ಡಾ.ಬ್ರೋ ಯೂಟ್ಯೂಬ್ ವಿಡಿಯೋ ಮಾಡುವುದನ್ನು ಕಮ್ಮಿ ಮಾಡಿದ್ದೇಕೆ? ಕಾರಣ ಕೊಟ್ಟ ಯೂಟ್ಯೂಬರ್
ಇದು ಸೋಶಿಯಲ್ ಮೀಡಿಯಾ ಜಮಾನ. ಕಂಟೆಂಟ್ ಕ್ರಿಯೇಟ್ ಮಾಡುವವರು ಅದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಫೇಮಸ್ ಯೂಟ್ಯೂಬರ್‌ಗಳು, ಸೋಶಿಯಲ್ ಮೀಡಿಯಾದವರು ಲಕ್ಷಗಳಲ್ಲಿ ದುಡಿಯುತ್ತಿದ್ದಾರೆ. ಇಂತಹವರಲ್ಲಿ ಡಾ.ಬ್ರೋ ಕೂಡ ಒಬ್ಬರು. ತಮ್ಮದೇ ಶೈಲಿಯಲ್ಲಿ ಟ್ರಾವೆಲ್ ವಿಡಿಯೋಗಳನ್ನು ಮಾಡುತ್ತಾ ಮಿಲಿಯನ್ ಲೆಕ್ಕದಲ್ಲಿ ಫಾಲೋವರ್ಸ್ ಅನ್ನು ಹೊಂದಿದ್ದಾರೆ.
ಡಾ.ಬ್ರೋ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಭಾರೀ ಫಾಲೋವರ್ಸ್ ಇದ್ದಾರೆ. ವಿಶ್ವದ ಫೇಮಸ್ ಹಾಗೂ ಅಪರೂಪದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಆ ಸ್ಥಳಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ಆದ್ರೀಗ ಡಾ.ಬ್ರೋ ವಿಡಿಯೋ ಮಾಡುವುದನ್ನು ಕಮ್ಮಿ ಮಾಡಿದ್ದಾರೆ. ಇವರ ವಿಡಿಯೋಗಾಗಿ ಎದುರು ನೋಡುತ್ತಿದ್ದ ಅವರ ಫಾಲೋವರ್ಸ್‌ಗಳಿಗೆ ಹೊಸ ವಿಡಿಯೋಗಳನ್ನು ಸಿಗುತ್ತಿಲ್ಲ.

ಯೂಟ್ಯೂಬರ್ ಡಾ.ಬ್ರೋ ನಿಧಾನವಾಗಿ ವಿಡಿಯೋ ಮಾಡುವುದನ್ನು ಕಮ್ಮಿ ಮಾಡಿದ್ದಾರೆ. ಇದನ್ನು ಅವರ ಫಾಲೋವರ್ಸ್ ಕೂಡ ಗಮನಿಸಿದ್ದಾರೆ. ಅಪರೂಪಕ್ಕೊಮ್ಮೆ ವಿಡಿಯೋ ಪೋಸ್ಟ್ ಮಾಡಿದಾಗ ಬಹಳಷ್ಟು ಮಂದಿ ಈ ಬಗ್ಗೆನೇ ಕಾಮೆಂಟ್ ಮಾಡಿದ್ದರು. ಆದರೆ, ವಿಡಿಯೋ ಕಡಿಮೆ ಮಾಡುತ್ತಿರುವುದಕ್ಕೆ ಡಾ. ಬ್ರೋ ಅಧಿಕೃತವಾಗಿ ಎಲ್ಲಿಯೂ ಹೇಳಿರಲಿಲ್ಲ. ಆದ್ರೀಗ ಸಂದರ್ಶನವೊಂದರಲ್ಲಿ ವಿಡಿಯೋ ಕಡಿಮೆ ಮಾಡಿದ್ದಕ್ಕೆ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಡಾ.ಬ್ರೋ ವಿದೇಶಗಳಿಗೆ ತೆರಳಿ ಅಲ್ಲಿನ ರಹಸ್ಯ ತಾಣಗಳನ್ನು, ಐತಿಹಾಸಿಕ ಸ್ಥಳಗಳನ್ನು ಎಕ್ಸ್‌ಪ್ಲೋರ್ ಮಾಡುತ್ತಿದ್ದರು. ಅಲ್ಲಿನ ವೈಶಿಷ್ಯತೆಯನ್ನು ವಿಡಿಯೋ ಮೂಲಕ ಕನ್ನಡಿಗರಿಗೆ ತಿಳಿಸಿಕೊಡುತ್ತಿದ್ದರು. ಹೀಗಾಗಿ ವಿದೇಶದ ಇಂಟ್ರೆಸ್ಟಿಂಗ್ ತಾಣಗಳು ಕನ್ನಡಿಗರು ಡಾ.ಬ್ರೋ ವಿಡಿಯೋದಲ್ಲಿ ನೋಡಿ ಖುಷಿ ಪಡುತ್ತಿದ್ದರು. ಆದರೆ, ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ಗೆ ವಿಡಿಯೋಗಳನ್ನು ಹಾಕುವುದನ್ನೇ ಕಡಿಮೆ ಮಾಡಿದ್ದಾರೆ. ಇದಕ್ಕೆ ಅವರ ಫಾಲೋವರ್ಸ್ ಕಾರಣಗಳನ್ನು ಹುಡುಕುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಡಾ.