ಮತ್ತೆ 'ಮಹಾನಟಿ'; ಸೆಟ್ಟಲ್ಲಿ ಹಿರಿಯ ನಟಿ ಪ್ರೇಮಾ, ರಮೇಶ್ ಅರವಿಂದ್, ತರುಣ್ ಸುಧೀರ್, ನಿಶ್ಚಿಕಾ ನಾಯ್ಡು
ಮನರಂಜನಾ ವಾಹಿನಿಗಳು ತಮ್ಮ ವೀಕ್ಷಕರನ್ನು ಸದಾ ಬ್ಯುಸಿಯಾಗಿರುವಂತೆ ಮಾಡುತ್ತಲೇ ಇರುತ್ತೆ. ಒಂದು ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಇನ್ನೊಂದು ರೆಡಿ ಮಾಡಿಟ್ಟುಕೊಂಡಿರುತ್ತೆ. ಇತ್ತೀಚೆಗಷ್ಟೇ ಜೀ ಕನ್ನಡದ ಜನಪ್ರಿಯ ಮ್ಯೂಸಿಕ್ ರಿಯಾಲಿಟಿ ಶೋ 'ಸ ರಿ ಗ ಮ ಪ' ಸೀಸನ್ 21 ಅದ್ಧೂರಿ ಫಿನಾಲೆ ನಡೆದಿತ್ತು. ಈ ಮೂಲಕ 21ನೇ ಸೀಸನ್‌ಗೆ ಅಂತ್ಯ ಹಾಡಲಾಗಿದೆ. ಇದರ ಹಿಂದೆನೇ ವೀಕೆಂಡ್‌ನಲ್ಲಿ ವೀಕ್ಷಕರನ್ನು ಎಂಗೇಜ್ ಮಾಡುವುದಕ್ಕೆ ಮತ್ತೊಂದು ರಿಯಾಲಿಟಿ ಶೋ ಆರಂಭಿಸುತ್ತಿದೆ. ಅದುವೇ 'ಮಹಾನಟಿ' ಸೀಸನ್ 2.
'ಮಹಾನಟಿ' ಸೀಸನ್ 1 ಯಶಸ್ವಿಯಾದ ಬೆನ್ನಲ್ಲೇ ಮತ್ತೊಂದು ಸೀಸನ್‌ಗೆ ರೆಡಿಯಾಗುತ್ತಿದೆ. ಈ ಶೋನ ಪ್ರಮುಖ ಆಕರ್ಷಣೆಯೆಂದರೆ, ಹಿರಿಯ ನಟಿ ಪ್ರೇಮಾ. ಈ ನಟಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ತೀರಾ ವಿರಳ. ಆದರೆ, ಮೊದಲ ಬಾರಿಗೆ 'ಮಹಾನಟಿ' ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಎಂಟ್ರಿ ಕೊಟ್ಟಿದ್ದರು. ಕಿರುತೆರೆಯಲ್ಲಿ ಪ್ರೇಮಾ ಅವರನ್ನು ನೋಡಿ ಅವರು ಅಭಿಮಾನಿಗಳು ಥ್ರಿಲ್ ಆಗಿದ್ದರು.

ಈಗ 'ಮಹಾನಟಿ' ಸೀಸನ್ 2ನಲ್ಲೂ ಪ್ರೇಮಾ ಜಡ್ಜ್ ಆಗಿ ಮುಂದುವರೆದಿದ್ದಾರೆ. ಹಾಗೇ ಎವರ್ ಎನರ್ಜೆಟಿಕ್ ರಮೇಶ್ ಅರವಿಂದ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರೊಂದಿಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಯುವ ನಟಿ ನಿಶ್ವಿಕಾ ನಾಯ್ಡು ಕೂಡ ಎರಡನೇ ಸೀಸನ್‌ನಲ್ಲಿ ಮುಂದುವರೆದಿದ್ದಾರೆ. ಈಗಾಗಲೇ ಜೀ ಕನ್ನಡ ಪ್ರೋಮೋ ರಿಲೀಸ್ ಮಾಡಿದ್ದು, ನಟಿ ಪ್ರೇಮಾ, ತರುಣ್ ಸುಧೀರ್ ಹಾಗೂ ನಿಶ್ವಿಕಾ ನಾಯ್ಡು ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ.
