BBK 11: ಬಿಗ್‌ಬಾಸ್ ಕನ್ನಡ ಲೋಗೊದಲ್ಲೇ ಅಡಗಿದೆಯಾ ಸೀಕ್ರೆಟ್? RRR ಸಿನಿಮಾಗೂ ಈ ಶೋಗೂ ಏನು ಲಿಂಕ್?
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡದ 11ನೇ ಸೀಸನ್ ಮತ್ತೆ ಶುರುವಾಗುತ್ತಿದೆ. ಕೇವಲ ಪ್ರೋಮೊ ನೋಡಿಯೇ ಬಿಗ್‌ಬಾಸ್ ಮನೆಯೊಳಗೆ ಯಾರು ಹೋಗಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ. ಇವರು ಹೋಗಬಹುದು. ಅವರು ಹೋಗಬಹುದು ಅಂತ ಲೆಕ್ಕಾಚಾರ ಹಾಕಲಾಗುತ್ತಿದೆ.
ಇನ್ನೊಂದು ಕಡೆ ಈ ಬಾರಿ ಬಿಗ್‌ಬಾಸ್ ನಿರೂಪಣೆಯನ್ನು ಕಿಚ್ಚ ಸುದೀಪ್ ಮಾಡುತ್ತಾರಾ? ಇಲ್ವಾ? ಅನ್ನೋದೇ ದೊಡ್ಡ ಡಿಬೆಟ್ ಆಗುತ್ತಿದೆ. ಕಿಚ್ಚ ಸುದೀಪ್ ಬದಲಿಗೆ ರಿಷಬ್ ಶೆಟ್ಟಿ, ಡಾಲಿ ಧನಂಜಯ್ ಹೆಸರುಗಳು ಕೂಡ ಕೇಳಿ ಬರುತ್ತಿವೆ. ಆದರೆ, ಈ ಬಾರಿನೂ ನಿರೂಪಣೆ ಮಾಡೋದು ಕಿಚ್ಚ ಸುದೀಪ್ ಅಂತ ಬಲ್ಲ ಮೂಲಗಳು ಹೇಳುತ್ತಿವೆ. ಸದ್ಯ ಸುದೀಪ್ ಅವರನ್ನು ರಿಪ್ಲೇಸ್ ಮಾಡುವುದಕ್ಕೆ ಅಸಾಧ್ಯ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ.

ಈ ಮಧ್ಯೆ ಚಿಕ್ಕದಾಗಿ ಬಿಗ್‌ಬಾಸ್ ಲೋಗೊ ಬಗ್ಗೆ ಚರ್ಚೆ ಶುರುವಾಗಿದೆ. ಪ್ರತಿ ಸೀಸನ್‌ಗೂ ಕಣ್ಣಿನ ಆಕಾರದ ಬಿಗ್‌ಬಾಸ್ ಲೋಗೊ ಬದಲಾಗುತ್ತಲೇ ಇರುತ್ತೆ. ಈ ಬಾರಿ ಕೂಡ ಬಿಗ್‌ಬಾಸ್ ಕನ್ನಡದ 11ನೇ ಸೀಸನ್‌ನ ಲೋಗೊ ಬದಲಾಗಿದೆ. ಈ ಲೋಗೊದಲ್ಲೇ ಈ ಬಾರಿ ಬಿಗ್ ಬಾಸ್‌ನ ಥೀಮ್ ಅಡಗಿದೆ ಅಂತ ಚರ್ಚೆಯಾಗುತ್ತಿದೆ. ಅಸಲಿಗೆ ಈ ಬಾರಿಯ ಲೋಗೊದಲ್ಲಿ ಅಂತಹದ್ದೇನಿದೆ ಸ್ಪೆಷಲ್? RRR ಸಿನಿಮಾಗೂ ಈ ಬಾರಿಯ ಬಿಗ್‌ಬಾಸ್‌ಗೂ ಏನು ಸಂಬಂಧ? ತಿಳಿಯುವುದಕ್ಕೆ ಮುಂದೆ ಓದಿ.
