ಜನಶ್ರೀ ವಾಹಿನಿಯಲ್ಲಿ ಶಂಕರನಾಗ್ ಮಾಲ್ಗುಡಿ ಡೇಸ್

Shankar Nag's Malgudi Days in Janashri channel
ಕಿರುತೆರೆಯಲ್ಲಿ ಭಾರೀ ಸದ್ದು ಮಾಡಿದ್ದ ದಿ.ಶಂಕರನಾಗ್ ಅವರ 'ಮಾಲ್ಗುಡಿ ಡೇಸ್' ಧಾರವಾಹಿ ಮತ್ತೆ ಪ್ರಸಾರವಾಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಜನಶ್ರೀ ವಾಹಿನಿಯಲ್ಲಿ ಕನ್ನಡ ಉಪಶೀರ್ಷಿಕೆಯೊಂದಿಗೆ ಜೂನ್ 16ರಿಂದ ಈ ಧಾರವಾಹಿ ಆರಂಭವಾಗಲಿದೆ.

ಹೆಮ್ಮೆಯ ಕನ್ನಡಿಗ, ಆಟೋರಾಜ ಶಂಕರನಾಗ್ ಅವರಿಗೆ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ಧಾರವಾಹಿ ಇದು. ಆರ್ ಕೆ ನಾರಾಯಣ್ ಅವರ ಕಥೆಯನ್ನು ಆಧರಿಸಿ ಶಂಕರನಾಗ್ ಈ ಧಾರವಾಹಿಯನ್ನು ನಿರ್ದೇಶನ ಮಾಡಿದ್ದರು. 1990ರಲ್ಲಿ ಅನಾರೋಗ್ಯದ ಕಾರಣ ಚೆನ್ನೈಗೆ ಸ್ಥಳಾಂತರಗೊಳ್ಳುವ ಮೊದಲು ಆರ್ ಕೆ ನಾರಾಯಣ್ ಅವರು ಮೈಸೂರಿನ ಯಾದವಗಿರಿ ಬಡಾವಣೆಯ ಮನೆಯಲ್ಲಿ ಎರಡು ದಶಕಗಳ ಕಾಲ ಜೀವಿಸಿದ್ದರು.

1986 ರಲ್ಲಿ ಇದು ದೂರದರ್ಶನದಲ್ಲಿ ಇದು ಮೊದಲಬಾರಿಗೆ ಪ್ರಸಾರವಾಗಿತ್ತು. ಕರ್ನಾಟಕದ ಆಗುಂಬೆಯಲ್ಲಿ ಈ ಧಾರವಾಹಿಯನ್ನು ಚಿತ್ರೀಕರಣ ಮಾಡಲಾಗಿತ್ತು. ಅನಂತನಾಗ್, ಲೋಕನಾಥ್, ರಮೇಶ್ ಭಟ್, ವೈಶಾಲಿ ಕಾಸರವಳ್ಳಿ, ಮನದೀಪ್ ರಾಯ್, ಮಾಸ್ಟರ್ ಮಂಜುನಾಥ್, ಗಿರೀಶ್ ಕಾರ್ನಾಡ್ ಮುಂತಾದವರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ಈಗಾಗಲೇ ಜನಶ್ರೀ ಕನ್ನಡ ವಾಹಿನಿ ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಾಕ ಈಗಾಗಲೇ ಅಪಾರ ಸಂಖ್ಯೆಯ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಶೇಷವಾಗಿ ಕಾರ್ಯಕ್ರಮ ವಿಭಾಗದಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದು ಅವುಗಳಲ್ಲಿ ಧಾರಾವಾಹಿಯ ಪ್ರಸಾರ ಕೂಡಾ ಒಂದು.

ಸದಾ ಕ್ರಿಯಾಶೀಲರಾಗಿದ್ದ ಶಂಕರ್ ನಾಗ್ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕಲ್ಪಿಸಿದವರು. ಕಿರುತೆರೆಯಲ್ಲೂ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಶಂಕರಣ್ಣ ಮುಖ್ಯವಾಗಿ ಯುವ ನಿರ್ದೇಶಕರು, ಕಲಾವಿದರಿಗೆ ಸ್ಫೂರ್ತಿಯಾಗಿದ್ದರು.

ಗುಡ್ಡದ ಭೂತ ಧಾರವಾಹಿಯನ್ನು ಪ್ರಸಾರ ಮಾಡುವ ಮೂಲಕ ದೇಶ ನ್ಯೂಸ್ ಚಾನಲ್ ಗಳ ಇತಿಹಾಸದಲ್ಲೇ ಹೊಸ ಭಾಷ್ಯ ಬರೆದಿರುವ ಜನಶ್ರೀ ವಾಹಿನಿಗೆ ಧಾರಾವಾಹಿ ಪ್ರಸಾರಕ್ಕೆ ನೋಡುಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

More from Filmibeat

English summary
Janashri channel to telecast Shankar Nag directed Malgudi Days serial. This serial will be telecasted on Saturday and Sunday's from June 16 onwards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X