ಸ್ಯಾಂಡಲ್‌ವುಡ್‌ನ ಫೇಮಸ್ ಜೋಡಿ ರಾಮ್ ಕುಮಾರ್, ಶ್ರುತಿ ಕಿರುತೆರೆಯಲ್ಲಿ ಮಿಂಚಲು ರೆಡಿ: ಧಾರಾವಾಹಿ ಯಾವುದು?

90ರ ದಶಕದ ಸ್ಯಾಂಡಲ್‌ವುಡ್‌ನ ಸ್ಫುರದ್ರುಪಿ ನಟ ರಾಮ್ ಕುಮಾರ್. ಕನ್ನಡ ಚಿತ್ರರಂಗ ಇಂತಹ ಸುಂದರ ನಟನನ್ನು ನೋಡಿಯೇ ಇರಲಿಲ್ಲ. ಅನಂತ್‌ನಾಗ್ ಅವರ ಬಳಿಕ ಕನ್ನಡದ ಚಿತ್ರರಂಗದ ಸ್ಪುರದ್ರುಪಿ ನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದು ರಾಮ್‌ ಕುಮಾರ್. ಕಳೆದ ಕೆಲವು ವರ್ಷಗಳಿಂದ ತೆರೆಮರೆಗೆ ಸರಿದಿದ್ದ ರಾಮ್ ಕುಮಾರ್ ಈಗ ಮತ್ತೆ ಆಕ್ಟೀವ್ ಆಗಿದ್ದಾರೆ. ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಸ ವಿಷಯ ಏನೆಂದರೆ, ರಾಮ್ ಕುಮಾರ್ ಕಿರುತೆರೆಗೂ ಎಂಟ್ರಿ ಕೊಡುತ್ತಿದ್ದಾರೆ.

ಕಿರುತೆರೆಗೆ ಎಂಟ್ರಿ ಕೊಡುತ್ತಿರುವುದು ಕೇವಲ ರಾಮ್‌ಕುಮಾರ್ ಅಷ್ಟೇ ಅಲ್ಲ. ಕನ್ನಡದ ಮತ್ತೊಬ್ಬ ಹಿರಿಯ ನಟ ಶ್ರುತಿ ಕೂಡ ಸ್ಮಾಲ್‌ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಮಂದಿರಲ್ಲಿ ಪ್ರೇಕ್ಷಕರ ಕಣ್ಣಲ್ಲಿ ನೀರಿನ ಕೋಡಿಯನ್ನೇ ಹರಿಸಿದ್ದ ಈ ಜೋಡಿ ಕಿರುತೆರೆಯಲ್ಲಿ ಮೋಡಿ ಮಾಡಲು ಬರುತ್ತಿದೆ. ಕಿರುತೆರೆ ಜಗತ್ತಿನಲ್ಲಿ ಹರಿದಾಡುತ್ತಿರುವ ಹೊಸ ಸುದ್ದಿಯಿದು. ಹಾಗಿದ್ದರೆ. ರಾಮ್ ಕುಮಾರ್ ಹಾಗೂ ಶ್ರುತಿ ಜೋಡಿ ನಟಿಸುತ್ತಿರುವ ಆ ಧಾರಾವಾಹಿ ಯಾವುದು ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಮತ್ತೆ ಒಂದಾದ ರಾಮ್ ಕುಮಾರ್-ಶ್ರುತಿ

ಮತ್ತೆ ಒಂದಾದ ರಾಮ್ ಕುಮಾರ್-ಶ್ರುತಿ

ರಾಮ್ ಕುಮಾರ್‌ರನ್ನು ಮತ್ತೆ ತೆರೆಮೇಲೆ ನೋಡಬೇಕು ಅನ್ನುವ ಒಂದು ದೊಡ್ಡ ವರ್ಗವೇ ಇದೆ. ಸುಮಾರು 40 ಸಿನಿಮಾಗಳಲ್ಲಿ ನಟಿಸಿರುವ ದೊಡ್ಮನೆ ಅಳಿಯ ಈಗ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರಂತೆ. ಇವರಿಗೆ ಜೊತೆನೇ ಶ್ರುತಿ ಕೂಡ ಎಂಟ್ರಿಕೊಡುತ್ತಿದ್ದಾರೆ. ರಾಜಕೀಯದಲ್ಲಿ ಬ್ಯುಸಿಯಾಗಿದ್ದರೂ, ಬಿಡುವು ಮಾಡಿಕೊಂಡು ಧಾರಾವಾಹಿಗಳಲ್ಲಿ ನಟಿಸಲು ಮನಸ್ಸು ಮಾಡಿದ್ದಾರಂತೆ ಶ್ರುತಿ. ಹೀಗಾಗಿ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಜೋಡಿ ಶೀಘ್ರದಲ್ಲಿಯೇ ಕಿರುತೆರೆಗೆ ಎಂಟ್ರಿಕೊಡುವುದು ಪಕ್ಕಾ ಎನ್ನುತ್ತಿದೆ ಬಲ್ಲ ಮೂಲಗಳು

ರಾಮ್ ಕುಮಾರ್-ಶ್ರುತಿ ಧಾರಾವಾಹಿ ಯಾವುದು?

