Richest TV Actress:ಈಕೆ ಭಾರತದ ಶ್ರೀಮಂತ ಕಿರುತೆರೆ ನಟಿ; 24 ವರ್ಷದ ನಟಿಯ ಒಟ್ಟು ಆಸ್ತಿ ಎಷ್ಟು ಗೊತ್ತೇ?

ಭಾರತ ಕಿರುತೆರೆ ನಟಿಯರದ್ದೇ ಒಂದು ಪ್ರಪಂಚ. ಇವರು ಯಾವ ಸಿನಿಮಾ ನಟಿಯರಿಗೂ ಕಮ್ಕಿಯಿಲ್ಲ. ಅದರಲ್ಲೂ ಹಿಂದಿ ಕಿರುತೆರೆಯ ನಟಿಯರು ಪಡೆಯುವ ಸಂಭಾವನೆ ಸಿನಿಮಾ ನಟಿಯರಿಗೂ ಸಿಗುತ್ತೆ ಅನ್ನೋದು ಅನುಮಾನ. ಒಂದೊಂದು ಎಪಿಸೋಡ್‌ನಲ್ಲಿ ನಟಿಸುವುದಕ್ಕೆ ಲಕ್ಷ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ. ಇಂತಹ ಸಾಕಷ್ಟು ನಟಿಯರು ಹಿಂದಿ ಕಿರುತೆರೆಯಲ್ಲಿ ನೋಡಬಹುದು.

ಹಿಂದಿ ಕಿರುತೆರೆಯ ಜನಪ್ರಿಯ ನಟಿಯರಾದ ರೂಪಾಲಿ ಗಂಗೂಲಿ, ಹೀನಾ ಖಾನ್, ಶ್ವೇತಾ ತಿವಾರಿ ಅಂತಹ ನಟಿಯರು ಸಂಭಾವನೆ ಗಗನದಲ್ಲಿದೆ. ಇವರೆಲ್ಲರೂ ಶ್ರೀಮಂತ ಕಿರುತೆರೆ ನಟಿಯರ ಪಟ್ಟಿಯಲ್ಲಿ ಟಾಪ್‌ನಲ್ಲಿ ಇದ್ದಾರೆ. ಇವರೆಲ್ಲರೂ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರು. ಹೀಗಾಗಿ ಯುವ ನಟಿಯರು ಕೂಡ ಕಿರುತೆರೆ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

Jannat Zubair Rahmani is richest Indian tv actress her net worth reportedly 250cr

ಈ ಮೂವರು ನಟಿಯರಿಗಿಂತ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ 'ಕ್ಯೂಂಕಿ ಸಾಸ್ ಭೀ ಕಭೀ ಬಹು ಥೀ' ನಾಯಕಿ ಸ್ಮೃತಿ ಇರಾನಿ. ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದಿಷ್ಟು ಗ್ಯಾಪ್‌ ಕೊಟ್ಟು ಮತ್ತೆ ಕಮ್‌ ಬ್ಯಾಕ್ ಮಾಡಿದ ಬಳಿಕ ತನ್ನ ಸಂಭಾವನೆಯನ್ನು ಗಗನಕ್ಕೆ ಏರಿಸಿಕೊಂಡಿದ್ದರು. ಆದರೂ, ಇವರು ಕಿರುತೆರೆಯ ಅತ್ಯಂತ ಶ್ರೀಮಂತ ನಟಿಯಲ್ಲ. ಹಾಗಿದ್ದರೆ, ಈ ಪಟ್ಟಿಯಲ್ಲಿ ಯಾರ ಹೆಸರು ಅಗ್ರಸ್ಥಾನದಲ್ಲಿ ಇರೋದು 24 ವರ್ಷದ ನಟಿ ಜನ್ನತ್ ಜುಬೈರ್ ರಹಮಾನಿ.

