Comedy Khiladigalu 5: ಕನ್ನಡ ಕಿರುತೆರೆಯ ಜನಪ್ರಿಯ ಕಾಮಿಡಿ ಶೋನಲ್ಲಿ ಏನೆಲ್ಲ ಬದಲಾವಣೆ? ಯಾವಾಗಿಂದ ಶುರು?

ಕನ್ನಡ ಕಿರುತೆರೆಯ ಜನಪ್ರಿಯ ಕಾಮಿಡಿ ಶೋ ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು'. ಈ ಶೋಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ. ವೀಕೆಂಡ್‌ನಲ್ಲಿ ವೀಕ್ಷಕರು ಬಿಡದಂತೆ ಈ ಶೋಗಳನ್ನು ನೋಡುತ್ತಾ ಬಂದಿದ್ದಾರೆ. 'ಕಾಮಿಡಿ ಕಿಲಾಡಿಗಳು' ಕಳೆದ ನಾಲ್ಕು ಸೀಸನ್‌ನಿಂದಲೂ ವೀಕ್ಷಕರನ್ನು ತನ್ನ ಸೆಳೆಯುತ್ತಲೇ ಬರುತ್ತಿದೆ. ಈ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಸೀಸನ್‌ಗೆ ರೆಡಿಯಾಗಿದೆ.

'ಕಾಮಿಡಿ ಕಿಲಾಡಿಗಳು' ಶೋ ಮತ್ತೆ ಕಿರುತೆರೆ ವೀಕ್ಷಕರನ್ನು ರಂಜಿಸುವುದಕ್ಕೆ ಬರುತ್ತಿದೆ. 5ನೇ ಸೀಸನ್ ಸಾಕಷ್ಟು ವಿಶೇಷತೆಗಳೊಂದಿಗೆ ಒಂದಿಷ್ಟು ಬದಲಾವಣೆಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ರೆಡಿಯಾಗಿದೆ. ಪ್ರೇಕ್ಷಕರಿಗೆ ಇನ್ನೂ ಹೆಚ್ಚು ಮನರಂಜನೆಯನ್ನು ನೀಡುವ ಉದ್ದೇಶದಿಂದ ಈ ಬಾರಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಕಾಮಿಡಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಾಹಿನಿ ಸಿದ್ಧವಾಗಿದೆ.

Jaggesh Yogaraj Bhat and Tara s Comedy Khiladigalu Season 5 launch date and Highlights details

ಈ ಬಾರಿ 'ಕಾಮಿಡಿ ಕಿಲಾಡಿಗಳು' ಶೋದ ನಿರೂಪಕರೂ ಕೂಡ ಬದಲಾಗಿದ್ದಾರೆ. ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಈ ಶೋ ಅನ್ನು ನಡೆಸಿಕೊಡಲಿದ್ದಾರೆ. ಮಾತಿನ ಮಲ್ಲಿ ಅನುಶ್ರೀ, ಇಲ್ಲವೇ ಮಾಸ್ಟರ್ ಆನಂದ್ ನಿರೂಪಣೆ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಇವರಿಬ್ಬರ ಜಾಗಕ್ಕೆ ನಿರಂಜನ್ ದೇಶಪಾಂಡೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಈ ಬಾರಿ ಕಾಮಿಡಿ ಕಿಲಾಡಿಗಳು ಶೋ ವಿಭಿನ್ನವಾಗಿರುತ್ತೆ.

