"ನಮ್ಮ ಅಣ್ಣ ತಮ್ಮಂದಿರೇ ಇದೊಂದು ಕೆಟ್ಟ ಸಿನಿಮಾ, ದರಿದ್ರ ಸಿನಿಮಾ ಅಂತಾರೆ"; ಜಗ್ಗೇಶ್ ಭಾವುಕ

ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಸಿನಿಮಾ ಅಷ್ಟೇ ಅಲ್ಲ, ರಿಯಾಲಿಟಿ ಶೋಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ ರಿಯಾಲಿಟಿ ಶೋನಲ್ಲಿ ನವರಸ ನಾಯಕ ಜಗ್ಗೇಶ್ ಭಾಗವಹಿಸಿದ್ದರು. ಈ ವೇಳೆ ಜಗ್ಗೇಶ್ ಚಿತ್ರರಂಗದ ಸದ್ಯದ ಪರಿಸ್ಥಿತಿಯನ್ನು ನೆನೆದು ಭಾವುಕರಾಗಿದ್ದಾರೆ.

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ ರಿಯಾಲಿಟಿ ಶೋನಲ್ಲಿ ನಯನಾ ಮತ್ತು ತಂಡ ಒಂದು ಪರ್ಫಾಮೆನ್ಸ್ ಕೊಟ್ಟಿತ್ತು. ಅದನ್ನು ನೋಡಿ ನವರಸ ಜಗ್ಗೇಶ್ ಭಾವುಕರಾಗಿದ್ದಾರೆ. ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ ಮಾತಾಡುವಾಗ ನವರಸ ನಾಯಕ ಜಗ್ಗೇಶ್ ಕಣ್ಣುಗಳು ಒದ್ದೆಯಾಗಿವೆ. ಹಾಗೇ ಬುದ್ದಿ ಮಾತುಗಳನ್ನೂ ಹೇಳಿದ್ದಾರೆ.

Kannada senior actor Jaggesh cried in comedy Khiladigalu reality show

ನವರಸ ನಾಯಕ ಜಗ್ಗೇಶ್ ಆಡಿದ ಮಾತುಗಳಿಗೆ ಕಾಮಿಡಿ ಕಿಲಾಡಿಗಳು ಸ್ಪರ್ಧಿಗಳು ಹಾಗೂ ಜಡ್ಜ್‌ಗಳು ಕೂಡ ಅಷ್ಟೇ ಭಾವುಕರಾಗಿದ್ದಾರೆ. ಜಗ್ಗೇಶ್ ಆಡಿದ ದೃಶ್ಯದ ತುಣುಕನ್ನು ಜೀ ಕನ್ನಡ ತನ್ನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದೆ. ಈ ವಿಡಿಯೋದಲ್ಲಿ ಜಗ್ಗೇಶ್ ಕನ್ನಡ ಹಾಗೂ ಭಾರತೀಯ ಚಿತ್ರರಂಗದ ಸದ್ಯದ ಸ್ಥಿತಿಯನ್ನು ವಿವರಿಸಿದ್ದಾರೆ.

ಕನ್ನಡ ಸಿನಿಮಾ ನೋಡುವುದಕ್ಕೆ ಜನರೇ ಬರುತ್ತಿಲ್ಲ. ಕಳೆದ ನಾಲ್ಕೈದು ವರ್ಷದಿಂದ ಕನ್ನಡ ಚಿತ್ರರಂಗ ದುರಂತ ಕಂಡಿದೆ. ಎಲ್ಲರೂ ಒಳ್ಳೆಯ ಸಿನಿಮಾವನ್ನೇ ಮಾಡುತ್ತಿದ್ದಾರೆ. ಯಾರೂ ಕೆಟ್ಟ ಸಿನಿಮಾವನ್ನು ಮಾಡುತ್ತಿಲ್ಲ. ಪೇಪರ್‌ಗಳಿಗೆ ಜಾಹೀರಾತು ಕೊಡುತ್ತಾರೆ. ಟಿವಿಗಳಿಗೆ ಜಾಹೀರಾತು ಕೊಡುತ್ತಾರೆ. ಆದೆಲ್ಲ ಮಾಡಿದರೂ, ಜನವೇ ಇಲ್ಲ ಅಂದಾಗ ಯಾಕೆ ಈತರ ಆಯ್ತು" ಎಂದು ಬೇಸರ ಹೊರ ಹಾಕಿದ್ದಾರೆ.