ರಾಮ್ ಕುಮಾರ್-ಶ್ರುತಿ ಧಾರಾವಾಹಿ ಯಾವುದು?

ಮರಾಠಿಯ ಫೇಮಸ್ ಧಾರಾವಾಹಿ ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ. ಈ ಧಾರಾವಾಹಿ ಮೂಲಕ ರಾಮ್ ಕುಮಾರ್ ಹಾಗೂ ಶ್ರುತಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಂತೆ. 'ಅಗ್ಗಬಾಯ್ ಸುನ್‌ಬಾಯ್' ಎನ್ನುವ ಮರಾಠಿ ಧಾರಾವಾಹಿಯೇ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಈ ಧಾರಾವಾಹಿಯಲ್ಲಿ ರಾಮ್ ಕುಮಾರ್ ಹಾಗೂ ಶ್ರುತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮರಾಠಿಯಲ್ಲಿ ನಿವೇದಿತಾ ಜೋಷಿ, ಗಿರೀಶ್ ಓಕ್, ಉಮಾ ಪೆಂಡಾರ್ಕರ್, ಅದ್ವೈತ್ ದಡರ್ಕರ್, ಮೋಹನ್ ಜೋಷಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ರಾಮ್ ಕುಮಾರ್ ಹಾಗೂ ಶ್ರುತಿ ಇದರ ರಿಮೇಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಸಾರ ಆಗುವುದು ಎಲ್ಲಿ? ನಿರ್ಮಾಪಕ ಯಾರು?

ಪ್ರಸಾರ ಆಗುವುದು ಎಲ್ಲಿ? ನಿರ್ಮಾಪಕ ಯಾರು?

ಒಂದು ಮೂಲದ ಪ್ರಕಾರ, ರಾಮ್ ಕುಮಾರ್ ಹಾಗೂ ಶ್ರುತಿ ಅಭಿನಯದ ಈ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆಯಂತೆ. ಈಗಾಗಲೇ ಮಾತುಕಥೆ ಕೂಡ ನಡೆದಿದ್ದು, ರಾಮ್ ಕುಮಾರ್ ಹಾಗೂ ಶ್ರುತಿ ಒಪ್ಪಿಕೊಂಡಿದ್ದಾರಂತೆ. ಜನಪ್ರಿಯ ಧಾರಾವಾಹಿ 'ರಾಧಾ ರಮಣ' ಖ್ಯಾತಿಯ ಸುಬ್ಬು ಎಂಬುವವರು ಈ ಧಾರಾವಾಹಿಯನ್ನು ನಿರ್ಮಾಣ ಮಾಡಲಿದ್ದಾರಂತೆ. ಹೀಗಾಗಿ ಕನ್ನಡ ಕಿರುತೆರೆ ವೀಕ್ಷಕರ ಮುಂದೆ ಹೊಸ ಧಾರಾವಾಹಿಯೊಂದು ಬರಲಿದೆ. ಇದರೊಂದಿಗೆ ಮತ್ತೆ ರಾಮ್ ಕುಮಾರ್ ಹಾಗೂ ಶ್ರುತಿಯನ್ನು ಕಿರುತೆರೆಯಲ್ಲಿ ನೋಡಬಹುದಾಗಿದೆ.

ಸಿನಿಮಾಗಳಲ್ಲೂ ಮೋಡಿ ಮಾಡಿದ್ದ ಜೋಡಿ

ಸಿನಿಮಾಗಳಲ್ಲೂ ಮೋಡಿ ಮಾಡಿದ್ದ ಜೋಡಿ

ರಾಮ್‌ಕುಮಾರ್ ಹಾಗೂ ಶ್ರುತಿ ಜೊತೆಯಾಗಿ ನಟಿಸಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. 'ತಾಯಿ ಇಲ್ಲದ ತವರು', 'ತವರಿನ ತೊಟ್ಟಿಲು' ಸಿನಿಮಾ ಪ್ರೇಕ್ಷಕರ ಕಣ್ಣಲ್ಲಿ ಹನಿ ಜಿನುಗುವಂತೆ ಮಾಡಿತ್ತು. ಅದೇ ಜೋಡಿಗ ಕಿರುತೆರೆಗೆ ಎಂಟ್ರಿಕೊಡಲಿದೆ. ಸ್ಮಾಲ್ ಸ್ಕ್ರೀನ್‌ನಲ್ಲೂ ಈ ಜೋಡಿ ಕಣ್ಣೀರಿನ ಕೋಡಿ ಹರಿಸುತ್ತಾರಾ? ಅನ್ನುವುದನ್ನು ಸದ್ಯ ಕುತೂಹಲದ ವಿಷಯ. ಆದರೆ, ಪ್ರೊಡಕ್ಷನ್ ಹೌಸ್ ಆಗಲಿ. ಇಲ್ಲವೇ ಜೀ ಕನ್ನಡ ವಾಹಿನಿಯಾಗಲಿ ಇದೂವರೆಗೂ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ.

More from Filmibeat

English summary
Kannada senior actor Ram Kumar, Shruti New Serial will start in Zee Kannada. It is remake of very famous Marathi serial Agabai Sunbai remake. Radha Ramana Director will be directing the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X