Bhargavi LLB:ಅಪಾಯದಲ್ಲಿರೋ ಭಾರ್ಗವಿ ರಕ್ಷಿಸಲು ಬಂದ ಗೌತಮಿ ಜಾದವ್; ಚಕ್ರವ್ಯೂಹ ಭೇದಿಸುತ್ತಾರಾ ಸಿಂಧೂರಿ?
ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಮೇಲೆ ಸ್ಪರ್ಧಿಗಳು ಹೊಸ ಪ್ರಾಜೆಕ್ಟ್‌ಗಳ ಮುಖ ಮಾಡಿದ್ದರು. ಸಿನಿಮಾ, ಸೀರಿಯಲ್ ಅಂತ ಗಮನ ಹರಿಸಿದ್ದಾರೆ. ಆದರೆ, ಗೌತಮಿ ಜಾದವ್ ಮಾತ್ರ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಸುಳಿವನ್ನು ನೀಡಿರಲಿಲ್ಲ. ಜೀ ಕನ್ನಡದ 'ಸತ್ಯ' ಧಾರಾವಾಹಿಯ ಬಳಿಕ ನೇರವಾಗಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಗೌತಮಿ ಗೆಲ್ಲುವುದಕ್ಕೆ ಆಗದೇ ಇದ್ದರೂ ಅಲ್ಲೂ ಮಿಂಚಿದ್ದರು.
ಬಿಗ್ ಬಾಸ್ ಅಂತಹ ರಿಯಾಲಿಟಿ ಶೋನಲ್ಲಿ ಮಿಂಚಿ ಬಂದ್ಮೇಲೂ ಗೌತಮಿ ಜಾದವ್ ಸೈಲೆಂಟ್ ಆಗಿಯೇ ಇದ್ದರು. ಆಗಾಗ ಪತಿಯೊಂದಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದು ಬಿಟ್ಟರೆ, ಮತ್ತೊಬ್ಬ ಸ್ಪರ್ಧಿ ಧನರಾಜ್ ಮನೆಗೆ ಪತಿಯೊಂದಿಗೆ ಹೋಗಿ ಬಂದಿದ್ದರು. ಅಷ್ಟು ಬಿಟ್ಟರೆ, ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಸುಳಿವನ್ನು ನೀಡಿರಲಿಲ್ಲ. ಕೊನೆಗೂ ಗೌತಮಿ ತಮ್ಮ ಅಭಿಮಾನಿಗಳ ಮುಂದೆ ಬಂದೇ ಬಿಟ್ಟಿದ್ದಾರೆ.

ಹೌದು, ಬಿಗ್ ಬಾಸ್ ಮುಗಿದು ಐದು ತಿಂಗಳಾದ್ಮೇಲೆ ಗೌತಮಿ ಜಾದವ್ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ಖಡಕ್ ಪಾತ್ರದ ಮೂಲಕ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯ ಮೂಲಕ ವೀಕ್ಷಕರ ಮುಂದೆ ಬಂದಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡ ಒಂದು ಪ್ರೋವೊವನ್ನು ಕೂಡ ರಿಲೀಸ್ ಮಾಡಿದೆ. ಆದರೆ, ವೀಕ್ಷಕರಿಗೆ ಒಂದು ಅನುಮಾನವಿದೆ. ಇದು ಗೆಸ್ಟ್ ಅಪಿಯರೆನ್ಸಾ? ಇಲ್ಲ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಾರಾ? ಅಂತ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.
ಮತ್ತೆ ಕಿರುತೆರೆಗೆ ಎಂಟ್ರಿ
ಬಿಗ್‌ಬಾಸ್ ಕನ್ನಡ ಸೀಸನ್ 11ರ ರಿಯಾಲಿಟಿ ಶೋನಲ್ಲಿ ಗೌತಮಿ ಜಾದವ್ ಕನ್ನಡಿಗರ ಮನೆ ಮನಗಳಿಗೆ ಪ್ರವೇಶ ಮಾಡಿದ್ದರು. ಹೀಗಾಗಿ ಸೀರಿಯಲ್‌ಗಳಿಂದ ಪ್ರಮೋಷನ್ ತೆಗೆದುಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಗೌತಮಿ ಜಾದವ್ ಮೊದಲು ಎಂಟ್ರಿ ಕೊಟ್ಟಿದ್ದು ಕಿರುತೆರೆಗೆ. ಈಗಾಗಲೇ ಪ್ರಸಾರ ಆಗುತ್ತಿರುವ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಗೆ "ನಾನು ಎಲ್ ಕಾಲಿಟ್ರೂ ಅಲ್ಲೊಂದು ಸೌಂಡ್ ಇರುತ್ತಮ್ಮ"ಎನ್ನುತ ಪಂಚಿಂಗ್ ಡೈಲಾಗ್ ಕೊಟ್ಟು ಗೌತಮಿ ಜಾದವ್ ಎಂಟ್ರಿ ಕೊಟ್ಟಿದ್ದಾರೆ.