ಬಿಗ್‌ಬಾಸ್ ಕನ್ನಡ ಸೀಸನ್ 11 ಲೋಗೊ ಎದ್ದು ಕಾಣುತ್ತಿದೆ. ಈ ಲೋಗೊದಲ್ಲಿ ಹೆಚ್ಚಾಗಿ ನೀಲಿ ಮತ್ತು ಕಿತ್ತಳೆ ಬಣ್ಣವನ್ನು ನೋಡಬಹುದು. ಈ ಎರಡೂ ಬಣ್ಣಗಳು ಈ ಬಾರಿಯ ಬಿಗ್‌ಬಾಸ್ ಕನ್ನಡದ ಥೀಮ್ ಅನ್ನು ನಿರ್ಧಾರ ಮಾಡುತ್ತವೆ ಎಂದು ಅಂದಾಜಿಸಲಾಗುತ್ತಿದೆ. ಅಷ್ಟಕ್ಕೂ ಬಣ್ಣದಲ್ಲೇನು ಥೀಮ್ ಹುಡುಕುವುದು? RRR ಸಿನಿಮಾಗೆ ಏನು ಲಿಂಕ್? ಅಂತ ಅನಿಸಬಹುದು ಅದಕ್ಕೆ ನೆಟ್ಟಿಗರೇ ಉತ್ತರವನ್ನೂ ಕಂಡುಕೊಂಡಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್ 10 ಅನ್ನು ಎರಡು ತಂಡಗಳಾಗಿ ವಿಂಗಡಣೆ ಮಾಡಲಾಗಿತ್ತು. ಸಮರ್ಥರು ಹಾಗೂ ಅಸಮರ್ಥರು ಅನ್ನೋ ಥೀಮ್ ಅಡಿಯಲ್ಲಿ ಎರಡು ಗುಂಪುಗಳನ್ನಾಗಿ ಮಾಡಿ ಮನೆಯೊಳಗೆ ಕಳುಹಿಸಲಾಗಿತ್ತು. ಈ ಎರಡು ಗುಂಪಿನ ನಡುವೆ ಬಿಗ್‌ಬಾಸ್ ಮುಗಿಯುವವರೆಗೂ ಕಾದಾಟ ನಡೆಯುತ್ತಲೇ ಇತ್ತು. ಕೊನೆಯಲ್ಲಿ ಸಮರ್ಥರಿಗಿಂತ ಅಸಮರ್ಥರು ಹೆಚ್ಚಾಗಿ ಮಿಂಚಿದ್ದರು.
ಈ ಬಾರಿ ಕೂಡ ಇದೇ ಸ್ಟ್ರಾಟಜಿಯನ್ನು ಕಲರ್ಸ್ ಕನ್ನಡ ಹಾಗೂ ತಂಡ ಬಳಸುತ್ತಿದೆ ಎನ್ನಲಾಗಿದೆ. ಈ ಬಾರಿ ತಿಳಿ ನೀರಿನಂತಹ ಸ್ವಭಾವದವರು. ಹಾಗೂ ಬೆಂಕಿಯಂತಹ ಮನಸ್ಥಿತಿಯವರನ್ನು ಬಿಗ್ ಬಾಸ್ ಮನೆಯೊಳಗೆ ಬಿಡಲಾಗುತ್ತೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಾರಿ ಕಳೆದ ಸೀಸನ್‌ಗಿಂತಲೂ ಪೈಪೋಟಿ, ಸಂಘರ್ಷವನ್ನು ನಿರೀಕ್ಷೆ ಮಾಡಬಹುದು ಎಂದು ಅಂದಾಜಿಸಲಾಗುತ್ತಿದೆ.
ಇನ್ನು ರಾಜಮೌಳಿ ಮೊದಲು RRR ಸಿನಿಮಾದ ಟೈಟಲ್ ರಿವೀಲ್ ಮಾಡಿದಾಗಲೂ ಇದೇ ಕಾನ್ಸೆಪ್ಟ್ ಬಗ್ಗೆನೇ ಹೇಳಿದ್ದರು. ಜೂ.ಎನ್‌ಟಿಆರ್ ಪಾತ್ರವನ್ನು ನೀರಿಗೂ, ರಾಮ್ ಚರಣ್ ಪಾತ್ರವನ್ನು ಬೆಂಕಿಗೂ ಹೋಲಿಕೆ ಮಾಡಲಾಗಿತ್ತು. ಈಗ ಎರಡೂ ಲೋಗೊಗಳು ಕೂಡ ಬಣ್ಣದ ವಿಷಯದಲ್ಲಿ ಹೆಚ್ಚು ಹೋಲಿಕೆಯಾಗುತ್ತಿದೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ 10 ಕುತೂಹಲವನ್ನು ಕೆರಳಿಸುತ್ತಿದೆ.


Click it and Unblock the Notifications