ಬ್ರೋ ವಿಡಿಯೋಗಳನ್ನು ಯಾಕೆ ಪೋಸ್ಟ್ ಮಾಡುತ್ತಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ವಿದೇಶ ಪ್ರವಾಸದ ಅನುಭವ ಪಡೆದುಕೊಂಡ ಮೇಲೆ ಅದರದ್ದೇ ಒಂದು ಕಂಪನಿಯನ್ನು ಕಟ್ಟಿದ್ದಾರೆ. ಅನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. "ನಾನು ಈಗಷ್ಟೇ ಸ್ಟಾರ್ಟ್‌ಅಪ್ ಶುರು ಮಾಡಿದ್ದೇನೆ. ಬ್ಯುಸಿನೆಸ್ ಓಪನ್ ಮಾಡಿರುವುದರಿಂದ ಕಲಿತು ಕಲಿತು ಮಾಡಬೇಕಿದೆ. ಅದಕ್ಕೆ ಸ್ವಲ್ಪ ತಡವಾಗುತ್ತಿದೆ. 25 ಜನ ಕನ್ನಡಿಗರ ಟೀಮ್ ಇದೆ." ಎಂದು ಡಾ.ಬ್ರೋ ತಮ್ಮ ಸ್ಟಾರ್ಟ್‌ಅಪ್ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ.
ಹಾಗೇ ಈ ಸಂದರ್ಶನದಲ್ಲಿ ಕಂಟೆಂಟ್ ಕ್ರಿಯೇಟರ್‌ಗೆ ಎಡಿಟಿಂಗ್ ಎಷ್ಟು ಮುಖ್ಯ ಆಗುತ್ತೆ ಅನ್ನೋದನ್ನೂ ಹೇಳಿಕೊಂಡಿದ್ದಾರೆ. "ಎಡಿಟಿಂಗ್ ಅನ್ನೋದು ತುಂಬಾನೇ ಮುಖ್ಯ ಆಗುತ್ತೆ. ಯಾಕಂದ್ರೆ, ಯಾವುದೇ ಸ್ಟೋರಿ ಆದರೂ ಎರಡು ಬಾರಿ ಬರೆದುಕೊಳ್ಳುತ್ತಾರೆ. ಯಾವುದೋ ಒಂದು ವಿಡಿಯೋ ಪ್ಲಾನ್ ಮಾಡಿಕೊಂಡಾಗ ಎಡಿಟಿಂಗ್ ಟೇಬಲ್‌ನಲ್ಲಿ ಯಾವುದು ಕಟ್ ಮಾಡಬೇಕು. ಯಾವುದು ಇಟ್ಟುಕೊಳ್ಳಬೇಕು? ಈಗ ರೀಲ್ಸ್ ಬಂದಿದ್ದರಿಂದ ಆ ರಿಟೆನ್ಷನ್ ಕಡಿಮೆ ಆಗಿದೆ. ಅದನ್ನು ಎಲ್ಲಿ ಹಿಡಿಯಬೇಕು? ಇದೆಲ್ಲ ಎಡಿಟಿಂಗ್‌ನಲ್ಲಿ ಮಾಡಬಹುದು" ಎಂದು ಡಾ. ಬ್ರೋ ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಕಂಟೆಂಟ್ ಕ್ರಿಯೇಷನ್ ಶುರು ಮಾಡಿರುವವರಿಗೆ ಸಲಹೆಯನ್ನೂ ನೀಡಿದ್ದಾರೆ. "ನೀವು ಕೆಲಸ ಮಾಡಿ ಅಷ್ಟೇ. ಕೆಲಸ ಮಾಡುತ್ತಿರಿ. ಕೆಲಸ ಅನ್ನೋದು ನಿಮ್ಮ ಕರ್ಮ. ಆ ಕರ್ಮವನ್ನು ಮಾಡುತ್ತಿರಿ ಫಲ ಸಿಗುತ್ತೆ. ರಿಸಲ್ಟ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು. ವೀವ್ಸ್, ಸಬ್‌ಸ್ಕ್ರೈಬರ್ಸ್, ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.. ಕೆಲಸ ಮಾಡುತ್ತಿರಿ ಅಷ್ಟೇ." ಎಂದು ಡಾ.ಬ್ರೋ ಹೇಳಿದ್ದಾರೆ.


Click it and Unblock the Notifications















