ವೀಕ್ಷಕರಿಗೆ ಹೊಸ ಕಥೆ ಹೇಳುತ್ತಿದೆಯೇ 'ನಿನಗಾಗಿ' ಸೀರಿಯಲ್?ಜೀವಾ - ರಚನಾಳ ಹೊಸ ಪ್ರಪಂಚ!
ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ನಟ ರಿತ್ವಿಕ್ ಮಠದ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಧಾರಾವಾಗಿ 'ನಿನಗಾಗಿ' ಈಗಾಗಲೇ ಈ ಧಾರಾವಾಗಿ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿ ಸೂಪರ್‌ಸ್ಟಾರ್ ನಟಿಯ ಕಥೆಯನ್ನು ಹೇಳುವುದಕ್ಕೆ ಹೊರಟಿತ್ತು. ಈಗ ಹೊಸ ಪ್ರೋಮೋವನ್ನು ರಿಲೀಸ್ ಮಾಡಿದ್ದು ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.
'ನಿನಗಾಗಿ' ಧಾರಾವಾಹಿಯ ಆರಂಭದಲ್ಲೇ ಎರಡು ಟ್ರ್ಯಾಕ್‌ಗಳಲ್ಲಿ ಕಥೆ ಸಾಗುತ್ತಿತ್ತು. ಸೂಪರ್‌ಸ್ಟಾರ್ ರಚನಾ ಅಲಿಯಾಸ್ ರಚ್ಚು ಸ್ಟೋರಿ ಒಂದು ಟ್ರ್ಯಾಕ್‌ನಲ್ಲಿ ಸಾಗುತ್ತಿದ್ದರೆ, ಇನ್ನೊಂದು ಟ್ರ್ಯಾಕ್‌ನಲ್ಲಿ ಜೀವಾ ಹಾಗೂ ಕೃಷ್ಣ ಪಾತ್ರ ಸಾಗುತ್ತಿತ್ತು. ಬೇರೆ ಟ್ರ್ಯಾಕ್‌ನಲ್ಲಿ ನಡೆಯುತ್ತಿರುವ ಈ ಕಥೆ ಒಂದೇ ಟ್ರ್ಯಾಕ್‌ಗೆ ಬಂದರೆ ಹೇಗಿರುತ್ತೆ? ಅನ್ನೋದು ವೀಕ್ಷಕರು ಎದುರು ನೋಡುತ್ತಿದ್ದರು. ಅದೂ ಈಡೇರಿದೆ.

ಆದ್ರೀಗ ಈ ಧಾರಾವಾಹಿಯನ್ನು ಬಿಡದ ಹಾಗೆ ನೋಡುತ್ತಿರುವ ವೀಕ್ಷಕರಿಗೆ ಮತ್ತೊಂದು ತಿರುವು ಸಿಕ್ಕಿದೆ. ಇದೂವರೆಗೂ ಜೀವಾ, ರಚನಾ, ವಜ್ರೇಶ್ವರಿ ಕಥೆಯನ್ನು ಹೇಳುತ್ತಿದ್ದ 'ನಿನಗಾಗಿ' ಸೀರಿಯಲ್ ಹೊಸ ಮಾರ್ಗ ಹಿಡಿದಂತೆ ಕಾಣಿಸುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೊ ರಿವೇಂಜ್ ಕತೆಯನ್ನು ಹೇಳುವುದಕ್ಕೆ ಹೊರಟಿದೆ ಎಂದು ಭಾಸವಾಗಿತ್ತಿದೆ. ಮತ್ತೆರಡು ಮೇಜರ್ ಕ್ಯಾರೆಕ್ಟರ್‌ಗಳು ಆಕ್ಟಿವ್ ಆಗುತ್ತಿವೆ. ಹಾಗಿದ್ದರೆ, 'ನಿನಗಾಗಿ' ಸೀರಿಯಲ್ ಕಥೆಯೇನು? ಏನಿದು ಹೊಸ ಪ್ರಪಂಚ ಎಂದು ತಿಳಿಯುವುದಕ್ಕೆ ಮುಂದೆ ಓದಿ.
ಕಲರ್ಸ್ ಕನ್ನಡದ ಈ ಫ್ಯಾಮಿಲಿ ಧಾರಾವಾಹಿ 'ನಿನಗಾಗಿ'ನಲ್ಲಿ ಕಥೆ ಹೊಸತೊಂದು ತಿರುವು ಪಡೆದಿದೆ. ರಿಲೀಸ್ ಆಗಿರುವ ಪ್ರೋಮೊದಲ್ಲಿ ಹೊಸ ಪ್ರಪಂಚ, ಹೊಸ ಸವಾಲು ಹತ್ತು ಹಲವು ತಿರುವುಗಳನ್ನು ಹೊತ್ತು ತರ್ತಿದೆ 'ನಿನಗಾಗಿ' ಎನ್ನುವುದು ಸುಲಭವಾಗಿ ಅರ್ಧ ಮಾಡಿಕೊಳ್ಳಬಹುದಾಗಿದೆ. ಈ ಧಾರಾವಾಹಿಯ ಪ್ರೋಮೊ ನೋಡಿದಾಗ ಬೇರೆಯದ್ದೇ ಕಥೆ ಹೇಳುವುದಕ್ಕೆ ಹೊರಟಿದೆ ಅಂತ ಅನಿಸುವುದು ಸುಳ್ಳಲ್ಲ.

