BBK 12: ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತಿದ್ದಾರಾ ಅಶ್ವಿನಿ ಗೌಡ-ಜಾಹ್ನವಿ? ಮನೆ ಮಂದಿ ಏನಂತಾರೆ?
ಬಿಗ್ ಬಾಸ್ ಕನ್ನಡ ಸೀಸನ್ 12 ಮೂರ ವಾರದ ಕೊನೆಯ ಹಂತಕ್ಕೆ ಬಂದು ನಿಂತಿದೆ. ನಾಳೆಯಿಂದ (ಅಕ್ಟೋಬರ್ 18) ಎರಡು ದಿನಗಳ ಕಾಲ ಮಿಡ್ ವೀಕ್ ಫಿನಾಲೆ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಒಂದಿಷ್ಟು ಮಂದಿ ಮನೆಯಿಂದ ಹೊರ ಹೋಗೋದು ಬಹುತೇಕ ಫಿಕ್ಸ್. ಮನೆಯೊಳಗೆ ಇರುವ ಮೂರರಿಂದ ನಾಲ್ಕು ಮಂದಿ ಹೊರ ಬರೋದು ಗ್ಯಾರೆಂಟಿ ಎಂದು ಹೇಳಲಾಗುತ್ತಿದೆ.
ಇನ್ನೇನು ಫಿನಾಲೆಗೆ ಕೆಲವೇ ಕ್ಷಣಗಳು ಬಾಕಿ ಉಳಿದಿದೆ ಎನ್ನುವಾಗಲೇ ಮನೆಯಲ್ಲಿ ಹೈಡ್ರಾಮ ನಡೆದಿತ್ತು. ರಾತ್ರಿ ಎಲ್ಲರೂ ಮಲಗಿರುವಾಗ ಗೆಜ್ಜೆ ಶಬ್ದವೊಂದು ಕೇಳಿಸಿತ್ತು. ಇದು ಮನೆ ಮಂದಿಯನ್ನು ಬೆಚ್ಚಿ ಬೀಳಿಸಿತ್ತು. ಹೀಗೆ ಹೆದರಿಸಿದ್ದು, ರಕ್ಷಿತಾ ಶೆಟ್ಟಿ ಎಂಬ ಆರೋಪ ಮಾಡಲಾಗುತ್ತಿದೆ. ಈ ಸಂಬಂಧ ಅಶ್ವಿನಿ ಗೌಡ-ಜಾಹ್ನವಿ ಇಬ್ಬರೂ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದಿದ್ದಾರೆ.

ರಕ್ಷಿತಾ ಶೆಟ್ಟಿಯ ಮೇಲೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಆರೋಪ ಹೊರಿಸಿದ್ದ ಮನೆಯ ಉಳಿದ ಸದಸ್ಯರಿಗೆ ಸರಿ ಕಾಣುತ್ತಿಲ್ಲ. ಇಬ್ಬರೂ ಸೇರಿ ಕನ್ನಡ ಮಾತಾಡುವುದಕ್ಕೆ ಸರಿಯಾಗಿ ಬಾರದ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತಿದ್ದಾರಾ? ಎಂಬ ಆರೋಪ ಕೇಳಿ ಬರುತ್ತಿದೆ. ಅಸಲಿಗೆ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ, ಜಾಹ್ನವಿ ತಿರುಗಿಬಿದ್ದಿದ್ದೇಕೆ? ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಲಾಗುತ್ತಿದೆಯಾ? ಮನೆಯಲ್ಲಿರುವ ಉಳಿದ ಸದಸ್ಯರ ಅಭಿಪ್ರಾಯವೇನು? ತಿಳಿಯುವುದಕ್ಕೆ ಮುಂದೆ ಓದಿ.
ರಾತ್ರಿ ವೇಳೆ ಗೆಜ್ಜೆ ಶಬ್ದ ಮಾಡಿದ್ದು ರಕ್ಷಿತಾ ಶೆಟ್ಟಿನೇ ಅಂತ ಅಶ್ವಿನಿ ಗೌಡ ಹಾಗೂ ಜಾಹ್ನವಿ ಆರೋಪ ಮಾಡಿದ್ದಾರೆ. ಆದರೆ, ಅದನ್ನು ರಕ್ಷಿತಾ ಒಪ್ಪಿಕೊಂಡಿಲ್ಲ. ತಮ್ಮ ಮೇಲೆ ಮಾಡುತ್ತಿರುವ ಈ ಆರೋಪವನ್ನು ಸರಾಸಗಟಾಗಿ ತಳ್ಳಿ ಹಾಕಿದ್ದಾರೆ. ಏಕಾಂಗಿಯಾಗಿ ಇಬ್ಬರ ವಿರುದ್ಧವೂ ತಿರುಗಿ ಬಿದ್ದಿದ್ದಾರೆ. ಇದೆಲ್ಲವನ್ನು ನೋಡಿದ ಬಳಿಕ ಮನೆಯ ಉಳಿದ ಸದಸ್ಯರೂ ಕೂಡ ರಕ್ಷಿತಾ ಪರ ನಿಂತಿದ್ದಾರೆ.
ಮಧ್ಯರಾತ್ರಿಯಲ್ಲಿ ಗೆಜ್ಜೆ ಸದ್ದು ಮಾಡಿದ್ದು ರಕ್ಷಿತಾ ಶೆಟ್ಟಿನೇ ಅನ್ನೋದು ಅಶ್ವಿನಿ ಗೌಡ ಹಾಗೂ ಜಾಹ್ನವಿ ವಾದ. ಆದರೆ, ಇವರಿಗೆ ಇಬ್ಬರ ವಾದಕ್ಕೆ ರಕ್ಷಿತಾ ಸುಮ್ಮನೆ ಕೂರಲಿಲ್ಲ. ಆರಂಭದಲ್ಲಿ ಸೈಲೆಂಟ್ ಆಗಿದ್ದರೂ, ಬಳಿಕ ಅವರೂ ಕೂಡ ವಾದಕ್ಕೆ ಇಳಿದಿದ್ದರು. ಇಬ್ಬರ ವಿರುದ್ಧವೂ ಸರಿಯಾಗಿಯೇ ಪೈಪೋಟಿ ಕೊಟ್ಟಿದ್ದರು. ಈ ವಾದ-ವಿವಾದದ ಮಧ್ಯೆ ಮನೆ ಮಂದಿಗೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಮಾತಾಡುವುದರಲ್ಲಿ ಹುರುಳಿಲ್ಲ ಅನ್ನೋದು ಗೊತ್ತಾಗಿದೆ. ರಕ್ಷಿತಾ ಕನ್ನಡ ಅರ್ಥ ಮಾಡಿಕೊಂಡು ಮಾತಾಡಿದರೂ ಅವರು ಮಾಡಿದ ವಾದ ಸರಿಯಾಗಿಯೇ ಇದೆ ಎನ್ನುವ ಅಭಿಪ್ರಾಯಕ್ಕೆ ಬಂದಂತೆ ಇದೆ.

