'ಜಬರ್ದಸ್ತ್'ಗೆ ಗುಡ್ ಬೈ ಹೇಳಿದ 'ಪುಷ್ಪ' ನಟಿ : ಕೊನೆಯ ಸಂಚಿಕೆಯಲ್ಲಿ ಅನಸೂಯಾ ಭಾವುಕ!
ತೆಲುಗಿನಲ್ಲಿ ಸಿನಿಮಾಗಳು ಎಷ್ಟು ಸದ್ದು ಮಾಡುತ್ತಿವೆಯೋ ಅಷ್ಟೇ ಸದ್ದು ಮಾಡುತ್ತಿರುವುದು ಕಿರುತೆರೆಯಲ್ಲಿ ಪ್ರಸಾರವಾಗುವ ಕಾಮಿಡಿ ಶೋ. ಅದರಲ್ಲೂ 'ಜಬರ್ದಸ್ತ್' ಅನ್ನೋ ಕಾಮಿಡಿ ಶೋಗೆ ಕರ್ನಾಟಕದಲ್ಲೂ ಅಭಿಮಾನಿಗಳಿದ್ದಾರೆ.
ಬಹಳ ದಿನಗಳಿಂದ ಈ ಶೋನ ನಿರೂಪಕಿ ಅನಸೂಯಾ ಭಾರದ್ವಾಜ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿತ್ತು. ಕೊನೆಗೂ ಆ ಗೊಂದಲಕ್ಕೀಗ ಸ್ಪಷ್ಟತೆ ಸಿಕ್ಕಿದೆ. 'ಜಬರ್ದಸ್ತ್' ಕಾಮಿಡಿ ಶೋನಿಂದ ಅನಸೂಯಾ ಭಾರದ್ವಾಜ್ ಹೊರನಡೆಯುವುದು ಬಹುತೇಕ ಖಚಿತಗೊಂಡಿದೆ. 'ಜಬರ್ದಸ್ತ್' ಕಾಮಿಡಿ ಶೋನಲ್ಲಿ ಅನಸೂಯಾ ನಿರೂಪಣೆ ಮಾಡಿದ ಕೊನೆಯ ಸಂಚಿಕೆಯಲ್ಲಿ ಕೆಲವು ಬೆಳವಣಿಗೆಗಳು ನಡೆದಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಕೆಲವೇ ದಿನಗಳ ಹಿಂದಷ್ಟೇ ಅನಸೂಯಾ ಜಬರ್ದಸ್ತ್ ಕಾಮಿಡಿ ಶೋವನ್ನು ತೊರೆಯುತ್ತಿದ್ದೇನೆ ಎಂದು ಪರೋಕ್ಷವಾಗಿ ಪೋಸ್ಟ್ ಮಾಡಿದ್ದರು. ಅಲ್ಲಿಂದ ಗೊಂದಲ ಶುರುವಾಗಿತ್ತು. ಈ ವಿಷಯ ವೈರಲ್ ಆಗುತ್ತಿದ್ದಂತೆ ವಿಭಿನ್ನ ಪ್ರತಿಕ್ರಿಯೆಗಳು ಬಂದಿದ್ದವು. ಆಗಲೂ ಅನಸೂಯಾ 'ಜಬರ್ದಸ್ತ್' ತೊರೆಯುತ್ತಿದ್ದಾರೋ, ಇಲ್ಲವೋ ಎಂಬ ಸ್ಪಷ್ಟತೆ ಇರಲಿಲ್ಲ.

ನಿರೂಪಣೆಗೆ ಗುಡ್ ಬೈ ಹೇಳಿದ ಅನಸೂಯಾ
ತೆಲುಗಿನ ಕಾಮಿಡಿಗೆ ಒಂದು ಟ್ರೆಂಡ್ ಹುಟ್ಟು ಹಾಕಿದ ಶೋ 'ಜಬರ್ದಸ್ತ್'. ಈ ಶೋ ನಿರೂಪಣೆ ಮಾಡುವ ಮೂಲಕ ಅನಸೂಯಾ ಭರ್ಜರಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು. ಅವರಿಗೆ ಈ ಶೋ ಮೂಲಕ ಸಿಕ್ಕಾಪಟ್ಟೆ ಪ್ರಚಾರ ಕೂಡ ಸಿಕ್ಕಿತ್ತು. ಈ ಬೆನ್ನಲೇ ಅನಸೂಯಾ 'ಜಬರ್ದಸ್ತ್' ತೊರೆಯುತ್ತಿದ್ದಾರೆ ಅನ್ನುವ ಸುದ್ದಿ ಪ್ರೋಮೊ ಮೂಲಕ ಸ್ಪಷ್ಟವಾಗಿದೆ. ಈಗ ಸಿನಿಮಾಗಾಗಿ 'ಜಬರ್ದಸ್ತ್' ಶೋಗೆ ಗುಡ್ ಬೈ ಹೇಳುವುದಾದರೇ ಒಪ್ಪಿಕೊಂಡ ಹೊಸ ಶೋ ಅನ್ನೂ ಬಿಡಲಿ ಎಂದು ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.

