Lakshmi Baramma;ಬೆಟ್ಟದ ಮೇಲಿಂದ ಬಿದ್ದ ಕೀರ್ತಿ ಕಾರಲ್ಲಿ ಪ್ರತ್ಯಕ್ಷ; ಲಕ್ಷ್ಮಿಗೆ ಬಲ.. ಕಾವೇರಿಗೆ ವಿಲವಿಲ?
ಕೆಲವು ಧಾರಾವಾಹಿಗಳು ಕಿರುತೆರೆ ವೀಕ್ಷಕರನ್ನು ಸುಮ್ಮನೆ ಇರುವುದಕ್ಕೆ ಬಿಡುವುದಿಲ್ಲ. ಧಾರಾವಾಹಿ ಇನ್ನೇನು ಮುಗೀತು ಅನ್ನುವಾಗ ಏನಾದರೂ ಒಂದು ಟ್ವಿಸ್ಟ್ ಇಟ್ಟು ಬಿಡುತ್ತಾರೆ. ಇತ್ತೀಚೆಗೆ ಧಾರಾವಾಹಿ ಪ್ರಸಾರ ಆಗುವುದಕ್ಕೂ ಮುನ್ನ ಪ್ರೋಮೋ ಬಿಟ್ಟು ಮತ್ತಷ್ಟು ಕುತೂಹಲ ಕೆರಳಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಲಕ್ಷ್ಮಿ ಬಾರಮ್ಮ' ಸೀರಿಯಲ್ ನೋಡುತ್ತಿರುವವರ ಪರಿಸ್ಥಿತಿ ಕೂಡ ಹಾಗೇ ಇದೆ.
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಕಳೆದ ಕೆಲವು ಎಪಿಸೋಡ್‌ಗಳು ವೀಕ್ಷಕರನ್ನು ಕುತೂಹಲದಲ್ಲಿ ಕಟ್ಟಿ ಹಾಕಿದೆ. ಲಕ್ಷ್ಮಿ ಹಾಗೂ ಕಾವೇರಿಯ ಸಮರ ತಿರುವು ಪಡೆದುಕೊಳ್ಳುತ್ತಲೇ ಇತ್ತು. ಸತ್ತು ಹೋದಳು ಅಂದುಕೊಂಡಿದ್ದ ಕೀರ್ತಿಯ ಆಗಮನಕ್ಕಾಗಿ ಎದುರು ನೋಡುತ್ತಲೇ ಇದ್ದರು. ಕೊನೆಗೂ ವೀಕ್ಷಕರ ಕಾಯುವಿಕೆಗೆ ಇಂದು ತೆರೆ ಬೀಳುವ ಸಾಧ್ಯತೆಯಿದೆ.

ಕೆಲವು ನಿಮಿಷಗಳ ಹಿಂದಷ್ಟೇ ಕಲರ್ಸ್ ಕನ್ನಡ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಹೊಚ್ಚ ಹೊಸ ಪ್ರೋಮೊ ಬಿಟ್ಟಿದೆ. ಇದರಲ್ಲಿ ಲಕ್ಷ್ಮಿಗೆ ಕೊನೆಗೂ ಕೀರ್ತಿ ಕಾಣಿಸಿಕೊಂಡಿದ್ದಾಗಿದೆ. ನಿರ್ದೇಶಕರು ಇದರಲ್ಲಿ ಇನ್ನೇನು ಟ್ವಿಸ್ಟ್ ಇಟ್ಟಿದ್ದಾರೆ ಅನ್ನೋದು ಎಪಿಸೋಡ್ ನೋಡಿದ ಮೇಲೆ ಗೊತ್ತಾಗುತ್ತೆ. ಸದ್ಯಕ್ಕೀಗ ಈ ಪ್ರೋಮೊದಲ್ಲಿ ಏನಿದೆ? ಕಥೆ ಹೇಗೆ ಸಾಗಿದೆ ಅನ್ನೋದನ್ನು ನೋಡೋಣ.
ಕಾವೇರಿಯ ಅಸಲಿ ಮುಖವನ್ನು ಬಯಲು ಮಾಡಲೇಬೇಕು ಅಂತ ಲಕ್ಷ್ಮಿ ನಿರ್ಧಾರ ಮಾಡಿ ನಿಂತಿದ್ದಾಳೆ. ಇತ್ತ ಆಕೆಗೆ ಕಾವೇರಿಯ ಕೃತ್ಯವನ್ನು ನಿರೂಪಿಸುವುದಕ್ಕೆ ಸಾಕ್ಷಿ ಸಿಕ್ಕಿರಲಿಲ್ಲ. ಕಾವೇರಿ ವಿರುದ್ಧ ತಿರುಗಿ ಬಿದ್ದಿದರುವ ಲಕ್ಷ್ಮಿ ಕೂಡ ಸಂಕಷ್ಟದಲ್ಲಿ ಇದ್ದಾಳೆ. ಕಾವೇರಿಯ ಆಟವನ್ನು ಬಯಲು ಮಾಡೇ ಮಾಡುತ್ತೇನೆ. ಕೀರ್ತಿಗೆ ನ್ಯಾಯ ಕಾಡಿಸುತ್ತೇನೆ ಎಂದು ಪಣ ತೊಟ್ಟಿದ್ದಾಳೆ. ಈ ಮಧ್ಯೆ ಕೀರ್ತಿ ದಿಢೀರನೇ ಪ್ರತ್ಯಕ್ಷ ಆಗಿಬಿಟ್ಟಿದ್ದಾಳೆ.

