Bhagyalakshmi:'ಭಾಗ್ಯಲಕ್ಷ್ಮಿ' ಫುಲ್ ಎಮೋಷನಲ್ ಆಗೋಯ್ತು; ಭಾಗ್ಯಗೆ ತಾಯಿ ಸ್ಥಾನ ಕೊಟ್ಟ ಪೂಜಾ
'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಅಕ್ಕ ತಂಗಿ ಹೋರಾಟ ಮುಂದುವರೆದಿದೆ. ಭಾಗ್ಯಳ ಮಾಜಿ ಗಂಡ ತಾಂಡವ್ ಹಾವಳಿ ಇನ್ನೂ ಮುಗಿದಿದಲ್ಲ. ಇನ್ನೇನು ತಾಂಡವ್ ಕಾಲ ಮುಗೀತು ಭಾಗ್ಯ ಇನ್ಮುಂದೆ ಫುಲ್ ಹ್ಯಾಪಿ ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೆ, ತಾಂಡವ್ ಕಿತಾಪತಿ ಮುಂದುವರೆದಿದೆ. ತಾಂಡವ್ ಹೀಗೆಲ್ಲ ನಡೆದುಕೊಂಡಿಲ್ಲ ಅಂದರೆ, ಭಾಗ್ಯಲಕ್ಷ್ಮಿ ಧಾರಾವಾಹಿ ಮುಂದುವರೆಯುವುದಿಲ್ಲ ಅನ್ನೋದು ಅಷ್ಟೇ ಸತ್ಯ.
ಇಂದಿನ (ಮೇ 7) ಎಪಿಸೋಡ್‌ನಲ್ಲಿ ಭಾಗ್ಯ ಮನೆಯಲ್ಲಿ ಹೈಡ್ರಾ ನಡೆದಿದೆ. ಭಾಗ್ಯಳ ತಂಗಿ ಪೂಜಾಗೆ ಮದುವೆ ಮಾಡಬೇಕು ಅಂತ ನಿರ್ಧಾರ ಆಗಿರುತ್ತೆ. ಪೂಜಾಳನ್ನು ನೋಡುವುದಕ್ಕೆ ಅಂತ ಹುಡುಗ ಕೂಡ ಬಂದಿದ್ದ. ಭಾಗ್ಯನೇ ಮುಂದೆ ನಿಂತು ಹುಡುಗನ ಬಗ್ಗೆ ಸಂಪೂರ್ಣ ಮಾಡಿದ್ದರು. ಇನ್ನೇನು ಧಾರಾವಾಹಿಯಲ್ಲಿ ಪೂಜಾ ಮದುವೆ ಸಂಭ್ರಮ ನೋಡಬಹುದು ಎಂದು ವೀಕ್ಷಕರು ಕೂತಿದ್ದರು. ಅಷ್ಟರಲ್ಲೇ ತಾಂಡವ್ ಎಂಟ್ರಿ ಆಗಿತ್ತು.

ಭಾಗ್ಯಗೆ ಪೂಜಾ ನೋಡಲು ಬಂದಿದ್ದ ಹುಡುಗ ಸಿಕ್ಕಾಪಟ್ಟೆ ಇಷ್ಟ ಆಗಿದ್ದ. ಭಾಗ್ಯ ಕಡೆಯಿಂದ ತಂಗಿ ಮದುವೆಗೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿತ್ತು. ಹುಡುಗನ ಪ್ರಾಮಾಣಿಕತೆ ಇಷ್ಟ ಆಗಿತ್ತು. ಅಷ್ಟರಲ್ಲಿ ತಾಂಡವ್ ಎಂಟ್ರಿ ಆಗಿತ್ತು. ಈ ಸಂಬಂಧ ಬೇಡ ಅಂತ ಹುಡುಗನ ಸೋದರ ಮಾವ ಹಟ ಹಿಡಿದು ಎದ್ದು ನಡೆದೇ ಬಿಟ್ಟ. ಇದು ಇವತ್ತಿನ ಎಪಿಸೋಡ್. ನಾಳೆ (ಮೇ 8) ಎಪಿಸೋಡ್ ಕಥೆಯೇನು? ಪೂಜಾ ಮದುವೆ ಏನಾದರೂ ಟ್ವಿಸ್ಟ್ ಸಿಗುತ್ತಾ? ಅಂತ ನಿರೀಕ್ಷೆಯಲ್ಲಿ ಇದ್ದರೆ, ಎಮೋಷನಲ್ ಎಪಿಸೋಡ್ ಆಗುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಹೊಚ್ಚ ಹೊಸ ಪ್ರೋಮೋ.
