ಮಗುವಿಗಾಗಿ ಪತಿಯ ಕೋಣೆ ಮೇಲೆ ಕಣ್ಣಿಟ್ಟ ಹಾಸ್ಯ ನಟಿ ಭಾರತಿ ಸಿಂಗ್

ಕಿರುತೆರೆ ಹಾಗೂ ಸಿನಿಮಾ ಮಂದಿಗೆ ಹಾಸ್ಯನಟಿ ಭಾರತಿ ಸಿಂಗ್ ಪರಿಚಯ ಚೆನ್ನಾಗಿ ಇರುತ್ತೆ. ಕಾಮಿಡಿ ಶೋ ಇರಲಿ. ಇಲ್ಲಾ ರಿಯಾಲಿಟಿ ಶೋಗಳೇ ಇರಲಿ. ಭಾರತಿ ಸಿಂಗ್ ಇದ್ದರೆ. ಆ ಶೋ ಹಿಟ್ ಆದಂತೆ. ಇಷ್ಟುದಿನ ಜನರನ್ನು ನಕ್ಕು ನಗಿಸುತ್ತಿದ್ದ ಭಾರತಿ ಸಿಂಗ್ ಈಗ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಅದಕ್ಕೆ ಕಾರಣವಿದೆ. ಭಾರತಿ ಸಿಂಗ್ ಗರ್ಭಿಣಿಯಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಾತಿನಿಂದಲೇ ಎಲ್ಲರನ್ನೂ ನಡುಗಿಸುತ್ತಿದ್ದ ಈ ನಟಿ ತನ್ನ ಮಗುವಿಗಾಗಿ ಹೆಚ್ಚು ಕಾಳಜಿ ಮಾಡುತ್ತಿದ್ದಾರೆ. ಅದಕ್ಕೆ ತನ್ನ ಪತಿ ಮೇಲೆ ಕೋಣೆಯನ್ನೇ ಗಾಯಬ್ ಮಾಡಿದ್ದಾರೆ.

ಭಾರತಿ ಸಿಂಗ್ ಟಿವಿಯಿಂದ ವಿಶ್ರಾಂತಿ ಪಡೆಯುತ್ತಿದ್ದರೂ ಸುಮ್ಮನೆ ಅಂತೂ ಕೂತಿಲ್ಲ. ತಮ್ಮ ಭವಿಷ್ಯದ ಬಗ್ಗೆ ಸಿಕ್ಕಾ ಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಮಗು ಹುಟ್ಟುವುದಕ್ಕೂ ಮುನ್ನವೇ ಅದಕ್ಕಾಗಿ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಈ ವರ್ಷ ಏಪ್ರಿಲ್‌ ತಿಂಗಳಲ್ಲಿ ಭಾರತಿ ಸಿಂಗ್ ಮೊದಲ ಮಗುವಿಗೆ ಜನ್ಮ ನೀಡುವ ಸಾಧ್ಯತೆಯಿದೆಯಂತೆ. ಅದಕ್ಕೆ ಭಾರತಿ ಸಿಂಗ್ ಈಗಿನಿಂದಲೇ ಹೊಸ ಸಲಕ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ.

ಮಗುವಿಗಾಗಿ ಪತಿಯ ಕೋಣೆಯೇ ಗಾಯಬ್

ಭಾರತಿ ಸಿಂಗ್ ಗಟ್ಟಿಗಿತ್ತಿ. ಯಾರ ಮಾತಿಗೂ ಅಷ್ಟು ಸುಲಭಕ್ಕೆ ಬಗ್ಗುವುದಿಲ್ಲ. ಆದರೆ, ಮಗು ವಿಷಯಕ್ಕೆ ಬಂದರೆ ಪತಿಯನ್ನೂ ಸೈಡಿಗೆ ಇಟ್ಟುಬಿಟ್ಟಿದ್ದಾರಂತೆ. ಹೌದು, ಪತಿ ಹಾರ್ಷ್ ಲಿಂಬಾಚಿಯಾ ತನಗೆ ಓದುವುದಕ್ಕೆ ಅಂತ ಒಂದು ಕೋಣೆಯನ್ನು ಇಟ್ಟಿಕೊಂಡಿದ್ದರಂತೆ. ಆ ಕೋಣೆಯನ್ನೇ ಭಾರತಿ ಸಿಂಗ್ ಗಾಯಬ್ ಮಾಡಿಬಿಟ್ಟಿದ್ದಾರೆ. ಮಗುವಿಗಾಗಿ ಗಂಡ ಬಳಸುತ್ತಿದ್ದ ರೂಮ್ ಆನ್ನೇ ಕಣ್ಮರೆ ಮಾಡಿಬಿಟ್ಟಿದ್ದಾರಂತೆ.

