Lakshmi Nivasa;ಸೈಕೋ ಗಂಡನ ಮನಸ್ಥಿತಿ ಕಂಡು ಬೆಚ್ಚಿ ಬಿದ್ದ ಜಾನು; ಓಪನ್ ಆಗುತ್ತಾ ಜಯಂತನ ಫ್ಲ್ಯಾಶ್ ಬ್ಯಾಕ್?
ಜಯಂತ್‌ನ ಅಸಲಿ ರೂಪ ಜಾಹ್ನವಿ ಎದುರುಗಡೆ ಎಲ್ಲಾ ಬಯಲಾಗುತ್ತಿದೆ. ಜಾಹ್ನವಿಗೆ ಜಯಂತ್ ಎಂದರೆ ಮೊದಲೆಲ್ಲ ಬಹಳ ಪ್ರೀತಿ ಇತ್ತು. ಆದ್ರೀಗ ಜಯಂತ್ ಹೆಸರು ಕೇಳಿದರೆ ಬಹಳ ಭಯಗೊಳ್ಳುತ್ತಾಳೆ. ಜಯಂತ್ ಬಗ್ಗೆ ಎಲ್ಲ ತಿಳಿದುಕೊಂಡ ಜಾಹ್ನವಿಗೆ ಜಯಂತ್ ಹೀಗೆ ಸೈಕೋ ತರ ಆಡುವುದಕ್ಕೆ ಏನು ಕಾರಣ ಎಂಬುವುದು ಮಾತ್ರ ಇನ್ನೂ ಗೊತ್ತಿಲ್ಲ.
ರಾತ್ರಿ ಎದ್ದು ಜಯಂತ್ ಮನೆ ಎಲ್ಲಾ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದ. ಆದರೆ, ಮನೆ ಕ್ಲೀನ್ ಆಗಿರುವುದನ್ನು ನೋಡಿದ ಜಾಹ್ನವಿ ಯಾರು ಇದೆಲ್ಲ ಮಾಡಿದ್ದು ಎಂದಾಗ ಜಯಂತ್ ಸುಳ್ಳು ಹೇಳುತ್ತಾನೆ. ನಾವು ಮಲಗಿದ ಬಳಿಕ ಕೆಲಸದವರು ಬಂದು ಎಲ್ಲಾ ಕ್ಲೀನ್ ಮಾಡುತ್ತಾರೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಇದ್ದರೂ ಇರಬಹುದೇನೋ ಎಂದು ಕೊಂಡು ಸುಮ್ಮನಾಗುತ್ತಿದ್ದಳು.

ಆದರೆ, ನನ್ನ ಗಂಡ ಯಾಕೆ ಹೀಗಾಡುತ್ತಾನೆ. ರಾತ್ರಿ ಮನೆ ಕೆಲಸದವರು ಬರುತ್ತಾರೆ ಎಂದು ಸುಳ್ಳು ಹೇಳಿ ಇವರೇ ಯಾಕೆ ಮನೆ ಕ್ಲೀನ್ ಮಾಡುತ್ತಾರೆ. ನನ್ನ ಬಳಿ ಯಾಕೆ ಇವರು ಇಷ್ಟೊಂದು ಸುಳ್ಳು ಹೇಳುತ್ತಾರೆ. ಸುಳ್ಳು ಹೇಳಿದರೆ ಇವರಿಗೆ ಏನು ಲಾಭ ಎಂದು ಜಾಹ್ನವಿ ತಲೆಕೆಡಿಸಿಕೊಳ್ಳುತ್ತಾಳೆ. ಜಯಂತ್ ಮನೆಗೆ ಬರುವಾಗ ಮನೆ ಬಿಟ್ಟು ಹೋಗಿರುತ್ತಾರೆ. ಜಾಹ್ನವಿಗೆ ಮುಂದೇನು ಮಾಡಬೇಕು ದಿಕ್ಕೇ ತೋಚದ ಹಾಗೆ ಆಗುತ್ತದೆ.
ಇತ್ತ ಮೊಬೈಲ್ ಚಾರ್ಜ್‌ಗೆ ಇಟ್ಟಿದ್ದೇ ತಡ ಜಾಹ್ನವಿ ತಲೆ ತಿರುಗಿ ಬೀಳುತ್ತಾರೆ. ಆಗ ಅಲ್ಲಿರುವ ಹೆಂಗಸರು ಜಾಹ್ನವಿ ತಾಯಿಯಾಗುತ್ತಿರುವ ವಿಷಯ ಹೇಳುತ್ತಾರೆ. "ಅಮ್ಮ ನೀವು ತಾಯಿ ಆಗುತ್ತಿದ್ದಿರ" ಎಂದಾಗ ಜಾಹ್ನವಿ ಮೊಗದಲ್ಲಿ ಖುಷಿಗಿಂತ ಹೆಚ್ಚಾಗಿ ಆಕೆಯ ಗಂಡನ ಮೇಲೆ ಇರುವ ಆತಂಕ ಹೆಚ್ಚಾಗುತ್ತೆ. ಇನ್ನೂ ಜಾಹ್ನವಿ ಅಲ್ಲಿಂದ ಮೊಬೈಲ್ ತೆಗೆದುಕೊಂಡು ದಿಕ್ಕೇ ತೋಚದ ಹಾಗೆ ನಡೆದುಕೊಂಡು ಹೋಗುತ್ತಾಳೆ.
ಇತ್ತ ಜಯಂತ್ ಜಾಹ್ನವಿಯನ್ನು ಹುಡುಕಿಸುತ್ತಿರುತ್ತಾನೆ. ಆದರೆ ಜಾಹ್ನವಿ ರೋಡಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ಜಯಂತ್‌ನ ಕಡೆಯವರು ವಿಷಯ ಮುಟ್ಟಿಸುತ್ತಾರೆ. ಕೂಡಲೇ ಅಲ್ಲಿಗೆ ಬಂದ ಜಯಂತ್ ಜಾಹ್ನವಿ ಬಳಿಗೆ ಬಂದು ಕಾರು ನಿಲ್ಲಿಸುತ್ತಾನೆ. "ಜಾಹ್ನವಿ ನೀವು ಎಲ್ಲಿ ಹೋಗಿದ್ದೀರ, ನಿಮ್ಮನ್ನು ಹುಡುಕಾದ ಜಾಗ ಇಲ್ಲ. ಯಾಕೆ ಹೀಗೆ ಮಾಡಿದ್ರಿ" ಎಂದು ಕೋಪದಲ್ಲಿ ಕೇಳುತ್ತಾನೆ. ಆದರೆ ಜಾಹ್ನವಿ ಮೊದಲಿಗೆ ಮಾತನಾಡದೆ ಸುಮ್ಮನೆ ಇರುತ್ತಾಳೆ.

