ರಾಮಾಚಾರಿಯನ್ನು ಕೊಂದೇ ಬಿಡ್ತು ಗ್ಯಾಂಗ್: ಹೀರೋ ಇರಲ್ಲ.. ಏನಿದರ ಅರ್ಥ?
'ರಾಮಾಚಾರಿ' ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ. ಈ ಸೀರಿಯಲ್‌ಗೆ, ನಟಿಸುತ್ತಿರುವ ಕಲಾವಿದರಿಗೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಕಳೆದ ಎರಡು ವರ್ಷಗಳಿಂದ 'ರಾಮಾಚಾರಿ' ಸೀರಿಯಲ್ ಪ್ರೇಕ್ಷಕರನ್ನು ರಂಜಿಸುತ್ತಿದೆ. ಸಾಕಷ್ಟು ರೋಚಕ ತಿರುವುಗಳನ್ನು ನೀಡುತ್ತಾ? ಪ್ರತಿ ದಿನ ಈ ಧಾರಾವಾಹಿಯನ್ನು ವೀಕ್ಷಕರು ನೋಡುವಂತೆ ಮಾಡುತ್ತಿದೆ. ಆದ್ರೀಗ ಕಲರ್ಸ್ ಕನ್ನಡ ರಿಲೀಸ್ ಮಾಡಿದ ಒಂದು ಪ್ರೋಮೊ ವೀಕ್ಷಕರಲ್ಲಿ ಕುತೂಹಲವನ್ನು ಮೂಡಿಸಿದೆ.
ನಾಳೆ (ಜುಲೈ 24) ಅಂದರೆ, ಗುರುವಾರ ಪ್ರಸಾರ ಆಗಲಿರುವ ಸಂಚಿಕೆಯಲ್ಲಿ ವೀಕ್ಷಕರಿಗೆ ಶಾಕ್ ಕೊಡುವುದಕ್ಕೆ ತಂಡ ನಿರ್ಧರಿಸಿದೆ. ಅದಕ್ಕೆ ಪ್ರೋಮೊ ಮೂಲಕ ಒಂದು ಸುಳಿವನ್ನೂ ಕೊಟ್ಟಿದೆ. 'ರಾಮಾಚಾರಿ' ಧಾರಾವಾಹಿ ಈಗ ರೋಚಕ ಹಂತಕ್ಕೆ ಬಂದು ನಿಂತಿದೆ. ಅದರಲ್ಲೂ ಕೆಲವು ಸಂಚಿಕೆಗಳಿಂದ ವಿಲನ್‌ಗಳ ಗ್ಯಾಂಗ್ ರಾಮಾಚಾರಿಯನ್ನು ಕೊಲ್ಲುವುದಕ್ಕೆ ಸಂಚು ರೂಪಿಸುತ್ತಲೇ ಇತ್ತು. ಕೊನೆಗೂ ರಾಮಾಚಾರಿಯನ್ನು ಕೊಂದು ಅಟ್ಟಹಾಸ ಮೆರೆದಿದೆ.

ಹೌದು, ರಾಮಾಚಾರಿ ನಾಳೆ (ಜುಲೈ 24) ಸಂಚಿಕೆಯ ಪ್ರೋಮೊ ಹೊರಬಿದ್ದಿದೆ. ಇದರಲ್ಲಿ ವಿಲನ್‌ಗಳು ಮೋಸದಿಂದ ರಾಮಾಚಾರಿಯನ್ನು ಕರೆಸಿಕೊಂಡು ಸ್ಕೆಚ್ ಹಾಕಿದ್ದಾರೆ. ಈ ಪ್ರೋಮೊದಲ್ಲಿ ರಾಮಾಚಾರಿಯನ್ನು ಕೊಲ್ಲುವ ದೃಶ್ಯವನ್ನು ಕೂಡ ಅನಾವರಣ ಮಾಡಲಾಗಿದೆ. ಹೀಗಾಗಿ ವೀಕ್ಷಕರಿಗೆ ಈ ಧಾರಾವಾಹಿ ಇನ್ನು ಕೆಲವೇ ದಿನಗಳಲ್ಲಿ ಅಂತ್ಯ ಆಗಬಹುದೆಂಬ ಸೂಚನೆ ಸಿಕ್ಕಿದೆ. ಆದರೆ, ಈ ಬಗ್ಗೆ ಕಲರ್ಸ್ ಕನ್ನಡ ಆಗಲಿ, ಧಾರಾವಾಹಿ ತಂಡವಾಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.
ರಾಮಾಚಾರಿಗೆ ಚೂರಿ
ನಾಳೆಯ ಸಂಚಿಕೆಯಲ್ಲಿ 'ರಾಮಾಚಾರಿ'ಯನ್ನು ಚೂರಿಯಿಂದ ಚುಚ್ಚಿ ಕೊಲ್ಲುವ ದೃಶ್ಯಗಳಿವೆ. ಇದನ್ನು ವೀಕ್ಷಕರು ಹೇಗೆ ಅರಗಿಸಿಕೊಳ್ಳುತ್ತಾರೋ ಗೊತ್ತಿಲ್ಲ. ನಾಳೆಯಿಂದ ರಾಮಾಚಾರಿ ಕೊಲ್ಲುವ ಸಂಚಿಕೆ ಪ್ರಸಾರವಾಗಲಿದೆ. ಆ ನಂತರದ ದಿನಗಳಲ್ಲಿ ರಾಮಾಚಾರಿಯ ಸಾವಿನಿಂದ ಆದ ಪರಿಣಾಮಗಳನ್ನು ಎಪಿಸೋಡ್‌ಗಳಲ್ಲಿ ತೋರಿಸಲಾಗುತ್ತೆ ಎನ್ನಲಾಗಿದೆ. ಧಾರಾವಾಹಿಯಿ ಹೀರೊ ಸಾವಿನ ಬಳಿಕ ಕಥೆ ಹೇಗೆ ಮುಂದುವರೆಯುತ್ತೆ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ರಾಮಾಚಾರಿಯನ್ನು ಕೊಂದೇ ಬಿಡ್ತು ವಿಲನ್ ಗ್ಯಾಂಗ್
'ರಾಮಾಚಾರಿ' ಧಾರಾವಾಹಿಯಲ್ಲಿ ಇತ್ತೀಚೆಗೆ ವಿಲನ್‌ಗಳ ಗ್ಯಾಂಗ್ ಅಟ್ಟಹಾಸ ಮೆರೆಯುತ್ತಿತ್ತು. ಮಾನ್ಯತಾ, ನವದೀಪ್, ರುಕ್ಕು ಮತ್ತು ಜಿಕೆ ಎಲ್ಲರೂ ಒಟ್ಟಿಗೆ ಸೇರಿ ರಾಮಾಚಾರಿಯನ್ನು ಕೊಲ್ಲುವುದಕ್ಕೆ ಸ್ಕೆಚ್ ಹಾಕಿದ್ದರು. ಅದಕ್ಕೆ ಒಂದು ಕಾರ್ಯತಂತ್ರವನ್ನು ರೂಪಿಸಿದ್ದರು. ರಾಮಾಚಾರಿಯನ್ನು ಮೋಸದಿಂದ ಕಟ್ಟಡವೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕೊಲೆ ಮಾಡುವುದಕ್ಕೆ ಸ್ಕೆಚ್ ಹಾಕಿದ್ದರು.