ಈ ಪ್ರೋಮೊದಲ್ಲಿ ಲಕ್ಷ್ಮಿ "ಅತ್ತೆ ಜೊತೆ ಚಾಲೆಂಜ್ ಮಾಡುವುದಕ್ಕೆ ನನಗೂ ಇಷ್ಟವಿಲ್ಲ. ಆದರೆ ಏನು ಮಾಡುವುದು? ಹಿಡಿದಿರುವ ಕೆಲಸ ಸಾಧಿಸಬೇಕು ಅಂದರೆ, ಯಾರೇ ಆದರೂ ಸರಿ ಎದುರು ಹಾಕಿಕೊಳ್ಳಲೇ ಬೇಕು" ಎಂದು ನಡೆದುಕೊಂಡು ಬರುವಾಗ ಅಚಾನಕ್ ಆಗಿ ಬಿಳಿ ಬಣ್ಣದ ಅಂಬಾಸಿಡರ್ ಕಾರು ಕಾಣಿಸಿಕೊಳ್ಳುತ್ತೆ. ಈ ಕಾರಿನಲ್ಲಿ ಕೀರ್ತಿಯನ್ನು ನೋಡಿ ಲಕ್ಷ್ಮಿಗೆ ಶಾಕ್ ಆಗುತ್ತೆ. ಕಾರಿನೊಳಗೆ ಬಂಧಿಯಾಗಿರುವ ಕೀರ್ತಿಯ ಕಂಡು ಆಕೆಯನ್ನು ಬಚಾವ್ ಮಾಡುವುದಕ್ಕೆ ಮುಂದಾಗಿದ್ದಾಳೆ.
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಕೀರ್ತಿಯನ್ನು ನೋಡಿ ವೀಕ್ಷಕರು ಥ್ರಿಲ್ ಆಗಿದ್ದಾರೆ. ಇಷ್ಟು ದಿನ ಮತ್ತೆ ಕೀರ್ತಿ ಬರಬೇಕು ಅಂತ ಕಾದು ಕೂತಿದ್ದವರಿಗೆ ಕೀರ್ತಿ ಕಂಡಿದ್ದಾಗಿದೆ. ಆದರೆ, ಧಾರಾವಾಹಿ ಏನು ಬೇಕಾದರೂ ಆಗಬಹುದು. ಹೇಗೆ ಬೇಕಾದರೂ ಟ್ವಿಸ್ಟ್ ಕೊಡಬಹುದು. ಬೆಟ್ಟದಿಂದ ಬಿದ್ದಿದ್ದ ಕೀರ್ತಿಗೆ ಏನಾಯ್ತು? ಆಕೆಯ ಮನಸ್ಥಿತಿ ಈಗ ಹೇಗಿದೆ? ಅನ್ನೋದು ಬಹುಶ: ಇಂದಿನ ಸಂಚಿಕೆಯಲ್ಲಿ ರಿವೀಲ್ ಆಗಬಹುದು.
ಸದ್ಯಕ್ಕಂತೂ ಲಕ್ಷ್ಮಿ ಹಾಗೂ ಅತ್ತೆ ಕಾವೇರಿ ನಡುವಿನ ಸಮರ ಮುಂದುವರೆದಿದೆ. ಕೀರ್ತಿಗೆ ನ್ಯಾಯ ಕೊಡಿಸುತ್ತೇನೆ ಅಂತ ಲಕ್ಷ್ಮಿ ಹೋರಾಟನೂ ನಡೆಯುತ್ತಿದೆ. ಈಗ ಕೀರ್ತಿ ಪ್ರತ್ಯಕ್ಷ ಆಗಿದ್ದೂ ಆಗಿದೆ. ಈ ಬೆನ್ನಲ್ಲೇ 'ಲಕ್ಷ್ಮಿ ಬಾರಮ್ಮ' ಮುಂದಿನ ದಿನಗಳಲ್ಲಿ ಇನ್ನೂ ಯಾವೆಲ್ಲ ಟ್ವಿಸ್ಟ್‌ಗಳನ್ನು ಹೊತ್ತು ಬರುತ್ತಿದೆ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವುದಂತೂ ಸತ್ಯ.


Click it and Unblock the Notifications