ಮನರಂಜನಾ ವಾಹಿನಿಗಳು ಸಿನಿಮಾದಲ್ಲಿ ಅಬ್ಬರಿಸಿ ಸೈಲೆಂಟ್ ಆಗಿರುವ ದಿಗ್ಗಜರನ್ನು ಕಿರುತೆರೆಗೆ ಕರೆದುಕೊಂಡು ಬರುವ ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ಹಿರಿಯ ನಟಿ ಪ್ರೇಮಾ ಕೂಡ ಒಬ್ಬರು. ಕನ್ನಡ, ತೆಲುಗು ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪ್ರೇಮಾ ರಿಯಾಲಿಟಿ ಶೋಗೆ ಎಂಟ್ಟಿ ಕೊಡುತ್ತಾರೆ ಎನ್ನುವಾಗ ವೀಕ್ಷಕರಿಗೆ ಥ್ರಿಲ್ ಇತ್ತು. ಆದರೆ, 'ಮಹಾನಟಿ' ಸೀಸನ್ 1ರಲ್ಲಿ ಪ್ರೇಮಾ ತೀರ್ಪುಗಾರರಾಗಿ ಯಶಸ್ವಿಯಾಗಿದ್ದರು. ಈಗ ಮತ್ತೆ ಸೀಸನ್ 2ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಿರುತೆರೆ ವೀಕ್ಷಕರಿಗೆ ಖುಷಿಕೊಟ್ಟಿದೆ.
ಎರಡು ದಿನಗಳ ಹಿಂದೆನೇ ಈ ರಿಯಾಲಿಟಿ ಶೋ ಪ್ರೋಮೊ ರಿಲೀಸ್ ಮಾಡಲಾಗಿದೆ. ಈಗಾಗಲೇ ನೆಟ್ಟಿಗರು ಥ್ರಿಲ್ ಆಗಿ ಕಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. 'ಮಹಾನಟಿ' ರಿಯಾಲಿಟಿ ಶೋ ನೋಡುವುದಕ್ಕೆ ಎದುರು ನೋಡುತ್ತಿದ್ದಾರೆ. ಈ ಶೋ ಕೇವಲ ಮಹಿಳೆಯರಿಗಾಗಿ ಮಾತ್ರ ಇರುವುದರಿಂದ ಕಮೆಂಟ್‌ಗಳಲ್ಲಿ ಗಂಡು ಮಕ್ಕಳಿಗೂ ಶೋ ಮಾಡುವಂತೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಪ್ರೋಮೋ ಕ್ರಿಯೇಟಿವ್ ಆಗಿದೆ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಏನೆಲ್ಲ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ ಅನ್ನೋದನ್ನು ನೋಡುವುದಾರೇ...
ನೆಟ್ಟಿಗರೊಬ್ಬರು ಪ್ರೋಮೊ ನೋಡಿ "ನಿಜವಾಗಲೂ.. ಪ್ರೋಮೋ ಮಾತ್ರ ತುಂಬಾ ಚೆನ್ನಾಗಿ ಮನಸನ್ನು ಮುಟ್ಟೋ ತರ ಕ್ರಿಯೇಟ್ ಮಾಡಿದ್ದೀರ" ಎಂದು ಹೇಳಿದ್ದಾರೆ. ಇನ್ನೊಬ್ಬರು "ಗಂಡ್ ಮಕ್ಳಿಗೂ ಈತರ ಅವಕಾಶ ಮಾಡಿ ಕೊಡಿ, ಅವರಿಗೂ ಅವಕಾಶ ಸಿಕ್ಕಿದ ಹಾಗೆ ಆಗುತ್ತೆ" ಎಂದು ಹೇಳಿದ್ದಾರೆ. ಮತ್ತೊಬ್ಬರು "ಇದೇ ರೀತಿ 'ಮಹಾನಟ' ಅಂತ ಮಾಡಿ ಜೀ ಕನ್ನಡದವರೇ ಗಂಡು ಹುಡುಗರಿಗೂ ಕೂಡ ಅವಕಾಶ ಕಲ್ಪಿಸಿ ಕೊಡಿ ವೇದಿಕೆಯಲ್ಲಿ" ಎಂದು ಹೇಳಿದ್ದಾರೆ. ಹಾಗೇ ಇನ್ನು ಕೆಲವರು ಆಡಿಯನ್ಸ್ ಆಗಿ ಆದರೂ ಬರಬೇಕು ಹೇಗೆ ಹೇಳಿ ಯಾರಾದರೂ ಎಂದು ಹೇಳಿದ್ದಾರೆ.
ಅಂದ್ಹಾಗೆ 'ಮಹಾನಟಿ ಸೀಸನ್ 2' ಜೂನ್ ತಿಂಗಳ 14ರಿಂದ ರಾತ್ರಿ 7.30ಕ್ಕೆ ಆರಂಭ ಆಗುತ್ತಿದೆ. 'ಸ ರಿ ಗ ಮ ಪ' ಸೀಸನ್ 21 ಮುಗಿದ ಜಾಗಕ್ಕೆ ಈ ರಿಯಾಲಿಟಿ ಶೋ ನಡೆಯಲಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಈ ಶೋ ನಡೆಯಲಿದೆ. ಮಹಿಳಾ ಪ್ರತಿಭೆಗಳೂ ಈ ಶೋನಲ್ಲಿ ತನ್ನ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಆಯ್ಕೆಯಾದ ಪ್ರತಿಭೆಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ.


Click it and Unblock the Notifications