ಭಾರತದ ಕಿರುತೆರೆ ಲೋಕದ ಅತ್ಯಂತ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಜನ್ನತ್ ಜುಬೈರ್ ರಹಮಾನಿ ಹೆಸರಿದೆ. ಟಿಕ್‌ಟಾಕ್‌ನಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಈ ನಟಿ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. 24 ವರ್ಷದ ಮುಂಬೈನ ಈ ನಟಿ ಈಗಾಗಲೇ ಸಾಕಷ್ಟು ಕಿರುತೆರೆ ಶೋಗಳಲ್ಲಿ ನಟಿಸಿದ್ದಾರೆ. ವಿಡಿಯೋ ಆಲ್ಬಮ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದಾರೆ.

ಹಾಗಂತ ಕೇವಲ ಹಿಂದಿ ಧಾರಾವಾಹಿಗಳಲ್ಲಷ್ಟೇ ಅಲ್ಲ. ಕೆಲವು ಹಿಂದಿ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಒಂದು ಪಂಜಾಬಿ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಬ್ರ್ಯಾಂಡ್‌ಗಳು ಹಾಗೂ ಉತ್ಪನ್ನಗಳಿಗೆ ರಾಯಬಾರಿಯಾಗಿದ್ದಾರೆ. ಹೀಗೆ ನಟನೆ ಹಾಗೂ ಜಾಹೀರಾತು ಮೂಲಗಳಿಂದಲೂ ಇವರು ಸಂಪಾದನೆ ಮಾಡುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿ ಸುಮಾರು ₹250 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

Jannat Zubair Rahmani is richest Indian tv actress her net worth reportedly 250cr

ಜನ್ನತ್ ಜುಬೈರ್ ರಹಮಾನಿ ನಟನೆ, ಜಾಹೀರಾತು ಅಷ್ಟೇ ಅಲ್ಲ ಇನ್‌ಸ್ಟಾಗ್ರಾಂನಿಂದಲೂ ಹಣವನ್ನು ಸಂಪಾಧಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುಮಾರು 50 ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ ಇದ್ದು, ಇಲ್ಲಿಂದಲೂ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಸಿಯಾಸತ್.ಕಾಮ್ ಪ್ರಕಾರ, 'ಕತ್ರೋಂ ಕೆ ಕಿಲಾಡಿ 12' ರಿಯಾಲಿಟಿ ಶೋನ ಪ್ರತಿ ಎಪಿಸೋಡ್‌ಗೆ 18 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ. ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ 1.5 ರಿಂದ 2 ಲಕ್ಷ ರೂಪಾಯಿ ಪ್ರತಿ ಪೋಸ್ಟ್‌ಗೆ ಪಡೆಯುತ್ತಾರೆ. ಅಲ್ಲದೇ ಅವರದ್ದೇ ಜ್ಯೂವೆಲರಿ ಬ್ರ್ಯಾಂಡ್ ಜೆಜಿ ಜ್ಯುವೆಲರಿ (JZee Jewellery) ಇತ್ತೀಚೆಗೆ ಲಾಂಚ್ ಮಾಡಿದ್ದಾರೆ.

ಅಂದ್ಹಾಗೆ, ಇತ್ತೀಚೆಗೆ ಜನ್ನತ್ ಜುಬೈರ್ ರಹಮಾನಿ ಮತ್ತು ಅವರ ಸಹೋದರ ಅಯಾನ್ ಮೇಲೆ ದಾಳಿ ನಡೆದಿತ್ತು. ಇದರಲ್ಲಿ ಇಬ್ಬರಿಗೂ ಯಾವ ಮಟ್ಟಿಗೆ ಏಟು ಬಿದ್ದಿದೆ ಅನ್ನೋ ಖಚಿತ ಮಾಹಿತಿ ಇಲ್ಲ. ಆದರೆ, ಜುಬೈರ್ ಟೀಮ್ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೆಯನ್ನು ನೀಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಇನ್ನು ₹250 ಕೋಟಿ ಆಸ್ತಿ ಹೊಂದಿದ್ದಾರೆಂಬ ಸುದ್ದಿ ಬಗ್ಗೆ ಜನ್ನತ್ ಕಡೆಯಿಂದ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲ.

More from Filmibeat

English summary
Jannat Zubair Rahmani is richest Indian tv actress her net worth reportedly ₹250cr.
Read more about: actress tv show net worth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X