ಜಾಹ್ನವಿಯನ್ನು ಮನೆಗೆ ಕರೆದುಕೊಂಡು ಬಂದ ಜಯಂತ್ ಆಕೆಯ ಬಳಿ "ನೀನು ಇಲ್ಲದೆ ನಾನು ಖಂಡಿತವಾಗಿಯೂ ಜೀವಂತವಾಗಿ ಇರುವುದಿಲ್ಲ" ಎಂದು ಹೇಳುತ್ತಾನೆ. ಆಗ ಜಾಹ್ನವಿ ಜಯಂತ್ ಬಳಿ "ನೀವು ಯಾಕೆ ಹೀಗೆ ಆಡುತ್ತಿದ್ದೀರ? ನೀವು ಈ ರೀತಿ ಆಡುವುದರಿಂದ ನನಗೆ ಅದೆಷ್ಟು ಭಯ ಆಗುತ್ತಿತ್ತು ಗೊತ್ತಾ? ಮನೆಗೆ ಕೆಲಸದವರು ಬರುತ್ತಾರೆ ಎಂದು ಯಾಕೆ ನನ್ನ ಬಳಿ ಸುಳ್ಳು ಹೇಳುತ್ತೀರಿ? ನನಗೆ ಗೊತ್ತು ದಿನವೂ ರಾತ್ರಿ ನೀವೇ ಮನೆ ಕ್ಲೀನ್ ಮಾಡುತ್ತಿದ್ದು, ನನಗೆ ನೀವು ಈ ರೀತಿಯಾಗಿ ವರ್ತಿಸುತ್ತಿರುವುದು ಭಯ ಹುಟ್ಟಿಸಿದೆ" ಎಂದು ಹೇಳುತ್ತಾಳೆ.
ಹಾಗೆಯೇ "ನೀವು ಹೀಗೆಲ್ಲ ಆಡುತ್ತಿರುವುದಕ್ಕೆ ಕಾರಣ ಆದರೂ ಏನು? ನನಗೆ ಒಂದು ಅರ್ಥ ಆಗುತ್ತಿಲ್ಲ" ಎಂದಾಗ ಜಯಂತ್ ಒಂದು ಕೋಣೆಗೆ ಕರೆದುಕೊಂಡು ಬರುತ್ತಾನೆ. ಆದರೆ ಜಾಹ್ನವಿಗೆ ಆ ರೂಮ್ ನೋಡಿ, ಅರೆ ನಾನು ಈ ರೂಮ್‌ಗೆ ಬಂದೆ ಇಲ್ವಲ್ಲ. ನನಗೆ ಇಲ್ಲೊಂದು ರೂಮ್ ಇದೆ ಎನ್ನುವುದು ಗೊತ್ತಿರಲಿಲ್ಲ ಎಂದು ಹೇಳುತ್ತಾಳೆ. ಆಗ ಜಯಂತ್ ಹಳೇ ಕಾಲದ ಬಾಕ್ಸ್ ಓಪನ್ ಮಾಡುತ್ತಾನೆ. ಅದರಲ್ಲಿದ್ದ ತನ್ನ ಅಜ್ಜನ ಫೋಟೋವನ್ನು ಆಕೆಗೆ ತೋರಿಸುತ್ತಾನೆ. ಇವರು ನನ್ನ ತಾತ ಎಂದು ಹೇಳುತ್ತಾನೆ. ಇನ್ನು ಮುಂದೆ ಜಯಂತ್ ಪ್ಲ್ಯಾಶ್ ಬ್ಯಾಕ್ ರಿವೀಲ್ ಆಗಬೇಕಿದೆ.


Click it and Unblock the Notifications