ಹೌದು, ಪತಿ ಹಾರ್ಷ್ ಓದುವುದಕ್ಕೆ ಅಂತ ಬಳಸುತ್ತಿದ್ದ ರೂಮ್ ಅನ್ನು ಭಾರತಿ ನರ್ಸರಿಯಾಗಿ ಬದಲಾಯಿಸಿದ್ದಾರಂತೆ. ಓದುವುದಕ್ಕೆ ಅಂತ ಇಟ್ಟುಕೊಂಡಿದ್ದ ಕೋಣೆಗೆ ತನಗಿಷ್ಟವಾದ ಬಣ್ಣ ಹಚ್ಚಿ ಗೌಪ್ಯವಾಗಿ ಇಟ್ಟಿದ್ದರಂತೆ. ಭಾರತಿ ಪತಿಗೆ ಗೊತ್ತಿಲ್ಲದಂತೆ ಕೋಣೆಯನ್ನು ನರ್ಸರಿಯಾಗಿ ಬದಲಾಯಿಸಿದ್ದು ಕಂಡು ಪತಿ ಹಾರ್ಷ್ ಲಿಂಬಾಚಿಯಾಗೆ ಶಾಕ್ ಆಗಿದೆ. ಅಂದ್ಹಾಗೆ ಈ ಮಾತನ್ನು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ವತ: ಭಾರತಿ ಸಿಂಗ್ ವಿವರಿಸಿದ ವಿಡಿಯೋ ಇದೆ.

Hindi comedian bharti singh turned her husband study room into nursery

2017ರಲ್ಲಿ ಭಾರತಿ ಹಾಗೂ ಹಾರ್ಷ್ ವಿವಾಹ

ರಿಯಾಲಿಟಿ ಹಾಗೂ ಟಾಕ್ ಶೋಗಳಲ್ಲಿ ಬ್ಯುಸಿಯಾಗಿರುವ ಭಾರತಿ ಸಿಂಗ್ 2017ರಲ್ಲಿ ಹಾರ್ಷ್ ಲಿಂಬಾಚಿಯಾರನ್ನು ವಿವಾಹವಾಗಿದ್ದರು. ಇಬ್ಬರದ್ದು ಏಳು ವರ್ಷದ ಪ್ರೀತಿ. ರಿಯಾಲಿಟಿ ಶೋ ಒಂದರಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮೊದಲು ಸ್ನೇಹಿತರಾಗಿದ್ದವರು ನಂತರ ಪ್ರೀತಿಗೆ ತಿರುಗಿತ್ತು. ಸ್ವತ: ಹಾರ್ಷ್ ನಿರೂಪಕಿ ಹಾಗೂ ಕಾಮಿಡಿಯನ್ ಆಗಿ ಜನಪ್ರಿಯರಾಗಿದ್ದ ಭಾರತಿಗೆ ಪ್ರಪೋಸ್ ಮಾಡಿದ್ದರಂತೆ. ಅಂದ್ಹಾಗೆ ಹಾರ್ಷ್ ಹಾಸ್ಯನಟಿ ಭಾರತಿಗಿಂತ 11 ವರ್ಷ ಚಿಕ್ಕವನು.

ಭಾರತಿ ಹಾಗೂ ಪತಿ ಹಾರ್ಷ್ ಇಬ್ಬರೂ ಜಂಟಿಯಾಗಿ ಹುನರ್‌ಬಾಜ್ ಎನ್ನುವ ರಿಯಾಲಿಟಿ ಶೋವನ್ನು ನಿರೂಪಣೆ ಮಾಡುತ್ತಿದ್ದರು. ಕರಣ್ ಜೋಹರ್, ಪರಿಣಿತಿ ಚೋಪ್ರಾ ಹಾಗೂ ಮಿಥುನ್ ಚಕ್ರವರ್ತಿ ತೀರ್ಪುಗಾರರಾಗಿದ್ದರು. ಸದ್ಯ ಭಾರತಿ ಸಿಂಗ್ ರಿಯಾಲಿಟಿ ಶೋಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

More from Filmibeat

English summary
Hindi comedian bharti singh turned her husband study room into nursery. Bharti Singh is highest paid comedian in hindi television is expecting baby.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X