ಸೆಟ್ಟೇರಿತು ಮಾಜಿ ಬಿಗ್‌ಬಾಸ್ ಸ್ಪರ್ಧಿಯ ಹೊಸ ಸಿನಿಮಾ; ನಟಿ ಪ್ರಿಯಾಂಕಾ ತಿಮ್ಮೇಶ್ ಹೊಸ ಸಿನಿಮಾ ಯಾವುದು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ರ ವೈಲ್ಡ್ ಕಾರ್ಡ್ ಎಂಟ್ರಿ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ಹಲವು ವಾರಗಳ ಕಾಲ ತಮ್ಮ ಪ್ರೇಕ್ಷಕರನ್ನು ರಂಜಿಸಿ ಮನೆಯಲ್ಲಿದ್ದರು. 2015ರಲ್ಲಿ ತೆರೆಕಂಡ 'ಗಣಪ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಇವರು ಮತ್ತೆ ಕನ್ನಡವು ಸೇರಿದಂತೆ ತಮಿಳು ಹಾಗೂ ಮಲಯಾಳಂನಲ್ಲಿ ನಟಿಸಿದ್ದಾರೆ.
'ಪ್ರೀತಿಯಿಂದ' ಎಂಬ ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ಇದೀಗ ನಟ ಕೋಮಲ್ ಕುಮಾರ್ ಅವರ ಜೊತೆಗೆ 'ಕುಟೀರ' ಎಂಬ ಹೊಸ ಸಿನಿಮಾಗೆ ಒಪ್ಪಿಕೊಂಡಿದ್ದಾರೆ. ಇದು ಕೋಮಲ್ ಕುಮಾರ್ ನಟಿಸುತ್ತಿರುವ 25ನೇ ಸಿನಿಮಾ ಅನ್ನೋದು ವಿಶೇಷ. ಇತ್ತೀಚೆಗೆ ಈ ಸಿನಿಮಾ ಮುಹೂರ್ತ ಕೂಡ ನಡೆದಿದೆ.

ತಮ್ಮ ಹೊಸ ಸಿನಿಮಾ 'ಕುಟೀರ' ಅನೌನ್ಸ್ ಮಾಡಿರುವ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ತಮ್ಮ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಈ ಮೂಲಕ ಅವರ ನಟನೆಯನ್ನು ಸವಿಯುವ ಮತ್ತೊಂದು ಅವಕಾಶವನ್ನು ನೀಡಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ತಿಮ್ಮೇಶ್ ಆಂಗ್ಲೋ ಇಂಡಿಯನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ನಟಿಸುತ್ತಿದ್ದ ಕೋಮಲ್ ಸಿನಿಮಾಗಳನ್ನು ನಕ್ಕಿದ್ದರಂತೆ. ಈಗ ಅವರದ್ದೇ ಸಿನಿಮಾ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ತಿಮ್ಮೇಶ್ 2022ರ 'ಮೇಡ್ ಇನ್ ಚೀನಾ' ಹಾಗೂ 'ಶುಗರ್ ಲೆಸ್' ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಆ ಎರಡೂ ಸಿನಿಮಾಗಳ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಅದಾದ ಮೇಲೆ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ.

ಇವರು ನಟಿಸಲು ಒಪ್ಪಿಕೊಂಡ ಕೆಲ ಪ್ರಾಜೆಕ್ಟ್‌ಗಳು ಸೆಟ್ಟೇರಲಿಲ್ಲವಂತೆ. ಹೀಗಾಗಿ ಸಿನಿಮಾದಿಂದ ಕೊಂಚ ಮಟ್ಟಿಗೆ ದೂರ ಉಳಿಯಬೇಕಾಯ್ತು. ಇದೀಗ ಕೋಮಲ್ ಕುಮಾರ್ ಅವರೊಂದಿಗೆ ನಟಿಸುವ 'ಕುಟೀರ' ಸಿನಿಮಾದಲ್ಲಿ ಒಂದು ಎನ್ ಆರ್ ಐ (ಆಂಗ್ಲೋ ಇಂಡಿಯನ್) ಪಾತ್ರವನ್ನು ಮಾಡುತ್ತಿದ್ದಾರೆ.
ಕನ್ನಡ ಭಾಷೆ ಅಲ್ಲದೆ ತಮಿಳಿನಲ್ಲಿ ನಟಿಸಿರುವ ಇವರು 'ಉದರವೂ ಮಹಾರಾಜ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಜೊತೆಗೆ ಮಲಯಾಳಂನ ಖ್ಯಾತ ನಟರಾದ ನಿವಿನ್ ಪೌಲಿ ಹಾಗೂ ಮೋಹನ್ ಲಾಲ್ ಅವರೊಂದಿಗೆ 'ಕಾಯಂಕುಳಂ ಕೋಚುನ್ನಿ' ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರ ಒಂದರಲ್ಲಿ ನಟಿಸಿದ್ದಾರೆ. ಇದೀಗ ಕನ್ನಡಕ್ಕೆ ಮರಳಿರುವ ಇವರು ತಮ್ಮ ಮುಂಬರುವ ಪ್ರಾಜೆಕ್ಟ್‌ಗಳ ಬಗ್ಗೆ ನಿಧಾನಕ್ಕೆ ತಿಳಿಸುತ್ತಿದ್ದಾರೆ.


Click it and Unblock the Notifications