'ನಿನಗಾಗಿ' ಧಾರಾವಾಹಿಯ ಹೀರೋ ಜೀವಾನ ತಂದೆ ಶ್ರೀಮಂತ ಆಭರಣದ ಅಂಗಡಿಯ ವ್ಯಾಪಾರಿ. ಅಂತಹ ಆಗರ್ಭ ಶ್ರೀಮಂತ ಕುಟುಂಬದ ಕಥೆಯನ್ನು ಹೇಳುವುದಕ್ಕೆ ಹೊರಟಿದೆ. ಜೀವಾ ಸಾವನ್ನಪ್ಪಿರುವ ತಂದೆಯ ಆಸೆಯನ್ನು ಈಡೇರಿಸುವ ಶಪಥ ಮಾಡುತ್ತಿರುವ ದೃಶ್ಯವಿದೆ. ಅದಕ್ಕೆ ರಚನಾ ಕೂಡಾ ಜೊತೆಯಾಗಿದ್ದಾಳೆ. ಇವರ ಜೀವನದಲ್ಲಿ ಅಂತಹದ್ದೇನಾಯ್ತು? ಇದು ಫ್ಲಾಶ್ ಬ್ಯಾಕ್ ಸ್ಟೋರಿನಾ? ಏನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಜೀವಾ ಹಾಗೂ ರಚನಾ ಇಬ್ಬರೂ ಆ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಾರಾ? ಹೊಸ ಪ್ರಪಂಚದ ಕಥೆ ಎಷ್ಟು ದಿನ. ಮತ್ತೆ ಹಳೆಯ ಪ್ರಪಂಚಕ್ಕೆ ಮರಳುತ್ತಾರಾ? ಇಲ್ವಾ? ಅನ್ನೋದು ಸದ್ಯಕ್ಕೆ ನಿಲುಕದ ಉತ್ತರ. ಆದರೆ 'ನಿನಗಾಗಿ' ಧಾರಾವಾಹಿಯಂತೂ ಹೊಸ ಪ್ರಪಂಚ, ಹೊಸ ಸವಾಲುಗಳನ್ನು ತೋರಿಸುವುದಕ್ಕೆ ಮುಂದಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸ್ ಪ್ರಭು ಬಹಳ ದಿನಗಳ ಬಳಿಕ ಜೀವನ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ 'ಇಂಡಿಯನ್' ರಿಯಾಲಿಟಿ ಶೋ', 'ಮೇಘ ಮಯೂರಿ' ಧಾರಾವಾಹಿಯಲ್ಲಿ ನಟಿಸಿದ್ದ ಪ್ರದೀಪ 'ನಿನಗಾಗಿ' ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.
ಇಲ್ಲಿವರೆಗೂ ಸೂಪರ್‌ಸ್ಟಾರ್ ರಚನಾಗೆ ಮಲತಾಯಿಯ ಹಿಡಿತದಲ್ಲಿ ಇರುತ್ತಾಳೆ. ಅತ್ತ ಜೀವಾ ಹಾಗೂ ಕೃಷ್ಣಾಇಬ್ಬರೂ ತಂದೆ ಮಗಳಂತೆ ಇದ್ದಾರೆ. ಈಗ ಹೊಸ ಪ್ರಪಂಚದಲ್ಲಿ ಏನೆಲ್ಲ ನಡೆಯುತ್ತೆ ಅನ್ನೋದು ಕುತೂಹಲ. 'ನಿನಗಾಗಿ' ವಾರದ ಏಳೂ ದಿನ ಪ್ರತಿ ರಾತ್ರಿ ಎಂಟು ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಹೊಸ ಪ್ರಪಂಚದಲ್ಲಿ ಏನೆಲ್ಲಾ ಆಗುತ್ತೆ? ಹೊಸ ಸವಾಲುಗಳು ಏನು? ಕಥೆ ಯಾವ ರೀತಿ ತಿರುವುಗಳನ್ನು ಪಡೆದುಕೊಳ್ಳುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಎಪಿಸೋಡ್ ಅನ್ನು ನೋಡಲೇಬೇಕು.


Click it and Unblock the Notifications











