BBK 13: ಬಿಗ್ ಬಾಸ್‌ಗೆ ಹೋಗ್ಬೇಕಾ..? ಹನುಮಂತನ ಮಾತು ಕೇಳಿ.. ಕೊನೆ ದಿನ ಬಂದೇ ಬಿಡ್ತು.. ವಿಡಿಯೋ ಕಳಿಸಿ
ಕನ್ನಡದ ಅತ್ಯಂತ ದುಬಾರಿ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ. ಪ್ರತಿ ವರ್ಷ ಈ ಶೋನಲ್ಲಿ ಭಾಗವಹಿಸುವುದಕ್ಕೆ ಅದೆಷ್ಟೋ ಮಂದಿ ಶತಪ್ರಯತ್ನ ಮಾಡುತ್ತಾರೆ. ಒಂದೆರಡು ಸೀಸನ್ ಬಿಟ್ಟರೆ, ಇಲ್ಲಿವರೆಗೂ ಸಾಮಾನ್ಯ ಜನರಿಗೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಕೊಟ್ಟಿದ್ದೇ ಇಲ್ಲ. ಆದ್ರೀಗ ಪ್ರತಿಭೆ ಇರೋ ಸಾಮಾನ್ಯ ಜನರಿಗೆ, ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್‌ಗೆ 13ನೇ ಸೀಸನ್‌ನಲ್ಲಿ ಅವಕಾಶವನ್ನು ನೀಡಲಾಗಿದೆ.
ಬಿಗ್ ಬಾಸ್ ಈ ಬಾರಿ ಅಂದುಕೊಂಡಿದ್ದಕ್ಕಿಂತ ಬೇಗನೇ ಆರಂಭ ಆಗುತ್ತಿದೆ. ಭಾರತದಾದ್ಯಂತ ಎಲ್ಲಾ ಭಾಷೆಯಲ್ಲೂ ಒಮ್ಮೆಗೆ ಈ ರಿಯಾಲಿಟಿ ಶೋ ಆರಂಭ ಆಗುವ ಸಾಧ್ಯತೆಯಿದೆ. ಹೀಗಾಗಿ ಕಲರ್ಸ್ ಕನ್ನಡ ಅಂದುಕೊಂಡಿದ್ದಕ್ಕಿಂತ ಬೇಗನೇ ಪ್ರತಿಭೆಗಳನ್ನು ಹುಡುಕಾಡುವುದಕ್ಕೆ ಶುರು ಮಾಡಿದೆ. ಇದರ ಮೊದಲ ಹೆಜ್ಜೆಯಾಗಿ ಸಾಮಾನ್ಯ ಜನರಿಂದ ತಮ್ಮ ಪ್ರತಿಭೆಯ ಕುರಿತು ಒಂದು ವಿಡಿಯೋವನ್ನು ಅಪ್‌ಲೋಡ್ ಮಾಡುವಂತೆ ಕೇಳಿಕೊಳ್ಳಲಾಗಿದೆ.

ಆದರೆ, ಕೆಲ ಆಸಕ್ತರು ಸೋಶಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡಿ ಟ್ಯಾಗ್ ಮಾಡುತ್ತಿದ್ದರು. ಹೀಗಾಗಿ ಕಲರ್ಸ್ ಕನ್ನಡ ಜಿಯೋಹಾಟ್‌ಸ್ಟಾರ್ ವೆಬ್ ಸೈಟ್‌ನಲ್ಲಿ ಪೋಸ್ಟ್ ಮಾಡುವಂತೆ ಮಾಹಿತಿಯನ್ನು ನೀಡಿದ್ದರು. ಆಡಿಷನ್‌ಗೆ ವಿಡಿಯೋಗಳನ್ನು ಕಳಿಸುವುದಕ್ಕೆ ನಾಳೆ (ಜೂನ್ 21) ತೆರೆಬೀಳಲಿದೆ. ಹೀಗಾಗಿ ಬಿಗ್ ಬಾಸ್ ವಿನ್ನರ್ ಹನುಮಂತ ಸೇರಿ ಮಾಜಿ ಸ್ಪರ್ಧಿಗಳು ಜನರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ.
ಕೊನೆ ದಿನ ಬಂದೇ ಬಿಡ್ತು
ಕಳೆದ ಕೆಲವು ಸೀಸನ್‌ಗಳಿಂದ ಬಿಗ್ ಬಾಸ್‌ಗೆ ಸಾಮಾನ್ಯರಿಗೂ ಅವಕಾಶ ನೀಡುವಂತೆ ಒತ್ತಡ ಹೆಚ್ಚಾಗಿತ್ತು. ಕೊನೆಗೂ ಕಲರ್ಸ್ ಕನ್ನಡ ಈ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ. ಹೀಗಾಗಿ ಈ ಬಾರಿ ಸಾಮಾನ್ಯ ಜನರು ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್‌ಗಳಿಗೆ ಅವಕಾಶ ನೀಡುವುದಕ್ಕೆ ಮುಂದಾಗಿದೆ. ಈ ಕಾರಣಕ್ಕೆ ಆಡಿಷನ್ ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಪ್ರತಿಭೆಗಳು ಆಡಿಷನ್‌ಗೆ ವಿಡಿಯೋ ಕಳಿಸಬೇಕಿದೆ. ಅದಕ್ಕೆ ಕೊನೆಯ ದಿನ ಜೂನ್ 21. ಯಾರಿಗೆಲ್ಲ ಬಿಗ್ ಬಾಸ್‌ಗೆ ಹೋಗಬೇಕು ಅನ್ನೋ ಆಸೆಯಿದ್ದು, ಇನ್ನೂ ನಿಮ್ಮ ಪ್ರತಿಭೆ ತೋರಿಸುವ ವಿಡಿಯೋ ಕಳುಹಿಸದೇ ಇದ್ದರೆ, ಈಗಲೇ ಕಳುಹಿಸಬಹುದು.
