ಖಳನಾಯಕಿಯಾಗಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಶ್ರುತಿ ರಮೇಶ್; ಯಾವುದು ಆ ಸೀರಿಯಲ್?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಗಳ ಪೈಕಿ 'ಕಾವೇರಿ ಕನ್ನಡ ಮೀಡಿಯಂ' ಕೂಡಾ ಒಂದು. ಅದರಲ್ಲಿ ಶಿಕ್ಷಕಿ ಆಶಿಕಾ ಪಾತ್ರದಲ್ಲಿ ನಟಿ ಶ್ರುತಿ ರಮೇಶ್ ನಟಿಸುತ್ತಿದ್ದಾರೆ. ಆಶಿಕಾ ಪಾತ್ರ ಸಂಪೂರ್ಣ ನೆಗೆಟಿವ್ ಶೇಡ್ ಹೊಂದಿದ್ದು, ಶ್ರುತಿ ರಮೇಶ್ ಅವರು ಎರಡನೇ ಬಾರಿ ಖಳನಾಯಕಿಯಾಗಿ ಮೋಡಿ ಮಾಡುತ್ತಿದ್ದಾರೆ.

ಹೌದು, ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮಣ' ಧಾರಾವಾಹಿಯಲ್ಲಿ ಮಿಲಿ ಎನ್ನುವ ಪಾತ್ರಕ್ಕೆ ಈ ನಟಿ ಜೀವ ತುಂಬಿದ್ದು, ಅದು ಕೂಡಾ ನೆಗೆಟಿವ್ ರೋಲ್ ಆಗಿತ್ತು.

I enjoyed playing the villain says actress Shruti Ramesh

"ಸದ್ಯ ನಾನು ಆಶಿಕಾ ಆಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ಸಂಪೂರ್ಣ ನೆಗೆಟಿವ್ ಪಾತ್ರ. ಎರಡನೇ ಬಾರಿ ಖಳನಾಯಕಿಯಾಗಿ ನಟಿಸುತ್ತಿರುವುದಕ್ಕೆ ನನಗಂತೂ ತುಂಬಾನೇ ಸಂತೋಷವಿದೆ. ನೆಗೆಟಿವ್ ಪಾತ್ರದಲ್ಲಿ ಅಭಿನಯಕ್ಕೆ ಅವಕಾಶ ಜಾಸ್ತಿ. ಅದೇ ಕಾರಣಕ್ಕೆ ನಾನು ಆಶಿಕಾ ಪಾತ್ರ ಬಂದಾಗ ಖುಷಿಯಿಂದಲೇ ಒಪ್ಪಿಕೊಂಡೆ " ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಳ್ಳುತ್ತಾರೆ ಶ್ರುತಿ ರಮೇಶ್.

ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ ಶ್ರುತಿ ರಮೇಶ್ ಅವರ ನಿಮ್ಮಿ ಆಗಿ ಕಿರುತೆರೆಯಲ್ಲಿ ಗುರುತಿಸಿಕೊಂಡ ಬೆಡಗಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯ ಧಾರಾವಾಹಿ 'ಪಾಪಾ ಪಾಂಡು ಸೀಸನ್ 2'ರಲ್ಲಿ ನಿಮ್ಮಿಯಾಗಿ ಕಾಣಿಸಿಕೊಂಡ ಈಕೆ ಈಗಲೂ ಕೂಡಾ ಅದೇ ಪಾತ್ರದ ಮೂಲಕ ಫೇಮಸ್ಸು.

I enjoyed playing the villain says actress Shruti Ramesh

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ', ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಸುಬ್ಬಲಕ್ಷ್ಮೀ ಸಂಸಾರ', ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶಾಂತಂ ಪಾಪಂ', ಸ್ಟಾರ್ ಸುವರ್ಣ ವಾಹಿನಿಯ 'ಬಿಳಿ ಹೆಂಡ್ತಿ', ಉದಯ ವಾಹಿನಿಯ 'ಮಾನಸ ಸರೋವರ' ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ವೀಕ್ಷಕರ ಮನ ಸೆಳೆದಿದ್ದರು ಶ್ರುತಿ ರಮೇಶ್. ಇದೀಗ ಆಶಿಕಾ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಶ್ರುತಿ ರಮೇಶ್ ಹಿರಿತೆರೆಯಲ್ಲಿಯೂ ಮಿಂಚಿದ್ದಾರೆ.

'ಫ್ಯಾಮಿಲಿ ಪ್ಯಾಕ್' ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿರುವ ಶ್ರುತಿ ರಮೇಶ್ ಅವರು ನಂತರ 'ಶುಗರ್ ಲೆಸ್', 'ಸಿರಿ ಲಂಬೋದರ ವಿವಾಹ', 'ಜೆರ್ಸಿ ನಂ 1' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ 'ದೊಂಬ್ರಾಟ' ಮತ್ತು 'ಒರಿಜಿನಲ್ ಚಾಯ್ಸ್' ಎನ್ನುವ ವೆಬ್ ಸಿರೀಸ್ ನಲ್ಲಿಯೂ ಶ್ರುತಿ ರಮೇಶ್ ನಟಿಸಿದ್ದಾರೆ.

More from Filmibeat

English summary
Shruti Ramesh is charming on TV as a villain for the second time Shruti Ramesh expressed happiness:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X