ಇನ್ನು ರಕ್ಷಿತಾ ಪರವಾಗಿ ಮನೆ ಮಂದಿ ವಾದ ಮಾಡದೇ ಹೋದರೂ, ಕೆಲವರಿಗೆ ಅವರೇ ಸರಿ ಅಂತ ಅನಿಸಿದೆ. ಈ ವಾದ-ವಿವಾದದ ಮಧ್ಯೆ ಪ್ರವೇಶಿಸಿದ ಕಾವ್ಯಾ ಶೈವಗೂ ಮಾತಾಡುವುದಕ್ಕೆ ಬಿಡಲಿಲ್ಲ. ಹೀಗಾಗಿ ರಕ್ಷಿತಾ ಪರವಾಗಿ ಬಂದಿದ್ದ ಒಬ್ಬ ಸದಸ್ಯರನ್ನು ಹಿಂದಕ್ಕೆ ಕಳುಹಿಸಿದರು. ಹೀಗಾಗಿ ಒಂಟಿಯಾಗಿಯೇ ಅಖಾಡಕ್ಕೆ ಇಳಿದಿದ್ದ ರಕ್ಷಿತಾ ಇಬ್ಬರನ್ನೂ ಎದುರಿಸಿದ್ದಾರೆ.
ಕಹಾನಿ ಮೆ ಟ್ವಿಸ್ಟ್ ಏನಪ್ಪಾ ಅಂದರೆ, ಮಧ್ಯರಾತ್ರಿ ಗೆಜ್ಜೆ ಸದ್ದಿಗೆ ಅಶ್ವಿನಿ ಗೌಡ ಹಾಗೂ ಜಾಹ್ನವಿನೇ ಕಾರಣ ಅನ್ನೋದು ಮನೆ ಮಂದಿಗೆ ಗೊತ್ತಾಗಿ ಹೋಗಿದೆ. ಅದರಲ್ಲೂ ಗಿಲ್ಲಿ ನಟ ಹಾಗೂ ಚಂದ್ರಪ್ರಭ ಇಬ್ಬರಿಗಂತೂ ಗೊತ್ತಾಗಿದೆ. ಹಾಗೇ ವೀಕ್ಷಕರಿಗೆ ಸಾಕ್ಷಿ ಸಮೇತ ಗೊತ್ತಾಗಿ ಹೋಗಿದೆ. ಇನ್ನು ಕನ್ನಡ ಸರಿಯಾಗಿ ಬಾರದ ಯುವತಿ ರಕ್ಷಿತಾ ಶೆಟ್ಟಿ ಮೇಲೆ ಇಂತಹ ಆರೋಪ ಮಾಡಿದ್ದು ಸರಿಯಿಲ್ಲ ಅನ್ನೋ ಅಭಿಪ್ರಾಯ ಮನೆಯಲ್ಲಿದೆ. ಇದು ಮಿಡ್ ಸೀಸನ್ ಫಿನಾಲೆ ಎಪಿಸೋಡ್‌ನಲ್ಲಿ ಗಂಭೀರವಾಗಿ ಚರ್ಚೆಯಾಗುವ ಸಾಧ್ಯತೆಯಿದೆ.


Click it and Unblock the Notifications