ಹಾಗೇ ಕೇವಲ ಕನ್ನಡ ಚಿತ್ರರಂಗ ಅಷ್ಟೇ ಹೀಗಾಯ್ತಾ ಅಂತ ಅಂದುಕೊಂಡರೆ ಹಾಗಾಗಿಲ್ಲ. ಏನಾಗುತ್ತಿದೆ ಚಿತ್ರರಂಗಕ್ಕೆ ನಾವು ಹೇಗೆ ಸಿನಿಮಾ ಮಾಡುವುದು? ಥಿಯೇಟರ್‌ಗೆ ಜನ ಬರುತ್ತಿಲ್ಲ ಅಂತಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೋಟ್ಯಾಂತರ ರೂಪಾಯಿ ಹಾಕಿ ಸಿನಿಮಾ ಮಾಡಿದ್ದಾರೆ. ಅವರ ಸಿನಿಮಾಗಳು ಕೂಡ ಓಡುತ್ತಿಲ್ಲ. ಇಡೀ ಭಾರತೀಯ ಚಿತ್ರರಂಗ ವಾಶ್ ಔಟ್ ಆಗಿದೆ ಎಂದು ಜಗ್ಗೇಶ್ ಅಭಿಪ್ರಾಯ ಪಟ್ಟಿದ್ದಾರೆ.

"ಈಗ ಹೇಗಾಗಿದೆ ಅಂದರೆ, 200 ಕೋಟಿ ರೂಪಾಯಿ ಹಾಕಿ ಯಾರು ಸಿನಿಮಾ ಮಾಡುತ್ತಾರೆ ಅದು ಸಿನಿಮಾ. ಯಾರು ಒಂದು ಒಳ್ಳೆಯ ಕಥೆ ಮಾಡಿ ಸಣ್ಣ ಸಿನಿಮಾ ಮಾಡುತ್ತಾರೆ ಅದು ಸಿನಿಮಾ ಅಲ್ಲ" ಎಂದು ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯನ್ನು ಹೊರ ಹಾಕಿದ್ದಾರೆ.

ಒಳ್ಳೆಯ ಸಿನಿಮಾ ಬಂದಾಗ ನಮ್ಮ ಅಣ್ಣ ತಮ್ಮಂದಿರೇ ಇದೊಂದು ಕೆಟ್ಟ ಸಿನಿಮಾ, ದರಿದ್ರ ಸಿನಿಮಾ ಅಂತ ತಮ್ಮ ಶ್ರಮವನ್ನು ಹಾಕಿ ಹಾಳು ಮಾಡುತ್ತಾರೆ. ನಮಗೆ ಆತ್ಮೀಯರಾಗಿರುವವರೇ ಅಪಪ್ರಚಾರ ಮಾಡುತ್ತಾರೆ. ಆದರೆ, ಆ ಅಪಪ್ರಚಾರವನ್ನು ನೋಡಿ ಬರುವಂತಹ ಜನರು ಕೂಡ ಈ ಕಾಲದಲ್ಲಿ ಇದ್ದಾರೆ. ಎಲ್ಲರೂ ಚೆನ್ನಾಗಿ ಇರಲಿ. ಯಾರಿಗೂ ಕೆಟ್ಟದನ್ನು ಬಯಸುವುದು ಬೇಡ ಎಂದು ಜಗ್ಗೇಶ್ ಹೇಳಿದ್ದಾರೆ.

More from Filmibeat

English summary
actor Jaggesh cried in Comedy Khiladigalu reality show:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X