ಹನುಮಂತನ ಸಂದೇಶವೇನು?
ಬಿಗ್ ಬಾಸ್ 11ರ ವಿನ್ನರ್ ಹನುಮಂತ ಸದ್ಯ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿಗ್ ಬಾಸ್‌ಗೆ ಹೋಗಬೇಕು ಅಂತ ಆಸೆಯಿರುವವರಿಗೆ ಇನ್ನು ಬೇಗ ಬೇಗನೆ ವಿಡಿಯೋ ಕಳುಹಿಸಿ ಎಂದು ಹೇಳಿದ್ದಾರೆ. "ನೀವೆಲ್ಲರೂ ಬಿಗ್ ಬಾಸ್ ಸೀಸನ್ 13 ಬರುವುದನ್ನು ಕಾಯುತ್ತಿದ್ದೀರಿ. ಹಾಗಾಗಿ ವಿಡಿಯೋಗಳನ್ನು ಮಾಡಿ ನಿಮ್ಮ ಇನ್‌ಸ್ಟಾಗ್ರಾಂ ಹಾಗೂ ಬೇರೆ ಬೇರೆ ಕಡೆಗಳಲ್ಲಿ ಹಾಕುತ್ತಿದ್ದೀರಿ. ಹಾಗೆ ಹಾಕುವುದಕ್ಕೆ ಹೋಗಬೇಡಿ. ಇಲ್ಲಿ ಬರುವ ವೆಬ್ ಸೈಟ್‌ಗೆ ವಿಡಿಯೋವನ್ನು ಹಾಕಿರಿ. ಬೇಗ ಬೇಗನೇ ವಿಡಿಯೋ ಮಾಡಿ ಕಳುಹಿಸಿರಿ. ಯಾಕಂದ್ರೆ, ಇನ್ನು ಸ್ವಲ್ಪ ದಿನದಲ್ಲಿ ಇದನ್ನು ಬಂದ್ ಮಾಡುತ್ತಾರೆ. ನಿಮ್ಮ ಪ್ರತಿಭೆಗಳನ್ನು ತೋರಿಸಿಕೊಂಡು ಹಾಕಿರಿ. ಬಿಗ್ ಬಾಸ್ ನಿಮ್ಮ ಜೀವನದಲ್ಲಿ ಮುಖ್ಯವಾದ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ" ಎಂದು ಹನುಮಂತ ಮಾಹಿತಿ ಹಂಚಿಕೊಂಡಿದ್ದಾರೆ.
ಎಲ್ಲರೂ ನನ್ನ ಹಾಗೇ ಅಗ್ರಿ
ಹಾಗೇ ಹನುಮಂತ ಈ ವಿಡಿಯೋದಲ್ಲಿ ಬೇಗ ಬೇಗ ವಿಡಿಯೋ ಅಪ್‌ಲೋಡ್ ಮಾಡಿ, ಎಲ್ಲರೂ ನನ್ನಂತೆ ಆಗಿ ಎಂದು ಹೇಳಿದ್ದಾನೆ. "ಎಲ್ಲರೂ ವಿಡಿಯೋವನ್ನು ಬೇಗ ಬೇಗನೇ ಮಾಡಿ ಹಾಕಿರಿ. ಇನ್ನು ಎರಡು ದಿನಗಳಲ್ಲಿ ಈ ವೆಬ್ ಸೈಟ್ ಅನ್ನು ಬಂದ್ ಮಾಡುತ್ತಾರೆ. ಎಲ್ಲರೂ ನನ್ನ ಹಾಗೇ ಆಗ್ರಿ. ಜೈ ಬಿಗ್ ಬಾಸ್ ಎಂದು ಹೇಳಿದ್ದಾರೆ.
ಟ್ಯಾಲೆಂಟ್ ಇದ್ದರೆ ಸೆಲೆಕ್ಟ್ ಆಗ್ತೀರ
"ಕಲರ್ಸ್ ಕನ್ನಡದವರು ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ಒಂದು ವೇದಿಕೆಯನ್ನು ರೆಡಿ ಮಾಡಿಕೊಟ್ಟಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಜಿಯೋಹಾಟ್‌ಸ್ಟಾರ್ ಹಾಗೂ ಕಲರ್ಸ್ ಕನ್ನಡದ ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಸೂಚಿಸಿರುವ ನಾಲ್ಕು ಹೆಜ್ಜೆಗಳನ್ನು ಫಾಲೋ ಮಾಡಿ. ಹಾಗೇ ಅಪ್‌ಲೋಡ್ ಮಾಡುವ ವಿಡಿಯೋದಲ್ಲಿ ಯಾಕೆ ಬಿಗ್ ಬಾಸ್ ಮನೆಯೊಳಗೆ ಹೋಗಬೇಕು ಅಂತ ಹೇಳಿ. ನಿಮಗೆ ಆ ಟ್ಯಾಲೆಂಟ್ ಇದ್ದರೆ ಕಂಡಿತಾ ಆಯ್ಕೆ ಆಗುತ್ತೀರ" ಎಂದು ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಸೂರಜ್ ಹೇಳಿದ್ದಾರೆ.


Click it and Unblock the Notifications