ಇನ್ನು ಭಾಗ್ಯ ಗಂಡನ್ನು ಬಿಟ್ಟಿದ್ದಾಳೆ ಅನ್ನೋದು ಹುಡುಗನ ಸೋದರಮಾವ ಪೂಜಾ ಮದುವೆ ಮಾತುಕತೆ ನಿಲ್ಲಿಸಿದ್ದಕ್ಕೆ ಕಾರಣ. ಅಕ್ಕನೇ ಬಾಳು ಹೀಗಾಗಿರಬೇಕಾದರೆ, ಇನ್ನು ತಂಗಿಯನ್ನು ಮನೆಗೆ ಬಂದರೆ ಹೇಗೆ? ಅನ್ನೋದು ಸೋದರಮಾವನ ಆತಂಕ. ಅದಕ್ಕೆ ಒಂದಿಷ್ಟು ಉಪ್ಪಿ ಖಾರ ಹಾಕಿ ಇನ್ನಷ್ಟು ಕುಲಗೆಡಿಸಿದ್ದು ತಾಂಡವ್. ಅಲ್ಲಿಗೆ ಮದುವೆ ಮಾತುಕತೆ ಮುಗಿದ ಹಾಗೆ. ಆದರೂ ಸೀರಿಯಲ್ ಆಗಿದ್ದರಿಂದ ನಾಳೆಯ ಎಪಿಸೋಡ್‌ನಲ್ಲಿ ಏನು ಬೇಕಾದರೂ ಆಗಬಹುದು. ಸದ್ಯಕ್ಕೆ ರಿಲೀಸ್ ಆಗಿರುವ ಪ್ರೋಮೋದಲ್ಲಿ ಅಕ್ಕ ತಂಗಿಯ ಎಮೋಷನಲ್ ಜರ್ನಿ ಆರಂಭ ಆದಂತೆ ಕಾಣುತ್ತಿದೆ.
ಪೂಜಾ ನೋಡಲು ಹುಡುಗ ಬಂದಾಗ ತಾಂಡವ್ ಮನೆಗೆ ಬಂದು ಬಾಯಿ ಬಂದಂತೆ ಮಾತಾಡಿದ್ದಾನೆ. ಇದರಿಂದ ಮನೆಯ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಮನೆಗೆ ಬಂದವನೇ ಭಾಗ್ಯಳ ಮೇಲೆ ಇಲ್ಲಸಲ್ಲದ ದೂರನ್ನು ಹೇಳಿದ್ದಾನೆ. ನಾನು ಇವಳಿಂದ ದೂರ ಆಗಿದ್ದೇನೆ. ಎಲ್ಲರ ಮುಂದೆ ತಾಳಿ ಕಿತ್ತು ಕೈಗೆ ಕೊಟ್ಟಿದ್ದಾಳೆ. ಎಲ್ಲರ ಮನಸ್ಸು ಕೆಡಿಸಿದ್ದಾಳೆ ಎನ್ನುವ ಅರ್ಥದಲ್ಲಿ ಮಾತಾಡಿದ ಮೇಲೆ ಹುಡುಗನ ಮನೆಯವರು ಈ ಸಂಬಂಧವೇ ಬೇಡವೆಂದು ಹೊರಟು ಹೋಗಿದ್ದಾರೆ.
ಇತ್ತ ಪೂಜಾಳನ್ನು ಮದುವೆ ಆಗುವುದಕ್ಕೆ ಹುಡುಗನಿಗೆ ಇಷ್ಟವಿದೆ. ಆದರೆ, ಮನೆಯವರು ಒಪ್ಪುತ್ತಿಲ್ಲ. ಇತ್ತ ಪೂಜಾಗೆ ಇಷ್ಟವಿದೆ. ಅಕ್ಕನಿಗೆ ಗೌರವ ಕೊಡದವರು ತನಗೆ ಬೇಡ ಅಂತಿದ್ದಾಳೆ. ಹುಡುಗನ ಮನೆಯರು ಹೋದ ಮೇಲೆ ಅಕ್ಕ ತಂಗಿ ಮಧ್ಯೆ ಸಂಭಾಷಣೆ ಶುರುವಾಗಿದೆ. ಪೂಜಾ ಕಣ್ಣೀರು ಹಾಕಿಕೊಂಡು ನೀನು ಬರೀ ಅಕ್ಕ ಅಲ್ಲ. ಅನ್ನ ಅಮ್ಮ ಅಂತ ಹೇಳಿದ್ದಾಳೆ. ಹೀಗಾಗಿ ಮನೆಯಲ್ಲಿ ಅದೆಷ್ಟು ಜನರ ಮನೆಯಲ್ಲಿ ಹೆಂಗಸರು ಕಣ್ಣೀರು ಹಾಕುತ್ತಾರೋ? ಮತ್ತೆ ಅದೆಷ್ಟು ಮಂದಿ ತಾಂಡವ್‌ಗೆ ಶಾಪ ಹಾಕುತ್ತಾರೋ? ಟಿವಿ ಮುಂದೆ ಕೂತ ಗಂಡಸರಿಗೆ ನಾಳೆ ಒಂದಿಷ್ಟು ಬೈಗುಳ ಕೇಳುವುದಕ್ಕೆ ಸಿಗಬಹುದು ಹುಷಾರಾಗಿರಿ.


Click it and Unblock the Notifications











