'ಭಾಗ್ಯಲಕ್ಷ್ಮಿ' ಧಾರಾವಾಹಿಯಿಂದ ಹೊರಬಂದ ಗೌತಮಿ ಗೌಡ: "ಆದಷ್ಟು ನಿಮಗೆ ಹೇಳುತ್ತೇನೆ" ಎಂದು ನಟಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಕನ್ನಡಿಗರ ಅಚ್ಚು ಮೆಚ್ಚಿನ ಧಾರಾವಾಹಿ. ಅಕ್ಕ ತಂಗಿಯ ನಡುವಿನ ಬಾಂಧವ್ಯವನ್ನು ಕಿರುತೆರೆ ವೀಕ್ಷಕರು ತಪ್ಪದೇ ವೀಕ್ಷಿಸುತ್ತಾರೆ. ಈ ಕಾರಣಕ್ಕೆ 'ಭಾಗ್ಯಲಕ್ಷ್ಮಿ' ಹಾಗೂ 'ಲಕ್ಷ್ಮಿ ಬಾರಮ್ಮ' ಎರಡು ಧಾರಾವಾಹಿಗಳಾಗಿ ನೋಡುಗರಿಗೆ ಮನರಂಜನೆಯನ್ನು ನೀಡುತ್ತಿದೆ.
ಧಾರಾವಾಹಿಗಳೇ ಹಾಗೆ ಒಮ್ಮೆ ವೀಕ್ಷಕರನ್ನು ಸೆಳೆದು ಬಿಟ್ಟರೆ, ಕಮ್ಮಿ ಅಂದರೂ 500 ಸಂಚಿಕೆಗಳು ನಿರಾಸವಾಗಿ ಮುಂದಕ್ಕೆ ಸಾಗುತ್ತೆ. ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿಗೂ ಕೂಡ ಇಷ್ಟೇ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ.

ಈ ಧಾರಾವಾಹಿಯಲ್ಲಿ ಹಲವು ಪಾತ್ರಗಳು ಗಮನ ಸೆಳೆಯುತ್ತಿವೆ. ಪಾಸಿಟಿವ್ ಪಾತ್ರಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ನೆಗೆಟಿವ್ ಪಾತ್ರಗಳು ವೀಕ್ಷಕರನ್ನು ಹಿಡಿದು ಕೂರಿಸುತ್ತಿವೆ. ಇದೇ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿದ್ದ ನಟಿ ಗೌತಮಿ ಗೌಡ. ಈ ನಟಿಯೀಗ ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ಹೊರಬಂದಿದ್ದಾರಂತೆ.
'ಭಾಗ್ಯಲಕ್ಷ್ಮಿ'ಯಿಂದ ಹೊರಬಂದ ಗೌತಮಿ
ನಟಿ ಗೌತಮಿ ಗೌಡ ಹಲವು ಸಂಚಿಕೆಗಳಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದರು. ಭಾಗ್ಯ ವಿರುದ್ಧ ಕತ್ತಿ ಮಸೆಯುವ ಸನ್ನಿವೇಶಗಳಲ್ಲಿ ಗೌತಮಿ ಗೌಡ ಕಾಣಿಸಿಕೊಳ್ಳುತ್ತಿದ್ದಂತೆ. ಇವರ ಪಾತ್ರ ಧಾರಾವಾಹಿ ಮುಂದಕ್ಕೆ ಸಾಗುವುದಕ್ಕೆ ತಿರುವುಗಳನ್ನು ಕೊಡುತ್ತಿತ್ತು. ಆದ್ರೀಗ ದಿಢೀರನೇ ಧಾರಾವಾಹಿಯಿಂದ ಹೊರ ಬಂದಿರುವುದಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
"ನಮಸ್ತೆ ವೈಯಕ್ತಿಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಇಂದ ಹೊರ ಬರಬೇಕಾಯಿತು. ಇಷ್ಟು ದಿನ ನೆಗೆಟಿವ್ ಪಾತ್ರದಲ್ಲೂ ನನ್ನ ಒಪ್ಪಿ ಹರಸಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು ತುಂಬಾ ಕಷ್ಟದ ನಿರ್ಧಾರ ಆದರೆ ಅನಿವಾರ್ಯ ಪರಿಸ್ಥಿತಿ, ಆದಷ್ಟು ಬೇಗ ನಿಮಗೆ ಹೇಳುತ್ತೇನೆ. ನಗುನಗುತಾ ಹೊರ ಬಂದಿದ್ದೇನೆ. ಬೇರೆ ಯಾವುದೇ ಕಾರಣ ಇಲ್ಲ. ಇನ್ನು ಮುಂದೆಯೂ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ." ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಏನಿದೆ ಕಮೆಂಟ್?
ಗೌತಮಿ ಗೌಡ ಭಾಗ್ಯಲಕ್ಷ್ಮಿ ಧಾರಾವಾಹಿಯಿಂದಸ ಬಂದಿರುವುದಾಗಿ ವಿಷಯ ತಿಳಿಸುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. ಕಿರುತೆರೆ ವೀಕ್ಷಕರಿಗೆ ಹಾಗೂ ಭಾಗ್ಯಲಕ್ಷ್ಮಿ ಧಾರಾವಾಹಿ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಇನ್ನೊಂದು ಕಡೆ ಕನ್ನಡದ ಹಿರಿಯ ನಟಿ ಗಾಯತ್ರಿ ಪ್ರಭಾಕರ್ " ಇದು ಪಾಸಿಟಿವ್ ಪಾತ್ರವೋ ಅಥವಾ ನೆಗೆಟಿವ್ ಪಾತ್ರವೋ 100% ನ್ಯಾಯವದಗಿಸುತ್ತಿದೆ. ಇದರಿಂದ ಹೊರಬರುವುದಕ್ಕೆ ಪ್ರಬಲವಾದ ಕಾರಣವಿರಬಹುದು. ಟೇಕ್ ಕೇರ್ ಸಿಹಿಯಾದ ಸುದ್ದಿ ಕೊಡು" ಎಂದು ಕೆಮೆಂಟ್ ಮಾಡಿದ್ದಾರೆ.
ಏನು ಸಿಹಿ ಸುದ್ದಿನಾ?
ನೆಟ್ಟಿಗರು ಗೌತಮಿ ಗೌಡಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅದೇ ಇನ್ನೊಂದು ಕಡೆ " ಚೆನ್ನಾಗಿ ಆಕ್ಟ್ ಮಾಡುತ್ತಿದ್ರಿ? ಏನು ಗುಡ್ ನ್ಯೂಸ್ ಆ" ಅಂತ ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಟಿಯ ಮುಂದಿನ ಜರ್ನಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
'ಭಾಗ್ಯಲಕ್ಷ್ಮಿ' ಕೌಟುಂಬಿಕ ಸಮಸ್ಯೆಗಳು ಹಾಗೂ ಮೌಲ್ಯಗಳನ್ನು ಹೊತ್ತು ಬರುತ್ತಿದೆ. ವೀಕ್ಷಕರು ಈ ಧಾರಾವಾಹಿಯನ್ನು ಮೆಚ್ಚಿ ವೀಕ್ಷಿಸುತ್ತಿದ್ದಾರೆ. ಈಗ ಗೌತಮಿ ಜಾಗಕ್ಕೆ ಯಾರು ಬರುತ್ತಾರೆ? ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇದೆ.


Click it and Unblock the Notifications