ಭಾರ್ಗವಿ ರಕ್ಷಿಸಲು ಬಂದ ಗೌತಮಿ
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾರ್ಗವಿ LL.B'ಯಲ್ಲಿ ಭಾರ್ಗವಿ ಅಪಾಯಕ್ಕೆ ಸಿಲುಕಿದ್ದಾಳೆ. ಗೂಂಡಾಗಳು ಅವಳ ಪ್ರಾಣಕ್ಕೇ ಕುತ್ತು ತರುತ್ತಿದ್ದಾರೆ. ಈಗ ಚಕ್ರವ್ಯೂಹದಲ್ಲಿ ಸಿಲುಕಿರುವ ಭಾರ್ಗವಿಯನ್ನು ರಕ್ಷಣೆ ಮಾಡುವುದಕ್ಕೆ ಬಂದಿರೋದು ಗೌತಮಿ ಜಾದವ್. ಕಲರ್ಸ್ ಕನ್ನಡದ ಈ ಧಾರಾವಾಹಿಯ ಪ್ರೋಮೊದಲ್ಲಿ ಭಾರ್ಗವಿಯ ಸುತ್ತಮುತ್ತ ಕೇಡಿಗಳು ಸುತ್ತುವರಿದಿದ್ದಾರೆ. ಭಾರ್ಗವಿ ಅಪಾಯದಲ್ಲಿರುವುದನ್ನು ಮನಗಂಡ ಗೌತಮಿ ಕೇಡಿಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರುವ ಭಾರ್ಗವಿಯನ್ನು ಕಾಪಾಡಲಿಕ್ಕೆ ಬರುತ್ತಾರೆ. 'ನಾನು ಎಲ್ ಕಾಲಿಟ್ರೂ ಅಲ್ಲೊಂದು ಸೌಂಡ್ ಇರುತ್ತಮ್ಮ' ಎಂದು ಅವರು ವಿಲನ್ ಗಳಿಗೆ ಪಂಚ್ ಕೊಡುವುದನ್ನು ಈ ಪ್ರೋಮೋದಲ್ಲಿ ನೋಡಬಹುದು.
ಅತಿಥಿ ಪಾತ್ರದಲ್ಲಿ ಗೌತಮಿ
ಭಾರ್ಗವಿ ಎಲ್‌ಎಲ್‌ಬಿಯಲ್ಲಿ ಗೌತಮಿ ಜಾದವ್ ಎಂಟ್ರಿಯನ್ನು ನೋಡಿ ಕಿರುತೆರೆ ವೀಕ್ಷಕರು ಫಿದಾ ಆಗಿದ್ದರು. ಈ ಸೀರಿಯಲ್‌ನಲ್ಲಿ ಭಾರ್ಗವಿಯದ್ದೇ ಪ್ರಮುಖ ಪಾತ್ರವಿದೆ. ಹೀಗಿರುವಾಗ ಗೌತಮಿ ಮುಂದೆ ಧಾರಾವಾಹಿ ಪೂರ್ತಿ ಇರುತ್ತಾರಾ? ಇಲ್ಲ ಅತಿಥಿ ಪಾತ್ರದಲ್ಲಷ್ಟೇನಾ? ಅಂತ ಗೊಂದಲಕ್ಕೆ ಬಿದ್ದಿದ್ದರು. ಈ ಸೀರಿಯಲ್‌ನಲ್ಲಿ ಗೌತಮಿಯದ್ದು ಅತಿಥಿ ಪಾತ್ರ ಅಂತ ಕಲರ್ಸ್ ಕನ್ನಡವೇ ಕ್ಲಾರಿಟಿ ಕೊಟ್ಟಿದೆ. ಆದರೆ, ಎಷ್ಟು ಎಪಿಸೋಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ? ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ.
ಇಲ್ಲೂ ಪೊಲೀಸ್ ಆಫೀಸರ್
ಗೌತಮಿ ಈ ಹಿಂದೆ ನಟಿಸಿದ 'ಸತ್ಯ' ಧಾರಾವಾಹಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈಗ ಭಾರ್ಗವಿ ಎಲ್‌ಎಲ್‌ಬಿಯಲ್ಲೂ ಪೊಲೀಸ್ ಅಧಿಕಾರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಸಿಂಧೂರಿ ಪಾತ್ರದಲ್ಲಿ ಗೌತಮಿ ಜಾದವ್ ಕಾಣಿಸಿಕೊಳ್ಳುತ್ತಿದ್ದು, ಇಬ್ಬರು ನಟಿಯರ ದರ್ಬಾರ್ ಅನ್ನು ಭಾರ್ಗವಿ ಎಲ್‌ಎಲ್‌ಬಿಯಲ್ಲಿ ನೋಡಬಹುದು. ಹೀಗಾಗಿ ಇನ್ನು ಕೆಲವು ಎಪಿಸೋಡ್‌ಗಳಲ್ಲಿ ಡಬಲ್ ಧಮಾಕಾ ಅಂತಲೇ ಹೇಳಬಹುದು.


Click it and Unblock the Notifications