ಅನಸೂಯಾ ಮೇಲೆ ಸ್ಕಿಟ್
ಅನುಸೂಯಾ 'ಜಬರ್ದಸ್ತ್' ಕಾರ್ಯಕ್ರಮವನ್ನು ತೊರೆಯುತ್ತಿರುವ ಸುದ್ದಿ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದೆ. ಇದು ನಿಜನಾ? ಇಲ್ಲಾ ಕೇವಲ ಕಾರ್ಯಕ್ರಮಕ್ಕಾಗಿ ಇಂತಹ ಸ್ಕಿಟ್ ಮಾಡಿದ್ದಾರಾ? ಅನ್ನೋ ಗೊಂದಲವಂತೂ ಇದ್ದೇ ಇದೆ. ಈ ಮಧ್ಯೆ ವೆಂಕಿ ಮಂಕೀಸ್ ತಂಡ ಅನಸೂಯಾ ಅವರನ್ನಿಟ್ಟುಕೊಂಡೇ ವಿಶೇಷವಾದ ಸ್ಕಿಟ್ ಮಾಡಿದೆ. ಇದರಲ್ಲಿ ಕುಡುಕ ರಮೇಶ್ ನಾನು ಜಬರ್ದಸ್ತ್ ತೊರೆಯಲು ಬಯಸುತ್ತೇನೆ ಎಂದು ಹೇಳಿದಾಗ ಅನಸೂಯ ಭಾವುಕರಾಗಿದ್ದಾರೆ.

ಭಾವುಕರಾದ ಅನಸೂಯಾ
ಈ ಸ್ಕಿಟ್‌ನಲ್ಲಿ ಅನಸೂಯಾಗೆ "ನಿಮ್ಮ ಮಕ್ಕಳು ಚಿಕ್ಕವರಿದ್ದಾಗಲೂ ನೀವು ಅಪ್ಪ-ಅಮ್ಮನ ಹತ್ತಿರ ಅವರನ್ನು ಬಿಟ್ಟು 'ಜಬರ್ದಸ್ತ್' ಶೋ ನಡೆಸಿಕೊಟ್ಟಿದ್ದೀರಾ. ಈಗ ಈ ಶೋಗೆ ಗುಡ್ ಬೈ ಹೇಳಲು ಕಾರಣವೇನು? ಎಂದು ಕೇಳಿದಾಗ, ಕುಡುಕ ರಮೇಶ್ " ಪ್ರತಿದಿನ ಇಲ್ಲಿಗೆ ಬಂದು ಹೋಗುತ್ತಾರೆ ಅಂತ ಹೇಳಿದ ಕೂಡಲೇ ನಿರೂಪಕಿ ಅನಸೂಯ ಭಾವುಕರಾಗಿದ್ದರು.

ಜಬರ್ದಸ್ತ್ ತೊರೆಯಲು ಕಾರಣವೇನು?
ಈ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಬಂದಿರುವ ಇಂದ್ರಜಾ ಕೂಡ ಕಣ್ಣೀರು ಹಾಕಿದ್ದಾರೆ. ಅಲ್ಲದೆ ಈ ವೇದಿಕೆಯಲ್ಲಿ ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಸಿಗುತ್ತಿರುವುದರಿಂದ ಜಬರ್ದಸ್ತ್ ಅನ್ನು ತೊರೆಯುತ್ತಿದ್ದಾರೆ ಎನ್ನಲಾಗಿದೆ. ಇವೇ ವೇಳೆ ತಿಂಗಳಲ್ಲಿ ಮೂರು ದಿನ ಸಿನಿಮಾ ಮಾಡುವುದಕ್ಕೆ ಕಾರ್ಯಕ್ರಮಕ್ಕೆ ತೊರೆಯುತ್ತಿದ್ದಾರೆ ಎಂಬ ಮಾತು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.


Click it and Unblock the Notifications