ಈ ಸನ್ನಿವೇಶದಲ್ಲಿ ವಿಲನ್‌ಗಳ ವಿರುದ್ಧ ರಾಮಾಚಾರಿ ಹೋರಾಟ ಮಾಡುತ್ತಾನೆ. ರಾಮಾಚಾರಿ ಎಷ್ಟೇ ಪ್ರತಿರೋಧ ತೋರಿಸಿದರೂ ಗ್ಯಾಂಗ್ ಅವನನ್ನು ಕಟ್ಟಿ ಹಾಕುವುದರಲ್ಲಿ ಯಶಸ್ವಿಯಾಗುತ್ತೆ. ಕೊನೆಗೆ ಚೂರಿಯಿಂದ ಚುಚ್ಚಿ ಕೊಲ್ಲಲು ಯಶಸ್ವಿಯಾಗುತ್ತಾರೆ. ತಮ್ಮ ಶತ್ರುವನ್ನು ನಾಶ ಪಡಿಸಿದ ಖುಷಿಯಲ್ಲಿ ವಿಲನ್‌ಗಳು ಸಂಭ್ರಮಿಸುತ್ತಿದ್ದಾರೆ. ಇತ್ತ ಚಾರು, ಅವನ ಕುಟುಂಬ ಮತ್ತು ಅಗ್ರಹಾರದ ಜನರು ರಾಮಾಚಾರಿಯನ್ನು ಕಳೆದುಕೊಂಡ ನೋವಿನಲ್ಲಿ ಮುಳುಗಿದ್ದಾರೆ.
ಅಂತ್ಯವಾಗುತ್ತಾ ರಾಮಾಚಾರಿ
ಈ ಪ್ರೋಮೊ ನೋಡಿದ ಬಳಿಕ ರಾಮಾಚಾರಿ ಧಾರಾವಾಹಿ ಶೀಘ್ರದಲ್ಲಿಯೇ ಅಂತ್ಯ ಕಾಣುವ ಸೂಚನೆಯನ್ನು ನೀಡಿದೆ. ಬಿಗ್ ಬಾಸ್ ಕನ್ನಡ ಬರುತ್ತಿರುವ ಬೆನ್ನಲ್ಲೇ ಮೂರು ಧಾರಾವಾಹಿಗಳನ್ನು ಕಲರ್ಸ ಕನ್ನಡ ಅಂತ್ಯ ಮಾಡಲಿದೆ ಎಂದು ಹೇಳಲಾಗುತ್ತಿತ್ತು. ಅದರಂತೆಯೇ ಈಗಾಗಲೇ 'ಕರಿಮಣಿ' ಧಾರಾವಾಹಿಯಲ್ಲಿ ಕರ್ಣನ ಪಾತ್ರವನ್ನು ಸಾಯಿಸಲಾಗಿದೆ. ಈಗ ರಾಮಾಚಾರಿಯ ಪಾತ್ರವನ್ನು ಕೊಲ್ಲಲಾಗಿದೆ. ಹೀಗಾಗಿ ಈ ಎರಡು ಧಾರಾವಾಹಿಗಳು ಶೀಘ್ರವೇ ಅಂತ್ಯ ಕಾಣಲಿದೆ ಎನ್ನಲಾಗಿದೆ.


Click it and Unblock the Notifications











