡಿ ಎಂಜಾಯ್ ಮಾಡುವ ಸಮಯ ಹತ್ತಿರವಿದೆ. ಇತ್ತೀಚೆಗೆ ಈ ಗೋಲ್ಡನ್ ಗ್ಯಾಂಗ್ ಪ್ರೋಮೊವನ್ನು ಜೀ ಕನ್ನಡ ರಿಲೀಸ್ ಮಾಡಿತ್ತು. ಅದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದಂತೆ, ಇದೀಗ ಎರಡನೇ ಪ್ರೊಮೋ ರಿಲೀಸ್ ಮಾಡಿ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲದೆ ಕನ್ನಡಿಗರನ್ನು ರಂಜಿಸಲು ಕನ್ನಡದ ಅಪರೂಪದ 'ಗೋಲ್ಡನ್ ಗ್ಯಾಂಗ್'ಗಳು ತಯಾರಾಗಿವೆ.

  ಯಾವಾಗ ಶೋ ಗೋಲ್ಡನ್ ಗ್ಯಾಂಗ್ ಶೋ ಆರಂಭ?

  ಯಾವಾಗ ಶೋ ಗೋಲ್ಡನ್ ಗ್ಯಾಂಗ್ ಶೋ ಆರಂಭ?

  ಗೋಲ್ಡನ್ ಸ್ಟಾರ್ ಗಣೇಶ್ ಬೆಳ್ಳಿತರೆ ಹಾಗೂ ಕಿರುತರೆಯಲ್ಲೂ ಛಾಪು ಮೂಡಿಸಿದವರು. ಈ 'ಗೋಲ್ಡನ್ ಗ್ಯಾಂಗ್' ಶೋನಲ್ಲಿ ಬಾಲ್ಯ , ಯೌವ್ವನದ ತುಂಟಾಟ, ಕುಚೇಷ್ಟೆ ದಿನಗಳ ಸವಿನೆನಪನ್ನು ಮೆಲುಕು ಹಾಕುತ್ತಾ, ಆಟಗಳನ್ನು ಆಡಿಸುತ್ತಾ ಕಲಾವಿದರ ಆ ದಿನಗಳನ್ನು ಗಣೇಶ್ ಪರಿಚಯಿಸಲಿದ್ದಾರೆ. ಈ ಶೋವನ್ನು ಅತಿ ಶೀಘ್ರದಲ್ಲಿ ಜೀ ಕನ್ನಡ ಆರಂಭಿಸಲಿದೆ.

  English summary
  Golden star Ganesh re-entry to the reality show creating sensation. He will reunite with old friends in his new reality show Golden gang which will telecast in Zee Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X