ಇವರೊಂದಿಗೆ ಜಡ್ಜ್‌ಗಳು ಕೂಡ ಬದಲಾಗಿದ್ದಾರೆ. ಕಾಮಿಡಿ ಕಿಂಗ್ ಜಗ್ಗೇಶ್ ಒಬ್ಬರನ್ನು ಬಿಟ್ಟು ಇಬ್ಬರು ಜಡ್ಜ್‌ಗಳು ಬದಲಾಗಿದ್ದಾರೆ. ಮುನಿಸಿಕೊಂಡು ಬೇರೆಯಾಗಿದ್ದ ಸ್ಯಾಂಡಲ್‌ವುಡ್‌ನ ನಿರ್ದೇಶಕ ಯೋಗರಾಜ್ ಭಟ್ ಮತ್ತೆ ಕಾಮಿಡಿ ಕಿಲಾಡಿಗಳು ತಂಡವನ್ನು ಸೇರಿಕೊಂಡಿದ್ದಾರೆ. ಇವರೊಂದಿಗೆ ಹೊರ ಸೇರ್ಪಡೆ ಅಂದರೆ, ಅದು ಹಿರಿಯ ನಟಿ ತಾರಾ ಅನುರಾಧಾ. ಈ ಮೂವರು ಜಡ್ಜ್‌ಗಳಾಗಿ ಭಾಗವಹಿಸಲಿದ್ದಾರೆ. ಇವೆರಲ್ಲರೂ ಸೇರಿ ವೀಕ್ಷಕರ ನಗುವನ್ನು ಡಬಲ್ ಮಾಡೋದರಲ್ಲಿ ಯಾವುದೇ ಸಂದೇಹವಿಲ್ಲ.

ಈ ಬಾರಿ ಜೀ ಕನ್ನಡ ತನ್ನ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುವುದ ಹೊಸ ಪ್ರಯತ್ನಗಳಿಗೂ ಕೈ ಹಾಕಿದೆ. ಹೀಗಾಗಿ ಕರ್ನಾಟಕದ ವಿವಿಧ ಭಾಗಗಳಿಂದ ಪ್ರತಿಭಾನ್ವಿತ ನವಹಾಸ್ಯನಟರನ್ನು ಹುಡುಕಿ ಕರೆದುಕೊಂಡು ಬಂದಿದ್ದಾರೆ. ಇವರೆಲ್ಲರೂ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿದ್ದಾರೆ. ಕಿರುತೆರೆ ವೀಕ್ಷಕರು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ನೂತನ ಸ್ಕಿಟ್‌ಗಳಲ್ಲಿ ಈ ನವಪ್ರತಿಭೆಗಳು ಕಾಣಿಸಿಕೊಳ್ಳಲಿದ್ದಾರೆ.

ಕಾಮಿಡಿ ಕಿಲಾಡಿಗಳು ಸೀಸನ್ 5 ಸಂಪೂರ್ಣವಾಗಿ ಹೊಸತನದಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಪ್ರತಿಸಂಚಿಕೆಯಲ್ಲೂ ಹಾಸ್ಯ, ತರ್ಲೆ, ನಗುವಿನ ಚಟಾಕಿ ಇರೋದು ಗ್ಯಾರಂಟಿ. ಹೊಸ ಪ್ರತಿಭೆಗಳು ಕಾಮಿಡಿ ಸ್ಕಿಟ್‌ಗಳ ಮೂಲಕ ಕನ್ನಡಿಗರ ಮನ ಗೆಲ್ಲುವುದಕ್ಕೆ ಸಜ್ಜಾಗಿದ್ದಾರೆ. ಪ್ರತಿ ವೀಕೆಂಡ್‌ನಲ್ಲೂ ಹಾಸ್ಯದಿಂದ ಕೂಡಿದ ಮನರಂಜನೆ ಸಿಗೋದು ಗ್ಯಾರಂಟಿ ಅಂತಿದ್ದಾರೆ ವೀಕ್ಷಕರು. 'ಕಾಮಿಡಿ ಕಿಲಾಡಿಗಳು' ಸೀಸನ್ 5 ಇದೇ ಅಕ್ಟೋಬರ್ 25 ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ.

More from Filmibeat

English summary
Jaggesh, Yogaraj Bhat and Tara's Comedy Khiladigalu Season 5 launch date and Highlights details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X